ಕಾರ್ಯಕ್ರಮದಲ್ಲಿ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಮಾತನಾಡಿ, ಈ ಕಾರ್ಯ ಕ್ರಮವನ್ನು ಬೆಂಗಳೂರು ಅಥವಾ ಹುಬ್ಬಳ್ಳಿಯಲ್ಲೂ ನಡೆಸಬಹುದಾಗಿತ್ತು. ಆದರೆ ವಿದೇಶ ದಲ್ಲಿ, ವಿಶೇಷವಾಗಿ ದಕ್ಷಿಣ ಆಫ್ರಿಕಾದಂತಹ ಐತಿಹಾಸಿಕ ಹಾಗೂ ಸುಂದರ ದೇಶದಲ್ಲಿ ನಡೆಸಿರುವುದು ವಿಶೇಷ.
ಇದು ಕೇವಲ ಪ್ರಶಸ್ತಿ ಪ್ರದಾನವಲ್ಲ, ಎರಡು ದೇಶಗಳ ನಡುವಿನ ಸಂಸ್ಕೃತಿ, ಪರಂಪರೆ ಹಾಗೂ ವ್ಯಾಪಾರಿಕ ಸಂಬಂಧಗಳ ವಿನಿಮಯಕ್ಕೆ ಅವಕಾಶ ನೀಡುವ ವೇದಿಕೆ ಎಂದರು.
ನಾನು ಇದೇ ಮೊದಲ ಬಾರಿಗೆ ದಕ್ಷಿಣ ಆಫ್ರಿಕಾಗೆ ಭೇಟಿ ನೀಡಿದ್ದು, ಹೊಸ ದೇಶ, ಹೊಸ ಅನುಭವ ನೀಡಿದೆ. ಅಮೆರಿಕ, ಯುರೋಪ್, ಚೀನಾ, ಸಿಂಗಾಪುರ, ಮಲೇಷ್ಯಾ ದೇಶಗಳಿಗೆ ಹಲವಾರು ಬಾರಿ ಹೋಗಿದ್ದೇನೆ. ಆದರೆ ದಕ್ಷಿಣ ಆಫ್ರಿಕಾ ಭೇಟಿ ಸಾಧ್ಯವಾಗಿರಲಿಲ್ಲ. ಇದನ್ನು ವಿಶ್ವವಾಣಿ ಮತ್ತು ವಿಶ್ವೇಶ್ವರ ಭಟ್ ಅವರಿಂದ ನೋಡಲು ಸಾಧ್ಯವಾಯಿತು.
ಅಮೆರಿಕ, ಯುರೋಪ್ ದೇಶಗಳಿಗೆ ಭಾರತೀಯರು ಸಾಮಾನ್ಯವಾಗಿ ಭೇಟಿ ನೀಡುತ್ತಾರೆ. ಆದರೆ ದಕ್ಷಿಣ ಆಫ್ರಿಕಾದಂತಹ ದೇಶಗಳ ಸಂಸ್ಕೃತಿ, ಪರಂಪರೆ ಮತ್ತು ಜನಜೀವನವನ್ನು ಅರಿಯಲು ಇಂತಹ ಕಾರ್ಯಕ್ರಮಗಳು ಅಗತ್ಯ. ಪ್ರಶಸ್ತಿ ಎನ್ನುವುದು ಕೇವಲ ಒಂದು ನಿಮಿತ್ತ ಮಾತ್ರ. ಆ ಮೂಲಕ ಹೊಸ ದೇಶ, ಹೊಸ ವ್ಯವಸ್ಥೆ ಮತ್ತು ಹೊಸ ಸಂಪರ್ಕ ಗಳನ್ನು ಪರಿಚಯಿಸಿಕೊಳ್ಳುವ ಅವಕಾಶ ಸಿಗುತ್ತದೆ ಎಂದರು.
ಇದನ್ನೂ ಓದಿ: 12th Global Achievers Awards in South Africa: ಗ್ಲೋಬಲ್ ಅಚೀವರ್ಸ್ ವಿಭಿನ್ನ ಕಾರ್ಯಕ್ರಮ
ಹೊಸ ಪ್ರಯೋಗಗಳಲ್ಲಿ ಮುಂಚೂಣಿ
ಗ್ಲೋಬಲ್ ಅಚೀವರ್ಸ್ ಮಾದರಿಯ ಕಾರ್ಯಕ್ರಮ ವನ್ನು ವಿಶ್ವವಾಣಿ ಪ್ರಾರಂಭಿಸಿದ ಬಳಿಕ ಇತರ ಪತ್ರಿಕೆಗಳೂ ಇಂತಹ ಪ್ರಯತ್ನಗಳನ್ನು ಕೈಗೊಂಡಿರುವುದು ಗಮನಾರ್ಹ. ಹೊಸ ಪ್ರಯೋಗಗಳನ್ನು ಮೊದಲು ಪ್ರಾರಂಭಿಸುವ ಪರಂಪರೆ ವಿಶ್ವವಾಣಿ ಮತ್ತು ವಿಶ್ವೇಶ್ವರ ಭಟ್ ಅವರಲ್ಲಿದೆ. ಅವರ ಕಾರ್ಯ ಶ್ಲಾಘನೀಯ.
19 ಶತಮಾನದಲ್ಲಿದ್ದ ಹಿರಿಯ ಹೋರಾಟಗಾರ ಪಾಟೀಲ್ ಪುಟ್ಟಪ್ಪ ಅವರಿಂದ 2016ರಲ್ಲಿ ವಿಶ್ವೇಶ್ವರ ಭಟ್ ಪತ್ರಿಕೆಯ ನೇತೃತ್ವ ವಹಿಸಿಕೊಂಡು ಪ್ರಸ್ತುತ ರಾಜ್ಯಮಟ್ಟದ ಪತ್ರಿಕೆಯಾಗಿ ಪರಿವರ್ತನೆ ಮಾಡಿದ ಕಾರ್ಯ ಪ್ರಸಂಶನೀಯ. ಕರ್ನಾಟಕ ಏಕೀಕರಣ ಹೋರಾಟದಲ್ಲಿ ಪಾಟೀಲ್ ಪುಟ್ಟಪ್ಪ ಅವರ ಪಾತ್ರ ಅಪಾರ. ಕರ್ನಾಟಕ ವಿದ್ಯಾವರ್ಧಕ ಸಂಘದ ಮುಖಾಂ ತರ ಉತ್ತರ ಕರ್ನಾಟಕದ ಹೋರಾಟಕ್ಕೆ ಅವರು ನೀಡಿದ ಕೊಡುಗೆ ಅನನ್ಯವಾದದ್ದು ಎಂದರು. 1977ರಲ್ಲಿ ನಾನು ಎಲ್‌ಎಲ್‌ಬಿ ಓದುತ್ತಿದ್ದಾಗ ವಿಶ್ವವಾಣಿಯಲ್ಲಿ ಪತ್ರಕರ್ತನಾಗಿ ಸೇರಿದ್ದೆ. ವಿಶ್ವವಾಣಿಯಲ್ಲಿ ಸುದ್ದಿ ಬರೆಯುವವರ ಅಗತ್ಯವಿದೆ ಎಂಬ ಜಾಹೀರಾತು ನೋಡಿ ನೇರ ವಾಗಿ ಪಾಟೀಲ್ ಪುಟ್ಟಪ್ಪ ಅವರನ್ನು ಭೇಟಿಯಾದೆ. ಅಂದೇ ಸಂದರ್ಶನ, ಅಂದೇ ನೇಮಕ. ನನ್ನ ಮೊದಲ ವೇತನ ತಿಂಗಳಿಗೆ 300 ರುಪಾಯಿ. ಅದು ನನ್ನ ಜೀವನದ ಮೊದಲ ಸಂಬಳ. ಆ ಸಮಯದಲ್ಲಿ ಇಂಗ್ಲಿಷ್ ಸುದ್ದಿಗಳನ್ನು ಕನ್ನಡಕ್ಕೆ ಅನುವಾದಿಸಿ ಪ್ರಕಟಿಸುವ ಜವಾಬ್ದಾರಿ ವಹಿಸಿದ್ದಾಗಿ, ಹಿರಿಯ ಲೇಖಕ ಎಂ.ಜೀವನ್ ಅವರ ಮಾರ್ಗದರ್ಶನ ತಮ್ಮ ಬರವಣಿಗೆಯ ಜೀವನಕ್ಕೆ ದಿಕ್ಕು ನೀಡಿತು. ಪತ್ರಿಕೋದ್ಯಮ ನನಗೆ ಜೀವನಪಾಠ ಕಲಿಸಿತು.
ವಿದ್ಯಾರ್ಥಿಗಳು ತಂದೆ-ತಾಯಿಯ ಮೇಲೆಯೇ ಅವಲಂಬಿತರಾಗದೆ ಸ್ವತಃ ದುಡಿಯಬೇಕು ಎಂಬ ಸಂದೇಶವನ್ನು ನಾನು ಅಂದೇ ಅರ್ಥ ಮಾಡಿಕೊಂಡೆ ಎಂದರು.
![]()
ಕಾರ್ಯಕ್ರಮವೂ ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಸ್ನೇಹ ಮತ್ತು ಸಹಕಾರವನ್ನು ಮತ್ತಷ್ಟು ಬಲಪಡಿಸುವ ವೇದಿಕೆಯಾಗಲಿದೆ. ಇದು ಕೇವಲ ಸಾಧಕರ ಗೌರವ ಸಮಾರಂಭ ವಲ್ಲ, ಇದು ಹೊಸ ಅಂತಾರಾಷ್ಟ್ರೀಯ ಸಂಕುಲದ ಆರಂಭ. ವ್ಯಾಪಾರ, ಹೂಡಿಕೆ, ಶಿಕ್ಷಣ ಹಾಗೂ ಸಾಂಸ್ಕೃತಿಕ ವಿನಿಮಯಗಳಿಗೆ ಹೊಸ ದಾರಿಯನ್ನು ತೋರಿಸು ತ್ತದೆ. ವಿಶ್ವವಾಣಿ ಗ್ಲೋಬಲ್ ಅಚೀವರ್ಸ್ ಸಮ್ಮೇಳನವು ಭಾರತೀಯ ಸಾಧಕರಿಗೆ ಜಾಗತಿಕ ವೇದಿಕೆಯಲ್ಲಿ ಗುರುತಿನ ಜತೆಗೆ, ಹೊಸ ಸಂಪರ್ಕಗಳು ಮತ್ತು ಸಹಕಾರದ ಅವಕಾಶಗಳನ್ನು ಒದಗಿಸಿರು ವುದು ಭಾಗವಹಿಸಿದ ಸಂತೋಷವಿದೆ.
- ಜಗದೀಶ್ ಶೆಟ್ಟರ್, ಮಾಜಿ ಮುಖ್ಯಮಂತ್ರಿ