ಟೆಹ್ರಾನ್: ಇರಾನ್‌ನ ತಜ್ಞರು (Iran Assembly of Experts) ಅಯತೊಲ್ಲಾ ಅಲಿ ಖಮೇನಿ (Ayatollah Ali Khamenei) ಅವರ ಪುತ್ರ ಮೊಜ್ತಬಾ ಖಮೇನಿ (Mojtaba Khamene) ಅವರನ್ನು ದೇಶದ ಹೊಸ ಸರ್ವೋಚ್ಚ ನಾಯಕನಾಗಿ ಆಯ್ಕೆ ಮಾಡಿದ್ದಾರೆ. ಇಸ್ರೇಲ್ ಹಾಗೂ ಅಮೆರಿಕ ನಡೆಸಿದ ಜಂಟಿ ದಾಳಿಯಲ್ಲಿ ಫೆಬ್ರವರಿ 28 ರಂದು ಸರ್ವೋಚ್ಛ ನಾಯಕ ಅಲಿ ಖಮೇನಿ ಹತ್ಯೆಯಾದ ಬಳಿಕವೂ ಯುಎಸ್ ಮತ್ತು ಇಸ್ರೇಲ್ ದಾಳಿಯನ್ನು ಮುಂದುವರಿಸಿದೆ. ಈ ಹಿನ್ನೆಲೆಯಲ್ಲಿ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (Islamic Revolutionary Guard Corps) ಒತ್ತಾಯದ ಮೇರೆಗೆ ಮೊಜ್ತಬಾ ಖಮೇನಿ ಅವರನ್ನು ದೇಶದ ಸರ್ವೋಚ್ಚ ನಾಯಕನಾಗಿ ಆಯ್ಕೆ ಮಾಡಲಾಗಿದೆ ಎನ್ನಲಾಗಿದೆ.
ಯಾರು ಮೊಜ್ತಬಾ ಖಮೇನಿ?
ಅಯತೊಲ್ಲಾ ಅಲಿ ಖಮೇನಿ ಅವರ ಎರಡನೇ ಮಗನಾಗಿ 1969ರ ಸೆಪ್ಟೆಂಬರ್ 8ರಂದು ಜನಿಸಿದ ಮೊಜ್ತಬಾ ಖಮೇನಿ ಅವರು ಮಧ್ಯಮ ಶ್ರೇಣಿಯ ಧರ್ಮಗುರು ಎಂದು ಗುರುತಿಸಲ್ಪಟ್ಟಿದ್ದಾರೆ. ಅವರು ತಮ್ಮ ತಂದೆಯ ಕಚೇರಿಯನ್ನು ನಿರ್ವಹಿಸುತ್ತಿದ್ದರು. ಇರಾನ್-ಇರಾಕ್ ಯುದ್ಧದ ಕಾಲದಿಂದಲೂ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ ಜೊತೆ ನಿಕಟ ಸಂಬಂಧಗಳನ್ನು ಇಟ್ಟುಕೊಂಡಿದ್ದರು. ಔಪಚಾರಿಕವಾಗಿಯೂ ಸಾರ್ವಜನಿಕವಾಗಿ ಕಾಣಿಸಿಕೊಳ್ಳದೆ ಇವರು ಭದ್ರತೆ ಮತ್ತು ಮಿಲಿಟರಿ ಸಮನ್ವಯದಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
ಸರ್ವೋಚ್ಚ ನಾಯಕನೋ? ಅಧ್ಯಕ್ಷರೋ? ಇರಾನ್ ಆಡಳಿತ ಯಾರ ಕೈಯಲ್ಲಿ?
2016ರ ಮಾರ್ಚ್ 15ರಂದು ಮೊಜ್ತಾಬಾ ಖಮೇನಿ ಅವರು ಕೋಮ್ ಸೆಮಿನರಿ ಸದಸ್ಯರ ನಡುವೆ ಸಾರ್ವಜನಿಕವಾಗಿ ಕಾಣಿಸಿಕೊಂಡರು. ಇದು ಇರಾನ್‌ನ ಧಾರ್ಮಿಕ ಮುಖಂಡರು ಮತ್ತು ರಾಜಕೀಯ ಜಾಲಗಳಲ್ಲಿ ಅವರ ದೀರ್ಘಕಾಲದ ಒಳಗೊಳ್ಳುವಿಕೆಯನ್ನು ಪ್ರತಿಬಿಂಬಿಸಿತ್ತು.
ಇರಾನ್ ವಿರುದ್ಧದ ಯುದ್ಧ ಮತ್ತೊಂದು ಹಂತಕ್ಕೆ ಕೊಂಡೊಯ್ದ ಅಮೆರಿಕ-ಇಸ್ರೇಲ್; ಏರ್‌ಪೋರ್ಟ್ ಮೇಲೆ ದಾಳಿ
1979ರ ಇರಾನ್ ಕ್ರಾಂತಿಯ ಬಳಿಕ ದೇಶದ ನಾಯಕನಾಗಿ ಹೊರಹೊಮ್ಮಿದ್ದು ಅಯತೊಲ್ಲಾ ಅಲಿ ಖಮೇನಿ. ಇವರು ಈ ಸಂದರ್ಭದಲ್ಲಿ ಅಮೆರಿಕ ವಿರೋಧಿ ಭಾವನೆ ಇದ್ದ ಕಟ್ಟರ್ ವಾದಿಗಳಿಗೆ ಧೈರ್ಯ ತುಂಬಿದ್ದರು. 1989ರಲ್ಲಿ ಇರಾನ್‌ನ ಸರ್ವೋಚ್ಚ ನಾಯಕನಾಗಿ ಅಧಿಕಾರ ವಹಿಸಿಕೊಂಡ ಅಯತೊಲ್ಲಾ ಅಲಿ ಖಮೇನಿ ಯುಎಸ್-ಇಸ್ರೇಲ್ ಫೆಬ್ರವರಿ 28ರಂದು ನಡೆಸಿದ ವೈಮಾನಿಕ ದಾಳಿಯಲ್ಲಿ ಸಾವನ್ನಪ್ಪಿದ್ದಾರೆ.