ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಇರಾನ್‌ನಿಂದ ದುಬೈಯಲ್ಲಿ ಡಬಲ್ ಸ್ಟ್ರೈಕ್: ಅಮೆರಿಕ ಸೇನಾ ಕಟ್ಟಡ, ಆಸ್ಟ್ರೇಲಿಯಾ ಸೇನಾ ನೆಲೆಗಳ ಮೇಲೂ ದಾಳಿ

Iran's Double Strike: ಅಮೆರಿಕ-ಇರಾನ್-ಇಸ್ರೇಲ್ ಸಂಘರ್ಷವು ಗಲ್ಫ್ ರಾಷ್ಟ್ರಗಳಿಗೂ ವ್ಯಾಪಿಸಿದೆ. ದುಬೈಯಲ್ಲಿ ಅಮೆರಿಕ ಮತ್ತು ಆಸ್ಟ್ರೇಲಿಯಾದ ಸೇನಾ ನೆಲೆಗಳ ಮೇಲೆ ದಾಳಿ ಮಾಡಲಾಗಿದೆ. ದುಬೈಯಲ್ಲಿರುವ ತಮ್ಮ ಕಟ್ಟಡವೊಂದರ ಮೇಲೆ ಇರಾನ್ ದಾಳಿ ಮಾಡಿರುವುದಾಗಿ ಆಸ್ಟ್ರೇಲಿಯಾ ರಕ್ಷಣಾ ಸಚಿವ ರಿಚರ್ಡ್ ಮಾರ್ಲೆಸ್ ದೃಢಪಡಿಸಿದ್ದಾರೆ.

ದುಬೈನಲ್ಲಿ ಡಬಲ್ ಸ್ಟ್ರೈಕ್ ನಡೆಸಿದ ಇರಾನ್

ದುಬೈ, ಮಾ. 3: ಅಮೆರಿಕ-ಇರಾನ್-ಇಸ್ರೇಲ್ ಸಂಘರ್ಷವು (US-Israel strike) ಗಲ್ಫ್ ಪ್ರದೇಶಕ್ಕೂ ವ್ಯಾಪಿಸಿದೆ. ದುಬೈನಲ್ಲಿ ಅಮೆರಿಕ ಮತ್ತು ಆಸ್ಟ್ರೇಲಿಯಾದ ನೆಲೆಗಳ ಮೇಲೆ ದಾಳಿ ಮಾಡಲಾಗಿದೆ (Australian Base Hit). ದುಬೈಯಲ್ಲಿರುವ ಕಟ್ಟಡವೊಂದರ ಮೇಲೆ ಇರಾನ್ ದಾಳಿ ಮಾಡಿದೆ (Iran's Double Strike). ಇದು ಅಮೆರಿಕಗೆ ಸಂಬಂಧಪಟ್ಟಿದ್ದು ಎಂದು ಹೇಳಲಾಗಿದೆ. ಆದರೆ ಕಟ್ಟಡಕ್ಕೆ ಉಂಟಾಗಿರುವ ಹಾನಿ ಹಾಗೂ ನಷ್ಟದ ಕುರಿತು ಯಾವುದೇ ದೃಢೀಕರಣ ಇನ್ನೂ ಬಂದಿಲ್ಲ. ಜತೆ ಆಸ್ಪ್ರೇಲಿಯಾಕ್ಕೆ ಸಂಬಂಧಿಸಿದ ಕಟ್ಟಡದ ಮೇಲೂ ಆಕ್ರಮಣ ನಡೆದಿದೆ.

ಅಲ್ ಮಿನ್ಹಾದ್‌ನಲ್ಲಿರುವ ಆಸ್ಟ್ರೇಲಿಯಾದ ನೆಲೆಯ ಮೇಲೆ ದಾಳಿ

ದುಬೈ ಬಳಿಯ ಅಲ್ ಮಿನ್ಹಾದ್‌ನಲ್ಲಿರುವ ಆಸ್ಟ್ರೇಲಿಯಾದ ಮಿಲಿಟರಿ ನೆಲೆಯನ್ನು ಇರಾನ್ ಗುರಿಯಾಗಿಸಿಕೊಂಡಿದೆ. ಆಸ್ಟ್ರೇಲಿಯಾದ ಸಿಬ್ಬಂದಿಯನ್ನು ನಿಯೋಜಿಸಲಾಗಿರುವ ಅಲ್ ಮಿನ್ಹಾದ್ ವಾಯುನೆಲೆಯ ಮೇಲೆ ಇರಾನಿನ ಪಡೆಗಳು ದಾಳಿ ಮಾಡಿವೆ ಎಂಬುದನ್ನು ಆಸ್ಟ್ರೇಲಿಯಾದ ರಕ್ಷಣಾ ಸಚಿವ ರಿಚರ್ಡ್ ಮಾರ್ಲೆಸ್ ದೃಢಪಡಿಸಿದರು. ಎಲ್ಲರೂ ಸುರಕ್ಷಿತರಾಗಿದ್ದಾರೆ ಎಂದು ಅವರು ಹೇಳಿದರು.

ನಾವು ಮಧ್ಯಪ್ರಾಚ್ಯದಾದ್ಯಂತ 100ಕ್ಕೂ ಹೆಚ್ಚು ಸಿಬ್ಬಂದಿಯನ್ನು ಹೊಂದಿದ್ದೇವೆ. ಅವರಲ್ಲಿ ಹೆಚ್ಚಿನವರು ಯುಎಇಯಲ್ಲಿದ್ದಾರೆ. ಅಲ್ಲಿ ನಾವು ಹಲವು ವರ್ಷಗಳಿಂದ ಅಲ್ ಮಿನ್ಹಾದ್‌ನಲ್ಲಿ ಕಾರ್ಯಾಚರಣಾ ಪ್ರಧಾನ ಕಚೇರಿಯನ್ನು ಹೊಂದಿದ್ದೇವೆ ಎಂದು ಅವರು ಮಾರ್ಲೆಸ್ ತಿಳಿಸಿದರು.

ರಿಯಾದ್‌ನ ಅಮೆರಿಕ ರಾಯಭಾರ ಕಚೇರಿ ಮೇಲೆ ಇರಾನ್ ಡ್ರೋನ್ ದಾಳಿ

ಗಲ್ಫ್ ರಾಷ್ಟ್ರಗಳಲ್ಲಿ ಇರಾನ್ ನಡೆಸುತ್ತಿರುವ ನಿರಂತರ ಡ್ರೋನ್ ಮತ್ತು ಕ್ಷಿಪಣಿ ಚಟುವಟಿಕೆಗಳ ನಡುವೆಯೇ ಈ ದಾಳಿಗಳು ನಡೆದಿವೆ. ಇವು ಅಮೆರಿಕದ ಮಿಲಿಟರಿ ಆಸ್ತಿಗಳನ್ನು ಗುರಿಯಾಗಿರಿಸಿಕೊಂಡಿವೆ ಎನ್ನಲಾಗಿದೆ. ಗಲ್ಫ್ ದೇಶಗಳು, ಬಹುತೇಕವು ಪಶ್ಚಿಮ ದೇಶಗಳ ಸೇನೆಗಳನ್ನು ಮತ್ತು ನೆಲೆಗಳನ್ನು ಹೊಂದಿರುವ ಕಾರಣ ಸಂಘರ್ಷ ತೀವ್ರವಾಗುವ ಆತಂಕದಲ್ಲಿವೆ.

ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC), ಟ್ರೂತ್‌ಫುಲ್ ಪ್ರಾಮಿಸ್-4 ಕಾರ್ಯಾಚರಣೆಯ ಭಾಗವಾಗಿ ಅಮೆರಿಕದ ನೆಲೆಗಳು ಮತ್ತು ಆಸ್ತಿಗಳನ್ನು ಗುರಿಯಾಗಿಸಿಕೊಂಡಿದೆ ಎಂದು ಹೇಳಿಕೆಯಲ್ಲಿ ತಿಳಿಸಿದೆ. ಫೆಬ್ರವರಿ 28ರಂದು ಬೆಳಗ್ಗೆ ಅಮೆರಿಕ ಮತ್ತು ಇಸ್ರೇಲ್, ಇರಾನ್ ಮೇಲೆ ನಡೆಸಿದ ದಾಳಿಗೆ ಪ್ರತಿಕ್ರಿಯೆಯಾಗಿ IRGC ಕಾರ್ಯಾಚರಣೆ ನಡೆಯುತ್ತಿದೆ.

ದುಬೈ ಜತೆಗೆ ಕತಾರ್, ಬಹ್ರೇನ್, ಜೋರ್ಡಾನ್ ಮತ್ತು ಕುವೈತ್ ಮೇಲೆಯೂ ಇರಾನ್ ದಾಳಿ ನಡೆಸಿದೆ. ಇವೆಲ್ಲವೂ ಅಮೆರಿಕದ ಮಿಲಿಟರಿ ನೆಲೆಗಳಿಗೆ ನೆಲೆಯಾಗಿದೆ. ಅಮೆರಿಕವು ಮಧ್ಯಪ್ರಾಚ್ಯದಾದ್ಯಂತ ಸುಮಾರು 13 ಮಿಲಿಟರಿ ನೆಲೆಗಳನ್ನು ಹೊಂದಿದ್ದು, ಸಾಮಾನ್ಯವಾಗಿ ಅಲ್ಲಿ 30,000ರಿಂದ 40,000 ಸೈನಿಕರನ್ನು ನಿಯೋಜಿಸಲಾಗುತ್ತದೆ.

ಟ್ರಾಫಿಕ್ ಕ್ಯಾಮರಾದಿಂದ ಫೋನ್ ನೆಟ್‌ವರ್ಕ್‌ವರೆಗೆ: ಖಮೇನಿ ಅಡಗು ತಾಣವನ್ನು ಇಸ್ರೇಲ್ ಪತ್ತೆ ಹಚ್ಚಿದ್ದು ಹೇಗೆ?

ರಿಯಾದ್‌ನ ಅಮೆರಿಕ ರಾಯಭಾರ ಕಚೇರಿ ಮೇಲೆ ಇರಾನ್ ಡ್ರೋನ್ ದಾಳಿ

ಮಧ್ಯಪ್ರಾಚ್ಯದಲ್ಲಿ ಸಂಘರ್ಷ ಹೆಚ್ಚುತ್ತಿದ್ದಂತೆ ಸೌದಿ ಅರೇಬಿಯಾದ ರಿಯಾದ್‌ನಲ್ಲಿರುವ ಅಮೆರಿಕ ರಾಯಭಾರ ಕಚೇರಿಯ ಮೇಲೆ ಮಂಗಳವಾರ (ಮಾ. 3) ಡ್ರೋನ್ ದಾಳಿ ನಡೆದಿದೆ. ರಾಯಭಾರ ಕಚೇರಿಯ ಆವರಣದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಸ್ಫೋಟದ ಶಬ್ಧ ಕೇಳಿಬಂದಿದೆ.

ದಾಳಿ ಬಳಿಕ ಕಟ್ಟಡದಿಂದ ಹೊಗೆ ಮೇಲೇಳುತ್ತಿರುವ ದೃಶ್ಯದ ವಿಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗಿದೆ. ಟೆಹರಾನ್‌ ಮೇಲೆ ವಾರಾಂತ್ಯದ ದಾಳಿಗಳ ನಂತರ ಪ್ರತೀಕಾರವಾಗಿ ಇರಾನ್ ಗುರಿಯಾಗಿಸಿಕೊಂಡಿರುವ ಹಲವು ಗಲ್ಫ್ ರಾಷ್ಟ್ರಗಳಲ್ಲಿ ಸೌದಿ ಅರೇಬಿಯಾ ಕೂಡ ಒಂದು. ಸಂಘರ್ಷ ಹೆಚ್ಚುತ್ತಿದ್ದಂತೆ ಇರಾನ್, ಗಲ್ಫ್ ರಾಷ್ಟ್ರಗಳಲ್ಲಿರುವ ಅಮೆರಿಕದ ಮಿಲಿಟರಿ ನೆಲೆಗಳನ್ನು ಗುರಿಯಾಗಿಸಿಕೊಂಡು ಕ್ಷಿಪಣಿ ಮತ್ತು ಡ್ರೋನ್ ದಾಳಿಗಳನ್ನು ನಡೆಸಿತು.