ಫ್ರೆಮಾಂಟ್: ಕ್ಯಾಲಿಫೋರ್ನಿಯಾದ (California) ಫ್ರೆಮಾಂಟ್‌ನಲ್ಲಿ ಭಾರತೀಯ ಮೂಲದ 29 ವರ್ಷದ ವರುಣ್ ಸುರೇಶ್‌ನ (Varun Suresh) ವಿರುದ್ಧ 71 ವರ್ಷದ ಡೇವಿಡ್ ಬ್ರಿಮರ್‌ನನ್ನು ಚಾಕುವಿನಿಂದ ಇರಿದು ಕೊಂದ (Murder Case) ಆರೋಪದಡಿ ಕೇಸ್ ದಾಖಲಾಗಿದೆ. ಪೊಲೀಸರು ಈ ದಾಳಿಯನ್ನು “ಉದ್ದೇಶಪೂರಿತ” (Targeted) ಎಂದು ಕರೆದಿದ್ದಾರೆ. ಬ್ರಿಮರ್, ಮಕ್ಕಳ ಮೇಲಿನ ಲೈಂಗಿಕ ಕೃತ್ಯ ನಡೆಸಿದ ಅಪರಾಧಕ್ಕೆ 1995ರಲ್ಲಿ 9 ವರ್ಷ ಜೈಲು ಶಿಕ್ಷೆ ಅನುಭವಿಸಿದ್ದ.
ಘಟನೆಯ ವಿವರ
ಸೆಪ್ಟೆಂಬರ್ 18 ರಂದು ಫ್ರೆಮಾಂಟ್‌ನಲ್ಲಿ ಇಬ್ಬರು ಹೊಡೆದಾಡುತ್ತಿರುವ ದೂರು ಬಂದಾಗ ಪೊಲೀಸರು ಸ್ಥಳಕ್ಕೆ ತೆರಳಿದರು. ಬ್ರಿಮರ್ ಚಾಕುವಿನ ಇರಿದ ಗಾಯದಿಂದ ಸತ್ತಿದ್ದನು. ಸುರೇಶ್‌ನ ಬಳಿ ಚಾಕು ಕಂಡುಬಂದಿತು. ಸುರೇಶ್ ಕ್ಯಾಲಿಫೋರ್ನಿಯಾದ ಮೆಗನ್ ಲಾ ಡೇಟಾಬೇಸ್ ಬಳಸಿ ಬ್ರಿಮರ್‌ನನ್ನು ಗುರುತಿಸಿದ್ದ. ದಾಳಿಗೆ 45 ನಿಮಿಷ ಮೊದಲು ಸುರೇಶ್ ಬ್ರಿಮರ್ ಪ್ರೊಫೈಲ್‌ನ ಸ್ಕ್ರೀನ್‌ಶಾಟ್ ತೆಗೆದಿದ್ದರು. ಸುರೇಶ್ ತನ್ನನ್ನು ಸಿಪಿಎ ಎಂದು ಪರಿಚಯಿಸಿಕೊಂಡು , ಬ್ಯಾಗ್, ನೋಟ್‌ಬುಕ್, ಕಾಫಿಯೊಂದಿಗೆ ಬ್ರಿಮರ್‌ರ ಮನೆಗೆ ಹೋಗಿ ದಾಳಿ ಮಾಡಿದ್ದಾರೆ.
ಈ ಸುದ್ದಿಯನ್ನು ಓದಿ: Viral Video: ಇದು ಅಜ್ಜಿಯರಿಗಾಗಿಯೇ ಇರೋ ಶಾಲೆ! 60-90 ವರ್ಷದ ಮಹಿಳೆಯರಿಗೆ ಕಲಿಯಲು ಎರಡನೇ ಅವಕಾಶ
ಕೃತ್ಯದ ಬಗ್ಗೆ ಸುರೇಶ್‌ರ ಒಪ್ಪಿಗೆ
ಬಂಧನದ ನಂತರ ಸುರೇಶ್, ಸೆಕ್ಸ್ ಅಪರಾಧಿಗಳು ಮಕ್ಕಳನ್ನು ನೋಯಿಸುತ್ತಾರೆ, ಅವರು ಸಾಯಬೇಕು ಎಂದು ಹೇಳಿದ್ದಾನೆ. ಈ ಕೊಲೆ ನಿಜವಾಗಿ ತುಂಬಾ ಮಜಾ ಎಂದು ಹೇಳಿ ನಗುತ್ತಿದ್ದ ಎಂದು ತಿಳಿದುಬಂದಿದೆ. ಅಲ್ಲದೆ ಸುರೇಶ್ ಫೋನ್‌ನಲ್ಲಿ ಹಲವು ಸೆಕ್ಸ್ ಆಪರಾಧಿಗಳ ಪ್ರೊಫೈಲ್‌ಗಳ ಸ್ಕ್ರೀನ್‌ಶಾಟ್‌ಗಳು ಪತ್ತೆಯಾಗಿವೆ.
2021ರಲ್ಲಿ ಸುರೇಶ್ ಫ್ರೆಮಾಂಟ್‌ನ ಹಯ್ಯಾಟ್ ಹೋಟೆಲ್‌ನಲ್ಲಿ ಸುಳ್ಳು ಬಾಂಬ್ ಬೆದರಿಕೆ ಹಾಕಿ ಬಂಧನಕ್ಕೊಳಗಾಗಿದ್ದ. ಹೋಟೆಲ್ ಸಿಇಒನನ್ನು “ಪೀಡೋಫೈಲ್” ಎಂದು ಕರೆದು ಕೊಲ್ಲಲು ಯೋಚಿಸಿದ್ದಾಗಿ ಹೇಳಿದ್ದ. ಅಲಮೆಡಾ ಕೌಂಟಿ ಜಿಲ್ಲಾ ಅಟಾರ್ನಿಗಳು ಸುರೇಶ್‌ರ ವಿರುದ್ಧ ಕೊಲೆ ಮತ್ತು ಆಯುಧ ಬಳಕೆಯ ಆರೋಪ ದಾಖಲಿಸಿದ್ದು, ಸುರೇಶ್ ಈಗ ಜೈಲಿನಲ್ಲಿದ್ದಾನೆ.