ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಹೊಸ ವರ್ಷದ ಸಂಭ್ರಮದಲ್ಲಿದ್ದಾಗಲೇ ಸ್ವಿಸ್ ಬಾರ್‌ನಲ್ಲಿ ಭಾರೀ ಸ್ಫೋಟ; 10 ಸಾವು, ಹಲವರಿಗೆ ಗಂಭೀರ ಗಾಯ

Blast in Swiss Bar: ಹೊಸ ವರ್ಷದ ಸಂಭ್ರಮವನ್ನು ಆಚರಿಸುತ್ತಿದ್ದಾಗ ಭಾರೀ ದುರಂತವೊಂದು ನಡೆದಿದೆ. ಸ್ವಿಟ್ಜರ್‌ಲ್ಯಾಂಡ್‌ನ ಕ್ರಾನ್ಸ್ ಮೊಂಟಾನಾದ ಬಾರ್‌ನಲ್ಲಿ ಸಂಭವಿಸಿದ ಭಾರಿ ಸ್ಫೋಟದಲ್ಲಿ ಹಲವಾರು ಜನರು ಸಾವನ್ನಪ್ಪಿದ್ದಾರೆ ಮತ್ತು ಅನೇಕರು ಗಾಯಗೊಂಡಿದ್ದಾರೆ. ಸ್ಫೋಟಕ್ಕೆ ನಿಖರ ಕಾರಣ ಇನ್ನೂ ತಿಳಿದು ಬಂದಿಲ್ಲ. ವರದಿಗಳ ಪ್ರಕಾರ ಹಲವಾರು ಸಾವು ನೋವುಗಳು ಸಂಭವಿಸಿದೆ.

ಸಾಂದರ್ಭಿಕ ಚಿತ್ರ

ಹೊಸ ವರ್ಷದ ಸಂಭ್ರಮವನ್ನು ಆಚರಿಸುತ್ತಿದ್ದಾಗ ಭಾರೀ ದುರಂತವೊಂದು ನಡೆದಿದೆ. ಸ್ವಿಟ್ಜರ್‌ಲ್ಯಾಂಡ್‌ನ ಕ್ರಾನ್ಸ್ ಮೊಂಟಾನಾದ ಬಾರ್‌ನಲ್ಲಿ ಸಂಭವಿಸಿದ ಭಾರಿ ಸ್ಫೋಟದಲ್ಲಿ 10 ಜನರು ಸಾವನ್ನಪ್ಪಿದ್ದಾರೆ ಮತ್ತು ಅನೇಕರು ಗಾಯಗೊಂಡಿದ್ದಾರೆ. ಹೊಸ ವರ್ಷದ ಆಚರಣೆಯ ಸಮಯದಲ್ಲಿ ಐಷಾರಾಮಿ ಆಲ್ಪೈನ್ ಸ್ಕೀ ರೆಸಾರ್ಟ್ ಪಟ್ಟಣವಾದ ಕ್ರಾನ್ಸ್ ಮೊಂಟಾನಾದಲ್ಲಿರುವ ಲೆ ಕಾನ್ಸ್ಟೆಲೇಷನ್ ಎಂಬ ಬಾರ್‌ನಲ್ಲಿ ಸ್ಫೋಟ ಸಂಭವಿಸಿದೆ ಎಂದು ಸ್ವಿಸ್ ಪೊಲೀಸರು ಗುರುವಾರ ಮುಂಜಾನೆ ತಿಳಿಸಿದ್ದಾರೆ.

ಸ್ಫೋಟಕ್ಕೆ ನಿಖರ ಕಾರಣ ಇನ್ನೂ ತಿಳಿದು ಬಂದಿಲ್ಲ. ವರದಿಗಳ ಪ್ರಕಾರ ಹಲವಾರು ಸಾವು ನೋವುಗಳು ಸಂಭವಿಸಿದೆ. ಹೊಸ ವರ್ಷದ ಸಂಭ್ರಮಾಚರಣೆಯ ಸಂದರ್ಭದಲ್ಲಿ ಪ್ರವಾಸಿಗರಲ್ಲಿ ಜನಪ್ರಿಯವಾಗಿರುವ ಕಾನ್ಸ್ಟೆಲೇಷನ್ ಬಾರ್‌ನಲ್ಲಿ ಬೆಳಗಿನ ಜಾವ 1:30 ರ ಸುಮಾರಿಗೆ (0030 GMT) ಸ್ಫೋಟ ಸಂಭವಿಸಿದೆ. ಸಾವನ್ನಪ್ಪಿದವರದಲ್ಲಿ ಹೆಚ್ಚಿನವರು ಪ್ರವಾಸಿಗರಾಗಿದ್ದಾರೆ ಎಂದು ತಿಳಿದು ಬಂದಿದೆ. ಸ್ಫೋಟ ನಡೆದ ಸಂದರ್ಭದಲ್ಲಿ ಬಾರ್‌ನಲ್ಲಿ 100 ಕ್ಕೂ ಹೆಚ್ಚು ಜನರು ಇದ್ದರು ಎಂದು ಸ್ಥಳೀಯ ಪೊಲೀಸರು ತಿಳಿಸಿದ್ದಾರೆ.

ಸ್ಫೋಟದ ವಿಡಿಯೋ



ನಾವು ನಮ್ಮ ತನಿಖೆಯ ಆರಂಭದಲ್ಲಿದ್ದೇವೆ, ಆದರೆ ಇದು ಅಂತರರಾಷ್ಟ್ರೀಯವಾಗಿ ಪ್ರಸಿದ್ಧವಾದ ಸ್ಕೀ ರೆಸಾರ್ಟ್ ಆಗಿದ್ದು, ಇಲ್ಲಿ ಬಹಳಷ್ಟು ಪ್ರವಾಸಿಗರು ಇದ್ದಾರೆ ಎಂದು ವಾಲಿಸ್ ಕ್ಯಾಂಟನ್‌ನಲ್ಲಿರುವ ಪೊಲೀಸ್ ವಕ್ತಾರ ಗೇಟನ್ ಲಾಥಿಯಾನ್ ತಿಳಿಸಿದ್ದಾರೆ.

ಕ್ರಾನ್ಸ್-ಮೊಂಟಾನಾ ಒಂದು ಐಷಾರಾಮಿ ಸ್ಕೀ ರೆಸಾರ್ಟ್ ಪಟ್ಟಣವಾಗಿದ್ದು, ಸ್ವಿಸ್ ರಾಜಧಾನಿ ಬರ್ನ್‌ನಿಂದ ಸುಮಾರು ಎರಡು ಗಂಟೆಗಳ ದೂರದಲ್ಲಿರುವ ವಲಾಯಿಸ್ ಪ್ರದೇಶದ ಆಲ್ಪ್ಸ್‌ನ ಹೃದಯಭಾಗದಲ್ಲಿದೆ.