ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Jaish Terrorists: ಜೈಶ್‌ ಮಹಿಳಾ ಭಯೋತ್ಪಾದಕರ ಘಟಕಕ್ಕೆ ಅಜರ್‌ ಸಹೋದರಿಯೇ ಮುಖ್ಯಸ್ಥೆ; ಇವರ ಪ್ಲಾನ್‌ ಏನಿತ್ತು ಗೊತ್ತಾ?

ಆಪರೇಷನ್‌ ಸಿಂದೂರದಲ್ಲಿ (Operation Sindoor) ಪಾಕಿಸ್ತಾನದ ಬಹಾವಲ್ಪುರದ ಮರ್ಕಜ್ ಸುಭಾನಲ್ಲಾದಲ್ಲಿರುವ ಜೈಶ್-ಎ-ಮೊಹಮ್ಮದ್ (ಜೆಎಂ) 'ಜಮಾತ್-ಉಲ್-ಮೊಮಿನಾತ್‌ನ ಪ್ರಧಾನ ಕಚೇರಿಯನ್ನೇ ಭಾರತ (Jaish Terrorists) ನಾಶ ಮಾಡಿದ ಮೇಲೆ ಜೆಎಂ ಮಹಿಳೆಯರನ್ನು ಸೇರಿಸಿಕೊಂಡು ಜೈಶ್-ಎ-ಮೊಹಮ್ಮದ್ (JeM) ಅತ್ಯಾಧುನಿಕ ಮಹಿಳಾ ಬ್ರಿಗೇಡ್ ಅನ್ನು ಸ್ಥಾಪಿಸುತ್ತಿದೆ.

ಜೈಶ್‌ ಮಹಿಳಾ ಭಯೋತ್ಪಾದಕರ ಘಟಕಕ್ಕೆ ಅಜರ್‌ ಸಹೋದರಿಯೇ ಮುಖ್ಯಸ್ಥೆ!

-

Vishakha Bhat Vishakha Bhat Oct 9, 2025 4:41 PM

ಇಸ್ಲಾಮಾಬಾದ್‌: ಆಪರೇಷನ್‌ ಸಿಂದೂರದಲ್ಲಿ (Operation Sindoor) ಪಾಕಿಸ್ತಾನದ ಬಹಾವಲ್ಪುರದ ಮರ್ಕಜ್ ಸುಭಾನಲ್ಲಾದಲ್ಲಿರುವ ಜೈಶ್-ಎ-ಮೊಹಮ್ಮದ್ (ಜೆಎಂ) 'ಜಮಾತ್-ಉಲ್-ಮೊಮಿನಾತ್‌ನ ಪ್ರಧಾನ ಕಚೇರಿಯನ್ನೇ ಭಾರತ (Jaish Terrorists) ನಾಶ ಮಾಡಿದ ಮೇಲೆ ಜೆಎಂ ಮಹಿಳೆಯರನ್ನು ಸೇರಿಸಿಕೊಂಡು ಜೈಶ್-ಎ-ಮೊಹಮ್ಮದ್ (JeM) ಅತ್ಯಾಧುನಿಕ ಮಹಿಳಾ ಬ್ರಿಗೇಡ್ ಅನ್ನು ಸ್ಥಾಪಿಸುತ್ತಿದೆ. ಈ ಮೂಲಕ ಮಾನಸಿಕ ಯುದ್ಧ ಮತ್ತು ತಳಮಟ್ಟದ ನೇಮಕಾತಿಗಾಗಿ ಜೆಎಂ ಕಾರ್ಯ ಪ್ರಾರಂಭಿಸಿದೆ ಎನ್ನಲಾಗುತ್ತಿದೆ. ಜೆಇಎಂ ಮುಖ್ಯಸ್ಥ ಮೌಲಾನಾ ಮಸೂದ್ ಅಜರ್ ಹೆಸರಿನಲ್ಲಿ ಹೊರಡಿಸಲಾದ ಪತ್ರದ ಮೂಲಕ ಈ ನಿರ್ಧಾರವನ್ನು ಬಹಿರಂಗಪಡಿಸಲಾಗಿದೆ. ಇದರ ಮುಖ್ಯಸ್ಥೆಯನ್ನಾಗಿ ಮೌಲಾನಾ ಮಸೂದ್ ಅಜರ್ ಸಹೋದರಿಯನ್ನು ನೇಮಿಸಲಾಗಿದೆ.

ಈ ಘಟಕಕ್ಕೆ ನೇಮಕಾತಿ ಅಕ್ಟೋಬರ್ 8 ರಂದು ಬಹವಾಲ್ಪುರದಲ್ಲಿ ಪ್ರಾರಂಭವಾಯಿತು. ಮೂಲಗಳ ಪ್ರಕಾರ, ಜೆಇಎಂನ ಮಹಿಳಾ ವಿಭಾಗವನ್ನು ಮಸೂದ್ ಅಜರ್‌ನ ಸಹೋದರಿ ಸಾದಿಯಾ ಅಜರ್ ಮುನ್ನಡೆಸಲಿದ್ದಾರೆ. ಮೇ 7 ರಂದು ಆಪರೇಷನ್ ಸಿಂಧೂರ್‌ನ ಭಾಗವಾಗಿ ನಡೆದ ದಾಳಿಯಲ್ಲಿ ಹತರಾದ ಅಜರ್‌ನ ಕುಟುಂಬ ಸದಸ್ಯರಲ್ಲಿ ಆಕೆಯ ಪತಿ ಯೂಸುಫ್ ಅಜರ್ ಕೂಡ ಒಬ್ಬ. ಭಯೋತ್ಪಾದಕ ಸಂಘಟನೆಯು ತನ್ನ ಸದಸ್ಯರ ಪತ್ನಿಯರನ್ನು ಹಾಗೂ ಬಹಾವಲ್ಪುರ್, ಕರಾಚಿ, ಮುಜಫರಾಬಾದ್, ಕೋಟ್ಲಿ, ಹರಿಪುರ್ ಮತ್ತು ಮನ್ಸೆಹ್ರಾದಲ್ಲಿರುವ ತನ್ನ ಕೇಂದ್ರಗಳಲ್ಲಿ ಓದುತ್ತಿರುವ ಆರ್ಥಿಕವಾಗಿ ದುರ್ಬಲ ಮಹಿಳೆಯರನ್ನು ಸೇರಿಸಿಕೊಳ್ಳಲು ಪ್ರಾರಂಭಿಸಿದೆ ಎಂದು ಮೂಲಗಳು ತಿಳಿಸಿವೆ.

ಜೈಶ್-ಎ-ಮೊಹಮ್ಮದ್ ಇದಕ್ಕಾಗಿ ಸಾಕಷ್ಟು ತಯಾರಿಯನ್ನೂ ಮಾಡಿಕೊಂಡಿದೆ. ಮಹಿಳಾ ಗುಂಪುಗಳನ್ನು ನೇಮಕಾತಿದಾರರು, ಸಂದೇಶ ಕಳುಹಿಸಲು ಕೊರಿಯರ್‌, ಪ್ರಮುಖ ನಿಧಿಸಂಗ್ರಹಕಾರರಾಗಿ ಬಳಸಲು ಸಿದ್ಧಪಡಿಸಲಾಗುತ್ತಿದೆ. ಇದರಲ್ಲಿ ಪುರುಷ ಕಾರ್ಯಕರ್ತರನ್ನು ದೂರವಿಡಲಾಗುವುದು. ಇದು 2024ರ ಜೆಇಎಂನಹೊಸ ತಂತ್ರವಾದ ಪಾಕಿಸ್ತಾನದ ಪಂಜಾಬ್ ಪ್ರಾಂತ್ಯ ಮತ್ತು ಕಾಶ್ಮೀರದ ಕೆಲವು ಭಾಗಗಳಲ್ಲಿ ಮಹಿಳಾ ಸಂಪರ್ಕಕ್ಕೆ ಸಾಮಾಜಿಕ ಮಾಧ್ಯಮ ಮತ್ತು ಮದರಸಾ ಸರ್ಕ್ಯೂಟ್‌ಗಳನ್ನುರಹಸ್ಯ ಕಾರ್ಯಾಚರಣೆ ಭಾಗವಾಗಿ ಮಾಡುವ ಯೋಜನೆಯಂತೆ ಇದೆ.

ಈ ಸುದ್ದಿಯನ್ನೂ ಓದಿ: Terrorist Arrest : ಸೇನೆಯಿಂದ ಭರ್ಜರಿ ಬೇಟೆ; 16 ಉಗ್ರರ ಬಂಧನ, ಅಪಾರ ಪ್ರಮಾಣದ ಶಸ್ತ್ರಾಸ್ತ್ರ ವಶ

ಮೂಲಗಳ ಪ್ರಕಾರ, 'ಜಮಾತ್-ಉಲ್-ಮೊಮಿನಾತ್' ನ ಚಟುವಟಿಕೆಗಳು ಸಾಮಾಜಿಕ ಮಾಧ್ಯಮ, ವಾಟ್ಸಾಪ್ ಗುಂಪುಗಳು ಮತ್ತು ಕೆಲವು ಮದರಸಾಗಳ ಜಾಲದ ಮೂಲಕ ಹರಡುತ್ತಿವೆ. ಇದು ಜಮ್ಮು ಮತ್ತು ಕಾಶ್ಮೀರ, ಉತ್ತರ ಪ್ರದೇಶ ಮತ್ತು ದಕ್ಷಿಣ ಭಾರತದ ಕೆಲವು ಪ್ರದೇಶಗಳಲ್ಲಿ ಆನ್‌ಲೈನ್ ಜಾಲಗಳ ಮೂಲಕ ಸಕ್ರಿಯಗೊಳಿಸುವ ಗುರಿಯನ್ನು ಹೊಂದಿದೆ.