ಇಸ್ರೇಲ್: ಇರಾನ್ (iran war) ನನ್ನ ಒಬ್ಬ ಮಗನನ್ನು (Metamyahu son) ಹತ್ಯೆ (Murder attempt) ಮಾಡಲು ಪ್ರಯತ್ನ ನಡೆಸಿತ್ತು ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು (Israeli Prime Minister Benjamin Netanyahu) ತಿಳಿಸಿದ್ದಾರೆ. ಇಸ್ರೇಲ್‌ನ ಚಾನೆಲ್ 14ಗೆ ನೀಡಿದ ಫೋನ್ ಸಂದರ್ಶನದಲ್ಲಿ (Interview) ಈ ಕುರಿತು ಸೋಮವಾರ ಮಾಹಿತಿ ನೀಡಿದ ಅವರು, ಮಗನ ಹತ್ಯೆಗೆ ಎಲ್ಲಿ, ಹೇಗೆ, ಯಾವಾಗ ಪ್ರಯತ್ನ ನಡೆಸಲಾಗಿದೆ ಎಂಬುದನ್ನು ಬಹಿರಂಗಪಡಿಸಿಲ್ಲ. ನೆತನ್ಯಾಹು ಅವರ ಯಾವ ಪುತ್ರನನ್ನು ಇರಾನ್ ಗುರಿಯಾಗಿಸಿಕೊಂಡಿದೆ ಎಂಬುದನ್ನು ಕೂಡ ಹೇಳಲಿಲ್ಲ.
ಇರಾನ್ ನನ್ನ ಒಬ್ಬ ಮಗನನ್ನು ಕೊಲೆ ಮಾಡಲು ಪ್ರಯತ್ನಿಸಿತು ಎಂದು ಬೆಂಜಮಿನ್ ನೆತನ್ಯಾಹು ಅವರ ಹೇಳಿಕೆ ಈಗ ತಲ್ಲಣ ಉಂಟು ಮಾಡಿದೆ. ಅವರ ಯಾವ ಮಗನನ್ನು ಹತ್ಯೆಗೆ ಹೇಗೆ ಪ್ರಯತ್ನಿಸಲಾಯಿತು ಅಥವಾ ಯಾವಾಗ ಪ್ರಯತ್ನ ಮಾಡಲಾಯಿತು ಎಂಬುದರ ಕುರಿತು ಯಾವುದೇ ಸ್ಪಷ್ಟನೆಯನ್ನು ಅವರು ನೀಡಿಲ್ಲ.
ಇಸ್ರೇಲ್‌ನ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಅವರು ನಂಬಲಾಗದ ಘಟನೆಯೊಂದು ಸಂಭವಿಸಿದೆ. ಇರಾನ್ ನನ್ನ ಒಬ್ಬ ಮಗನನ್ನು ಗುರಿಯಾಗಿಸಿಕೊಂಡಿದೆ ಎಂದು ಅವರು ತಿಳಿಸಿದ್ದಾರೆ.
ನೆತನ್ಯಾಹು ಅವರಿಗೆ ಅವ್ನರ್ ಮತ್ತು ಯೈರ್ ಎಂಬ ಇಬ್ಬರು ಪುತ್ರರಿದ್ದು, ಅವರಲ್ಲಿ ಯಾರ ಮೇಲೆ ಇರಾನ್ ದಾಳಿ ನಡೆಸಲು ಪ್ರಯತ್ನಿಸಿತ್ತು ಎಂಬುದನ್ನು ಅವರು ತಿಳಿಸಿಲ್ಲ. ಮುಂಬರುವ ಚುನಾವಣೆ ಹಿನ್ನೆಲೆಯಲ್ಲಿ ಮಾಜಿ ಮಿಲಿಟರಿ ಮುಖ್ಯಸ್ಥ ಐಸೆನ್‌ಕೋಟ್ ಅವರಿಗೆ ದೇಶೀಯ ಭದ್ರತಾ ಸಂಸ್ಥೆ ಶಿನ್ ಬೆಟ್ ಭದ್ರತೆ ನೀಡಲು ನಿರಾಕರಿಸಿದೆ ಎಂಬ ವರದಿ ಬೆನ್ನಲ್ಲೇ ಅವರು ಈ ಹೇಳಿಕೆಗಳನ್ನು ನೀಡಿದ್ದಾರೆ.
ತಮ್ಮ ಕುಟುಂಬ ಭದ್ರತೆ ಪಡೆಯುತ್ತಿರುವುದು ಐಷಾರಾಮಿಗಾಗಿ ಅಲ್ಲ. ಶಿನ್ ಬೆಟ್ ಜೊತೆಗಿನ ಒಪ್ಪಂದದ ಪ್ರಕಾರ ಅವರು ಮುಂದಿನ ಚುನಾವಣೆಯಲ್ಲಿ ಸೋತರೂ ಕೂಡ ಅವರ ಪತ್ನಿ ಮತ್ತು ಪುತ್ರರಿಗೆ ಕನಿಷ್ಠ ಐದು ವರ್ಷಗಳ ಕಾಲ ಭದ್ರತೆಯನ್ನು ದೊರೆಯುತ್ತದೆ ಎಂದು ನೆತನ್ಯಾಹು ತಿಳಿಸಿದ್ದಾರೆ.
ನೆತನ್ಯಾಹು ಅವರಿಗೆ ಒಬ್ಬ ಮಗಳು ಇದ್ದಾಳೆ. ಅವರ ಹಿರಿಯ ಮಗ ಯೈರ್ 2024 ರಿಂದ ಮಿಯಾಮಿಯಲ್ಲಿ ಶಿನ್ ಬೆಟ್ ರಕ್ಷಣೆಯಲ್ಲಿದ್ದು, ಕಿರಿಯ ಮಗ ಅವ್ನರ್ ಇಸ್ರೇಲ್‌ನಲ್ಲಿ ವಾಸವಾಗಿದ್ದಾನೆ. ಒಂದು ವೇಳೆ ಶಿನ್ ಬೆಟ್ ರಕ್ಷಣೆ ಇಲ್ಲದೇ ಇದ್ದರೆ ಇರಾನ್ ನನ್ನ ಮಗನನ್ನು ಕೊಲ್ಲಬಹುದು. ಚುನಾವಣೆ ಸಮಯದಲ್ಲಿ ಜನರು ಸ್ವಲ್ಪ ಸಂಯಮವನ್ನು ತೋರಿಸಬೇಕಾಗಿದೆ ಎಂದು ನೆತನ್ಯಾಹು ತಿಳಿಸಿದ್ದಾರೆ.
ದೇಶದ ತೆರಿಗೆದಾರರ ಹಣ ಬಳಸಿಕೊಂಡು ಯೈರ್ ಗೆ ಭದ್ರತೆಯಲ್ಲಿ ಯುಎಸ್‌ನಲ್ಲಿ ಇರಿಸಿರುವುದು ಈಗ ದೇಶಾದ್ಯಂತ ಜನರ ಆಕ್ರೋಶಕ್ಕೆ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ಅವರು ಈ ಹೇಳಿಕೆಗಳನ್ನು ನೀಡಿದ್ದು, ನಾನು ಶಿನ್ ಬೆಟ್ ಮುಖ್ಯಸ್ಥರೊಂದಿಗೆ ಮಾತನಾಡಿ ಪ್ರಧಾನಿ ಅಭ್ಯರ್ಥಿಗೆ ಸೂಕ್ತ ಭದ್ರತೆ ಒದಗಿಸುವಂತೆ ಕೇಳಿಕೊಂಡಿದ್ದೇನೆ ಎಂದು ತಿಳಿಸಿದ್ದಾರೆ.
ಬಹಳ ದಿನಗಳ ಬಳಿಕ ಮಮತಾ ಬ್ಯಾನರ್ಜಿಗೆ ತುಸು ರಿಲೀಫ್; ಘರ್ ವಾಪಸಿ ಘೋಷಿಸಿದ ತೃಣಮೂಲ ಕಾಂಗ್ರೆಸ್‌ನ ಬಂಡಾಯ ಶಾಸಕ
ಇಸ್ರೇಲ್‍ನಲ್ಲಿ ಅಕ್ಟೋಬರ್ 27ರಂದು ಸಾರ್ವತ್ರಿಕ ಚುನಾವಣೆ ನಡೆಯಲಿದ್ದು, ಮಾಜಿ ಮಿಲಿಟರಿ ಮುಖ್ಯಸ್ಥ ಐಸೆನ್‍ಕೋಟ್ ಅವರು ಪ್ರಧಾನಿ ಬೆಂಜಮಿನ್ ನೆತನ್ಯಾಹು ವಿರುದ್ಧ ಕಣದಲ್ಲಿದ್ದಾರೆ. ಚಾನೆಲ್ 12 ನಡೆಸಿದ ಸಮೀಕ್ಷೆಯಪ್ರಕಾರ, ಐಸೆನ್‍ಕೋಟ್ ಅವರ ಹೊಸ ಪಕ್ಷವಾದ `ಯಾಶರ್' ನೆತನ್ಯಾಹು ಅವರ ಲಿಕುಡ್ ಪಕ್ಷಕ್ಕಿಂತ ಮುಂದಿದೆ. ಪ್ರಧಾನಿ ಹುದ್ದೆಗೆ ಐಸೆನ್‍ಕೋಟ್ ಅತ್ಯಂತ ಸೂಕ್ತ ಅಭ್ಯರ್ಥಿ ಎಂದು ಶೇಕಡಾ 43ರಷ್ಟು ಮಂದಿ ಅಭಿಪ್ರಾಯಪಟ್ಟಿದ್ದರೆ ನೆತನ್ಯಾಹು ಅವರಿಗೆ ಶೇಕಡಾ 34ರಷ್ಟು ಮಂದಿಯ ಬೆಂಬಲ ವ್ಯಕ್ತವಾಗಿದೆ ಎಂದು ಸಮೀಕ್ಷೆ ಹೇಳಿದೆ.