BBK 12: ಗ್ಲಾಸ್ ಪುಡಿ-ಪುಡಿ: ಧನುಷ್-ಸತೀಶ್-ಚಂದ್ರಪ್ರಭಾ ಗಲಾಟೆಗೆ ಇಡೀ ಬಿಗ್ ಬಾಸ್ ಮನೆಯೇ ಶೇಕ್
ಬಿಗ್ ಬಾಸ್ ಒಂದು ದಿನ ಸ್ಥಗಿತಗೊಂಡ ನಂತರ ಪುನಃ ಸ್ಪರ್ಧಿಗಳು ಮನೆಯೊಳಗೆ ಬಂದಿದ್ದು, ನಂತರ ಜಗಳಗಳ ಕಾವು ಮತ್ತಷ್ಟು ಏರಿದೆ. ಈ ಬಾರಿ ಬಿಗ್ ಬಾಸ್ ಮನೆಯೊಳಗೆ ಬೆಂಕಿ ಹತ್ತಿಕೊಂಡಿದ್ದು ಡಾಗ್ ಸತೀಶ್ ಹಾಗೂ ಚಂದ್ರಪ್ರಭಾ ನಡುವೆ. ಅಸಲಿಗೆ ಇವರಿಬ್ಬರು ಜಂಟಿಗಳು, ಜೊತೆಯಾಗಿಯೇ ಇರಬೇಕು. ಆದರೆ,

Dhanush Sathish Chandraprabha fight -

ಬಿಗ್ ಬಾಸ್ ಕನ್ನಡ ಸೀಸನ್ 12 (Bigg Boss Kannada 12) ಶುರುವಾಗಿ ಎರಡು ವಾರ ಆಗುತ್ತ ಬರುತ್ತಿದೆ. ಸಾಮಾನ್ಯವಾಗಿ ಹೊಸ ಸೀಸನ್ ಶುರುವಾದಾಗ ಮೊದಲ ಎರಡು ವಾರ ಎಲ್ಲರೂ ಹೊಂದಿಕೊಳ್ಳಲು ಸಮಯ ತೆಗೆದುಕೊಳ್ಳುತ್ತಾರೆ. ಪರಸ್ಪರ ಪ್ರೀತಿಯಿಂದ ಮಾತನಾಡಿಕೊಂಡು ಸಮಯ ಕಳೆಯುತ್ತಾರೆ. ಜಗಳಗಳ ಸನ್ನಿವೇಶ ಮೂರು ವಾರಗಳ ನಂತರ ಶುರುವಾಗುತ್ತೆ. ಆದರೆ, ಈ ಬಾರಿಯ ಬಿಗ್ ಬಾಸ್ ಸೀಸನ್ ಹಿಂದಿನಂತಿಲ್ಲ.. ಶೋ ಪ್ರಾರಂಭವಾದ ಎರಡೇ ದಿನಕ್ಕೆ ಜಗಳ ಶುರುವಾಗಿತ್ತು. ನಂತರ ಪ್ರತಿದಿನ ದೊಡ್ಮನೆಯೊಳಗೆ ಜಗಳಗಳು ನಡೆಯುತ್ತಲೇ ಇದೆ.
ಬಿಗ್ ಬಾಸ್ ಒಂದು ದಿನ ಸ್ಥಗಿತಗೊಂಡ ನಂತರ ಪುನಃ ಸ್ಪರ್ಧಿಗಳು ಮನೆಯೊಳಗೆ ಬಂದಿದ್ದು, ನಂತರ ಜಗಳಗಳ ಕಾವು ಮತ್ತಷ್ಟು ಏರಿದೆ. ಈ ಬಾರಿ ಬಿಗ್ ಬಾಸ್ ಮನೆಯೊಳಗೆ ಬೆಂಕಿ ಹತ್ತಿಕೊಂಡಿದ್ದು ಡಾಗ್ ಸತೀಶ್ ಹಾಗೂ ಚಂದ್ರಪ್ರಭಾ ನಡುವೆ. ಅಸಲಿಗೆ ಇವರಿಬ್ಬರು ಜಂಟಿಗಳು, ಜೊತೆಯಾಗಿಯೇ ಇರಬೇಕು. ಆದರೆ, ಚಂದ್ರಪ್ರಭಾ ಅವರಿಗೆ ಸತೀಶ್ ಅವರನ್ನು ಸಹಿಸಿಕೊಂಡು ಪಿತ್ತ ನೆತ್ತಿಗೇರಿದೆ. ಇದು ಜಗಳಕ್ಕೆ ಕಾರಣವಾಗಿದೆ.
ಕಳೆದ ವೀಕೆಂಡ್ನಲ್ಲಿ ಜಂಟಿ ಸದಸ್ಯರಿಗೆ ನಿಮ್ಮ ಪಾರ್ಟ್ನರ್ ಜೊತೆ ಏನಾದರು ಸಮಸ್ಯೆ ಆಗುತ್ತಿದೆಯೇ ಎಂದು ಕೇಳಿದ್ದರು. ಆಗಲೇ ಚಂದ್ರ ಅವರು ಸತೀಶ್ ಬಗ್ಗೆ ದೂರು ನೀಡಿದ್ದರು. ಇವರ ಹಿಂದೆಯೇ ಹೋಗಬೇಕು.. ವಾಶ್ ರೂಮ್, ಟಾಯ್ಲೆಟ್ ಹೋದ್ರೆ ಬೇಗ ಬರೋದೇ ಇಲ್ಲ.. ತಿಂಡಿ-ಊಟ ಆದ ಕೂಡಲೇ ವಾಕಿಂಗ್ ಕರ್ಕೊಂಡು ಹೋಗ್ತಾರೆ ಹೀಗೆ ಕೆಲ ಕಂಪ್ಲೆಂಟ್ ಮಾಡಿದ್ದರು. ಮೊದಲ ವಾರದಿಂದ ಇದನ್ನೆಲ್ಲ ಸಹಿಸಿಕೊಂಡು ಬರುತ್ತಿದ್ದ ಚಂದ್ರಪ್ರಭಾ ಅವರು ಈಗ ತಾಳ್ಮೆ ಕಳೆದುಕೊಂಡಿದ್ದಾರೆ.
ಡಾಗ್ ಸತೀಶ್-ಚಂದ್ರಪ್ರಭಾ ಹಾಗೂ ಧನುಷ್ ನಡುವಣ ಜಗಳದ ವಿಡಿಯೋ:
ಸತೀಶ್ ಅವರು ವಾಶ್ ರೂಮ್ ಹೋಗಿ ತುಂಬಾ ಹೊತ್ತಾದರೂ ಬಂದಿಲ್ಲ. ಆಗ ಹೊರಗಿನಿಂದ ಚಂದ್ರ ಅವರು, ಸತೀಶಣ್ಣ ನಿನ್ನ ಕಾಲು ಹುಡ್ಕೊತೀನಿ.. ಬಾ ಎಂದು ಹೇಳಿದ್ದಾರೆ. ಎಷ್ಟು ಹೊತ್ತು ಕಾದರೂ ಅವರು ಬಂದಿಲ್ಲ.. ನಿಯಮದ ಪ್ರಕಾರ ಜಂಟಿ ಸದಸ್ಯರು ತಮ್ಮ ಪಾರ್ಟ್ನರ್ ಇಲ್ಲದೇ ಎಲ್ಲೂ ಹೋಗುವಂತಿಲ್ಲ. ಆದರೆ, ಚಂದ್ರ ಅವರು ಕೋಪಗೊಂಡು ಸತೀಶ್ ಅವರನ್ನು ಹಾಗೂ ಬೆಲ್ಟ್ ಅನ್ನು ಬಿಟ್ಟು ಒಬ್ಬರೇ ಕಿಚನ್ಗೆ ಬಂದಿದ್ದಾರೆ. ಇದನ್ನ ಕಂಡು ಅಸುರಾಧಿಪತಿ ಸುಧಿ, ಹಾಗೆಲ್ಲ ಬರಬಾರದು.. ರೂಲ್ಸ್ ಬ್ರೇಕ್ ಆಗುತ್ತೆ ಎಂದಿದ್ದಾರೆ.
BBK 12: ಮುಂದಿನ ವಾರ ಬಿಗ್ ಬಾಸ್ನಲ್ಲಿರಲಿದೆ ಯಾರೂ ಊಹಿಸಿರದ ಟ್ವಿಸ್ಟ್?
ಇದರಿಂದ ರೊಚ್ಚಿ ಗೆದ್ದ ಚಂದ್ರ, ಅವರು ಎಷ್ಟು ಹೊತ್ತು ಆದ್ರೂ ಹೊರಗಡೆ ಬರಲ್ಲ.. ನನ್ಗೆ ನೀರು ಕುಡಿಬೇಕು ಅಂದ್ರೂ ನಾನು ಬರೋ ಹಂಗೆ ಇಲ್ವಾ ಎಂದು ಕೋಪದಲ್ಲಿ ಕೈಯಲ್ಲಿದ್ದ ನೀರಿನ ಗ್ಲಾಸ್ ಅನ್ನು ಕೆಳಕ್ಕೆ ಬಿಸಾಕಿ ಒಡೆದು ಹಾಕಿದ್ದಾರೆ.. ನಂತರ ಬಾತ್ ರೂಮ್ ಏರಿಯಾದಲ್ಲೇ ಚಂದ್ರಪ್ರಭಾ-ಸತೀಶ್ ಹಾಗೂ ಧನುಷ್ ನಡುವೆ ಜಗಳ ನಡೆದಿದೆ. ಧನುಷ್ ಅವರು ಸತೀಶ್ ಮೇಲೆ ರೇಗಾಡುತ್ತ ಕೈ-ಕೈ ಮಿಲಾಯಿಸಲು ಮುಂದಾಗಿದ್ದಾರೆ. ಈ ಜಗಳ ಯಾವ ಹಂತಕ್ಕೆ ತಲುಪಿದೆ ಎಂಬುದನ್ನು ಇಂದಿನ ಎಪಿಸೋಡ್ನಲ್ಲಿ ನೋಡಬೇಕಿದೆ.