ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ್​ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

President Murmu: ಪ್ರಧಾನಿ ನರೇಂದ್ರ ಮೋದಿ ಮೀಟ್ಸ್‌ ರಾಷ್ಟ್ರಪತಿ ದ್ರೌಪದಿ ಮುರ್ಮು; ಆಪರೇಷ್‌ ಸಿಂಧೂರ್‌ ಬಗ್ಗೆ ಮಾಹಿತಿ

Operation Sindoor: ಮೇ 7ರ ನಸುಕಿನ ಜಾವ ಭಾರತೀಯ ಸೇನೆ ಪಾಕಿಸ್ತಾನ ಮತ್ತು ಪಾಕ್‌ ಆಕ್ರಮಿತ ಕಾಶ್ಮೀರದ ಮೇಲೆ ದಾಳಿ ನಡೆಸಿ ಉಗ್ರರ ತಾಣಗಳನ್ನು ಉಡೀಸ್‌ ಮಾಡಿದೆ. ಇದಕ್ಕೆ ಆಪರೇಷನ್‌ ಸಿಂಧೂರ್‌ ಎಂದು ಹೆಸರಿಡಲಾಗಿದ್ದು, ಪ್ರಧಾನಿ ನರೇಂದ್ರ ಮೋದಿ ಅವರು ಈ ಬಗ್ಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಮಾಹಿತಿ ನೀಡಿದ್ದಾರೆ.

ಆಪರೇಷನ್‌ ಸಿಂಧೂರ್‌ ಬಗ್ಗೆ ರಾಷ್ಟ್ರಪತಿಗೆ ಮಾಹಿತಿ

ನರೇಂದ್ರ ಮೋದಿ ಮತ್ತು ದ್ರೌಪದಿ ಮುರ್ಮು.

Profile Ramesh B May 7, 2025 6:56 PM

ಹೊಸದಿಲ್ಲಿ: ಮೇ 7ರ ನಸುಕಿನ ಜಾವ ಭಾರತೀಯ ಸೇನೆ ಪಾಕಿಸ್ತಾನ ಮತ್ತು ಪಾಕ್‌ ಆಕ್ರಮಿತ ಕಾಶ್ಮೀರದ ಮೇಲೆ ದಾಳಿ ನಡೆಸಿ ಉಗ್ರರ ತಾಣಗಳನ್ನು ಉಡೀಸ್‌ ಮಾಡಿದೆ. ಇದಕ್ಕೆ ಆಪರೇಷನ್‌ ಸಿಂಧೂರ್‌ (Operation Sindoor) ಎಂದು ಹೆಸರಿಡಲಾಗಿದ್ದು, ಏ. 22ರಂದು ಜಮ್ಮು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಉಗ್ರರ ದಾಳಿಗೆ ಸೇಡು ತೀರಿಸಿಕೊಂಡಿದೆ. ಈ ದಾಳಿಯ ಬಗ್ಗೆ ರಾಷ್ಟ್ರಪತಿ ಭವನಕ್ಕೆ ತೆರಳಿ ಪ್ರಧಾನಿ ಮಂತ್ರಿ ನರೇಂದ್ರ ಮೋದಿ (Narendra Modi) ಅವರು ರಾಷ್ಟ್ರಪತಿ ದ್ರೌಪದಿ ಮುರ್ಮು (Droupadi Murmu) ಅವರಿಗೆ ಮಾಹಿತಿ ನೀಡಿದರು. ʼʼಪ್ರಧಾನಿ ಮೋದಿ ಅವರು ರಾಷ್ಟ್ರಪತಿ ಭವನದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಭೇಟಿಯಾಗಿ ಆಪರೇಷನ್‌ ಸಿಂಧೂರ್‌ ಬಗ್ಗೆ ಮಾಹಿತಿ ನೀಡಿದ್ದಾರೆʼʼ ಎಂದು ರಾಷ್ಟ್ರಪತಿ ಭವನ ಎಕ್ಸ್‌ನಲ್ಲಿ ಮಾಹಿತಿ ನೀಡಿದೆ.

9 ಸ್ಥಳಗಳನ್ನು ಗುರಿಯಾಗಿಸಿಕೊಂಡು ಭಾರತೀಯ ಸೇನೆ ಕ್ಷಿಪಣಿ ದಾಳಿ ನಡೆಸಿದೆ. ಪಾಕಿಸ್ತಾನ ಮೂಲದ ಭಯೋತ್ಪಾದಕ ಸಂಘಟನೆ ಲಷ್ಕರ್‌-ಎ-ತೊಯ್ಬಾ (LeT) ಮತ್ತು ಜೈಷ್‌-ಎ-ಮೊಹಮ್ಮದ್‌ (JeM)ನ ತರಬೇತಿ ಕೇಂದ್ರಗಳನ್ನು ಕೇಂದ್ರೀಕರಿಸಿ ಈ ದಾಳಿ ನಡೆದಿದೆ. ಪಹಲ್ಗಾಮ್‌ ದಾಳಿ ನಡೆದ ಸುಮಾರು 2 ವಾರಗಳ ಬಳಿಕ ಈ ಕಾರ್ಯಾಚರಣೆಯನ್ನು ಕೈಗೊಳ್ಳಲಾಯಿತು. ಪಹಲ್ಗಾಮ್‌ ದಾಳಿಯಲ್ಲಿ ಓರ್ವ ನೇಪಾಳಿ ಪ್ರಜೆ, 25 ಭಾರತೀಯರು ಸೇರಿ ಒಟ್ಟು 26 ಮಂದಿ ಮೃತಪಟ್ಟಿದ್ದರು.

ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಭೇಟಿಯಾದ ಪ್ರಧಾನಿ ಮೋದಿ:



ಈ ಸುದ್ದಿಯನ್ನೂ ಓದಿ: Operation Sindoor: ಆ 25 ನಿಮಿಷಗಳು...ಉಗ್ರರ ನೆಲೆಗೆ ನುಗ್ಗಿ ಪರಾಕ್ರಮ ಮೆರೆದ ಭಾರತ; ಇಲ್ಲಿದೆ ಕ್ಯಾಮೆರಾದಲ್ಲಿ ಸೆರೆಯಾದ ರೋಚಕ ಕ್ಷಣಗಳು...

ಯುರೋಪ್‌ ಪ್ರವಾಸ ಮುಂದೂಡಿದ ಪ್ರಧಾನಿ

ಭಾರತ-ಪಾಕಿಸ್ತಾನದ ಮಧ್ಯೆ ಯುದ್ಧದ ವಾತಾವರಣ ಮೂಡಿರುವ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ತಮ್ಮ ಯುರೋಪ್‌ ಪ್ರವಾಸವನ್ನು ಮುಂದೂಡಿದ್ದಾರೆ. ಮೇ 13ರಿಂದ 17ರವರೆಗೆ ಅವರು ಕ್ರೊವೇಷಿಯಾ, ನಾರ್ವೆ ಮತ್ತು ನೆದರ್‌ಲ್ಯಾಂಡ್‌ಗೆ ಭೇಟಿ ನೀಡಬೇಕಿತ್ತು. ನಾರ್ವೆಯಲ್ಲಿ ನಡೆಯುವ ನಾರ್ಡಿಕ್‌ ಶೃಂಗಸಭೆಯೂ ಈ ಪಟ್ಟಿಯಲ್ಲಿತ್ತು. ಆದರೆ ಇದೀಗ ಉದ್ವಿಗ್ನ ವಾತಾವರಣವಿರುವುದರಿಂದ ಅವರು ತಮ್ಮ ಪ್ರವಾಸವನ್ನು ಮುಂದೂಡಿದ್ದಾರೆ. ಕೆಲವು ದಿನಗಳ ಹಿಂದೆ ಅವರು ರಷ್ಯಾ ಪ್ರವಾಸವನ್ನೂ ಮೊಟಕುಗೊಳಿಸಿದ್ದರು.

ದಾಳಿ ಬಗ್ಗೆ ಸಚಿವ ರಾಜನಾಥ್‌ ಸಿಂಗ್‌ ಹೇಳಿದ್ದೇನು?

ಆಪರೇಷನ್‌ ಸಿಂಧೂರ್‌ ಬಗ್ಗೆ ಮಾತನಾಡಿದ ಕೇಂದ್ರ ಸಚಿವ ರಾಜನಾಥ್‌ ಸಿಂಗ್‌ ಸಶಸ್ತ್ರ ಪಡೆಗಳನ್ನು ಶ್ಲಾಘಿಸಿದ್ದಾರೆ. ಯಾವುದೇ ಅಮಾಯಕರು ಸಾಯದಂತೆ ಖಚಿತಪಡಿಸಿಕೊಂಡು ಈ ದಾಳಿ ನಡೆಸಲಾಗಿದೆ ಎಂದು ಅವರು ಹೇಳಿದ್ದಾರೆ. ನಮ್ಮ ಅಮಾಯಕರನ್ನು ಕೊಂದವರನ್ನಷ್ಟೇ ನಾವು ಕೊಂದಿದ್ದೇವೆ ಎಂದು ಸಿಂಗ್ ಹೇಳಿದ್ದಾರೆ.

"ಅಶೋಕ ವಾಟಿಕವನ್ನು ನಾಶಮಾಡುವಾಗ ಹನುಮಾನ್ ಜಿ ಅನುಸರಿಸಿದ ಕ್ರಮವನ್ನು ನಾವು ಅನುಸರಿಸಿದ್ದೇವೆ. ನಮ್ಮ ಮುಗ್ಧರನ್ನು ಕೊಂದವರನ್ನು ಮಾತ್ರ ನಾವು ಕೊಂದಿದ್ದೇವೆ. ಭಾರತವು ತನ್ನ ನೆಲದ ಮೇಲಿನ ದಾಳಿಗೆ ಪ್ರತಿಕ್ರಿಯಿಸುವ ಹಕ್ಕು ಹೊಂದಿದೆ ಎಂದು ಅವರು ತಿಳಿಸಿದ್ದಾರೆ. 25 ನಿಮಿಷಗಳ ಕಾಲ ನಡೆದ ದಾಳಿಯಲ್ಲಿ ಉಗ್ರರ ಪ್ರಮುಖ ನಾಯಕರು ಸೇರಿದಂತೆ ಹಲವರು ಹತರಾಗಿದ್ದಾರೆ.

ಆಪರೇಶನ್ ಸಿಂಧೂರ್ ದಾಳಿ ಬೆನ್ನಲ್ಲೇ ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಷರೀಫ್ (Shehbaz Sharif)ನ ತುರ್ತು ಸಭೆ ನಡೆಸಿದ್ದಾರೆ. ಉಗ್ರರ ಕ್ಯಾಂಪ್ ಮೇಲೆ ಭಾರತ ನಡೆಸಿದ ದಾಳಿಯನ್ನು ಪಾಕಿಸ್ತಾನ ಯುದ್ಧ ಕೃತ್ಯ ಎಂದಿದೆ.