ಲಾಹೋರ್: ಪಹಲ್ಗಾಮ್ ಉಗ್ರರ ದಾಳಿಗೆ ಪ್ರತೀಕಾರವಾಗಿ ಭಾರತ ನಡೆಸಿದ ಆಪರೇಷನ್ ಸಿಂದೂರ(Operation Sindoor) ಹತರಾದ ಹಲವಾರು ಭಯೋತ್ಪಾದಕರ ಅಂತ್ಯಕ್ರಿಯೆಯಲ್ಲಿ ಬುಧವಾರ ಪಾಕಿಸ್ತಾನ ಸೇನಾ ಸಿಬ್ಬಂದಿ ಮತ್ತು ನಿಷೇಧಿತ ಹಫೀಜ್ ಸಯೀದ್ ಜಮಾತ್-ಉದ್-ದವಾ (JDU) ಸದಸ್ಯರು ಭಾಗವಹಿಸಿದ್ದರು. ಭಾರತೀಯ ಸಶಸ್ತ್ರ ಪಡೆಗಳು ಪಾಕಿಸ್ತಾನ ಮತ್ತು ಪಾಕಿಸ್ತಾನ ಆಕ್ರಮಿತ ಕಾಶ್ಮೀರದಾದ್ಯಂತ 9 ಸ್ಥಳಗಳನ್ನು ಗುರಿಯಾಗಿಸಿಕೊಂಡು ಭಯೋತ್ಪಾದಕ ಸಂಘಟನೆಗಳ ಮೇಲೆ ದಾಳಿ ನಡೆಸಿದ್ದು,80ಕ್ಕೂ ಹೆಚ್ಚು ಉಗ್ರರನ್ನು ಹೊಡೆದುರುಳಿಸಲಾಗಿದೆ. ಇದೀಗ ಈ ಉಗ್ರರ ಅಂತ್ಯಕ್ರಿಯೆ ಇಸ್ಲಮಾಬಾದ್‌ನಲ್ಲಿ ನಡೆದಿದ್ದು, ಉಗ್ರರ ಮೃತದೇಹಗಳ ಮೇಲೆ ಪಾಕ್ ಧ್ವಜವನ್ನು ಹೊದಿಸಲಾಗಿತ್ತು. ಅಲ್ಲದೇ ಪಾಕ್ ಸೈನಿಕರು ಭಾಗಿಯಾಗಿರುವುದು ತಿಳಿದುಬಂದಿದೆ. ಇದಕ್ಕೆ ಸಂಬಂಧಿಸಿದ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಮಾತೆತ್ತಿದರೆ ನಾವು ಭಯೋತ್ಪಾದನೆಯನ್ನು ಪೋಷಿಸುತ್ತಿಲ್ಲ ಎನ್ನುವ ಪಾಕಿಸ್ತಾನದ ಮುಖವಾಡ ಜಗತ್ತಿನೆದುರು ಮತ್ತೊಮ್ಮೆ ಕಳಚಿಬಿದ್ದಿದೆ.
ವಿಡಿಯೊ ಇಲ್ಲಿದೆ
ಆಪರೇಷನ್ ಸಿಂದೂರ್‌ನಲ್ಲಿ ಹತರಾದ ಉಗ್ರರು ಖಾರಿ ಅಬ್ದುಲ್ ಮಲಿಕ್, ಖಾಲಿದ್ ಮತ್ತು ಮುದಾಸೀರ್ ಅಂತ್ಯಕ್ರಿಯೆಯ ಪ್ರಾರ್ಥನೆಯನ್ನು ಮುರಿಡ್ಕೆಯಲ್ಲಿ ಹೆಚ್ಚಿನ ಭದ್ರತೆಯ ನಡುವೆ ನಡೆಸಲಾಯಿತು ಎಂದು ಜೆಯುಡಿ ರಾಜಕೀಯ ವಿಭಾಗವಾದ ಪಾಕಿಸ್ತಾನ ಮಾರ್ಕಾಜಿ ಮುಸ್ಲಿಂ ಲೀಗ್‌ನ ವಕ್ತಾರ ತಬಿಶ್ ಖಯ್ಯೂಮ್ ಹೇಳಿದ್ದಾನೆ. ಪಾಕಿಸ್ತಾನ ಸೇನೆ ಮತ್ತು ಜೆಯುಡಿ ಸದಸ್ಯರ ಜೊತೆಗೆ, ನಾಗರಿಕ ಅಧಿಕಾರಶಾಹಿಯ ಸದಸ್ಯರು ಸಹ ಅಂತ್ಯಕ್ರಿಯೆಯಲ್ಲಿ ಹಾಜರಿದ್ದರು ದೇಶದ ಸುರಕ್ಷತೆ ಮತ್ತು ಭದ್ರತೆಗಾಗಿ ಪ್ರಾರ್ಥನೆಗಳೊಂದಿಗೆ ಹಫೀಜ್ ಅಬ್ದುಲ್ ರೌಫ್ ನೇತೃತ್ವದಲ್ಲಿ ಅಂತ್ಯಕ್ರಿಯೆಯ ಪ್ರಾರ್ಥನೆ ನಡೆಯಿತು. ಜೆಯುಡಿ ಸದಸ್ಯರಾದ ಮಲಿಕ್, ಖಾಲಿದ್ ಮತ್ತು ಮುದಾಸೀರ್ ಮಸೀದಿಯ ಪ್ರಾರ್ಥನಾ ನಾಯಕರು ಮತ್ತು ಉಸ್ತುವಾರಿಗಳಾಗಿ ಸೇವೆ ಸಲ್ಲಿಸಿದ್ದರು ಎಂದು ಹೇಳಿದ್ದಾನೆ.
ಈ ಸುದ್ದಿಯನ್ನೂ ಓದಿ: President Murmu: ಪ್ರಧಾನಿ ನರೇಂದ್ರ ಮೋದಿ ಮೀಟ್ಸ್ ರಾಷ್ಟ್ರಪತಿ ದ್ರೌಪದಿ ಮುರ್ಮು; ಆಪರೇಷ್ ಸಿಂಧೂರ್ ಬಗ್ಗೆ ಮಾಹಿತಿ