ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Nobel Prize for Economics 2025: ಜೋಯಲ್ ಮೊಕಿರ್, ಫಿಲಿಪ್ ಅಘಿಯಾನ್, ಪೀಟರ್ ಹೊವಿಟ್‌ಗೆ ಅರ್ಥಶಾಸ್ತ್ರದ ನೊಬೆಲ್‌ ಪ್ರಶಸ್ತಿ

ಈ ಬಾರಿಯ ಅರ್ಥಶಾಸ್ತ್ರದ ನೊಬೆಲ್‌ ಪ್ರಶಸ್ತಿಯನ್ನು ಜೋಯಲ್ ಮೊಕಿರ್, ಫಿಲಿಪ್ ಅಘಿಯಾನ್ ಮತ್ತು ಪೀಟರ್ ಹೊವಿಟ್ ಘೋಷಿಸಲಾಗಿದೆ. ನಾವೀನ್ಯತೆ-ಚಾಲಿತ ಆರ್ಥಿಕ ಬೆಳವಣಿಗೆಯನ್ನು ವಿವರಿಸಿದ್ದಕ್ಕಾಗಿ ಈ ಮೂವರಿಗೆ ಪ್ರಸಸ್ತಿ ಘೋಷಿಸಲಾಗಿದೆ. ಡಿಸೆಂಬರ್‌ 10ರಂದು ನಡೆಯುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ.

ಸ್ಟಾಕ್‌ಹೋಮ್‌: ಈ ಬಾರಿಯ ಅರ್ಥಶಾಸ್ತ್ರದ ನೊಬೆಲ್‌ ಪ್ರಶಸ್ತಿಯನ್ನು (Nobel Prize for Economics 2025) ಜೋಯಲ್ ಮೊಕಿರ್, ಫಿಲಿಪ್ ಅಘಿಯಾನ್ ಮತ್ತು ಪೀಟರ್ ಹೊವಿಟ್ ಘೋಷಿಸಲಾಗಿದೆ. ನಾವೀನ್ಯತೆ-ಚಾಲಿತ ಆರ್ಥಿಕ ಬೆಳವಣಿಗೆಯನ್ನು ವಿವರಿಸಿದ್ದಕ್ಕಾಗಿ ಈ ಮೂವರಿಗೆ ಪ್ರಸಸ್ತಿ ಘೋಷಿಸಲಾಗಿದೆ ಎಂದು ರಾಯಲ್‌ ಸ್ವೀಡಿಷ್‌ ಅಕಾಡೆಮಿ (Nobel Prize 2025) ತಿಳಿಸಿದೆ.

ಅರ್ಥಶಾಸ್ತ್ರದ ನೊಬೆಲ್‌ ಪ್ರಶಸ್ತಿ ಘೋಷಣೆ:



ಈ ಬಾರಿಯ ನೊಬೆಲ್‌ ಪ್ರಶಸ್ತಿ ವಿಜೇತರು

ಸಾಹಿತ್ಯ - ಲಾಸ್ಲೊ ಕ್ರಾಸ್ನ ಹೂಕೈರ್‌ (ಹಂಗೇರಿ)

ಶಾಂತಿ - ಮಾರಿಯಾ ಕೊರಿನಾ ಮಚಾದೊ

ರಸಾಯನಶಾಸ್ತ್ರ - ಸುಸುಮು ಕಿಟಗಾವ, ರಿಚರ್ಡ್‌ ರಾಬನ್ಸ್‌ ಮತ್ತು ಒಮರ್‌ ಎಂ. ಯಾಘಿ

ವೈದ್ಯಕೀಯ - ವೈದ್ಯಕೀಯ- ಮೇರಿ ಈ. ಬ್ರಂಕೋ, ಫ್ರೆಡ್‌ ರಾಮ್ಸ್‌ಡೆಲ್‌, ಶಿಮೋನ್‌ ಸಕಾಗುಚಿ

ಭೌತಶಾಸ್ತ್ರ- ಜಾನ್‌ ಕ್ಲಾರ್ಕ್‌, ಮೈಕೆಲ್‌ ಎಚ್‌. ಡೆವೊರೆಟ್‌ ಮತ್ತು ಜಾನ್‌ ಎಂ. ಮಾರ್ಟಿನಿಸ್‌

ಅರ್ಥಶಾಸ್ತ್ರ - ಜೋಯಲ್ ಮೊಕಿರ್, ಫಿಲಿಪ್ ಅಘಿಯಾನ್ ಮತ್ತು ಪೀಟರ್ ಹೊವಿಟ್

ಡಿಸೆಂಬರ್‌ 10ರಂದು ನಡೆಯುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ. ಪ್ರತಿಯೊಬ್ಬ ನೊಬೆಲ್‌ ಪ್ರಶಸ್ತಿ ವಿಜೇತರಿಗೆ 11 ಮಿಲಿಯನ್‌ ಸ್ವೀಡಿಷ್‌ ಕ್ರೋನರ್‌ (ಸುಮಾರು 1 ಮಿಲಿಯನ್‌) ನಗದು ಬಹುಮಾನ ನೀಡಲಾಗುತ್ತದೆ.

ಈ ಸುದ್ದಿಯನ್ನೂ ಓದಿ: Nobel Peace Prize 2025: ಟ್ರಂಪ್‌ ಕನಸು ಭಗ್ನ; ಮರಿಯಾ ಮಚಾಡೋಗೆ ಒಲಿದ ನೊಬೆಲ್‌ ಶಾಂತಿ ಪ್ರಶಸ್ತಿ

ಸಾಹಿತ್ಯ ನೊಬೆಲ್‌ಗೆ ಭಾರತೀಯ ಲೇಖಕನ ಪ್ರಬಲ ಸ್ಪರ್ಧೆ

ವಿಶೇಷ ಎಂದರೆ ಈ ಬಾರಿಯ ನೊಬೆಲ್‌ ಶಾಂತಿ ಪ್ರಶಸ್ತಿಗೆ ಭಾರತೀಯ ಲೇಖಕ ಬಂಗಾಳಿ ಮೂಲದ ಅಮಿತಾವ್‌ ಘೋಷ್‌ ಪ್ರಬಲ ಸ್ಪರ್ಧೆ ಒಟ್ಟಿದ್ದರು. ಅಂತಿಮವಾಗಿ ಲಾಸ್ಲೊ ಕ್ರಾಸ್ನ ಹೂಕೈರ್‌ ಪಾಲಾಯಿತು. ಒಂದುವೇಳೆ ಅಮಿತಾವ್‌ ಘೋಷ್‌ಗೆ ಪ್ರಶಸ್ತಿ ಲಭಿಸಿದ್ದರೆ ಈ ಗೌರವಕ್ಕೆ ಪಾತ್ರರಾದ 2ನೇ ಭಾರತೀಯ ಎನಿಸಿಕೊಳ್ಳುತ್ತಿದ್ದರು. ಈ ಹಿಂದೆ ಬಂಗಾಳಿ ಲೇಖಕ ರವೀಂದ್ರನಾಥ್‌ ಠಾಗೂರ್‌ ಈ ಪ್ರಶಸ್ತಿಗೆ ಭಾಜನರಾಗಿದ್ದರು.

ಪ್ರಶಸ್ತಿ ಮೇಲೆ ಕಣ್ಣಿಟ್ಟಿದ್ದ ಟ್ರಂಪ್‌

ಈ ಬಾರಿ ಶಾಂತಿ ನೊಬೆಲ್‌ ಪ್ರಶಸ್ತಿ ಮೇಲೆ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಕಣ್ಣಿಟ್ಟಿದ್ದರು. ಶತಾಯಗತಾಯ ಅದನ್ನು ಪಡೆಯಲೇಬೇಕು ಎಂಬ ಜಿದ್ದಿಗೆ ಬಿದ್ದಿದ್ದರು. ತಮ್ಮ ಮಿತ್ರ ರಾಷ್ಟ್ರಗಳ ಮೂಲಕ ಶಿಫಾರಸು ಮಾಡಿಸಿದ್ದರು. 2025ರಲ್ಲಿ 338 ಅಧಿಕೃತ ನಾಮನಿರ್ದೇಶನಗಳು ಸಲ್ಲಿಕೆಯಾಗಿದ್ದವು. ಅಂತಿಮವಾಗಿ ಇದು ವೆನೆಜುವೆಲಾದ ರಾಜಕಾರಣಿ ಮತ್ತು ಕೈಗಾರಿಕಾ ಎಂಜಿನಿಯರ್‌ ಮಾರಿಯಾ ಕೊರಿನಾ ಮಚಾದೊ ಪಾಲಾಯಿತು.

ಯಾರಿಗೆಲ್ಲ ಕೊಡುತ್ತಾರೆ?

ಜಗತ್ತಿನ ಪ್ರಮುಖ ಹಾಗೂ ಅತ್ಯಂತ ಪ್ರತಿಷ್ಠಿತ ಪ್ರಶಸ್ತಿಗಳಲ್ಲಿ ಒಂದು ಎಂಬ ಹೆಗ್ಗಳಿಕೆಯನ್ನು ನೊಬೆಲ್‌ ಪ್ರಶಸ್ತಿ ಗಳಿಸಿದ್ದು, ಆರು ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಜ್ಞಾನಿಗಳಿಗೆ ಈ ಪ್ರಶಸ್ತಿಯನ್ನು ನೀಡಲಾಗುತ್ತದೆ. ರಸಾಯನ ವಿಜ್ಞಾನ, ಭೌತ ವಿಜ್ಞಾನ, ವೈದ್ಯ ವಿಜ್ಞಾನ, ಶಾಂತಿ, ಅರ್ಥಶಾಸ್ತ್ರ ಹಾಗೂ ಸಾಹಿತ್ಯ ಕ್ಷೇತ್ರಗಳ ಅಭಿವೃದ್ಧಿಗೆ ಅಪಾರ ಕೊಡುಗೆ ನೀಡಿ ಆಯಾಯ ವಿಷಯದಲ್ಲಿ ನಿಪುಣತೆ ಹೊಂದಿರುವ ಮಹಾನ್ ಸಾಧಕರನ್ನು ಈ ಪ್ರಶಸ್ತಿಗೆ ಪರಿಗಣಿಸಲಾಗುತ್ತದೆ.

ಪ್ರಾರಂಭವಾಗಿದ್ದು ಯಾವಾಗ?

1901ರಿಂದ ನೊಬೆಲ್‌ ಪ್ರಶಸ್ತಿ ಪ್ರದಾನಕ್ಕೆ ಚಾಲನೆ ದೊರೆತಿದ್ದು, ಸ್ವೀಡಿಷ್ ವಿಜ್ಞಾನಿ ಆಲ್ಫ್ರೆಡ್‌ ನೊಬೆಲ್‌ ಯಾವೆಲ್ಲ ಕ್ಷೇತ್ರಗಳಲ್ಲಿ ಈ ಪ್ರಶಸ್ತಿಯನ್ನು ನೀಡಬೇಕು ಎನ್ನುವ ಬಗ್ಗೆ ವಿಲ್ ಬರೆದಿದ್ದರು. ಈ ಪ್ರಶಸ್ತಿ ಪ್ರದಾನ ಮಾಡುವುದಕ್ಕೆ ಬರೋಬ್ಬರಿ 13 ಸಾವಿರ ಕೋಟಿ ರೂಪಾಯಿಯನ್ನು ಮೀಸಲಿರಿಸಿದ್ದಾರೆ. ಪ್ರತಿ ನೊಬೆಲ್ ಪ್ರಶಸ್ತಿಯನ್ನು ಗರಿಷ್ಠ ಮೂರು ವ್ಯಕ್ತಿಗಳಿಗೆ ನೀಡಬಹುದು. ಅದರಲ್ಲಿ ಬಂದ ಹಣವನ್ನು ಮೂರು ಜನ ಹಂಚಿಕೊಳ್ಳುತ್ತಾರೆ.