ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Israel Attack: ಯೆಮೆನ್ ಮೇಲೆ ಇಸ್ರೇಲ್ ದಾಳಿ: ಹೌತಿ ಮಿಲಿಟರಿ ಮಾಹಿತಿ ಕಚೇರಿ, ಇಂಧನ ಸಂಗ್ರಹಾಗಾರ ನಾಶ

ಹೌತಿ ಉಗ್ರರ ದಾಳಿಗೆ ಪ್ರತಿಯಾಗಿ ಇಸ್ರೇಲ್ ರಕ್ಷಣಾ ಪಡೆಗಳು ಬುಧವಾರ ನಡೆಸಿದ ದಾಳಿಯಲ್ಲಿ ಹೌತಿ ಉಗ್ರರಿಗೆ ಸೇರಿದ ಮಿಲಿಟರಿ ಮಾಹಿತಿ ಕಚೇರಿ ಮತ್ತು ಇಂಧನ ಸಂಗ್ರಹಣಾ ಸ್ಥಳವು ನಾಶವಾಗಿವೆ. ಸನಾದಲ್ಲಿ 28 ಜನರು ಮತ್ತು ಅಲ್ ಜಾವ್ಫ್‌ನಲ್ಲಿ ಏಳು ಜನರು ಸಾವನ್ನಪ್ಪಿದ್ದಾರೆ. ಒಟ್ಟು 131 ಜನರು ಗಾಯಗೊಂಡಿದ್ದಾರೆ.

ಹೌತಿ ಉಗ್ರಗಾಮಿ ಗುಂಪಿನ ಮೇಲೆ ಇಸ್ರೇಲ್ ದಾಳಿ

-

ಇಸ್ರೇಲ್: ಇರಾನ್ (Iran) ಬೆಂಬಲಿತ ಹೌತಿ ಉಗ್ರಗಾಮಿ ಗುಂಪಿನ (Houthi militant group) ಮೇಲೆ ಯೆಮೆನ್‌ನಲ್ಲಿ ಇಸ್ರೇಲ್ ರಕ್ಷಣಾ ಪಡೆಗಳು (Israeli Defense Forces) ಬುಧವಾರ ದಾಳಿ ನಡೆಸಿವೆ. ಈ ವೇಳೆ ಹೌತಿಗಳಿಗೆ ಸಂಬಂಧಿಸಿದ ಮಿಲಿಟರಿ ಮಾಹಿತಿ ಕಚೇರಿ ಮತ್ತು ಇಂಧನ ಸಂಗ್ರಹಣಾ ಸ್ಥಳಗಳು ನಾಶವಾಗಿವೆ. ಯೆಮೆನ್‌ನ (Yemen) ರಾಜಧಾನಿ ಸನಾ (sana) ಮತ್ತು ಉತ್ತರ ಪ್ರಾಂತ್ಯದ ಅಲ್ ಜಾವ್ಫ್ ಮೇಲೆ ಇಸ್ರೇಲ್ ದಾಳಿ ನಡೆಸಿದ್ದು, ಈ ದಾಳಿಯಲ್ಲಿ ಸುಮಾರು 35 ಮಂದಿ ಸಾವನ್ನಪ್ಪಿದ್ದಾರೆ. ಹೌತಿ ಉಗ್ರಗಾಮಿಗಳು ಮತ್ತು ಇಸ್ರೇಲ್ ರಕ್ಷಣಾ ಪಡೆಗಳ ನಡುವೆ ಸಂಘರ್ಷ ಮುಂದುವರಿದಿದೆ.

2014ರಲ್ಲಿ ಸನಾವನ್ನು ಹೌತಿಗಳು ನಿಯಂತ್ರಣಕ್ಕೆ ತೆಗೆದುಕೊಂಡಿದ್ದರು. ಎರಡು ವರ್ಷಗಳ ಹಿಂದೆ ಗಾಜಾದಲ್ಲಿ ಇರಾನ್‌ ಮತ್ತು ಇಸ್ರೇಲ್ ನಡುವೆ ಯುದ್ಧ ಪ್ರಾರಂಭವಾದ ಬಳಿಕ ಇಸ್ರೇಲ್ ಮತ್ತು ಕೆಂಪು ಸಮುದ್ರದ ಹಡಗುಗಳ ಮೇಲೆ ಹೌತಿ ಉಗ್ರಗಾಮಿಗಳು ಕ್ಷಿಪಣಿ ಮತ್ತು ಡ್ರೋನ್‌ ದಾಳಿಗಳನ್ನು ನಡೆಸಲು ಪ್ರಾರಂಭಿಸಿದರು.

ಹೌತಿ ಉಗ್ರಗಾಮಿಗಳ ದಾಳಿಗೆ ಪ್ರತಿಯಾಗಿ ಇದೀಗ ಇಸ್ರೇಲ್ ಸೇನೆಗಳು ಯೆಮೆನ್ ಮೇಲೆ ವೈಮಾನಿಕ ದಾಳಿ ನಡೆಸುತ್ತಿದೆ. ಈ ದಾಳಿಯಲ್ಲಿ ಪ್ರಧಾನಿ ಮತ್ತು ಹೌತಿ ಸಂಪುಟದ ಒಂಬತ್ತು ಸದಸ್ಯರು ಹತರಾಗಿದ್ದಾರೆ.

ಇಸ್ರೇಲ್ ರಕ್ಷಣಾ ಪಡೆಗಳು ಬುಧವಾರ ಹೌತಿಗಳಿಗೆ ಸಂಬಂಧಿಸಿದ ನೆಲೆಗಳ ಮೇಲೆ ದಾಳಿ ನಡೆಸಿದ ದಾಳಿಯಲ್ಲಿ ಅವುಗಳ ಮಿಲಿಟರಿ ಮಾಹಿತಿ ಕಚೇರಿ ಮತ್ತು ಇಂಧನ ಸಂಗ್ರಹಣಾ ಸ್ಥಳವು ನಾಶವಾಗಿವೆ. ಸನಾದಲ್ಲಿ 28 ಜನರು ಮತ್ತು ಅಲ್ ಜಾವ್ಫ್‌ನಲ್ಲಿ ಏಳು ಜನರು ಸಾವನ್ನಪ್ಪಿದ್ದಾರೆ. ಒಟ್ಟು 131 ಜನರು ಗಾಯಗೊಂಡಿದ್ದಾರೆ. ಸ್ಥಳೀಯ ಪತ್ರಿಕೆಗಳ ಕಚೇರಿಗಳು ಸೇರಿದಂತೆ ನಾಗರಿಕ ಗುರಿಗಳ ಮೇಲೆ ದಾಳಿ ನಡೆಸಲಾಗಿದೆ ಎಂದು ಹೌತಿ ವಕ್ತಾರ ಯಾಹ್ಯಾ ಸಾರಿ ತಿಳಿಸಿದ್ದಾರೆ.

ಹಸಿವಿನಿಂದ ಬಳಲುತ್ತಿರುವ ಗಾಜಾ ಪಟ್ಟಿಯ ಮೇಲಿನ ನಿರ್ಬಂಧಗಳನ್ನು ಮತ್ತಷ್ಟು ಸಡಿಲಿಸಲು ಇಸ್ರೇಲ್ ಮೇಲೆ ಒತ್ತಡ ಹೆಚ್ಚಿಸುವುದಾಗಿ ಜುಲೈ ಅಂತ್ಯದಲ್ಲಿ ಹೌತಿಗಳು ಪ್ರತಿಜ್ಞೆ ಮಾಡಿದರು. ಭಾನುವಾರ ಇದು ದಕ್ಷಿಣ ಇಸ್ರೇಲ್‌ನ ರಾಮನ್ ವಿಮಾನ ನಿಲ್ದಾಣದ ಆಗಮನದ ಹಾಲ್‌ ಮೇಲೆ ಡ್ರೋನ್ ದಾಳಿ ನಡೆಸಿತ್ತು.

ಇದನ್ನೂ ಓದಿ: Dowry Harassment: ವರದಕ್ಷಿಣೆ ಕಿರುಕುಳ ದೂರು, ನಿರ್ದೇಶಕ ಎಸ್.‌ ನಾರಾಯಣ್‌ ಹೇಳುವುದೇನು?

ಈ ಕುರಿತು ಮಾಹಿತಿ ನೀಡಿದ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು, ನಾವು ಭಯೋತ್ಪಾದಕ ಹೌತಿ ಸರ್ಕಾರದ ಹೆಚ್ಚಿನ ಸದಸ್ಯರನ್ನು ನಿರ್ಮೂಲನೆ ಮಾಡಿದ್ದೇವೆ. ಇದಕ್ಕೆ ಪ್ರತಿಕ್ರಿಯೆಯಾಗಿ ಹೌತಿಗಳು ಎರಡು ದಿನಗಳ ಹಿಂದೆ ರಾಮನ್ ವಿಮಾನ ನಿಲ್ದಾಣದಲ್ಲಿ ಗುಂಡು ಹಾರಿಸಿದರು. ನಾವು ಇಂದು ಮತ್ತೆ ಅವರ ಮೇಲೆ ದಾಳಿ ನಡೆಸಿದೆ. ಇದು ಮುಂದುವರಿಯುತ್ತದೆ. ಯಾರು ನಮ್ಮನ್ನು ಹೊಡೆದರೂ ನಮ್ಮ ಮೇಲೆ ದಾಳಿ ಮಾಡಿದರೂ ನಾವು ಅದಕ್ಕೆ ಉತ್ತರ ನೀಡುವುದಾಗಿ ಹೇಳಿದರು.