ಟೆಲ್ ಅವೀವ್: ಇರಾನ್‌ನಲ್ಲಿರುವ ಅರೆಸೈನಿಕ ಇಸ್ಲಾಮಿಕ್ (US-Israel-Iran Conflict) ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ ಸೋಮವಾರ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು (US-Israel-Iran Conflict) ಅವರ ಕಚೇರಿ ಮತ್ತು ಇಸ್ರೇಲ್ ವಾಯುಪಡೆಯ ಕಮಾಂಡರ್ ಅವರ ಪ್ರಧಾನ ಕಚೇರಿಯನ್ನು ಗುರಿಯಾಗಿಸಿಕೊಂಡಿದೆ ಎಂದು ಹೇಳಿದೆ. "ಜಿಯೋನಿಸ್ಟ್ ಆಡಳಿತದ ಕ್ರಿಮಿನಲ್ ಪ್ರಧಾನಿಯ ಕಚೇರಿ ಮತ್ತು ಆಡಳಿತದ ವಾಯುಪಡೆಯ ಕಮಾಂಡರ್‌ನ ಪ್ರಧಾನ ಕಚೇರಿಯನ್ನು ಗುರಿಯಾಗಿಸಲಾಗಿತ್ತು ಹೇಳಿಕೆಯಲ್ಲಿ ತಿಳಿಸಲಾಗಿದೆ. ನೆತನ್ಯಾಹು ಅವರ ಕಚೇರಿಯ ಮೇಲೆ ಖೈಬರ್ ಕ್ಷಿಪಣಿಗಳನ್ನು ಹೊಡೆದುರುಳಿಸಿರುವುದಾಗಿ ಇರಾನ್ ಇಂಟರ್‌ನ್ಯಾಷನಲ್ ಐಆರ್‌ಜಿಸಿ ವರದಿ ಮಾಡಿದೆ.
ಅಮೆರಿಕ- ಇಸ್ರೇಲ್ ಜಂಟಿದಾಳಿಯಲ್ಲಿ ಇರಾನ್ ನ ಪರಮೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇಮಿ ಹತ್ಯೆಯಾಗಿರುವುದಕ್ಕೆ ಪ್ರತಿಯಾಗಿ ಟೆಲ್ ಅವೀವ್‌ನಲ್ಲಿರುವ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ ಕಚೇರಿ ಹಾಗೂ ಹೈಫಾದಲ್ಲಿನ ಭದ್ರತಾ ಮತ್ತು ಮಿಲಿಟರಿ ಕೇಂದ್ರಗಳನ್ನು ಮತ್ತು ಪೂರ್ವ ಜೆರುಸಲೆಮ್ ಅನ್ನು ಗುರಿಯಾಗಿರಿಸಿ ಈ ದಾಳಿ ನಡೆದಿದೆ ಎಂದು ತಿಳಿಸಿದೆ. ಕ್ಷಿಪಣಿ ದಾಳಿಯಲ್ಲಿ ನೆತನ್ಯಾಹು ಅವರ ಕಚೇರಿ ನಾಶವಾಗಿದೆ ಎಂಬ ಇರಾನ್‌ನ ಹೇಳಿಕೆಯನ್ನು ಇಸ್ರೇಲಿ ವರದಿಗಳು ನಿರಾಕರಿಸಿದ್ದು, ಅವುಗಳನ್ನು 'ಸುಳ್ಳು ಪ್ರಚಾರ' ಎಂದು ಕರೆದಿವೆ. ಸಂಘರ್ಷ ಆರಂಭವಾದಾಗಿನಿಂದ ಇಸ್ರೇಲ್ ವಾಯುಪಡೆ ಮತ್ತು ಇಸ್ರೇಲಿ ನೌಕಾಪಡೆ ಇರಾನ್‌ನಿಂದ ಇಸ್ರೇಲ್ ಮೇಲೆ ಹಾರಿಸಲಾದ ಡಜನ್ಗಟ್ಟಲೆ ಡ್ರೋನ್‌ಗಳನ್ನು ತಡೆಹಿಡಿದಿವೆ ಎಂದು ಹೇಳಿದೆ. ಅಮೆರಿಕ ಮತ್ತು ಇಸ್ರೇಲ್ ಇರಾನ್ ಮೇಲೆ ಸಂಘಟಿತ ದಾಳಿಗಳನ್ನು ನಡೆಸಿದ ನಂತರ ಪಶ್ಚಿಮ ಏಷ್ಯಾದಲ್ಲಿ ಉದ್ವಿಗ್ನತೆ ಉಂಟಾಗಿದೆ.
ಇರಾನ್‌ನ ಫೈಟರ್ ಜೆಟ್‌ಗಳು, ಡ್ರೋನ್‌ಗಳನ್ನು ನಾಶಪಡಿಸಿದ ಅಮೆರಿಕ; ಕಾರ್ಯಾಚರಣೆಯ ದೃಶ್ಯದ ವಿಡಿಯೊ ಬಿಡುಗಡೆ
ಏತನ್ಮಧ್ಯೆ, ಇರಾನ್‌ನಲ್ಲಿ ಅಮೆರಿಕದ ಮಿಲಿಟರಿ ಕಾರ್ಯಾಚರಣೆಗಳು ವಾರಗಳವರೆಗೆ ಮುಂದುವರಿಯುತ್ತವೆ ಮತ್ತು ವಾಷಿಂಗ್ಟನ್‌ನ ಉದ್ದೇಶಗಳು ಸಾಧಿಸುವವರೆಗೆ ನಿಲ್ಲುವುದಿಲ್ಲ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಅದೇ ರೀತಿ, ಇರಾನ್‌ನಲ್ಲಿ ದೇಶದ ಕಾರ್ಯಾಚರಣೆಯು ನಿಗದಿತ ಅಂತಿಮ ದಿನಾಂಕವಿಲ್ಲದೆ ಮುಂದುವರಿಯುತ್ತದೆ ಎಂದು ಇಸ್ರೇಲ್ ವಿದೇಶಾಂಗ ಸಚಿವ ಗಿಡಿಯಾನ್ ಸಾರ್ ಹೇಳಿದ್ದಾರೆ. ಇರಾನಿನ ರೆಡ್ ಕ್ರೆಸೆಂಟ್ ಮೇಲೆ ಶನಿವಾರ ಆರಂಭವಾದ ಅಮೆರಿಕ-ಇಸ್ರೇಲಿ ಜಂಟಿ ದಾಳಿಯಲ್ಲಿ ಇರಾನ್‌ನಾದ್ಯಂತ ಒಟ್ಟು 555 ಜನರು ಸಾವನ್ನಪ್ಪಿದ್ದಾರೆ. ಇರಾನ್ ಇಸ್ರೇಲ್ ಮಾತ್ರವಲ್ಲದೆ ತನ್ನ ನೆರೆಯಲ್ಲಿರುವ ಮಿತ್ರರಾಷ್ಟ್ರಗಳ ಮೇಲೂ ಕ್ಷಿಪಣಿ ದಾಳಿ ನಡೆಸುತ್ತಿದೆ. ಜೊತೆಗೆ ಒಮಾನ್ ಕರಾವಳಿ ತೀರದಲ್ಲಿ ಹಾದು ಹೋಗುತ್ತಿದ್ದ ತೈಲ ಹಡಗನ್ನೂ ಗುರಿಯಾಗಿರಿಸಿ ದಾಳಿ ನಡೆಸಿದ್ದು 4 ಮಂದಿಗೆ ಗಾಯಗಳಾಗಿವೆ.