ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಇರಾನ್‌ ಸುಪ್ರೀಂ ಲೀಡರ್‌ ಆಗಿ ಖಮೇನಿ ಪುತ್ರ ಮೊಜ್ತಬಾ ಅಧಿಕಾರ ಸ್ವೀಕಾರ; ಇಸ್ರೇಲ್‌ ಬಹಿರಂಗ ಬೆದರಿಕೆ!

ಇರಾನ್‌ನ ನೂತನ ಸರ್ವಾಧಿಕಾರಿಯಾಗಿ ಮೊಜ್ತಬಾ ಖಮೇನಿ ಆಯ್ಕೆಯಾಗಿದ್ದಾರೆ. ಮುಷ್ತಬಾ, ಕಳೆದ ವಾರ ಅಮೆರಿಕ- ಇಸ್ರೇಲ್‌ ಸೇನಾ ಪಡೆಯ ದಾಳಿಗೆ ಹತರಾಗಿದ್ದ ಸರ್ವಾಧಿಕಾರಿ ಆಯತೊಲ್ಲಾ ಖಮೇನಿಯ ಮಗ ಇವರಾಗಿದ್ದು, ಖಮೇನಿಯ 6 ಮಕ್ಕಳಲ್ಲಿ ಎರಡನೆಯವರಾಗಿದ್ದಾರೆ ಎಂದು ತಿಳದು ಬಂದಿದೆ.

ಸಂಗ್ರಹ ಚಿತ್ರ

ಟೆಹ್ರಾನ್‌: ಇರಾನ್‌ನ ನೂತನ ಸರ್ವಾಧಿಕಾರಿಯಾಗಿ ಮೊಜ್ತಬಾ ಖಮೇನಿ ಆಯ್ಕೆಯಾಗಿದ್ದಾರೆ. ಮುಷ್ತಬಾ, ಕಳೆದ ವಾರ ಅಮೆರಿಕ- ಇಸ್ರೇಲ್‌ ಸೇನಾ (Mojtaba Khamenei) ಪಡೆಯ ದಾಳಿಗೆ ಹತರಾಗಿದ್ದ ಸರ್ವಾಧಿಕಾರಿ ಆಯತೊಲ್ಲಾ ಖಮೇನಿಯ ಮಗ ಇವರಾಗಿದ್ದು, ಖಮೇನಿಯ 6 ಮಕ್ಕಳಲ್ಲಿ ಎರಡನೆಯವರಾಗಿದ್ದಾರೆ. ಯುದ್ಧ ಶುರುವಾದಾಗಿನಿಂದ ಮೊಜ್ತಬಾ ಖಮೇನಿ ಹೆಸರು ಕೇಳಿ ಬರುತ್ತಿತ್ತು. ಆಯತೊಲ್ಲಾ ಖಮೇನಿ ಹತ್ಯೆಗೆ ಮುನ್ನವೇ ಮುಷ್ತಬಾ ಖಮೇನಿ ಈ ಹುದ್ದೆಗೆ ಸ್ಪರ್ಧಿಯಾಗಿದ್ದರು.

ಸುಪ್ರೀಂ ಲೀಡರ್‌ ಆಯ್ಕೆ ಬಹುಮತದಿಂದ ನಡೆದಿದ್ದು, ದೇಶ ಅವರ ನಾಯಕತ್ವದಲ್ಲಿ ಒಂದಾಗಬೇಕು ಎಂದು ಇರಾನಿನ ಟಿವಿ ಚಾನೆಲ್ ವರದಿ ಮಾಡಿದೆ.‌ 56 ವರ್ಷ ವಯಸ್ಸಿನ ಮುಷ್ತಬಾ ಖಮೇನಿ ಇರಾನ್‌ ಮಿಲಿಟರಿಯ ಮುಖ್ಯಸ್ಥರಾಗಲಿದ್ದಾರೆ. ಜತೆಗೆ ಅರೆ ಸೇನಾಪಡೆ ರೆವೊಲ್ಯೀಷನರಿ ಗಾರ್ಡ್‌ನ ಮುಖ್ಯಸ್ಥರಾಗಲಿದ್ದಾರೆ. ಪರಮಾಣು ಬಾಂಬ್‌ ತಯಾರಿಕೆಗೆ ಬೇಕಾಗುವ ಸಂವರ್ಧಿತ ಯುರೇನಿಯಂ ದಾಸ್ತಾನಿನ ಮೇಲಿನ ಅಧಿಕಾರವೂ ಅವರದ್ದೇ ಆಗಲಿದೆ.

"ತಜ್ಞರ ಸಭೆಯು ನಿರ್ಣಾಯಕ ಮತದ ಮೂಲಕ, ಅಯತೊಲ್ಲಾ ಸಯ್ಯದ್ ಮೊಜ್ತಬಾ ಹೊಸೇನಿ ಖಮೇನಿ ಅವರನ್ನು ಇಸ್ಲಾಮಿಕ್ ಗಣರಾಜ್ಯ ಇರಾನ್‌ನ ಪವಿತ್ರ ವ್ಯವಸ್ಥೆಯ ಮೂರನೇ ನಾಯಕರನ್ನಾಗಿ ನೇಮಿಸಿತು" ಎಂದು ಸಭೆಯು ಟೆಹ್ರಾನ್ ಸಮಯದ ಮಧ್ಯರಾತ್ರಿಯ ನಂತರ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ತಿಳಿಸಿದೆ.

ಖಮೇನಿಯ ಭೂಗತ ಬಂಕರ್ ಧ್ವಂಸಗೊಳಿಸಿದ ಇಸ್ರೇಲಿ ಯುದ್ಧ ವಿಮಾನದ ರೋಚಕ ಕಾರ್ಯಾಚರಣೆ ಹೇಗಿತ್ತು? ವಿಡಿಯೋ ನೋಡಿ

ಮೊಜ್ತಬಾ ಖಮೇನಿ ಹತ್ಯೆಗೆ ಇಸ್ರೇಲ್‌ ಕರೆ!

ಇರಾನ್‌ನ ಹೊಸ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿಯ ಉತ್ತರಾಧಿಕಾರಿಗೆ ಇಸ್ರೇಲ್ ರಕ್ಷಣಾ ಸಚಿವ ಇಸ್ರೇಲ್ ಕಾಟ್ಜ್ ಬಹಿರಂಗ ಹತ್ಯೆಯ ಬೆದರಿಕೆ ಹಾಕಿದ್ದಾರೆ. ಇರಾನ್‌ನ ಶಕ್ತಿಶಾಲಿ ರೆವಲ್ಯೂಷನರಿ ಗಾರ್ಡ್‌ಗಳ ಒತ್ತಡದ ಮೇರೆಗೆ ಖಮೇನಿ ಪುತ್ರ ಮೊಜ್ತಾಬಾ ಅವರನ್ನು ಮುಂದಿನ ಸುಪ್ರೀಂ ಲೀಡರ್ ಆಗಿ ಆಯ್ಕೆ ಮಾಡಿದ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ. ಸಾಮಾಜಿಕ ಜಾಲತಾಣದಲ್ಲಿ ಈ ಕುರಿತು ಬರೆದುಕೊಂಡಿರುವ ಕಾಟ್ಜ್, "ಇಸ್ರೇಲ್ ಅನ್ನು ನಾಶಪಡಿಸುವ ಯೋಜನೆ, ಅಮೆರಿಕ ಮತ್ತು ಮುಕ್ತ ಪ್ರಪಂಚಕ್ಕೆ ಬೆದರಿಕೆ ಹಾಗೂ ಇರಾನ್ ಜನತೆಯನ್ನು ತುಳಿಯುವ ಇರಾನಿನ ಭಯೋತ್ಪಾದಕ ಆಡಳಿತದಿಂದ ನೇಮಕಗೊಳ್ಳುವ ಯಾವುದೇ ನಾಯಕನೂ ನಮ್ಮ ಟಾರ್ಗೆಟ್‌ ಆಗಲಿದ್ದಾನೆ. ಅವನ ಹೆಸರು ಏನೇ ಇರಲಿ ಅಥವಾ ಅವನು ಎಲ್ಲೇ ಅಡಗಿರಲಿ, ಅವನ ಹತ್ಯೆ ಖಚಿತ," ಎಂದು ಎಚ್ಚರಿಕೆ ನೀಡಿದ್ದಾರೆ.

Vishakha Bhat Heggar

View all posts by this author