ಟೆಹರಾನ್: ಇಸ್ರೇಲ್ (israel) ಮತ್ತು ಯುಎಸ್ (US) ಜಂಟಿಯಾಗಿ ನಡೆಸಿದ ದಾಳಿಯಲ್ಲಿ ಇರಾನ್ (Iran war) ನ ಹೊಸ ಸರ್ವೋಚ್ಚ ನಾಯಕ ( Iran Supreme Leader) ಗಾಯಗೊಂಡಿದ್ದಾರೆ ಎನ್ನುವ ಸುದ್ದಿಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಡಿದ್ದು, ಇದು ಸುಳ್ಳು ಎಂಬುದಾಗಿ ಇರಾನ್ ರಾಷ್ಟ್ರಾಧ್ಯಕ್ಷರ (Iran President) ಪುತ್ರ ಈಗ ಸ್ಪಷ್ಟಪಡಿಸಿದ್ದಾರೆ. ಇರಾನಿನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ (Ayatollah Ali Khamenei) ಅವರ ಸಾವಿನ ಬಳಿಕ ಹೊಸದಾಗಿ ನೇಮಕಗೊಂಡ ಮೊಜ್ತಬಾ ಖಮೇನಿ (Mojtaba Khamenei) ಅವರು ಇತ್ತೀಚೆಗೆ ಯುಎಸ್ ನಡೆಸಿದ ದಾಳಿಯ ವೇಳೆ ಗಾಯಗೊಂಡಿದ್ದಾರೆ ಎಂಬ ವದಂತಿಗಳು ಹಬ್ಬಿದ್ದು, ಅವರು ಸುರಕ್ಷಿತವಾಗಿದ್ದಾರೆ, ಅವರಿಗೆ ಯಾವುದೇ ಗಾಯಗಳಾಗಿಲ್ಲ ಎಂಬುದಾಗಿ ರಾಷ್ಟ್ರಾಧ್ಯಕ್ಷರ ಪುತ್ರ ಬುಧವಾರ ಸ್ಪಷ್ಟಪಡಿಸಿದ್ದಾರೆ.
ಕೆಲವು ಸ್ನೇಹಿತರು ತಂದೆಯವರ ಆರೋಗ್ಯದ ಬಗ್ಗೆ ಕೇಳಿದ್ದಾರೆ. ಅವರು ಯುದ್ಧದಲ್ಲಿ ಗಾಯಗೊಂಡಿದ್ದಾರೆ ಎಂಬ ಸುದ್ದಿ ಹಿನ್ನೆಲೆಯಲ್ಲಿ ಅವರು ಕೇಳಿರುವುದಾಗಿ ಹೇಳಿದ್ದಾರೆ. ದೇವರಿಗೆ ನಾನು ಧನ್ಯವಾದ ಸಲ್ಲಿಸುತ್ತೇನೆ. ಯಾಕೆಂದರೆ ಇದೊಂದು ಸುಳ್ಳು ಸುದ್ದಿ. ಅವರು ಸುರಕ್ಷಿತವಾಗಿದ್ದಾರೆ. ಅವರಿಗೆ ಯಾವುದೇ ಗಾಯಗಳಾಗಿಲ್ಲ ಎಂದು ಅವರೇ ನನಗೆ ತಿಳಿಸಿದ್ದಾರೆ ಎಂದು ಸರ್ಕಾರಿ ಸಲಹೆಗಾರರಾಗಿಯೂ ಕಾರ್ಯ ನಿರ್ವಹಿಸುತ್ತಿರುವ ಇರಾನ್ ರಾಷ್ಟ್ರಾಧ್ಯಕ್ಷ ಮಸೂದ್ ಪೆಜೆಶ್ಕಿಯನ್ ಅವರ ಪುತ್ರ ಯೂಸೆಫ್ ಪೆಜೆಶ್ಕಿಯಾನ್ ಅವರು ತಮ್ಮ ಟೆಲಿಗ್ರಾಮ್ ಚಾನೆಲ್‌ನಲ್ಲಿ ಬರೆದಿದ್ದಾರೆ.
ಅಮೆರಿಕದ ಭಯಕ್ಕೆ ಅಡಗಿ ಕುಳಿತ್ರಾ ಇರಾನ್ ನೂತನ ಸುಪ್ರೀಂ ಲೀಡರ್? ಮೊಜ್ತಬಾ ಹತ್ಯೆಗೆ ಇಸ್ರೇಲ್ ಪ್ಲಾನ್!
ಇರಾನಿನ ರಾಜ್ಯ ದೂರದರ್ಶನದಲ್ಲಿ ಖಮೇನಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದ್ದು, ಅದು ಯಾವ ಸ್ವರೂಪದ ಗಾಯ, ಹೇಗಿದೆ ಎನ್ನುವುದನ್ನು ಹೇಳಿರಲಿಲ್ಲ. ಇದೀಗ ಈ ಕುರಿತು ಯೂಸೆಫ್ ಪೆಜೆಶ್ಕಿಯಾನ್ ಅವರು ನೀಡಿರುವ ಸ್ಪಷ್ಟನೆಯಿಂದ ಖಮೇನಿ ಸುರಕ್ಷಿತವಾಗಿದ್ದಾರೆ ಎನ್ನುವುದು ತಿಳಿದು ಬಂದಿದೆ.
ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) ನ ಒತ್ತಾಯದ ಮೇರೆಗೆ ದೇಶದ ಹೊಸ ಸರ್ವೋಚ್ಚ ನಾಯಕನಾಗಿ ಮೊಜ್ತಬಾ ಖಮೇನಿ ಅವರನ್ನು ನೇಮಕ ಮಾಡಲಾಗಿತ್ತು. ಅವರು ತಮ್ಮ ಕಠಿಣ ನೀತಿಗಳಿಂದ ಉತ್ತರಾಧಿಕಾರಿಯಾಗಲು ಸೂಕ್ತ ಎಂದು ಪರಿಗಣಿಸಲಾಗಿತ್ತು. ಅವರ ಆಯ್ಕೆಗೆ ಕೊಂಚ ವಿರೋಧವಿದ್ದುದರಿಂದ ಅವರ ಆಯ್ಕೆ ಕುರಿತಾದ ಔಪಚಾರಿಕ ಘೋಷಣೆಯನ್ನು ಹಲವಾರು ಗಂಟೆಗಳ ಕಾಲ ವಿಳಂಬ ಮಾಡಲಾಗಿತ್ತು.
ಇರಾನ್‌ನ ಅಧಿಕಾರ ರಚನೆಯಲ್ಲಿ ಪ್ರಬಲ ಶಕ್ತಿಯಾಗಿರುವ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ ಯುದ್ಧ ಪ್ರಾರಂಭವಾದಾಗಿನಿಂದಲೂ ದೇಶದ ಅಧಿಕಾರವನ್ನು ತನ್ನ ನಿಯಂತ್ರಣದಲ್ಲೇ ಇರಿಸಿಕೊಂಡಿದೆ. ಮೊಜ್ತಬಾ ಖಮೇನಿ ಅವರ ಆಯ್ಕೆ ಬಳಿಕ ಇರಾನ್ ಯುಎಸ್ ವಿರುದ್ದ ಸೆಟೆದು ನಿಂತಿರುವುದು ದೇಶದ ಆಕ್ರಮಣಕಾರಿ ನಿಲುವು ಮತ್ತು ಬಿಗಿಯಾದ ಆಂತರಿಕ ನಿಯಂತ್ರಣಗಳನ್ನು ಸೂಚಿಸುತ್ತಿದೆ.