ಇಸ್ಲಾಮಾಬಾದ್: ಪಹಲ್ಗಾಮ್ ಭಯೋತ್ಪಾದಕ ದಾಳಿಯ ಹಿಂದಿನ ಮಾಸ್ಟರ್ ಮೈಂಡ್ ಎಂದು ಹೇಳಲಾಗುವ ಲಷ್ಕರ್-ಎ-ತೈಬಾ (ಎಲ್‌ಇಟಿ) ಕಮಾಂಡರ್ ಸೈಫುಲ್ಲಾ ಕಸೂರಿ (Saifullah Kasuri) ಬುಧವಾರ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದಾನೆ. ಆತ ಪಾಕಿಸ್ತಾನದ ರಾಜಕೀಯ ನಾಯಕರು ಹಾಗೂ ಮೋಸ್ಟ್ ವಾಂಟೆಂಡ್ ಭಯೋತ್ಪಾದಕರ ಜೊತೆ ರ್‍ಯಾಲಿಯಲ್ಲಿ ಕಾಣಿಸಿಕೊಂಡಿದ್ದಾನೆ. ಪಾಕಿಸ್ತಾನ ತನ್ನ ಪರಮಾಣು ಪರೀಕ್ಷೆಗಳ ವಾರ್ಷಿಕ ಸ್ಮರಣಾರ್ಥವಾಗಿ ಪಾಕಿಸ್ತಾನ್ ಮರ್ಕಜಿ ಮುಸ್ಲಿಂ ಲೀಗ್ (ಪಿಎಂಎಂಎಲ್) ಆಯೋಜಿಸಿದ್ದ ಈ ರ್‍ಯಾಲಿಯಲ್ಲಿ ಸೈಫುಲ್ಲಾ ಪ್ರಚೋದನಕಾರಿ ಭಾಷಣ ಮಾಡಿದ್ದಾನೆ ಎಂದು ತಿಳಿದು ಬಂದಿದೆ.
ಮುಸ್ಲಿಂ ಲೀಗ್ (ಪಿಎಂಎಂಎಲ್) ಆಯೋಜಿಸಿದ್ದ ಈ ರ್‍ಯಾಲಿಯಲ್ಲಿ ಪ್ರಚೋದನಕಾರಿ ಸೈಫುಲ್ಲಾ ಮಾತನಾಡಿದ್ದಾನೆ. ಆತ ಭಾರತದ ವಿರುದ್ಧ ಘೋಷಣೆಯನ್ನೂ ಕೂಗಿದ್ದಾನೆ. ಎಲ್‌ಇಟಿ ಸಂಸ್ಥಾಪಕ ಹಫೀಜ್ ಸಯೀದ್‌ನ ಮಗ ತಲ್ಹಾ ಸಯೀದ್ ಕೂಡ ಭಾಗವಹಿಸಿದ್ದ. ಪಹಲ್ಗಾಮ್ ಭಯೋತ್ಪಾದಕ ದಾಳಿಯ ಮಾಸ್ಟರ್ ಮೈಂಡ್ ಎಂದು ನನ್ನನ್ನು ದೂಷಿಸಲಾಯಿತು, ಈಗ ನನ್ನ ಹೆಸರು ಇಡೀ ಜಗತ್ತಿನಲ್ಲಿ ಪ್ರಸಿದ್ಧವಾಗಿದೆ" ಎಂದು ಪಂಜಾಬ್ ಪ್ರಾಂತ್ಯದ ಕಸೂರ್‌ನಲ್ಲಿ ನಡೆದ ರ್‍ಯಾಲಿಯಲ್ಲಿ ಸೈಫುಲ್ಲಾ ಹೇಳಿದ್ದಾನೆ.
ಪಾಕಿಸ್ತಾನದ 2024 ರ ಸಾರ್ವತ್ರಿಕ ಚುನಾವಣೆಯಲ್ಲಿ ಲಾಹೋರ್‌ನ NA-122 ಸ್ಥಾನದಿಂದ ಸಂಸತ್ತಿಗೆ ಸೈಫುಲ್ಲಾ ಸ್ಪರ್ಧಿಸಿದ್ದ. ನಂತರ ಎಲ್‌ಇಟಿಯ ರಾಜಕೀಯ ಪಕ್ಷವೆಂದು ವ್ಯಾಪಕವಾಗಿ ಪರಿಗಣಿಸಲ್ಪಟ್ಟ ಪಿಎಂಎಂಎಲ್‌ನೊಂದಿಗೆ ಗುರುತಿಸಿಕೊಂಡಿದ್ದಾನೆ. ಆಪರೇಷನ್ ಸಿಂದೂರದ ಬಳಿಕ ಪಿಎಂಎಂಎಲ್ ಭಾರತದ ವಿರುದ್ಧ ಕಿಡಿ ಕಾರುತ್ತಿದೆ. ಪಾಕಿಸ್ತಾನದ ಪ್ರಮುಖ ನಗರಗಳಾದ ಲಾಹೋರ್, ಕರಾಚಿ, ಇಸ್ಲಾಮಾಬಾದ್, ಫೈಸಲಾಬಾದ್ ಮತ್ತು ಇತರ ನಗರಗಳಲ್ಲಿ ಹಫೀಜ್ ಸಯೀದ್ ಬಿಡುಗಡೆಗೆ ಒತ್ತಾಯಿಸಿ ಮತ್ತು ಸಿಂಧೂ ಜಲ ಒಪ್ಪಂದವನ್ನು ಅಮಾನತುಗೊಳಿಸಿದ್ದಕ್ಕಾಗಿ ಭಾರತದ ವಿರುದ್ಧ ಪ್ರತಿಭಟನೆಯನ್ನು ನಡೆಸುತ್ತಿದೆ.
ಈ ಸುದ್ದಿಯನ್ನೂ ಓದಿ: Spying for Pakistan: ಐಎಸ್‌ಐ ಪರ ಬೇಹುಗಾರಿಕೆ, ಪಾಕಿಸ್ತಾನಕ್ಕೆ 7 ಬಾರಿ ಭೇಟಿ; ರಾಜಸ್ಥಾನ ಸರ್ಕಾರಿ ನೌಕರನ ಬಂಧನ
2008 ರ ಮುಂಬೈ ದಾಳಿ ಹಾಗೂ ಇದೀಗ ಪಹಲ್ಗಾಮ್ ದಾಳಿಯ ರೂವಾರಿ ಎಂದು ಹೇಳಲಾಗುವ ಸಯೀದ್ ಇನ್ನೂ ಪಾಕಿಸ್ತಾನದಲ್ಲಿ ಇದ್ದಾನೆ. ಆಪರೇಷನ್ ಸಿಂದೂರದ ಮೂಲಕ ಭಾರತ ಪಾಕಿಸ್ತಾನದಲ್ಲಿ ಅಡಗಿರುವ ಉಗ್ರರ ನೆಲೆ ಮೇಲೆ ದಾಳಿ ನಡೆಸಿದೆ. ಪಾಕಿಸ್ತಾನ ಆಕ್ರಮಿತ ಕಾಶ್ಮೀರ (PoK) ಮತ್ತು ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಬಹವಲ್ಪುರ್ನಲ್ಲಿರುವ ಒಂಬತ್ತು ಭಯೋತ್ಪಾದಕ ಶಿಬಿರಗಳ ಮೇಲೆ ನಿಖರ ಕ್ಷಿಪಣಿ ದಾಳಿಗಳನ್ನು ನಡೆಸಿತು. ಈ ದಾಳಿಗಳು ಮಸೂದ್ ಅಜರ್ ಸಹೋದರ ಅಬ್ದುಲ್ ರೌಫ್ ಅಜರ್ ಸೇರಿದಂತೆ 100ಕ್ಕೂ ಹೆಚ್ಚು ಭಯೋತ್ಪಾದಕರು ಹತರಾಗಿದ್ದಾರೆ ಎಂದು ಹೇಳಲಾಗಿದೆ.