ಇಸ್ರೇಲ್: ಸುಮಾರು 900 ವರ್ಷಗಳಷ್ಟು ಹಳೆಯದಾದ ಲೆಬನಾನ್‌ನಲ್ಲಿರುವ (Lebanon) ಕೋಟೆಯನ್ನು ಇಸ್ರೇಲ್ ಸೇನೆ (Israel army) ವಶಕ್ಕೆ ಪಡೆದಿದೆ. ಹಿಜ್ಬೊಲ್ಲಾದ ಭದ್ರಕೋಟೆ (Hezbollah stronghold) ಎಂದೇ ಖ್ಯಾತಿ ಪಡೆದ ದಕ್ಷಿಣ ಲೆಬನಾನ್‌ನಲ್ಲಿರುವ ಬ್ಯೂಫೋರ್ಟ್ ಕ್ಯಾಸಲ್ (Beaufort Castle) ಮತ್ತು ಅದರ ಪರ್ವತವನ್ನು ಇಸ್ರೇಲ್ ಸೇನಾ ಪಡೆಗಳು ಭಾನುವಾರ ವಶಕ್ಕೆ ಪಡೆದಿರುವುದಾಗಿ ಹೇಳಿಕೊಂಡಿವೆ. ಕದನ ವಿರಾಮ ಜಾರಿಯಲ್ಲಿದ್ದರೂ ಎರಡೂ ಪಕ್ಷಗಳು ದಾಳಿಯನ್ನು ಮುಂದುವರಿಸಿವೆ. ಇಸ್ರೇಲ್ ದಾಳಿ ಮುಂದುವರಿದ ಬೆನ್ನಲ್ಲೇ ಹಿಜ್ಬೊಲ್ಲಾ ಉತ್ತರ ಇಸ್ರೇಲ್ ಕಡೆಗೆ ಭಾರೀ ಗುಂಡಿನ ದಾಳಿಯನ್ನು ನಡೆಸಿವೆ.
ಸುಮಾರು ಆರು ವಾರಗಳ ಹಿಂದೆ ಕದನ ವಿರಾಮ ಘೋಷಿಸಲಾಗಿದ್ದರೂ ಲೆಬನಾನ್ ಮತ್ತು ಇಸ್ರೇಲ್ ಪಡೆಗಳು ದಾಳಿಯನ್ನು ನಿರಂತರ ಮಾಡುತ್ತಲೇ ಇವೆ. ಇರಾನ್ ಬೆಂಬಲಿತ ಹಿಜ್ಬೊಲ್ಲಾ ವಿರುದ್ಧ ಭಾನುವಾರ ನಡೆಸಿದ ದಾಳಿಯಲ್ಲಿ ಇಸ್ರೇಲಿ ಪಡೆಗಳು ಲೆಬನಾನ್‌ನಲ್ಲಿರುವ 900 ವರ್ಷಗಳಷ್ಟು ಹಳೆಯದಾದ ಬ್ಯೂಫೋರ್ಟ್ ಕ್ಯಾಸಲ್ ಮತ್ತು ಅದರ ಪರ್ವತವನ್ನು ವಶಕ್ಕೆ ಪಡೆದಿವೆ.
ಭಾರತದೊಂದಿಗಿನ ಗಡಿ ಸಮಸ್ಯೆ ರಾಜತಾಂತ್ರಿಕತೆಯ ಮೂಲಕ ಪರಿಹರಿಸಲಾಗುವುದುʼʼ: ನೇಪಾಳ ಪ್ರಧಾನಿ
ಕದನ ವಿರಾಮ ಜಾರಿಯಾದ ಮೇಲೆ ಉತ್ತರ ಇಸ್ರೇಲ್ ಕಡೆಗೆ ಹಿಜ್ಬೊಲ್ಲಾ ಕೂಡ ಪ್ರತಿ ದಾಳಿ ನಡೆಸಿದೆ. ಅತ್ಯಂತ ಭೀಕರ ಗುಂಡಿನ ದಾಳಿ ಇದಾಗಿದ್ದು, ಇದರಿಂದ ಶಾಲೆಗಳನ್ನು ಮುಚ್ಚಲಾಗಿದೆ ಮತ್ತು ಹಲವು ರೀತಿಯ ನಿರ್ಬಂಧಗಳನ್ನು ವಿಧಿಸಲಾಗಿದೆ.
ಬ್ಯೂಫೋರ್ಟ್ ಕ್ಯಾಸಲ್ ಮತ್ತು ಅದರ ಪರ್ವತವನ್ನು ಇಸ್ರೇಲ್ ವಶಕ್ಕೆ ಪಡೆದ ಬೆನ್ನಲ್ಲೇ ಹಿಜ್ಬೊಲ್ಲಾ ಬ್ಯೂಫೋರ್ಟ್ ರಿಡ್ಜ್ ಮತ್ತು ವಾಡಿ ಅಲ್-ಸಲುಕಿ ಪ್ರದೇಶದ ಮೇಲೆ ನಿಯಂತ್ರಣವನ್ನು ಸ್ಥಾಪಿಸಲು ಪ್ರತಿ ದಾಳಿಯನ್ನು ಮುಂದುವರಿಸಿದೆ. ಇರಾನಿನ ನಿರ್ದೇಶನದಲ್ಲಿ ಪರ್ವತದ ಮೇಲೆ ಹಿಜ್ಬೊಲ್ಲಾ ಇಸ್ರೇಲಿನ ಮಿಲಿಟರಿ ಮೇಲೆ ದಾಳಿ ನಡೆಸಿದ್ದು, ಇದರಲ್ಲಿ ಒಬ್ಬ ಇಸ್ರೇಲಿ ಸೈನಿಕ ಸಾವನ್ನಪ್ಪಿದ್ದಾನೆ ಎನ್ನಲಾಗಿದೆ. ಈ ಕುರಿತು ಲೆಬನಾನ್ ಅಥವಾ ಹಿಜ್ಬೊಲ್ಲಾ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಇಸ್ರೇಲ್, ಯುಎಸ್ ಮತ್ತು ಇರಾನ್ ಸಂಘರ್ಷದ ರೀತಿಯಲ್ಲೇ ಲೆಬನಾನ್ ಮತ್ತು ಇಸ್ರೇಲ್ ನಡುವೆ ಯುದ್ಧ ಪ್ರಾರಂಭವಾಗಿದೆ. ಲೆಬನಾನ್ ಅನ್ನು ಇರಾನ್ ನೇರವಾಗಿ ಬೆಂಬಲಿಸುತ್ತಿದೆ. ಕದನ ವಿರಾಮ ಜಾರಿಯಲ್ಲಿದ್ದರೂ ಕೂಡ ಮಿಲಿಟರಿ ಕಾರ್ಯಾಚರಣೆ ಎರಡೂ ಕಡೆಯಿಂದ ಸಕ್ರಿಯವಾಗಿದೆ.
ಯುಎಸ್, ಇಸ್ರೇಲ್ ಮತ್ತು ಇರಾನ್ ಸಂಘರ್ಷ ಪ್ರಾರಂಭವಾದ ಕೆಲವು ದಿನಗಳ ಅನಂತರ ಅಂದರೆ ಮಾರ್ಚ್ 2 ರಂದು ಇಸ್ರೇಲ್‌ಗೆ ರಾಕೆಟ್‌ಗಳು ಮತ್ತು ಡ್ರೋನ್‌ಗಳನ್ನು ಲೆಬನಾನ್ ಮೇಲೆ ಹಾರಿಸಿ ಹಿಜ್ಬೊಲ್ಲಾವನ್ನು ಯುದ್ಧ ಕ್ಷೇತ್ರಕ್ಕೆ ಕರೆ ತಂದಿತ್ತು. ಇದರ ಬಳಿಕ ಇರಾನ್ ಬೆಂಬಲಿತ ಮಿಲಿಟಿಯಾವನ್ನು ತನ್ನ ಉತ್ತರ ಗಡಿಯಿಂದ ದೂರ ಓಡಿಸಲು ಇಸ್ರೇಲ್ ಪ್ರಯತ್ನಿಸಲು ಪ್ರಾರಂಭಿಸಿತ್ತು.
ಬ್ಯೂಫೋರ್ಟ್ ಕ್ಯಾಸಲ್ ಅನ್ನು ಇಸ್ರೇಲ್ ವಶ ಪಡಿಸಿಕೊಂಡಿರುವುದರಿಂದ ದಕ್ಷಿಣ ಲೆಬನಾನ್ ಮತ್ತು ಉತ್ತರ ಇಸ್ರೇಲ್‌ನ ಹೆಚ್ಚಿನ ಭಾಗಗಳ ಮೇಲೆ ಇಸ್ರೇಲ್ ಗೆ ನಿಯಂತ್ರಣ ದೊರಕಿದಂತಾಗಿದೆ.