ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಕೊನೆಗಾಣುತ್ತಾ ಯುದ್ಧ; ಕದನ ವಿರಾಮಕ್ಕೆ 3 ಷರತ್ತುಗಳನ್ನು ಮುಂದಿಟ್ಟ ಇರಾನ್‌!

ಅಮೆರಿಕ ಮತ್ತು ಇಸ್ರೇಲ್ ಜೊತೆಗಿನ ಇರಾನ್‌ ಸಂಘರ್ಷ ಕೊನೆಯಾಗುವ ಹಂತದಲ್ಲಿದೆ. ಯುದ್ಧ ನಿಲ್ಲಿಸಲು ಇದೀಗ ಇರಾನ್‌ ಮೂರು ಬೇಡಿಯನ್ನು ಇಟ್ಟಿದ್ದು, ರಾನ್ ಅಧ್ಯಕ್ಷ ಮಸೌದ್ ಪೆಜೆಶ್ಕಿಯಾನ್ ಕದನ ವಿರಾಮಕ್ಕೆ ಕೆಲ ಬೇಡಿಕೆಗಳನ್ನು ಇಟ್ಟಿದ್ದಾರೆ. ಈ ಕುರಿತು ಅವರು ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿದ್ದಾರೆ.

ಸಂಗ್ರಹ ಚಿತ್ರ

ಅಮೆರಿಕ ಮತ್ತು ಇಸ್ರೇಲ್ ಜೊತೆಗಿನ ಇರಾನ್‌ ಸಂಘರ್ಷ ಕೊನೆಯಾಗುವ ಹಂತದಲ್ಲಿದೆ. ಯುದ್ಧ ನಿಲ್ಲಿಸಲು ಇದೀಗ ಇರಾನ್‌ ಮೂರು ಬೇಡಿಯನ್ನು ಇಟ್ಟಿದ್ದು, ರಾನ್ ಅಧ್ಯಕ್ಷ ಮಸೌದ್ ಪೆಜೆಶ್ಕಿಯಾನ್, ಯಾವುದೇ ನಿರ್ಣಯವು ಇರಾನ್‌ನ ಕಾನೂನುಬದ್ಧ ಹಕ್ಕುಗಳನ್ನು ಗುರುತಿಸಬೇಕು ಮತ್ತು ದೇಶವು ಭವಿಷ್ಯದ ದಾಳಿಗಳನ್ನು ಎದುರಿಸುವುದಿಲ್ಲ ಎಂದು ಖಾತರಿಪಡಿಸಬೇಕು ಎಂದು ಹೇಳಿದ್ದಾರೆ. ಎಕ್ಸ್‌ನಲ್ಲಿ ಈ ಕುರಿತು ಪೋಸ್ಟ್‌ ಮಾಡಿರುವ ಅವರು, ಯುದ್ಧದ ಸಮಯದಲ್ಲಿ ಉಂಟಾದ ಹಾನಿಗಳಿಗೆ ಪರಿಹಾರವನ್ನು ಸಹ ಒತ್ತಾಯಿಸಿದರು.

ಶಾಂತಿಗೆ ಇರಾನ್‌ನ ಬದ್ಧತೆಯನ್ನು ನಾನು ಪುನರುಚ್ಚರಿಸಿದ್ದೇನೆ. ಝಿಯೋನಿಸ್ಟ್ ಆಡಳಿತ ಮತ್ತು ಅಮೆರಿಕದಿಂದ ಹೊತ್ತಿಸಲ್ಪಟ್ಟ ಈ ಯುದ್ಧವನ್ನು ಕೊನೆಗೊಳಿಸಲು ಏಕೈಕ ಮಾರ್ಗವೆಂದರೆ ಇರಾನ್‌ನ ಕಾನೂನುಬದ್ಧ ಹಕ್ಕುಗಳನ್ನು ಗುರುತಿಸುವುದು, ಪರಿಹಾರಗಳ ಪಾವತಿ ಮತ್ತು ಭವಿಷ್ಯದ ಆಕ್ರಮಣದ ವಿರುದ್ಧ ದೃಢವಾದ ಅಂತಾರಾಷ್ಟ್ರೀಯ ಖಾತರಿಗಳು" ಎಂದು ಅವರು ಬರೆದಿದ್ದಾರೆ. ಇರಾನ್‌ನ ಬಂದರು ಸೌಲಭ್ಯಗಳ ಮೇಲೆ ವಾಷಿಂಗ್ಟನ್ ದಾಳಿ ಮಾಡಿದರೆ, ಪರ್ಷಿಯನ್ ಕೊಲ್ಲಿಯಲ್ಲಿ ಯಾವುದೇ ಬಂದರು, ಆರ್ಥಿಕ ಕೇಂದ್ರ ಅಥವಾ ಸ್ಥಳವು ಇರಾನ್‌ನ ವ್ಯಾಪ್ತಿಯನ್ನು ಮೀರಿರುವುದಿಲ್ಲ ಎಂದು ಇರಾನ್ ಸಶಸ್ತ್ರ ಪಡೆಗಳ ವಕ್ತಾರ ಅಬೋಲ್‌ಫಜಲ್ ಶೇಕರ್ಚಿ ತಿಳಿಸಿದ್ದಾರೆ.

ದಾಳಿ ಹೆಚ್ಚಿಸಿದ ಅಮೆರಿಕ

ಹತ್ತು ದಿನಗಳಿಂದ ಇರಾನಿನ ಮಿಲಿಟರಿ ಶಕ್ತಿಯನ್ನು ಕುಂದಿಸಲು ಅಮೆರಿಕದ ಸೆಂಟ್ರಲ್ ಕಮಾಂಡ್ ( CENTCOM ) ಬೃಹತ್ ಕಾರ್ಯಾಚರಣೆ ನಡೆಸುತ್ತಿದೆ. ವರದಿಯ ಪ್ರಕಾರ, ಅಮೆರಿಕದ ವಾಯುಪಡೆಯು ಇರಾನಿನಾದ್ಯಂತ ಹರಡಿರುವ ಸುಮಾರು 5,000ಕ್ಕೂ ಹೆಚ್ಚು ಗುರಿಗಳನ್ನು ಯಶಸ್ವಿಯಾಗಿ ಧ್ವಂಸಗೊಳಿಸಿದೆ. ಇದರಲ್ಲಿ ಇರಾನಿನ ಶಸ್ತ್ರಾಸ್ತ್ರ ಮಳಿಗೆಗಳು, ರಾಡಾರ್ ಕೇಂದ್ರಗಳು ಮತ್ತು ಕಮಾಂಡ್ ಕಚೇರಿಗಳು ಸೇರಿವೆ.

ಯಾವುದೇ ಸಮಸ್ಯೆಗೆ ಮಿಲಿಟರಿ ಸಂಘರ್ಷ ಪರಿಹಾರವಲ್ಲ: ಇರಾನ್‌-ಇಸ್ರೇಲ್‌ ಯುದ್ಧದ ಬಗ್ಗೆ ಪ್ರಧಾನಿ ಮೋದಿ ಹೇಳಿದ್ದೇನು?

ಇರಾನಿನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) ಕುವೈತ್‌ನಲ್ಲಿರುವ ಅಮೆರಿಕದ ಮಿಲಿಟರಿ ನೆಲೆಯ ಮೇಲೆ ನಾಲ್ಕು ಕ್ಷಿಪಣಿ ದಾಳಿಗಳನ್ನು ನಡೆಸಿರುವುದಾಗಿ ಘೋಷಿಸಿದೆ. ಅಮೆರಿಕದ ಮಿಲಿಟರಿ ನೆಲೆಗಳನ್ನು ಗುರಿಯಾಗಿಸುವ ಮೂಲಕ ಅಮೆರಿಕಕ್ಕೆ ನೇರ ಸವಾಲು ಹಾಕುವುದು ಇರಾನಿನ ಉದ್ದೇಶವಾಗಿದೆ. ಈ ದಾಳಿಯಿಂದ ಸಂಭವಿಸಿದ ಸಾವುನೋವುಗಳ ಬಗ್ಗೆ ಅಮೆರಿಕ ಇನ್ನೂ ಅಧಿಕೃತ ಮಾಹಿತಿ ನೀಡಿಲ್ಲ.

Vishakha Bhat Heggar

View all posts by this author