ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಅಮೆರಿಕದಲ್ಲಿ ಭಾರತೀಯ ಮೂಲದ ವ್ಯಕ್ತಿಯಿಂದ ಗುಂಡಿನ ದಾಳಿ: ಪತ್ನಿ, ಮೂವರು ಸಂಬಂಧಿಕರ ಹತ್ಯೆ

Family Dispute Behind Shooting: ಅಮೆರಿಕದಲ್ಲಿ ಕುಟುಂಬದ ಕಲಹ ಹಿನ್ನೆಲೆಯಲ್ಲಿ ಭಾರತೀಯ ಮೂಲದ ವ್ಯಕ್ತಿಯೊಬ್ಬ ತನ್ನ ಪತ್ನಿ ಹಾಗೂ ಸಂಬಂಧಿಕರ ಮೇಲೆ ಗುಂಡು ಹಾರಿಸಿದ್ದಾನೆ. ಪರಿಣಾಮ ಆರೋಪಿಯ ಪತ್ನಿ ಹಾಗೂ ಮೂವರು ಸಂಬಂಧಿಕರು ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಸ್ಥಳಕ್ಕೆ ಬಂದ ಪೊಲೀಸ್‌ ಪಡೆಗಳು ಮನೆಯೊಳಗೆ ನಾಲ್ವರು ಮೃತದೇಹಗಳನ್ನು ಪತ್ತೆಹಚ್ಚಿದ್ದು, ಆರೋಪಿಯನ್ನು ಬಂಧಿಸಿದ್ದಾರೆ.

ಅಮೆರಿಕದಲ್ಲಿ ಗುಂಡಿನ ದಾಳಿ, ಭಾರತೀಯ ಪ್ರಜೆ ಸೇರಿದಂತೆ ಮೂವರು ಸಾವು

ನ್ಯೂಯಾರ್ಕ್: ಕೌಟುಂಬಿಕ ವಿವಾದಕ್ಕೆ ಸಂಬಂಧಿಸಿದಂತೆ ಅಮೆರಿಕದಲ್ಲಿ ಗುಂಡಿನ (shootout in America) ಸದ್ದು ಮೊಳಗಿದೆ. ಶೂಟೌಟ್‌ನಲ್ಲಿ ನಾಲ್ವರು ಭಾರತೀಯರು ಮೃತಪಟ್ಟಿದ್ದಾರೆ. ಅಮೆರಿಕದ (America) ಜಾರ್ಜಿಯಾ ರಾಜ್ಯದ ಲಾರೆನ್ಸ್‌ವಿಲ್ಲೆ ನಗರದಲ್ಲಿ ಈ ಘಟನೆ ನಡೆದಿದೆ. ಕುಟುಂಬ ಕಲಹದಿಂದ ಸಿಟ್ಟಿಗೆದ್ದ ಭಾರತೀಯ ಮೂಲದ ವ್ಯಕ್ತಿಯೊಬ್ಬ ತನ್ನ ಪತ್ನಿ ಹಾಗೂ ಮೂವರು ಸಂಬಂಧಿಕರನ್ನ ಗುಂಡಿಕ್ಕಿ ಹತ್ಯೆ ಮಾಡಿದ್ದಾನೆ.

ಗುಂಡು ಹಾರಿಸಿದ ಆರೋಪಿಯನ್ನು 51 ವರ್ಷದ ವಿಜಯ್ ಕುಮಾರ್ ಎಂದು ಗುರುತಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಪತ್ನಿ ಅಟ್ಲಾಂಟಾದ ಮೀಮು ಡೋಗ್ರಾ (43), ಸಂಬಂಧಿಕರಾದ ಲಾರೆನ್ಸ್‌ವಿಲ್ಲೆಯ ಗೌರವ್ ಕುಮಾರ್ (33), ನಿಧಿ ಚಂದರ್ (37) ಮತ್ತು ಹರೀಶ್ ಚಂದರ್ (38) ಗುಂಡಿನ ದಾಳಿಗೆ ಬಲಿಯಾಗಿದ್ದಾರೆ ಎಂದು ಗ್ವಿನೆಟ್ ಕೌಂಟಿ ಪೊಲೀಸರು ತಿಳಿಸಿದ್ದಾರೆ. ಘಟನೆ ಬಳಿಕ ಆರೋಪಿಯನ್ನು ಬಂಧಿಸಲಾಗಿದೆ.

Catholic Priest Shot Dead: ಅಪರಿಚಿತ ವ್ಯಕ್ತಿಯಿಂದ ಗುಂಡಿನ ದಾಳಿ; ಅಮೆರಿಕದಲ್ಲಿ ಭಾರತ ಮೂಲದ ಪಾದ್ರಿ ಬಲಿ

ಗುಂಡು ಹಾರಿಸಿದ ಸಮಯದಲ್ಲಿ, ಕುಮಾರ್ ಅವರ 12 ವರ್ಷದ ಮಗು ಸೇರಿದಂತೆ ಮೂವರು ಮಕ್ಕಳು ಕ್ಲೋಸೆಟ್‌ನಲ್ಲಿ ಅಡಗಿಕೊಂಡು ದುರಂತದಿಂದ ಬದುಕುಳಿದರು ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ. ಗುಂಡಿನ ದಾಳಿಗೆ ದುಃಖ ವ್ಯಕ್ತಪಡಿಸಿದ ಅಟ್ಲಾಂಟಾದಲ್ಲಿರುವ ಭಾರತೀಯ ಕಾನ್ಸುಲೇಟ್ ಜನರಲ್, ಗುಂಡು ಹಾರಿಸಿದ ಆರೋಪಿಯನ್ನು ಬಂಧಿಸಲಾಗಿದೆ. ಕೌಟುಂಬಿಕ ವಿವಾದಕ್ಕೆ ಸಂಬಂಧಿಸಿದ ದುರಂತ ಗುಂಡಿನ ದಾಳಿ ನಡೆದಿದೆ. ಇದರಲ್ಲಿ ಬಲಿಯಾದವರಲ್ಲಿ ಭಾರತೀಯ ಪ್ರಜೆಯೂ ಸೇರಿದ್ದಾರೆ. ಮೃತ ಕುಟುಂಬಕ್ಕೆ ಸಾಧ್ಯವಿರುವ ಎಲ್ಲ ಸಹಾಯವನ್ನು ನೀಡಲಾಗುತ್ತಿದೆ ಎಂದು ಎಕ್ಸ್‌ನಲ್ಲಿ ತಿಳಿಸಿದ್ದಾರೆ.

ಆರೋಪಿ ವಿರುದ್ಧ ತೀವ್ರತರವಾದ ಹಲ್ಲೆ ಆರೋಪಗಳು, ನಾಲ್ಕು ಕೊಲೆ ಅಪರಾಧಗಳು, ನಾಲ್ಕು ದುರುದ್ದೇಶಪೂರ್ವಕ ಕೊಲೆ ಆರೋಪಗಳು, ಮಕ್ಕಳ ಮೇಲಿನ ಕ್ರೌರ್ಯ ಆರೋಪಗಳನ್ನು ಹೊರಿಸಲಾಗಿದೆ.

ಶುಕ್ರವಾರ (ಜನವರಿ 23) ಸ್ಥಳೀಯ ಸಮಯದಂತೆ ರಾತ್ರಿ ಸುಮಾರು 2.30ರ ವೇಳೆಗೆ ಬ್ರೂಕ್ ಐವಿ ಕೋರ್ಟ್‌ನ 1000 ಬ್ಲಾಕ್ ಪ್ರದೇಶದಿಂದ ಬಂದ ಕರೆಗೆ ಪೊಲೀಸರು ಸ್ಪಂದಿಸಿದರು. ಸ್ಥಳಕ್ಕೆ ಆಗಮಿಸಿದಾಗ, ಮನೆಯೊಳಗೆ ನಾಲ್ವರು ವಯಸ್ಕರ ಮೃತದೇಹಗಳು ಪತ್ತೆಯಾಗಿದ್ದು, ಎಲ್ಲರೂ ಗುಂಡಿನ ದಾಳಿಯಿಂದ ಮೃತಪಟ್ಟಿದ್ದರು.

ಗುಂಡಿನ ದಾಳಿ ಆರಂಭವಾದಾಗ ಮೂವರು ಮಕ್ಕಳು ಅಲ್ಲಿದ್ದರು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ತಮ್ಮನ್ನು ರಕ್ಷಿಸಿಕೊಳ್ಳಲು, ಮಕ್ಕಳು ಕ್ಲೋಸೆಟ್‌ನಲ್ಲಿ ಅಡಗಿಕೊಂಡರು. ಮಕ್ಕಳಲ್ಲಿ ಒಬ್ಬರು 911 ಗೆ ಕರೆ ಮಾಡುವಲ್ಲಿ ಯಶಸ್ವಿಯಾದರು. ಅಧಿಕಾರಿಗಳು ಕೆಲವೇ ನಿಮಿಷಗಳಲ್ಲಿ ಘಟನಾ ಸ್ಥಳಕ್ಕೆ ತಲುಪಿದರು. ಮಕ್ಕಳಿಗೆ ಯಾವುದೇ ಹಾನಿಯಾಗಿಲ್ಲ. ಆರೋಪಿಯು ಹತ್ತಿರದ ಅರಣ್ಯ ಪ್ರದೇಶದಲ್ಲಿ ಅಡಗಿಕೊಂಡಿದ್ದ. ಆತನನ್ನು ಪತ್ತೆಹಚ್ಚಿ ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಮಕ್ಕಳು ಸುರಕ್ಷಿತರಾಗಿದ್ದು, ಅವರು ತಮ್ಮ ಕುಟುಂಬದ ಸದಸ್ಯರ ಮನೆಯಲ್ಲಿದ್ದಾರೆ.

ಅಮೆರಿಕದ ಅಂಗಡಿಯೊಂದರೊಳಗೆ ದುಷ್ಕರ್ಮಿಯೊಬ್ಬ ಗುಂಡಿನ ದಾಳಿ ನಡೆಸಿದ್ದ ಪರಿಣಾಮ, ಗುಜರಾತ್​ ಮೂಲದ ವ್ಯಕ್ತಿ ಮೃತಪಟ್ಟ ದುರ್ಘಟನೆ 2025ರ ಮೇ ತಿಂಗಳಲ್ಲಿ ನಡೆದಿತ್ತು. ಮೃತರನ್ನು ಪರೇಶ್ ಪಟೇಲ್ ಎಂದು ಗುರುತಿಸಲಾಗಿದ್ದು, ಕ್ಯಾಶ್ ಕೌಂಟರ್‌ನಲ್ಲಿ ಕಳ್ಳತನಕ್ಕೆ ಯತ್ನಿಸಿದ ಬಂದೂಕುಧಾರಿ ದರೋಡೆಗೆ ಅಡ್ಡಿಪಡಿಸಿದ್ದಾಗ ದಾಳಿ ನಡೆಸಲಾಗಿತ್ತು. ಕೊಲೆಯಾದ ವ್ಯಕ್ತಿ ಗುಜರಾತ್‌ನ ಡಿಂಗುಚಾ ಗ್ರಾಮದ ನಿವಾಸಿಯಾಗಿದ್ದಾರೆ.