ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ವಿದ್ಯುತ್ ಸ್ಥಾವರಗಳ ಸುತ್ತ ಮಾನವ ಸರಪಳಿಗಳಿಗೆ ಇರಾನ್ ಕರೆ; ಮತ್ತೆ ಬೆದರಿಕೆ ಹಾಕಿದ ಟ್ರಂಪ್‌

ಹಾರ್ಮೊಜ್‌ ಪುನಃ ತೆರೆಯಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿಧಿಸಿರುವ ಗಡುವು ಇನ್ನೇನು ಮುಕ್ತಾಯಗೊಳ್ಳಲಿದೆ. ಇರಾನ್‌ನ ಪ್ರಮುಖ ವಿದ್ಯುತ್‌ ಸ್ಥಾವರಗಳನ್ನು ಸ್ಪೋಟಿಸುವುದಾಗಿ ಅಮೆರಿಕ ಬೆದರಿಕೆ ಹಾಕಿದ ಬೆನ್ನಲ್ಲೇ ಇದೀಗ ಇರಾನ್‌ ಆಡಳಿತ ಮಾನವ ಸರಪಳಿ ರೂಪಿಸಲು ಯುವ ಇರಾನಿಯನ್ನರಿಗೆ ಕರೆ ನೀಡಿದೆ ಎಂದು ವರದಿಯಾಗಿದೆ.

ಸಂಗ್ರಹ ಚಿತ್ರ

ಟೆಹ್ರಾನ್‌: ಹಾರ್ಮೊಜ್‌ ಪುನಃ ತೆರೆಯಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ವಿಧಿಸಿರುವ ಗಡುವು ಇನ್ನೇನು ಮುಕ್ತಾಯಗೊಳ್ಳಲಿದೆ. ಇರಾನ್‌ನ (Iran Israel US War) ಪ್ರಮುಖ ವಿದ್ಯುತ್‌ ಸ್ಥಾವರಗಳನ್ನು ಸ್ಪೋಟಿಸುವುದಾಗಿ ಅಮೆರಿಕ ಬೆದರಿಕೆ ಹಾಕಿದ ಬೆನ್ನಲ್ಲೇ ಇದೀಗ ಇರಾನ್‌ ಆಡಳಿತ ಮಾನವ ಸರಪಳಿ ರೂಪಿಸಲು ಯುವ ಇರಾನಿಯನ್ನರಿಗೆ ಕರೆ ನೀಡಿದೆ ಎಂದು ವರದಿಯಾಗಿದೆ. ಇರಾನ್‌ನ ಕ್ರೀಡಾ ಮತ್ತು ಯುವ ಸಚಿವಾಲಯವು ಮಂಗಳವಾರ ಮಧ್ಯಾಹ್ನ 2:00 ಗಂಟೆಯಿಂದ ಪರಮಾಣು ತಾಣಗಳ ಸುತ್ತಲೂ ಒಟ್ಟುಗೂಡುವಂತೆ ಕ್ರೀಡಾಪಟುಗಳು, ಕಲಾವಿದರು ಮತ್ತು ವಿದ್ಯಾರ್ಥಿಗಳು ಸೇರಿದಂತೆ ದೇಶದ ಯುವಕರಿಗೆ ಕರೆ ನೀಡಿದೆ.

ಮಾನವ ಸರಪಳಿ ಯುವಕರ ಸಲಹೆಯ ಮೇರೆಗೆ ರಚಿಸಲಾಗಿದೆ" ಎಂದು ಇರಾನ್‌ನ ಯುವ ವ್ಯವಹಾರಗಳ ಉಪ ಅಲಿರೆಜಾ ರಹೀಮಿ ವೀಡಿಯೊ ಸಂದೇಶದಲ್ಲಿ ತಿಳಿಸಿದ್ದಾರೆ. "ಹಲವಾರು ವಿಶ್ವವಿದ್ಯಾಲಯದ ಯುವಕರು, ಯುವ ಕಲಾವಿದರು ಮತ್ತು ಯುವ ಸಂಘಟನೆಗಳು ದೇಶದ ವಿದ್ಯುತ್ ಸ್ಥಾವರಗಳ ಸುತ್ತಲೂ ಮಾನವ ಉಂಗುರ ಅಥವಾ ಮಾನವ ಸರಪಳಿಯನ್ನು ರಚಿಸಬೇಕೆಂದು ಪ್ರಸ್ತಾಪಿಸಿದವು" ಎಂದು ಅವರು ಹೇಳಿದರು.

ಇರಾನ್ ಭಾರೀ ಬೆಲೆ ತೆರಬೇಕಾಗುತ್ತದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಕ್ರಮಣಕಾರಿ ಹೇಳಿಕೆ ನೀಡಿದ್ದು ಅಂತಿಮ ಗಡುವು ಮಂಗಳವಾರ ಕೊನೆಯಾಗುತ್ತದೆ ಎಂದು ಪುನರುಚ್ಚರಿಸಿದ್ದಾರೆ. ಇರಾನ್‌ನ ಪ್ರತಿ-ಪ್ರಸ್ತಾಪವು ಮುಖ್ಯ. ಆದರೆ ಅವರು ನಿರೀಕ್ಷಿಸಿದಷ್ಟು ಉತ್ತಮವಾಗಿ ಸ್ಪಂದಿಸುತ್ತಿಲ್ಲ ಎಂದು ಟ್ರಂಪ್ ಹೇಳಿದರು. ನಮ್ಮ ಯುದ್ಧದ ಉದ್ದೇಶ ಒಂದೇ ಆಗಿದ್ದು ಅದು ಇರಾನ್ ಪರಮಾಣು ಶಸ್ತ್ರಾಸ್ತ್ರಗಳನ್ನು ಹೊಂದಿರಬಾರದು ಎಂಬುದು ಎಂದು ಅವರು ಹೇಳಿದ್ದಾರೆ.

"ಒಂದೇ ರಾತ್ರಿಯಲ್ಲಿ ಇಡೀ ಇರಾನ್ ನಾಶವಾಗಲಿದೆ": ಕದನವಿರಾಮ ಒಪ್ಪಂದ ತಿರಸ್ಕರಿಸಿದ ಬೆನ್ನಲ್ಲೇ ಗುಡುಗಿದ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌

45 ದಿನಗಳ ಕದನ ವಿರಾಮಕ್ಕಾಗಿ ಅಮೆರಿಕ ಮತ್ತು ಇರಾನ್ ನಡುವೆ ಮಾತುಕತೆ ನಡೆಯುತ್ತಿದೆ ಎಂದು ಅಮೆರಿಕದ ಮಾಧ್ಯಮಗಳು ಹೇಳಿವೆ. ವರದಿಗಳ ಪ್ರಕಾರ, ಪಾಕಿಸ್ತಾನ, ಈಜಿಪ್ಟ್ ಮತ್ತು ಟರ್ಕಿ ಕದನ ವಿರಾಮದ ಮಧ್ಯಸ್ಥಿಕೆ ವಹಿಸುತ್ತಿವೆ. ಆದರೆ ಇರಾನ್‌ ಅದನ್ನು ತಿರಸ್ಕರಿಸಿದ್ದಾರೆ. ಟ್ರಂಪ್ ಇರಾನ್ ಮೇಲೆ ನಿರಂತರವಾಗಿ ಒತ್ತಡ ಹೇರುತ್ತಿದ್ದಾರೆ. . ಮಂಗಳವಾರ ರಾತ್ರಿ 8:00 ಗಂಟೆಗೆ ಅಂದರೆ ಬುಧವಾರ ಭಾರತೀಯ ಸಮಯ ಬೆಳಿಗ್ಗೆ 5:30ಕ್ಕೆ ಅಂತಿಮ ಗಡುವು ನಿಗದಿಪಡಿಸಿದ್ದಾರೆ.

Vishakha Bhat Heggar

View all posts by this author