ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ವಿದೇಶದಲ್ಲಿಯೂ ಭಾರತದ ಮಾವುಗಳ ದರ್ಬಾರ್‌; ಐಸ್‌ಲ್ಯಾಂಡ್‌ನಲ್ಲಿ ಭಾರತೀಯ ಮಾವಿನ ಹಣ್ಣುಗಳ ಪ್ರಚಾರ ಕಾರ್ಯಕ್ರಮ ಆಯೋಜನೆ

ರೆಕ್ಯಾವಿಕ್ ನಲ್ಲಿರುವ ಭಾರತೀಯ ರಾಯಭಾರ ಕಚೇರಿಯು, ಕೃಷಿ ಮತ್ತು ಸಂಸ್ಕರಿಸಿದ ಆಹಾರ ಉತ್ಪನ್ನಗಳ ರಫ್ತು ಅಭಿವೃದ್ಧಿ ಪ್ರಾಧಿಕಾರ (ಎಪಿಇಡಿಎ) ಸಹಯೋಗದೊಂದಿಗೆ 24 ಜೂನ್ 2026 ರಂದು ಐಸ್ ಲ್ಯಾಂಡಿನ ರಾಜಧಾನಿ ರೆಕ್ಯಾವಿಕ್ ನಲ್ಲಿ ಮತ್ತು 25 ಜೂನ್ 2026 ರಂದು ಉತ್ತರ ಐಸ್ಲ್ಯಾಂಡಿನ ಅಕುರೇರಿಯಲ್ಲಿ ಭಾರತೀಯ ಮಾವಿನ ಹಣ್ಣುಗಳ ಪ್ರಚಾರ ಕಾರ್ಯಕ್ರಮಗಳನ್ನು ಆಯೋಜಿಸಿತ್ತು.

ಸಂಗ್ರಹ ಚಿತ್ರ

ರೆಕ್ಯಾವಿಕ್ ನಲ್ಲಿರುವ ಭಾರತೀಯ ರಾಯಭಾರ ಕಚೇರಿಯು, ಕೃಷಿ ಮತ್ತು ಸಂಸ್ಕರಿಸಿದ ಆಹಾರ ಉತ್ಪನ್ನಗಳ ರಫ್ತು ಅಭಿವೃದ್ಧಿ ಪ್ರಾಧಿಕಾರ (ಎಪಿಇಡಿಎ) ಸಹಯೋಗದೊಂದಿಗೆ 24 ಜೂನ್ 2026 ರಂದು ಐಸ್ ಲ್ಯಾಂಡಿನ ರಾಜಧಾನಿ ರೆಕ್ಯಾವಿಕ್ ನಲ್ಲಿ ಮತ್ತು 25 ಜೂನ್ 2026 ರಂದು ಉತ್ತರ ಐಸ್ಲ್ಯಾಂಡಿನ ಅಕುರೇರಿಯಲ್ಲಿ ಭಾರತೀಯ ಮಾವಿನ ಹಣ್ಣುಗಳ ಪ್ರಚಾರ ಕಾರ್ಯಕ್ರಮಗಳನ್ನು ಆಯೋಜಿಸಿತ್ತು. ಇದು ಭಾರತೀಯ ಮಾವಿನ ಹಣ್ಣುಗಳ ಶ್ರೀಮಂತ ವೈವಿಧ್ಯತೆ ಮತ್ತು ರಫ್ತು ಸಾಮರ್ಥ್ಯವನ್ನು ಪ್ರದರ್ಶಿಸಿತು. ಐಸ್ ಲ್ಯಾಂಡ್ ನಲ್ಲಿ ಆಯೋಜಿಸಲಾದ ಮೊಟ್ಟ ಮೊದಲ ಭಾರತೀಯ ಮಾವಿನ ಹಣ್ಣುಗಳ ಪ್ರಚಾರ ಕಾರ್ಯಕ್ರಮಗಳು ಇವಾಗಿವೆ. ಭಾರತದ ರಾಯಭಾರಿ ಆರ್. ರವೀಂದ್ರ ಅವರು ವಿಶ್ವಪ್ರಸಿದ್ಧ ಭಾರತೀಯ ಮಾವಿನ ತಳಿಗಳ ವಿಶಿಷ್ಟ ಗುಣಗಳನ್ನು ಉಲ್ಲೇಖಿಸಿದರು ಮತ್ತು ಐಸ್ ಲ್ಯಾಂಡ್ ಗೆ ಭಾರತೀಯ ಮಾವಿನ ರಫ್ತನ್ನು ವಿಸ್ತರಿಸಲು ಇರುವ ಗಮನಾರ್ಹ ಅವಕಾಶಗಳನ್ನು ಒತ್ತಿಹೇಳಿದರು.

ಐಸ್ ಲ್ಯಾಂಡ್‌ನ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವ್ಯಾಪಾರ ಒಪ್ಪಂದಗಳ ನಿರ್ದೇಶಕರಾದ ಸ್ವೀನ್ ಕೆ. ಐನಾರ್ಸನ್ ಅವರು, ಭಾರತ-ಇಎಫ್ ಟಿಎ ವ್ಯಾಪಾರ ಮತ್ತು ಆರ್ಥಿಕ ಸಹಭಾಗಿತ್ವ ಒಪ್ಪಂದ (ಟಿಇಪಿಎ) ಒದಗಿಸುವ ಅವಕಾಶಗಳು ಮತ್ತು ಐಸ್ ಲ್ಯಾಂಡ್ ಗೆ ಭಾರತೀಯ ಮಾವಿನ ಹಣ್ಣುಗಳ ಹೆಚ್ಚಿನ ಪ್ರಮಾಣದ ಆಮದನ್ನು ಸುಗಮಗೊಳಿಸುವಲ್ಲಿ ಅದರ ಸಾಮರ್ಥ್ಯದ ಕುರಿತು ಮಾತನಾಡಿದರು. ಐಸ್ ಲ್ಯಾಂಡ್ ಫೆಡರೇಶನ್ ಆಫ್ ಟ್ರೇಡ್ ನ ಪ್ರಧಾನ ಕಾರ್ಯದರ್ಶಿ ಓಲಾಫರ್ ಸ್ಟೀಫನ್ಸನ್ ಅವರು, ಭಾರತದ ಮೇಲೆ ಐಸ್ ಲ್ಯಾಂಡ್ ನ ಉದ್ಯಮಿಗಳಿಗೆ ಹೆಚ್ಚುತ್ತಿರುವ ಆಸಕ್ತಿಯನ್ನು ಗುರುತಿಸಿದರು ಮತ್ತು ಭಾರತೀಯ ಕೃಷಿ ಉತ್ಪನ್ನಗಳ, ವಿಶೇಷವಾಗಿ ಮಾವಿನ ಹಣ್ಣುಗಳ ಆಮದನ್ನು ಹೆಚ್ಚಿಸಲು ಇರುವ ಆಶಾದಾಯಕ ಅವಕಾಶಗಳನ್ನು ಉಲ್ಲೇಖಿಸಿದರು.

ದ್ವಿತೀಯ ಕಾರ್ಯದರ್ಶಿ ಸುಶ್ರೀ ಅನಿಶಾ ತೋಮರ್ ಅವರು ಭಾರತದ ಮಾವು ಉತ್ಪಾದನೆಯ ಕುರಿತು ಪ್ರಸ್ತುತಿಯನ್ನು ನೀಡಿದರು, ಮಾವು ಉತ್ಪಾದನೆಯಲ್ಲಿ ವಿಶ್ವದಲ್ಲೇ ಭಾರತದ ಅಗ್ರಸ್ಥಾನವನ್ನು ಅವರು ಉಲ್ಲೇಖಿಸಿದರು. ಗುಣಮಟ್ಟದ ಭರವಸೆ, ಮಾರುಕಟ್ಟೆ ಪ್ರವೇಶ ಮತ್ತು ಅಂತರರಾಷ್ಟ್ರೀಯ ಪ್ರಚಾರದ ಮೂಲಕ ಮಾವು ರಫ್ತನ್ನು ಉತ್ತೇಜಿಸಲು ಭಾರತ ಸರ್ಕಾರ ಕೈಗೊಂಡಿರುವ ಉಪಕ್ರಮಗಳನ್ನೂ ಅವರು ವಿವರಿಸಿದರು. ಈ ಕಾರ್ಯಕ್ರಮಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಭಾಗವಹಿಸಿದ್ದರು. ಆಮದುದಾರರು, ರಾಜತಾಂತ್ರಿಕ ಅಧಿಕಾರಿಗಳು, ಐಸ್ ಲ್ಯಾಂಡ್ ನ ವ್ಯಾಪಾರ ಸಂಸ್ಥೆಗಳ ಪ್ರತಿನಿಧಿಗಳು ಮತ್ತು ಐಸ್ ಲ್ಯಾಂಡ್ ನ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಅಧಿಕಾರಿಗಳು ಉಪಸ್ಥಿತರಿದ್ದರು.

ಅತಿಥಿಗಳಿಗೆ ಭಾರತದ ನಾಲ್ಕು ಪ್ರೀಮಿಯಂ ಮಾವಿನ ತಳಿಗಳಾದದ ಶೇರಿ, ಚೌಸಾ, ಲಂಗ್ರಾ ಮತ್ತು ಕೇಸರ್ ಗಳನ್ನು ನೀಡಲಾಯಿತು, ಅವುಗಳ ಅಸಾಧಾರಣ ಸುವಾಸನೆ, ರುಚಿ ಮತ್ತು ಗುಣಮಟ್ಟಕ್ಕೆ ವ್ಯಾಪಕ ಪ್ರಶಂಸೆ ವ್ಯಕ್ತವಾಯಿತು. ಈ ಕಾರ್ಯಕ್ರಮಗಳು ವಾಣಿಜ್ಯ ಸಂಬಂಧಗಳನ್ನು ಬಲಪಡಿಸಲು, ಭಾರತೀಯ ಕೃಷಿ ರಫ್ತುಗಳನ್ನು ಉತ್ತೇಜಿಸಲು ಮತ್ತು ಭಾರತ ಹಾಗೂ ಐಸ್ ಲ್ಯಾಂಡ್ ನಡುವೆ ಬೆಳೆಯುತ್ತಿರುವ ಆರ್ಥಿಕ ಸಹಭಾಗಿತ್ವವನ್ನು ಮತ್ತಷ್ಟು ಗಟ್ಟಿಗೊಳಿಸಲು ಒಂದು ಅಮೂಲ್ಯವಾದ ವೇದಿಕೆಯನ್ನು ಒದಗಿಸಿದವು.

ಈಗ ಐಸ್ ಲ್ಯಾಂಡ್ ಪ್ರಮುಖವಾಗಿ ಥೈಲ್ಯಾಂಡ್, ಬ್ರೆಜಿಲ್, ಕಾಂಬೋಡಿಯಾ, ಘಾನಾ ಮತ್ತು ಪೆರು ದೇಶಗಳಿಂದ ಮಾವಿನ ಹಣ್ಣುಗಳನ್ನು ಆಮದು ಮಾಡಿಕೊಳ್ಳುತ್ತದೆ. ಪರ್ಯಾಯ ಪೂರೈಕೆದಾರರ ಸೀಮಿತ ಲಭ್ಯತೆಯಿಂದಾಗಿ ಈ ಮಾವಿನ ಹಣ್ಣುಗಳು ಐಸ್ ಲ್ಯಾಂಡ್ ಮಾರುಕಟ್ಟೆಯಲ್ಲಿ ತಮ್ಮ ಸ್ಥಾನವನ್ನು ಕಂಡುಕೊಂಡಿವೆ. ಐಸ್ ಲ್ಯಾಂಡ್ 2025 ರಲ್ಲಿ ಸುಮಾರು 3.3 ದಶಲಕ್ಷ ಯುಎಸ್ ಡಾಲರ್ ಮೌಲ್ಯದ ಮಾವಿನ ಹಣ್ಣುಗಳನ್ನು ಆಮದು ಮಾಡಿಕೊಂಡಿದ್ದು, ಅದರಲ್ಲಿ ಸುಮಾರು 1 ದಶಲಕ್ಷ ಯುಎಸ್ ಡಾಲರ್ ಮೌಲ್ಯದ ಮಾವನ್ನು ಥೈಲ್ಯಾಂಡ್ ದೇಶ ಒಂದರಿಂದಲೇ ಆಮದು ಮಾಡಿಕೊಳ್ಳಲಾಗಿದೆ. ಸ್ಥಳೀಯ ಗ್ರಾಹಕರೊಂದಿಗೆ ರಾಯಭಾರ ಕಚೇರಿಯು ನಡೆಸಿದ ಸಂವಹನದ ವೇಳೆ, ಐಸ್ ಲ್ಯಾಂಡ್ ನ ಜನರು ಮಾವಿನ ಹಣ್ಣುಗಳನ್ನು ಇಷ್ಟಪಡುತ್ತಾರೆ ಮತ್ತು ವಿಶೇಷವಾಗಿ ಅವುಗಳನ್ನು ಸ್ಮೂಥಿ, ಸಿಹಿತಿಂಡಿಗಳು ಮತ್ತು ಫ್ರೂಟ್ ಸಲಾಡ್ ಗಳಲ್ಲಿ ಆನಂದಿಸುತ್ತಾರೆ ಎಂಬುದು ತಿಳಿದುಬಂದಿದೆ. ಇದು ಐಸ್ ಲ್ಯಾಂಡ್ ಮಾರುಕಟ್ಟೆಯಲ್ಲಿ ಭಾರತೀಯ ಮಾವಿನ ಹಣ್ಣುಗಳಿಗೆ ಇರುವ ಭರವಸೆಯ ಸಾಮರ್ಥ್ಯವನ್ನು ಸೂಚಿಸುತ್ತದೆ.

Vishakha Bhat Heggar

View all posts by this author