ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಖಮೇನಿ ಸಾವಿನ ಸುದ್ದಿ ಓದುವಾಗ ನೇರ ಪ್ರಸಾರದಲ್ಲೇ ಬಿಕ್ಕಿ ಬಿಕ್ಕಿ ಅತ್ತ ಇರಾನ್ ಟಿವಿ ನಿರೂಪಕ

Iranian TV anchors expressed grief: ಇರಾನ್‌ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಅವರ ಹತ್ಯೆಯ ಬಗ್ಗೆ ಬ್ರೇಕಿಂಗ್ ನ್ಯೂಸ್ ಓದುವಾಗ ಟಿವಿ ನಿರೂಪಕ ಕಣ್ಣಿರು ಸುರಿಸಿರುವ ಘಟನೆ ನಡೆದಿದ್ದು, ಈ ವಿಡಿಯೊ ವೈರಲ್‌ ಆಗಿದೆ. ನೇರ ಪ್ರಸಾರದಲ್ಲಿ ಸುದ್ದಿ ನೀಡುವಾಗ ನೀಡುವಾಗ ನಿರೂಪಕನಿಗೆ ದುಃಖ ತಡೆಯಲು ಸಾಧ್ಯವಾಗಲಿಲ್ಲ.

ನೇರಪ್ರಸಾರದಲ್ಲೇ ದುಃಖ ವ್ಯಕ್ತಪಡಿಸಿದ ಇರಾನ್ ಟಿವಿ ನಿರೂಪಕರು

ಟೆಹರಾನ್‌, ಮಾ. 1: ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್‌ ಆಗಿರುವ ವಿಡಿಯೊ ಇರಾನಿನ (Iran strike) ದೂರದರ್ಶನದಲ್ಲಿ ಕಂಡುಬಂದ ಭಾವನಾತ್ಮಕ ಕ್ಷಣವನ್ನು ಸೆರೆ ಹಿಡಿದಿದೆ. ಇರಾನ್‌ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ (Ayatollah Ali Khamenei) ಅವರ ಹತ್ಯೆಯ ಬಗ್ಗೆ ಬ್ರೇಕಿಂಗ್ ನ್ಯೂಸ್ ನೀಡುವಾಗ ಸುದ್ದಿ ನಿರೂಪಕ ಭಾವುಕನಾಗಿ ಕಣ್ಣೀರು ಸುರಿಸಿದ್ದಾನೆ. ನೇರ ಪ್ರಸಾರದಲ್ಲಿ ಸುದ್ದಿ ನೀಡುವಾಗ ನೀಡುವಾಗ ನಿರೂಪಕನಿಗೆ ತನ್ನ ನೋವನ್ನು ನಿಯಂತ್ರಿಸಲು ಸಾಧ್ಯವಾಗಲೇ ಇಲ್ಲ.

ವೈರಲ್ ವಿಡಿಯೊದಲ್ಲಿ ದುಃಖದಲ್ಲಿ ಸುದ್ದಿ ವಾಚಿಸುತ್ತಿದ್ದ ನಿರೂಪಕ ಅಲ್ಲಾಹು ಅಕ್ಬರ್ ಎಂದು ಹೇಳುತ್ತ, ಅಮೆರಿಕ ಮತ್ತು ಇಸ್ರೇಲ್ ಜಂಟಿ ದಾಳಿಯಲ್ಲಿ ಖಮೇನಿ ಹುತಾತ್ಮರಾಗಿದ್ದಾರೆ ಎಂದು ಪ್ರೇಕ್ಷಕರಿಗೆ ತಿಳಿಸಿದರು. ನಿರೂಪಕ ಸುದ್ದಿ ಓದಲು ಕಷ್ಟಪಡುತ್ತಿದ್ದರೆ, ಸ್ಟುಡಿಯೊ ಒಳಗಿನಿಂದ ಇತರರ ಅಳುವ ಶಬ್ಧ ಕೇಳಿಬಂದವು.

ಇಲ್ಲಿದೆ ವಿಡಿಯೊ:





86 ವರ್ಷದ ನಾಯಕ ಖಮೇನಿ ನಿಧನಕ್ಕೆ ಇರಾನ್‌ನಲ್ಲಿ 40 ದಿನಗಳ ಶೋಕಾಚರಣೆ ನಡೆಯಲಿದೆ ಎಂದು ಅಧಿಕಾರಿಗಳು ಹೇಳಿರುವುದಾಗಿ ವರದಿ ತಿಳಿಸಿದೆ. ಖಮೇನಿ ಅವರ ಮಗಳು, ಅಳಿಯ ಮತ್ತು ಮೊಮ್ಮಗಳು ಸೇರಿದಂತೆ ಅವರ ಕುಟುಂಬದ ಸದಸ್ಯರೊಂದಿಗೆ ಹತ್ಯೆಯಾಗಿದ್ದಾರೆ. ಖಮೇನಿ ಶನಿವಾರ (ಫೆಬ್ರವರಿ 28) ಮುಂಜಾನೆ ತಮ್ಮ ಕಚೇರಿಯಲ್ಲಿ ನಿಧನರಾದರು ಎಂದು ಇರಾನ್ ಮಾಧ್ಯಮ ವರದಿ ಮಾಡಿದೆ.

ಇನ್ನು ಖಮೇನಿ ಅವರ ಕಚೇರಿ ಮೇಲೆ ಇಸ್ರೇಲ್ ನಡೆಸಿದ ದಾಳಿಯಲ್ಲಿ ಮೃತಪಟ್ಟಿದ್ದು, ಮೃತದೇಹ ಪತ್ತೆಯಾಗಿದೆ ಎಂದು ಇಸ್ರೇಲ್ ಮಾಧ್ಯಮ ವರದಿ ಮಾಡಿದೆ. ಟೆಹರಾನ್‌ ಶವ ಪತ್ತೆಯಾಗಿರುವುದನ್ನು ದೃಢೀಕರಿಸುವ ಚಿತ್ರಗಳನ್ನು ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರಿಗೆ ತೋರಿಸಲಾಗಿದೆ ಎಂದು ಇಸ್ರೇಲ್ ಮಾಧ್ಯಮ ತಿಳಿಸಿದೆ.

ಅಯತೊಲ್ಲಾ ಅಲಿ ಖಮೇನಿ ಹತ್ಯೆ: ಇರಾನ್‌ನ ಸರ್ವೋಚ್ಚ ನಾಯಕನ ಉತ್ತರಾಧಿಕಾರಿ ಯಾರು?

ಖಮೇನಿಯ ಸಾವು ಇರಾನಿನ ಜನರು ತಮ್ಮ ದೇಶವನ್ನು ಮರಳಿ ಪಡೆಯಲು ಇರುವ ಏಕೈಕ ದೊಡ್ಡ ಅವಕಾಶ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಇರಾನಿನ ಮಿಲಿಟರಿ ಮತ್ತು ಸರ್ಕಾರಿ ಸೌಲಭ್ಯಗಳನ್ನು ಗುರಿಯಾಗಿಸಿಕೊಂಡು ಅಮೆರಿಕ-ಇಸ್ರೇಲಿಗಳು ನಡೆಸಿದ ಸಂಘಟಿತ ವೈಮಾನಿಕ ಕಾರ್ಯಾಚರಣೆಯ ನಂತರ ಈ ಹತ್ಯೆ ನಡೆದಿದೆ ಎಂದು ಮೂಲಗಳು ತಿಳಿಸಿವೆ.

ಇರಾನ್ ಮೇಲೆ ಇಸ್ರೇಲ್‌ನಿಂದ ಮತ್ತೆ ದಾಳಿ

ಇರಾನ್‌ನ ಸುಪ್ರೀಂ ನಾಯಕ ಅಯತೊಲ್ಲಾ ಖಮೇನಿಯನ್ನು ಹತ್ಯೆ ಮಾಡಿದ ಬಳಿಕ ಇರಾನ್‌ ಇಸ್ರೇಲ್‌ ಹಾಗೂ ಅಮೆರಿಕದ ವಾಯುನೆಲೆಗಳ ಮೇಲೆ ದಾಳಿ ಮಾಡಿದೆ. ಇದೀಗ ಪ್ರತೀಕಾರಕ್ಕಾಗಿ ಇಸ್ರೇಲ್‌, ಇರಾನ್‌ ರಾಜಧಾನಿ ಟೆಹರಾನ್‌ ಮೇಲೆ ಪ್ರತಿದಾಳಿ ನಡೆಸಿದೆ. ಭಾನುವಾರ (ಮಾರ್ಚ್‌ 1) ಟೆಹರಾನ್‌ನಲ್ಲಿ ಬಹು ಸ್ಫೋಟಗಳು ಸಂಭವಿಸಿವೆ. ನಗರದಾದ್ಯಂತ ಬೃಹತ್ ಸ್ಫೋಟಗಳ ಸದ್ದು ಕೇಳಿಬಂದಿದ್ದು, ಸ್ಫೋಟಗಳ ನಂತರ ಆಕಾಶಕ್ಕೆ ದೊಡ್ಡ ಹೊಗೆಯ ಗೊಂಚಲುಗಳು ಏರುತ್ತಿರುವುದನ್ನು ತೋರಿಸುವ ವಿಡಿಯೊಗಳು ಕಾಣಿಸಿಕೊಂಡಿವೆ.