Baba Vanga Predictions 2026: ಮುಂದೆ ಮತ್ತಷ್ಟು ವಿನಾಶ; ಬಾಬಾ ವಂಗಾ ಹೇಳಿರುವ ಭವಿಷ್ಯವೇನು?
ಬಾಲ್ಕನ್ಸ್‌ನ ನಾಸ್ಟ್ರಾಡಾಮಸ್ ಎಂದು ಕರೆಯಲ್ಪಡುವ ಬಾಬಾ ವಂಗಾ ಹೇಳಿರುವ 2025ರ ಹಲವು ಭವಿಷ್ಯವಾಣಿಗಳು ನಿಜವಾಗಿವೆ. ಹೀಗಾಗಿ ಇದೀಗ ಎಲ್ಲರ ಕಣ್ಣು ಅವರು 2026ರ ಬಗ್ಗೆ ಏನು ಹೇಳಿದ್ದಾರೆ ಎನ್ನುವುದರ ಮೇಲೆ ನೆಟ್ಟಿದೆ. 2026ರ ಕುರಿತು ಅವರು ಹೇಳಿರುವ ಅನೇಕ ಆತಂಕಕಾರಿ ಭವಿಷ್ಯವಾಣಿಗಳು ಇಂತಿವೆ.


ನವದೆಹಲಿ: ಜಪಾನ್ (Japan)ನಲ್ಲಿ ಸುನಾಮಿ (Tsunami,), ರಷ್ಯಾದಲ್ಲಿ (Russia) ಭೂಕಂಪ (Earthquake), ಇರಾನ್- ಇಸ್ರೇಲ್ ಯುದ್ಧ (Iran-Israel war) ಸೇರಿದಂತೆ ಜಾಗತಿಕವಾಗಿ ನಡೆದ ಹಲವಾರು ಬೆಳವಣಿಗೆಗಳ ಬಗ್ಗೆ ಎಲ್ಲರೂ ಕುತೂಹಲದ ಕಣ್ಣಿನಿಂದ ನೋಡುತ್ತಾರೆ. ಬಾಲ್ಕನ್ಸ್‌ನ ನಾಸ್ಟ್ರಾಡಾಮಸ್ (Nostradamus of Balkans) ಎಂದು ಕರೆಯಲ್ಪಡುವ ಬಾಬಾ ವಂಗಾ 2025ರ ಬಗ್ಗೆ ಹೇಳಿರುವ ಹಲವು ಭವಿಷ್ಯವಾಣಿಗಳು ನಿಜವಾಗಿವೆ. ಹೀಗಾಗಿ ಅವರು 2026ರ ಬಗ್ಗೆ ಏನು ಹೇಳಿದ್ದಾರೆ ಎನ್ನುವ ಕುತೂಹಲ ಹೆಚ್ಚಾಗಿದೆ. 2026ರ (Baba Vanga Predictions 2026) ಬಗ್ಗೆ ಅವರು ಹೇಳಿರುವ ಭವಿಷ್ಯವಾಣಿಗಳು ಇದೀಗ ಹೊರಬಿದ್ದಿದೆ. ಇದು 2025ಕ್ಕಿಂತಲೂ ಹೆಚ್ಚು ಆತಂಕಕಾರಿಯಾಗಿದೆ.
ಪ್ರಮುಖ ವಿಶ್ವ ಘಟನೆಗಳ ಬಗ್ಗೆ ಬಾಬಾ ವಂಗಾ ಅವರ ದೂರದೃಷ್ಟಿಯು ಆಸಕ್ತಿ ಕೆರಳಿಸುತ್ತದೆ ಮತ್ತು ವಿವಾದವನ್ನು ಹುಟ್ಟುಹಾಕುತ್ತದೆ. 2025ರಲ್ಲಿ ವಿನಾಶಕಾರಿ ವಿಪತ್ತುಗಳು ಬಗ್ಗೆ ಎಚ್ಚರಿಕೆ ನೀಡಿದ್ದ ವಂಗಾ ಅವರ 2026ರ ಅವರ ಭವಿಷ್ಯವಾಣಿಗಳು ಇನ್ನಷ್ಟು ಭಯ ಹುಟ್ಟಿಸಿವೆ.
2026ರಲ್ಲಿ ಪ್ರಬಲ ಭೂಕಂಪ, ಜ್ವಾಲಾಮುಖಿ ಸ್ಫೋಟ ಮತ್ತು ಕಠಿಣ ಹವಾಮಾನ ಪರಿಸ್ಥಿತಿಗಳನ್ನು ಎದುರಿಸಬೇಕಾಗಬಹುದು. ಇದು ಸುಮಾರು ಶೇ. 7ರಿಂದ 8ರಷ್ಟು ಭೂಮಿ ಮೇಲೆ ಪರಿಣಾಮ ಬೀರುತ್ತದೆ ಎಂದು ಅವರು ಹಲವು ದಶಕಗಳ ಮೊದಲೇ ಹೇಳಿದ್ದಾರೆ.
ಯುದ್ಧದ ಸಾಧ್ಯತೆ
ಈಗಾಗಲೇ ಭಾರತ ಮತ್ತು ಪಾಕಿಸ್ತಾನ, ಇರಾನ್ ಮತ್ತು ಇಸ್ರೇಲ್, ಥಾಯ್ಲಾಂಡ್ ಮತ್ತು ಕಾಂಬೋಡಿಯಾ ನಡುವೆ ಉದ್ವಿಗ್ನತೆ ಉಂಟಾಗಿದೆ. 2026ರಲ್ಲಿ ಇದು ಮತ್ತಷ್ಟು ಹೆಚ್ಚಾಗಬಹುದು ಎಂದಿರುವ ಅವರು ಥೈವಾನ್ ಮೇಲೆ ಚೀನಾ ದಾಳಿ ಮಾಡಬಹುದು, ರಷ್ಯಾ ಮತ್ತು ಅಮೆರಿಕ ನಡುವೆ ನೇರ ಘರ್ಷಣೆ ಉಂಟಾಗಬಹುದು. ಇದು ಮುಂದೆ ಅಪಾಯಕಾರಿಯಾಗುತ್ತದೆ ಎಂದು ವಂಗಾ ತಿಳಿಸಿದ್ದಾರೆ.
ಕೃತಕ ಬುದ್ಧಿಮತ್ತೆ ಭವಿಷ್ಯ
ಕೃತಕ ಬುದ್ಧಿಮತ್ತೆ(AI)ಯ ಬಗ್ಗೆ ಭವಿಷ್ಯ ನುಡಿದಿರುವ ಬಾಬಾ ವಂಗಾ, 2026ರಲ್ಲಿ ಕೃತಕ ಬುದ್ದಿಮತ್ತೆಯು ಮತ್ತಷ್ಟು ವೇಗವಾಗಿ ಬೆಳೆಯುತ್ತದೆ ಎಂದು ಹೇಳಿದ್ದಾರೆ. ಕೃತಕ ಬುದ್ಧಿಮತ್ತೆಯ ಬೆಳವಣಿಗೆ ವೇಗವಾಗಿದ್ದು, ಮಾನವನ ಧ್ವನಿಗಳನ್ನು ರಚಿಸುತ್ತಿದೆ, ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದೆ. ಇದು ಇನ್ನಷ್ಟು ಬೆಳವಣಿಗೆಯಾದರೆ ಮುಂದೇನಾಗಬಹುದು ಎನ್ನುವ ಆತಂಕ ಎಲ್ಲರಲ್ಲೂ ಹೆಚ್ಚಾಗಿದೆ. ಇದು ಡಿಜಿಟಲ್ ಕ್ಷೇತ್ರದ ಪ್ರಗತಿಯಾದರೂ ಉದ್ಯೋಗ ವಲಯದ ಮೇಲೆ ಇದು ಪರಿಣಾಮ ಬೀರಲಿದೆ. 2026ರಲ್ಲಿ ಕೃತಕ ಬುದ್ದಿಮತ್ತೆಯು ಉತ್ತುಂಗವನ್ನು ತಲುಪುತ್ತದೆ ಎಂದಿದ್ದಾರೆ ವಂಗಾ.
ಮುಂದಿನ ವರ್ಷದಲ್ಲಿ ಬಾಹ್ಯಾಕಾಶದಲ್ಲಿ ಜೀವಿ ಪತ್ತೆಯಾಗಬಹುದು ಎಂದಿರುವ ವಂಗಾ ವೈಜ್ಞಾನಿಕ ಪ್ರಗತಿಯ ಬಗ್ಗೆಯೂ ಸುಳಿವು ನೀಡಿದ್ದಾರೆ. 2026ರ ನವೆಂಬರ್‌ನಲ್ಲಿ ಒಂದು ಬೃಹತ್ ಅನ್ಯಲೋಕದ ಹಡಗು ಭೂಮಿಯ ಕಡೆಗೆ ಬರಲಿದೆ ಎಂದು ಅವರು ಹೇಳಿದ್ದು ಇದು ಮಾನವರು ಮೊದಲ ಬಾರಿಗೆ ಅನ್ಯಲೋಕದವರೊಂದಿಗೆ ಸಂಪರ್ಕಕ್ಕೆ ಬರಬಹುದು ಎನ್ನುವುದನ್ನು ಸೂಚಿಸಿದೆ.
ಇದನ್ನೂ ಓದಿ: Viral Video: ಅಮೆರಿಕದಲ್ಲಿ ಹೋಮ-ಹವನ... ಎದ್ನೋ ಬಿದ್ನೋ ಓಡಿದ ಜನರಿಂದ ಅಗ್ನಿಶಾಮಕ ದಳಕ್ಕೆ ಕರೆ
ಈ ಕುರಿತ ಈಗಾಗಲೇ ಹಾರ್ವರ್ಡ್ ಖಗೋಳ ಭೌತಶಾಸ್ತ್ರಜ್ಞ ಅವಿ ಲೋಬ್ ಸುಳಿವು ಕೂಡ ನೀಡಿದ್ದಾರೆ. 3I/ATLAS ಎಂದು ಹೆಸರಿಸಲಾದ ಬಾಹ್ಯಾಕಾಶದ ವಸ್ತುವೊಂದು ಭೂಮಿಗೆ ಹತ್ತಿರದಲ್ಲಿದೆ ಎಂದು ಅವರು ತಿಳಿಸಿದ್ದಾರೆ. ಇದು ಹಿಮಾವೃತ ಧೂಮಕೇತು ಎಂದು ಅನೇಕರು ಅಭಿಪ್ರಾಯಪಟ್ಟಿದ್ದರೂ ಕೆಲವರು ಇದನ್ನು ಅನ್ಯಲೋಕದ ವಿಶೇಷ ತಂತ್ರಜ್ಞಾನ ಎಂದು ಊಹಿಸಿದ್ದಾರೆ.