ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಇಸ್ರೋದ ಚಂದ್ರಯಾನ-3ಗೆ ಅಮೆರಿಕದ ಅತ್ಯುನ್ನತ 'ಗೊಡ್ಡಾರ್ಡ್ ಆಸ್ಟ್ರೋನಾಟಿಕ್ಸ್' ಪ್ರಶಸ್ತಿ

ಭಾರತೀಯ ಸಂಶೋಧನಾ ಸಂಸ್ಥೆ 2023ರಲ್ಲಿ ನಡೆಸಿದ ಚಂದ್ರಯಾನ ಮಿಷನ್ "ಚಂದ್ರಯಾನ-3" ಗೆ ಅಮೆರಿಕದ ಅತ್ಯುನ್ನತ ಗೌರವ ಪ್ರದಾನ ಮಾಡಲಾಯಿತು. ಅಮೆರಿಕನ್ ಇನ್‌ಸ್ಟಿಟ್ಯೂಟ್ ಆಫ್ ಏರೋನಾಟಿಕ್ಸ್ ಆಂಡ್ ಆಸ್ಟ್ರೋನಾಟಿಕ್ಸ್ ವತಿಯಿಂದ 2026ರ ಪ್ರತಿಷ್ಠಿತ ಗೊಡ್ಡಾರ್ಡ್ ಆಸ್ಟ್ರೋನಾಟಿಕ್ಸ್ ಪ್ರಶಸ್ತಿಯನ್ನು ಚಂದ್ರಯಾನ-3 ಗೆದ್ದುಕೊಂಡಿದೆ.

ಸಂಗ್ರಹ ಚಿತ್ರ

ನವದೆಹಲಿ: ಚಂದ್ರನ ಪರಿಶೋಧನೆಯಲ್ಲಿ ಅದ್ಭುತ ಸಾಧನೆಗಳನ್ನು ಗುರುತಿಸಿ ಭಾರತೀಯ ಸಂಶೋಧನಾ ಸಂಸ್ಥೆಯ (Indian Space Research Organisation) ಚಂದ್ರಯಾನ ಮಿಷನ್ ಗೆ ಅಮೆರಿಕದ ಅತ್ಯುನ್ನತ ಬಾಹ್ಯಾಕಾಶ ಗೌರವ ನೀಡಲಾಗಿದೆ. ಅಮೆರಿಕನ್ ಇನ್‌ಸ್ಟಿಟ್ಯೂಟ್ ಆಫ್ ಏರೋನಾಟಿಕ್ಸ್ ಆಂಡ್ ಆಸ್ಟ್ರೋನಾಟಿಕ್ಸ್ ( American Institute of Aeronautics and Astronautics) ವತಿಯಿಂದ ಇಸ್ರೋದ "ಚಂದ್ರಯಾನ-3" (Chandrayaan-3)ಗೆ 2026ರ ಪ್ರತಿಷ್ಠಿತ ಗೊಡ್ಡಾರ್ಡ್ ಆಸ್ಟ್ರೋನಾಟಿಕ್ಸ್ ಪ್ರಶಸ್ತಿಯನ್ನು (2026 Goddard Astronautics Award) ವಾಷಿಂಗ್ಟನ್ ಡಿಸಿಯಲ್ಲಿ ಮೇ 21ರಂದು ನಡೆದ AIAA ASCEND-2026 ಸಮ್ಮೇಳನದಲ್ಲಿ ನೀಡಿ ಗೌರವಿಸಲಾಯಿತು. ಇಸ್ರೋ ಪರವಾಗಿ ಯುನೈಟೆಡ್ ಸ್ಟೇಟ್ಸ್‌ನ ಭಾರತದ ರಾಯಭಾರಿ ವಿನಯ್ ಕ್ವಾತ್ರಾ ಅವರು ಪ್ರಶಸ್ತಿ ಸ್ವೀಕರಿಸಿದರು.

2023ರ ಆಗಸ್ಟ್ 23ರಂದು ಚಂದ್ರನ ದಕ್ಷಿಣ ಧ್ರುವದ ಬಳಿ ಯಶಸ್ವಿಯಾಗಿ ಇಳಿದ ಮೊದಲ ಬಾಹ್ಯಾಕಾಶ ನೌಕೆಯಾದ ಚಂದ್ರಯಾನ-3 ನ ಐತಿಹಾಸಿಕ ಸಾಧನೆಯನ್ನು ಗುರುತಿಸಿ ಅಮೆರಿಕನ್ ಇನ್‌ಸ್ಟಿಟ್ಯೂಟ್ ಆಫ್ ಏರೋನಾಟಿಕ್ಸ್ ಆಂಡ್ ಆಸ್ಟ್ರೋನಾಟಿಕ್ಸ್ ವತಿಯಿಂದ 2026ರ ಗೊಡ್ಡಾರ್ಡ್ ಆಸ್ಟ್ರೋನಾಟಿಕ್ಸ್ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ.

ದೆಹಲಿ ಏರ್‌ಪೋರ್ಟ್‌ನಲ್ಲಿ ಬೆಂಗಳೂರಿನಿಂದ ಹೊರಟಿದ್ದ ಏರ್ ಇಂಡಿಯಾ ವಿಮಾನ ತುರ್ತು ಭೂಸ್ಪರ್ಶ; ಎಮರ್ಜೆನ್ಸಿ ಘೋಷಿಸಿದ್ದೇಕೆ?

ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಯುನೈಟೆಡ್ ಸ್ಟೇಟ್ಸ್‌ನ ಭಾರತದ ರಾಯಭಾರಿ ವಿನಯ್ ಕ್ವಾತ್ರಾ ಅವರು ಪ್ರಶಸ್ತಿ ಸ್ವೀಕರಿಸಿ ಪ್ರಧಾನಿ ನರೇಂದ್ರ ಮೋದಿಯವರ ಬಾಹ್ಯಾಕಾಶ ವಿಷನ್ 2047ರ ಯೋಜನೆಗಳ ಬಗ್ಗೆ ಮಾತನಾಡಿ, ಇದು ಭಾರತದ ಆಳವಾದ ಬಾಹ್ಯಾಕಾಶ ಪರಿಶೋಧನೆ ಮತ್ತು ಮಾನವ ಬಾಹ್ಯಾಕಾಶ ಹಾರಾಟ ಕಾರ್ಯಕ್ರಮಗಳ ಮಹತ್ವಾಕಾಂಕ್ಷೆಯ ಯೋಜನೆಗಳನ್ನು ಒಳಗೊಂಡಿರುವುದಾಗಿ ಹೇಳಿದರು.



ವಿನಯ್ ಕ್ವಾತ್ರಾ ಅವರು ತಮ್ಮ ಮಾತನ್ನು ಮುಂದುವರಿಸುತ್ತಾ, ಚಂದ್ರಯಾನ-3 ಮಿಷನ್ ಭವಿಷ್ಯದಲ್ಲಿ ಚಂದ್ರನ ಮೇಲಿನ ಮಾನವ ಕಾರ್ಯಾಚರಣೆಗಳನ್ನು ಬೆಂಬಲಿಸಲು ನಿರ್ಣಾಯಕ ಡೇಟಾವನ್ನು ಒದಗಿಸಿದೆ. ಮುಖ್ಯವಾಗಿ ಇದು ಚಂದ್ರನ ದಕ್ಷಿಣ ಧ್ರುವದ ಮಣ್ಣಿನಲ್ಲಿ ಪ್ರಮುಖ ರಾಸಾಯನಿಕ ಅಂಶಗಳ ಉಪಸ್ಥಿತಿಯನ್ನು ದೃಢಪಡಿಸಿದೆ ಎಂದರು.

ಭಾರತ ಮತ್ತು ಅಮೆರಿಕ ಸರ್ಕಾರಗಳು, ಕೈಗಾರಿಕೆಗಳು ಮತ್ತು ಸಂಶೋಧನಾ ಸಂಸ್ಥೆಗಳ ನಡುವಿನ ಬಲವರ್ಧಿತ ಸಹಯೋಗದ ಮಹತ್ವದ ಬಗ್ಗೆ ತಿಳಿಸಿದ ಅವರು, ಬಾಹ್ಯಾಕಾಶ ಪರಿಶೋಧನೆಯು ಎರಡು ರಾಷ್ಟ್ರಗಳ ನಡುವಿನ ಆಳವಾದ ಪಾಲುದಾರಿಕೆಯನ್ನು ಹೇಗೆ ಪ್ರತಿನಿಧಿಸುತ್ತದೆ ಎಂಬುದನ್ನು ಹೇಳಿದರು.

ಅಮೆರಿಕ-ಇರಾನ್ ಯುದ್ಧ ತಡೆಯಬಲ್ಲದೇ ಪಾಕಿಸ್ತಾನ? ಶಾಂತಿ ಮಾತುಕತೆಗಾಗಿ ಟೆಹ್ರಾನ್‌ಗೆ ಅಸೀಮ್ ಮುನೀರ್

ಗಗನಯಾತ್ರಿಗಳಲ್ಲಿ ಗಮನಾರ್ಹ ಸಾಧನೆಗಳಿಗಾಗಿ ನೀಡಲಾಗುವ ಗೊಡ್ಡಾರ್ಡ್ ಆಸ್ಟ್ರೋನಾಟಿಕ್ಸ್ ಪ್ರಶಸ್ತಿಯು ಅಮೆರಿಕದ ಅತ್ಯುನ್ನತ ಗೌರವವಾಗಿದೆ. ಇದನ್ನು ರಾಕೆಟ್ ವಿಜ್ಞಾನಿ ಮತ್ತು ಎಂಜಿನಿಯರ್ ರಾಬರ್ಟ್ ಹೆಚ್. ಗೊಡ್ಡಾರ್ಡ್ ಅವರ ಸ್ಮರಣಾರ್ಥ ಸ್ಥಾಪಿಸಲಾಯಿತು.

ವಿದ್ಯಾ ಇರ್ವತ್ತೂರು

View all posts by this author