ಟೆಹರಾನ್, ಮಾ. 30: ಇಸ್ರೇಲ್ ದಾಳಿಯಲ್ಲಿ (Israeli attack)ಇರಾನ್‌ನ ಕ್ರಾಂತಿಕಾರಿ ಗಾರ್ಡ್ ನೌಕಾಪಡೆಯ ಕಮಾಂಡರ್ ಅಲಿರೆಜಾ ತಂಗ್ಸಿರಿ ಅವರನ್ನು ಹತ್ಯೆ ಮಾಡಲಾಗಿದೆ ಎಂದು ಇರಾನ್ (Iran war) ದೃಢಪಡಿಸಿದೆ. ಹೊರ್ಮುಜ್ ಜಲಸಂಧಿಯನ್ನು (Strait of Hormuz) ನಿರ್ಬಂಧಿಸಲು ಇಸ್ರೇಲ್ ಕಾರಣ ಎಂದು ತಂಗ್ಸಿರಿ ಹೇಳಿದ್ದರು. ಕಳೆದ ವಾರ ನಡೆದ ದಾಳಿಯಲ್ಲಿ ಅಲಿರೆಜಾ ತಂಗ್ಸಿರಿ (Alireza Tangsiri) ತೀವ್ರ ಗಾಯಗೊಂಡಿದ್ದರು ಎಂದು ಗಾರ್ಡ್ಸ್ ಸೆಪಾ ನ್ಯೂಸ್ ಹೇಳಿಕೆಯಲ್ಲಿ ತಿಳಿಸಿದೆ.
ಇಸ್ರೇಲ್ ರಕ್ಷಣಾ ಸಚಿವ ಇಸ್ರೇಲ್ ಕಾಟ್ಜ್ ಗುರುವಾರ (ಮಾರ್ಚ್ 26, 2026) ತಮ್ಮ ವೈಮಾನಿಕ ದಾಳಿಯಲ್ಲಿ ತಂಗ್ಸಿರಿ ಮೃತಪಟ್ಟಿದ್ದಾರೆ ಎಂದು ಘೋಷಿಸಿದ್ದರು. ಯುದ್ಧ ಪ್ರಾರಂಭವಾಗಿ ಈಗ ಎರಡನೇ ತಿಂಗಳಾಗಿರುವಾಗ, ಇರಾನ್ ಪ್ರಮುಖ ಜಲಮಾರ್ಗ ಹೊರ್ಮುಜ್ ಜಲಸಂಧಿಯ ಮೇಲೆ ದಿಗ್ಬಂಧನ ವಿಧಿಸಿದೆ. ಇದರಿಂದಾಗಿ ಜಾಗತಿಕ ಇಂಧನ ಬೆಲೆಗಳು ಗಗನಕ್ಕೇರಿವೆ.
ಶತ್ರುಗಳು ಸಂಪೂರ್ಣವಾಗಿ ನಾಶವಾಗುವವರೆಗೆ ವಿಶ್ರಮಿಸುವುದಿಲ್ಲ ಎಂದು ಎಂದು ಇರಾನ್ ಪ್ರತಿಜ್ಞೆ ಮಾಡಿದೆ. ತಂಗ್ಸಿರಿಯನ್ನು ಹತ್ಯೆ ಮಾಡಲಾದ ದಾಳಿಯಲ್ಲಿ ನೌಕಾ ಕಮಾಂಡ್‌ನ ಹಿರಿಯ ಅಧಿಕಾರಿಗಳು ಕೂಡ ಮೃತಪಟ್ಟಿದ್ದಾರೆ ಎನ್ನಲಾಗಿದೆ.
ಅಲಿರೆಜಾ ತಂಗ್ಸಿರಿಯ ಹತ್ಯೆ:
ಹೊರ್ಮುಜ್ ಜಲಸಂಧಿಯನ್ನು ಮುಚ್ಚುವ ತಂತ್ರವನ್ನು ಉಳಿಸಿಕೊಂಡು ಶತ್ರುಗಳಿಗೆ ಕಠಿಣ ಹೊಡೆತಗಳನ್ನು ನೀಡುವುದಾಗಿ ಮಾರ್ಚ್ ಆರಂಭದಲ್ಲಿ ತಂಗ್ಸಿರಿ ಪ್ರತಿಜ್ಞೆ ಮಾಡಿದ್ದರು. 1980-1988ರ ಇರಾನ್-ಇರಾಕ್ ಯುದ್ಧದ ಅನುಭವಿಯಾಗಿರುವ ತಂಗ್ಸಿರಿ ಸೇನೆಯಲ್ಲಿ ದೀರ್ಘಕಾಲ ಸೇವೆ ಸಲ್ಲಿಸಿದ ಹಿರಿಯ ವ್ಯಕ್ತಿಗಳಲ್ಲಿ ಒಬ್ಬರು.
ಇಸ್ಲಾಮಿಕ್ ಗಣರಾಜ್ಯವನ್ನು ಆಂತರಿಕ ಮತ್ತು ಬಾಹ್ಯ ಬೆದರಿಕೆಗಳಿಂದ ರಕ್ಷಿಸುವ ಕಾರ್ಯವನ್ನು ಹೊಂದಿರುವ ಕ್ರಾಂತಿಕಾರಿ ಗಾರ್ಡ್‌ಗಳ ನೌಕಾ ಶಾಖೆಯ ಮುಖ್ಯಸ್ಥರಾಗಿ ಅವರನ್ನು 2018ರಲ್ಲಿ ಖಮೇನಿ ನೇಮಿಸಿದ್ದರು. ಅವರ ನಾಯಕತ್ವದಲ್ಲಿ, ಗಾರ್ಡ್‌ಗಳ ನೌಕಾಪಡೆಯನ್ನು ಗಮನಾರ್ಹವಾಗಿ ಬಲಪಡಿಸಲಾಯಿತು.
ಇರಾನ್ ತೈಲ ನಿಕ್ಷೇಪ ವಶಪಡಿಸಿಕೊಳ್ಳುವ ಸುಳಿವು ನೀಡಿದ ಟ್ರಂಪ್
ಇತ್ತೀಚಿನ ವರ್ಷಗಳಲ್ಲಿ, ಗಾರ್ಡ್ ಹಲವು ವಿದೇಶಿ ಹಡಗುಗಳನ್ನು ವಶಪಡಿಸಿಕೊಳ್ಳುವ ಜವಾಬ್ದಾರಿಯನ್ನು ಹೊತ್ತುಕೊಂಡಿದೆ. ಇತ್ತ ಇಸ್ರೇಲ್ ಮತ್ತು ಅಮೆರಿಕವು ಇರಾನ್‌ನ ಉನ್ನತ ಅಧಿಕಾರಿಗಳನ್ನು ಹತ್ಯೆ ಮಾಡುವ ದೊಡ್ಡ ಹೊಡೆತ ನೀಡಿರುವುದಾಗಿ ತಿಳಿಸಿದೆ.
ಕುವೈತ್ ವಿದ್ಯುತ್ ಸ್ಥಾವರದ ಮೇಲೆ ಇರಾನ್ ಕ್ಷಿಪಣಿ ದಾಳಿ
ಕುವೈತ್‌ನಲ್ಲಿರುವ ವಿದ್ಯುತ್ ಸ್ಥಾವರದ ಮೇಲೆ ಇರಾನ್ ಕ್ಷಿಪಣಿ ದಾಳಿ ನಡೆಸಿದ್ದು, ಭಾರತೀಯ ಕಾರ್ಮಿಕನೊಬ್ಬ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಕ್ಷಿಪಣಿ ದಾಳಿಯಿಂದಾಗಿ ಸ್ಥಾವರದಲ್ಲಿದ್ದ ಕಟ್ಟಡವೊಂದಕ್ಕೆ ಹಾನಿಯಾಗಿದೆ ಎಂದು ಗಲ್ಫ್ ರಾಜ್ಯದ ವಿದ್ಯುತ್ ಸಚಿವಾಲಯ ತಿಳಿಸಿದೆ. ಕುವೈತ್‌ನ ವಿದ್ಯುತ್, ನೀರು ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯವು ಭಾನುವಾರ (ಮಾ. 29) ಸಂಜೆ ಈ ಘಟನೆ ನಡೆದಿದೆ.