ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಟ್ರಂಪ್‌ ಮನವಿಗೂ ಕ್ಯಾರೇ ಎನ್ನದ ಇಸ್ರೇಲ್‌; ಲೆಬನಾನ್‌ನ 2 ಪಟ್ಟಣಗಳ ಮೇಲೆ ವೈಮಾನಿಕ ದಾಳಿ

ಏರ್ಪಟ್ಟಿರುವ ಕದನ ವಿರಾಮದ ಮಧ್ಯೆ ಇಸ್ರೇಲ್‌ ಮತ್ತೆ ಲೆಬನಾನ್‌ ಮೇಲೆ ದಾಳಿ ನಡೆಸಿದೆ. ಇಸ್ರೇಲಿ ಜೆಟ್‌ಗಳು ಕನಿಷ್ಠ ಎರಡು ಲೆಬನಾನ್ ಪಟ್ಟಣಗಳ ಮೇಲೆ ವಾಯುದಾಳಿ ನಡೆಸಿವೆ ಎಂದು ತಿಳಿದು ಬಂದಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇಸ್ರೇಲಿ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರನ್ನು ಕೇಳಿದ ನಂತರ ಸ್ವಲ್ಪ ಸಮಯದ ವಿರಾಮದ ನಂತರ ಹೊಸ ದಾಳಿಗಳು ನಡೆದವು.

ಸಂಗ್ರಹ ಚಿತ್ರ

ಬೈರುತ್‌: ಏರ್ಪಟ್ಟಿರುವ ಕದನ ವಿರಾಮದ ಮಧ್ಯೆ ಇಸ್ರೇಲ್‌ ಮತ್ತೆ ಲೆಬನಾನ್‌ ಮೇಲೆ ದಾಳಿ ನಡೆಸಿದೆ. ಇಸ್ರೇಲಿ ಜೆಟ್‌ಗಳು ಕನಿಷ್ಠ ಎರಡು (Airstrikes On Lebanon) ಲೆಬನಾನ್ ಪಟ್ಟಣಗಳ ಮೇಲೆ ವಾಯುದಾಳಿ ನಡೆಸಿವೆ ಎಂದು ತಿಳಿದು ಬಂದಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇಸ್ರೇಲಿ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರನ್ನು ಕೇಳಿದ ನಂತರ ಸ್ವಲ್ಪ ಸಮಯದ ವಿರಾಮದ ನಂತರ ಹೊಸ ದಾಳಿಗಳು ನಡೆದವು. ಶುಕ್ರವಾರ ಇಸ್ರೇಲ್-ಲೆಬನಾನ್ ಗಡಿಯ ಸಮೀಪವಿರುವ ಕಿರ್ಯತ್ ಶ್ಮೋನಾ ಮತ್ತು ಉತ್ತರ ಇಸ್ರೇಲ್‌ನ ಅಪ್ಪರ್ ಗಲಿಲೀ ಪ್ರದೇಶದ ಮಿಸ್ಗಾವ್ ಆಮ್ ಮೇಲೆ ರಾಕೆಟ್‌ಗಳನ್ನು ಹಾರಿಸಿರುವುದಾಗಿ ಹೆಜ್ಬೊಲ್ಲಾ ತಿಳಿಸಿದೆ.

ಇರಾನ್ ಮತ್ತು ಅಮೆರಿಕ ನಡುವೆ ನಡೆದಿರುವ 15 ದಿನಗಳ ಕದನ ವಿರಾಮದ ಮೇಲೆ ಈ ಘಟನೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ಬುಧವಾರ, ಇಸ್ರೇಲ್ ಮಧ್ಯ ಬೈರುತ್‌ನಲ್ಲಿ ದಟ್ಟವಾದ ವಾಣಿಜ್ಯ ಮತ್ತು ವಸತಿ ಪ್ರದೇಶಗಳ ಮೇಲೆ ಎಚ್ಚರಿಕೆ ನೀಡದೆ ದಾಳಿ ಮಾಡಿತ್ತು. ದಾಳಿ ಪರಿಣಾಮವಾಗಿ 300 ಜನರು ಮೃತಪಟ್ಟಿದ್ದರು ಮತ್ತು 1,000 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು. ದಾಳಿಯಲ್ಲಿ ಶಾಲೆಗಳು, ಆಸ್ಪತ್ರೆಗಳು ಮತ್ತು ಮೂಲಭೂತ ಸೌಲಭ್ಯಗಳಿಗೂ ತೀವ್ರ ಹಾನಿ ಸಂಭವಿಸಿದೆ ಎಂದು ವರದಿಗಳಿಂದ ತಿಳಿದುಬಂದಿದೆ. ಇದರ ಬೆನ್ನಲ್ಲೇ ಇರಾನ್ ಪ್ರತೀಕಾರಕ್ಕೆ ಮುಂದಾಗಿದ್ದು, ಹಾರ್ಮುಜ್ ಜಲಸಂಧಿಯನ್ನು ಬಂದ್ ಮಾಡಿದೆ.

ʼʼಭಾರತ ಬ್ರೋಕರ್‌ ಕೆಲಸ ಮಾಡುವುದಿಲ್ಲʼʼ: ಇರಾನ್‌-ಅಮೆರಿಕ ಮಧ್ಯೆ ಪಾಕಿಸ್ತಾನದ ಮಧ್ಯಸ್ಥಿಕೆ ಬಗ್ಗೆ ಎಸ್. ಜೈಶಂಕರ್ ಹೇಳಿದ್ದೇನು?

ಕದನ ವಿರಾಮ ಮಾತುಕತೆಗೆ ಬರಲ್ಲ!

ಲೆಬನಾನ್‌ನಲ್ಲಿ ಕದನ ವಿರಾಮ ಜಾರಿಯಾಗುವಂತೆ ಅಮೆರಕ ನೋಡಿಕೊಳ್ಳಬೇಕು ಮತ್ತು ಇಸ್ರೇಲ್​ ದಾಳಿ ಮಾಡುವುದನ್ನು ನಿಲ್ಲಿಸಬೇಕೆಂದು ಇರಾನ್​ ತಾಕೀತು ಮಾಡಿದೆ. ಲೆಬನಾನ್​ನಲ್ಲಿ ಕದನ ವಿರಾಮ ಸ್ಥಾಪನೆಯಾಗುವವರೆಗೆ, ನಾವು ಇಸ್ಲಾಮಾಬಾದ್‌ನಲ್ಲಿ ಶಾಂತಿ ಮಾತುಕತೆಗಳಲ್ಲಿ ಭಾಗವಹಿಸಲು ಸಿದ್ಧರಿಲ್ಲ ಎಂದು ಇರಾನ್‌ ತಿಳಿಸಿದೆ. ಆದರೆ ಹೆಜ್ಬೊಲ್ಲಾ ಒಂದು ಭಯೋತ್ಪಾದಕ ಸಂಘಟನೆಯಾಗಿದ್ದು, ನಮ್ಮ ಯುದ್ಧ ಲೆಬನಾನ್​ನ ನಾಗರಿಕ ಮೇಲಲ್ಲ ಬದಲಾಗಿ ಹೆಜ್ಬೊಲ್ಲಾ ಮೇಲೆ ಎಂದು ಇಸ್ರೇಲ್‌ ಹೇಳಿದೆ. ಇತ್ತ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಇಸ್ರೇಲ್‌ಗೆ ಮನವಿ ಮಾಡಿದ್ದು, ಲೆಬನಾನ್‌ ಮೇಲಿನ ದಾಳಿಯನ್ನು ನಿಲ್ಲಿಸುವಂತೆ ಕೇಳಿಕೊಂಡಿದ್ದಾರೆ.

Vishakha Bhat Heggar

View all posts by this author