ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಅಯತೊಲ್ಲಾ ಅಲಿ ಖಮೇನಿ ಅಂತ್ಯಕ್ರಿಯೆಗೆ ನರೇಂದ್ರ ಮೋದಿಗೆ ಇರಾನ್ ಅಧ್ಯಕ್ಷರಿಂದ ಆಹ್ವಾನ; ಭಾರತದ ಪ್ರಧಾನಿ ಹೋಗ್ತಾರ?

Ayatollah Ali Khamenei: ಮಾಜಿ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಅವರ ಅಂತ್ಯಕ್ರಿಯೆಯಲ್ಲಿ ಭಾಗವಹಿಸುವಂತೆ ಇರಾನ್ ಅಧ್ಯಕ್ಷ ಮಸೂದ್ ಪೆಜೆಶ್ಕಿಯನ್ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಆಹ್ವಾನ ನೀಡಿದ್ದಾರೆ. ಜುಲೈ 4ರಿಂದ 9ರವರೆಗೆ ಟೆಹರಾನ್‌, ಕೋಮ್ ಹಾಗೂ ಮಶ್ಹದ್‌ನಲ್ಲಿ ಅಂತ್ಯಕ್ರಿಯೆ ನಡೆಯಲಿದ್ದು, ಹಲವು ದೇಶಗಳ ನಾಯಕರು ಭಾಗವಹಿಸುವ ನಿರೀಕ್ಷೆಯಿದೆ.

ಮಸೂದ್‌ ಪೆಜೆಶ್ಕಿಯನ್ - ನರೇಂದ್ರ ಮೋದಿ (ಸಂಗ್ರಹ ಚಿತ್ರ)

ನವದೆಹಲಿ, ಜೂ. 24: ಇರಾನ್ ಅಧ್ಯಕ್ಷ (Iranian President) ಮಸೂದ್ ಪೆಜೆಶ್ಕಿಯನ್ (Masoud Pezeshkian) ಭಾರತದ ಪ್ರಧಾನಿ (Indian Prime Minister) ನರೇಂದ್ರ ಮೋದಿ (Narendra Modi) ಅವರಿಗೆ ಮಾಜಿ ಸರ್ವೋಚ್ಚ ನಾಯಕ (Former Supreme Leader) ಅಯತೊಲ್ಲಾ ಅಲಿ ಖಮೇನಿ (Ayatollah Ali Khamenei) ಅವರ ಅಂತ್ಯಕ್ರಿಯೆಯಲ್ಲಿ ಭಾಗವಹಿಸುವಂತೆ ಅಧಿಕೃತ ಆಹ್ವಾನ ನೀಡಿದ್ದಾರೆ ಎಂದು ರಾಜತಾಂತ್ರಿಕ
ಮೂಲಗಳು ತಿಳಿಸಿವೆ.

ಖಮೇನಿ ಅವರ ಅಂತ್ಯಕ್ರಿಯೆಯ ವಿಧಿವಿಧಾನಗಳು ಜುಲೈ 4ರಿಂದ ಆರಂಭವಾಗಲಿದ್ದು, ಜುಲೈ 9ರಂದು ಅವರ ಹುಟ್ಟೂರಾದ ಪವಿತ್ರ ನಗರ ಮಶ್ಹದ್‌ನಲ್ಲಿ ಅಂತಿಮ ಸಂಸ್ಕಾರ ನಡೆಯಲಿದೆ. ಜುಲೈ 7ರಂದು ಕೋಮ್ ನಗರದಲ್ಲಿಯೂ ವಿಶೇಷ ಶ್ರದ್ಧಾಂಜಲಿ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.

86 ವರ್ಷದ ಅಲಿ ಖಾಮೆನೇಯಿ ಅವರು ಫೆಬ್ರವರಿ 28ರಂದು ಇರಾನ್‌ ಮೇಲೆ ನಡೆದ ಅಮೆರಿಕ ಮತ್ತು ಇಸ್ರೇಲ್ ನಡೆಸಿದ ಜಂಟಿ ವೈಮಾನಿಕ ದಾಳಿಯಲ್ಲಿ ಮೃತಪಟ್ಟಿದ್ದರು. ಸುಮಾರು 36 ವರ್ಷಗಳ ಕಾಲ ಇರಾನ್‌ನ ಸರ್ವೋಚ್ಚ ನಾಯಕರಾಗಿದ್ದ ಅವರು ದೇಶದ ರಾಜಕೀಯ ಮತ್ತು ಧಾರ್ಮಿಕ ವ್ಯವಸ್ಥೆಯಲ್ಲಿ ಅತ್ಯಂತ ಪ್ರಭಾವಿ ವ್ಯಕ್ತಿಯಾಗಿದ್ದರು.

ಅಯತೊಲ್ಲಾ ಅಲಿ ಖಮೇನಿ ಅಂತ್ಯಕ್ರಿಯೆಗೆ ನರೇಂದ್ರ ಮೋದಿಗೆ ಆಹ್ವಾನ:



ಇಸ್ಲಾಮಿಕ್ ಸಂಪ್ರದಾಯದ ಪ್ರಕಾರ ಮೃತದೇಹವನ್ನು ಶೀಘ್ರವೇ ಸಮಾಧಿ ಮಾಡುವುದು ರೂಢಿಯಾಗಿದ್ದರೂ, ಯುದ್ಧ ಪರಿಸ್ಥಿತಿ ಮತ್ತು ಭದ್ರತಾ ಕಾರಣಗಳಿಂದಾಗಿ ಅಂತ್ಯಕ್ರಿಯೆಯನ್ನು ಹಲವು ತಿಂಗಳು ಮುಂದೂಡಲಾಗಿತ್ತು. ಆರಂಭದಲ್ಲಿ ಜೂನ್‌ನಲ್ಲಿ ಅಂತ್ಯಸಂಸ್ಕಾರ ನಡೆಯಲಿದೆ ಎನ್ನಲಾಗಿದ್ದರೂ, ಬಳಿಕ ಇರಾನ್ ಸರ್ಕಾರ ಜುಲೈ 4ರಿಂದ 9ರವರೆಗೆ ಬಹುದಿನಗಳ ಕಾರ್ಯಕ್ರಮಗಳನ್ನು ಆಯೋಜಿಸುವುದಾಗಿ ಘೋಷಿಸಿದೆ.

ಉಕ್ರೇನ್‌ನಲ್ಲಿ ಭಾರತೀಯ ಸೈನಿಕರ ನಿಯೋಜನೆ; ಜೆ.ಡಿ. ವ್ಯಾನ್ಸ್ ಪ್ರಸ್ತಾವನೆಗೆ ಡೊನಾಲ್ಡ್‌ ಟ್ರಂಪ್ ಬ್ರೇಕ್

ಟೆಹರಾನ್‌, ಕೋಮ್ ಹಾಗೂ ಮಶ್ಹದ್ ನಗರಗಳಲ್ಲಿ ನಡೆಯಲಿರುವ ಅಂತ್ಯಕ್ರಿಯೆಯಲ್ಲಿ ಸುಮಾರು 2 ಕೋಟಿ ಜನರು ಭಾಗವಹಿಸುವ ನಿರೀಕ್ಷೆಯಿದೆ. ಈ ಅಂದಾಜು ನಿಜವಾದರೆ, 1989ರಲ್ಲಿ ಇರಾನ್ ಸ್ಥಾಪಕ ಅಯತೊಲ್ಲಾ ರುಹೊಲ್ಲಾ ಖೋಮೇನಿ ಅವರ ಅಂತ್ಯಕ್ರಿಯೆಯಲ್ಲಿ ದಾಖಲಾಗಿದ್ದ ಸುಮಾರು 1 ಕೋಟಿ ಜನರ ಭಾಗವಹಿಸಿದ ದಾಖಲೆಯನ್ನು ಮೀರಿಸುವ ಸಾಧ್ಯತೆಯಿದೆ. ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಶರೀಫ್ ಸೇರಿ ಹಲವು ರಾಷ್ಟ್ರಗಳ ಪ್ರತಿನಿಧಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ನಿರೀಕ್ಷೆ ಇದೆ.

ಇದೇ ವೇಳೆ, ಭಾರತ ಸರ್ಕಾರ ಇನ್ನೂ ಪ್ರಧಾನಿ ನರೇಂದ್ರ ಮೋದಿ ವೈಯಕ್ತಿಕವಾಗಿ ಅಂತ್ಯಕ್ರಿಯೆಯಲ್ಲಿ ಭಾಗವಹಿಸುವ ಕುರಿತು ಯಾವುದೇ ಅಧಿಕೃತ ನಿರ್ಧಾರ ಪ್ರಕಟಿಸಿಲ್ಲ. ಭಾರತದ ಪರವಾಗಿ ಪ್ರಧಾನಿ ಅಥವಾ ಉನ್ನತ ಮಟ್ಟದ ಸರ್ಕಾರಿ ಪ್ರತಿನಿಧಿ ಯಾರು ಹಾಜರಾಗುತ್ತಾರೆ ಎಂಬುದು ಸದ್ಯ ಸ್ಪಷ್ಟವಾಗಿಲ್ಲ.

ಖಮೇನಿ ಅವರ ನಿಧನದ ನಂತರ ಅವರ ಪುತ್ರ ಮೊಜ್ತಬಾ ಖಮೇನಿ ಮಾರ್ಚ್ 8ರಂದು ಇರಾನ್‌ನ ಹೊಸ ಸರ್ವೋಚ್ಚ ನಾಯಕರಾಗಿ ಅಧಿಕಾರ ಸ್ವೀಕರಿಸಿದ್ದು, ದೇಶದಲ್ಲಿ ಹೊಸ ನಾಯಕತ್ವದ ಅಧ್ಯಾಯ ಆರಂಭವಾಗಲಿದೆ.