Tariff War: ಇನ್ನು ಕೇವಲ 2 ತಿಂಗಳಲ್ಲಿ ಭಾರತ ಸೋಲೊಪ್ಪಿಕೊಂಡು ಕ್ಷಮೆ ಕೇಳುತ್ತೆ; ಟ್ರಂಪ್ ಆಪ್ತನಿಂದ ಉದ್ಧಟತನದ ಹೇಳಿಕೆ
ಭಾರತ ಅಮೆರಿಕದಿಂದ ತೈಲ ಖರೀದಿಸುತ್ತಿರುವುದು ಅಮೆರಿಕಕ್ಕೆ (America) ದೊಡ್ಡ ತಲೆ ನೋವಾಗಿ ಮಾರ್ಪಾಡಾಗಿದೆ. ಇದೀಗ ಭಾರತ (India) ಇನ್ನೆರಡು ತಿಂಗಳಲ್ಲಿ ನಮಗೆ ಕ್ಷಮೆಯಾಚಿಸುತ್ತದೆ ಎಂದು ಅಮೆರಿಕದ ವಾಣಿಜ್ಯ ಕಾರ್ಯದರ್ಶಿ ಹೂವಾರ್ಡ್ ಲುಟ್ನಿಕ್ ಹೇಳಿಕೆ ನೀಡಿದ್ದಾರೆ.

-

ವಾಷಿಂಗ್ಟನ್: ಭಾರತ ಅಮೆರಿಕದಿಂದ (America) ತೈಲ ಖರೀದಿಸುತ್ತಿರುವುದು ಅಮೆರಿಕಕ್ಕೆ ದೊಡ್ಡ ತಲೆ ನೋವಾಗಿ ಮಾರ್ಪಾಡಾಗಿದೆ. ಇದೀಗ ಭಾರತ ಇನ್ನೆರಡು ತಿಂಗಳಲ್ಲಿ ನಮಗೆ ಕ್ಷಮೆಯಾಚಿಸುತ್ತದೆ ಎಂದು ಅಮೆರಿಕದ ವಾಣಿಜ್ಯ ಕಾರ್ಯದರ್ಶಿ ಹೂವಾರ್ಡ್ ಲುಟ್ನಿಕ್ ಹೇಳಿಕೆ ನೀಡಿದ್ದಾರೆ. (Tariff War) ರಷ್ಯಾದ ತೈಲವನ್ನು ಖರೀದಿಸದಂತೆ ಅಮೆರಿಕದ ಒತ್ತಡಕ್ಕೆ ಭಾರತ ಮಣಿದಿಲ್ಲ. ಆದರೂ, ಕೆಲವೇ ತಿಂಗಳುಗಳಲ್ಲಿ ಅಮೆರಿಕದೊಂದಿಗೆ ವ್ಯಾಪಾರ ಒಪ್ಪಂದ ಮಾಡಿಕೊಳ್ಳಲು ಭಾರತ ಮತ್ತೆ ಬರುತ್ತದೆ ಎಂದು ಲುಟ್ನಿಕ್ ತಿಳಿಸಿದ್ದಾರೆ. ನಿನ್ನೆ ಟ್ರಂಪ್ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಚೀನಾದ ಮೇಲಿನ ದ್ವೇಷಕ್ಕಾಗಿ ಭಾರತ ಹಾಗೂ ರಷ್ಯಾವನ್ನು ಕಳೆದುಕೊಂಡೆ ಎಂದು ಹೇಳಿದ್ದರು. ಇದೀಗ ವಾಣಿಜ್ಯ ಕಾರ್ಯದರ್ಶಿ ತಮ್ಮ ಭಾರತವನ್ನು ಕೆಣಕಿದ್ದಾರೆ.
ಒಂದು ಅಥವಾ ಎರಡು ತಿಂಗಳಲ್ಲಿ ಭಾರತ ಮಾತುಕತೆಗೆ ಬರಲಿದೆ ಎಂದು ನಾನು ಭಾವಿಸುತ್ತೇನೆ. ಕ್ಷಮಿಸಿ ಅಂತ ಕೇಳುತ್ತಾರೆ. ಡೊನಾಲ್ಡ್ ಟ್ರಂಪ್ ಜೊತೆ ಒಪ್ಪಂದ ಮಾಡಿಕೊಳ್ಳಲು ಮತ್ತೆ ಪ್ರಯತ್ನಿಸುತ್ತಾರೆಂದು ಬ್ಲೂಮ್‌ಬರ್ಗ್‌ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ್ದಾರೆ. ಒಂದು ವೇಳೆ ಅಮೆರಿಕವನ್ನು ಬೆಂಬಲಿಸದಿದ್ದರೆ, ರಫ್ತಿನ ಮೇಲೆ ಶೇ.50 ರಷ್ಟು ಸುಂಕವನ್ನು ಭಾರತ ಪಾವತಿಸಬೇಕಾಗುತ್ತದೆ. ಭಾರತವು ತನ್ನ ಮಾರುಕಟ್ಟೆಯನ್ನು ತೆರೆಯಲು, ರಷ್ಯಾದ ತೈಲ ಖರೀದಿ ನಿಲ್ಲಿಸಲು ಮತ್ತು ಬ್ರಿಕ್ಸ್‌ನ ಭಾಗವಾಗುವುದನ್ನು ನಿಲ್ಲಿಸಲು ಬಯಸುವುದಿಲ್ಲ. ನೀವು ರಷ್ಯಾ ಮತ್ತು ಚೀನಾ ನಡುವೆ ಸೇತುವೆಯಾಗಲು ಬಯಸಿದರೆ, ಹೋಗಿ. ಆದರೆ ಡಾಲರ್ ಅನ್ನು ಬೆಂಬಲಿಸಿ, ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕವನ್ನು ಬೆಂಬಲಿಸಿ. ನಿಮ್ಮ ಅತಿದೊಡ್ಡ ಕ್ಲೈಂಟ್ ಅನ್ನು ಬೆಂಬಲಿಸಿ. ಇಲ್ಲದಿದ್ದರೆ, 50% ಸುಂಕಗಳನ್ನು ಪಾವತಿಸಿ. ಇದು ಎಷ್ಟು ಕಾಲ ಇರುತ್ತದೆ ಎಂದು ನೋಡೋಣ ಎಂದು ಅವರು ಹೇಳಿದರು.
ಅಮೆರಿಕದ ಶೇ. 50 ರಷ್ಟು ಸುಂಕದಿಂದ ತಪ್ಪಿಸಿಕೊಳ್ಳಲು ಮೂರು ಷರತ್ತುಗಳನ್ನು ಹಾಕಿದ ಅವರು, ಭಾರತವು ಅಮೆರಿಕದೊಂದಿಗೆ ಹೊಂದಾಣಿಕೆ ಮಾಡಿಕೊಳ್ಳಬೇಕೆ ಅಥವಾ ಬ್ರಿಕ್ಸ್ ಮೂಲಕ ರಷ್ಯಾ ಮತ್ತು ಚೀನಾ ಜೊತೆಗಿನ ಸಂಬಂಧವನ್ನು ಗಾಢವಾಗಿಸಬೇಕೆ ಎಂಬುದನ್ನು ಆರಿಸಿಕೊಳ್ಳಬೇಕು ಎಂದು ಹೇಳಿದ್ದಾರೆ. ಇನ್ನೊಂದೆಡೆ ಇಂದು ಡೊನಾಲ್ಡ್ ಟಂಪ್, ಮೋದಿ ತನ್ನ ಸ್ವೇಹಿತ ಎಂದು ಹೇಳುವ ಮೂಲಕ ಶಾಕ್ ನೀಡಿದ್ದಾರೆ. ಅಮೆರಿಕಕ್ಕೆ ಮೋದಿ ಬಂದಾಗ ಒಟ್ಟಿಗೆ ಕಾಲ ಕಳೆದಿದ್ದೆವು. ನಮ್ಮಿಬ್ಬರ ಭೇಟಿ ಅದ್ಭುತವಾಗಿತ್ತು ಎಂದು ಟ್ರಂಪ್ ಹೇಳಿದ್ದಾರೆ.
ಈ ಸುದ್ದಿಯನ್ನೂ ಓದಿ: Narendra Modi: ಒಂದೇ ವೇದಿಕೆಯಲ್ಲಿ ಮೋದಿ-ಪುಟಿನ್-ಜಿನ್ ಪಿಂಗ್; ಮಹತ್ವದ ಚರ್ಚೆ ಸಾಧ್ಯತೆ
ಅಮೆರಿಕದಿಂದ ಬರುತ್ತಿರುವ ಎಚ್ಚರಿಕೆಯನ್ನು ಭಾರತ ಸಂಪೂರ್ಣವಾಗಿ ತಿರಸ್ಕರಿಸಿದೆ. ರಷ್ಯಾದಿಂದ ತೈಲ ಖರೀದಿ ನಿಲ್ಲಿಸಲಾಗುವುದಿಲ್ಲ ಎಂದು ಸರ್ಕಾರ ತಿಳಿಸಿದೆ. ಶೃಂಗಸಭೆಗೆಂದು ಚೀನಾಗೆ ತೆರಳಿದ್ದ ಮೋದಿ ರಷ್ಯಾ ಅಧ್ಯಕ್ಷ ಪುಟಿನ್ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದರು.