ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ವೆನೆಜುವೆಲಾದ ಮೇಲೆ ಅಮೆರಿಕದಿಂದ ವೈಮಾನಿಕ ದಾಳಿ; ಟ್ರಂಪ್‌ ಹೇಳಿದ್ದೇನು?

ಅಮೆರಿಕ ಹಾಗೂ ವೆನೆಜುವೆಲಾದ ನಡುವೆ ಯುದ್ಧ ಪ್ರಾರಂಭವಾಗುವಂತೆ ತೋರುತ್ತಿದೆ. ಶನಿವಾರ ಮುಂಜಾನೆ ವೆನೆಜುವೆಲಾದ ರಾಜಧಾನಿ ಕ್ಯಾರಕಾಸ್‌ನ ಕೆಲವು ಕಡೆ ಸ್ಫೋಟ ಸಂಭವಿಸಿದೆ. ಮಿಲಿಟರಿ ನೆಲೆಯ ಬಳಿ ದಾಳಿ ಸಂಭವಿಸಿದೆ ಎಂದು ತಿಳಿದು ಬಂದಿದೆ. ರಾಜಧಾನಿಯ ಹಲವಾರು ಭಾಗಗಳಲ್ಲಿ ಗುಂಡಿನ ಸದ್ದು ಕೇಳಿಬಂದಿದೆ ಎಂದು ನಿವಾಸಿಗಳು ಹೇಳಿದ್ದಾರೆ.

ಸಾಂದರ್ಭಿಕ ಚಿತ್ರ

ವಾಷಿಂಗ್ಟನ್‌: ಅಮೆರಿಕ (America Airstrike) ಹಾಗೂ ವೆನೆಜುವೆಲಾದ ನಡುವೆ ಯುದ್ಧ ಪ್ರಾರಂಭವಾಗುವಂತೆ ತೋರುತ್ತಿದೆ. (Venezuela) ಶನಿವಾರ ಮುಂಜಾನೆ ವೆನೆಜುವೆಲಾದ ರಾಜಧಾನಿ ಕ್ಯಾರಕಾಸ್‌ನ ಕೆಲವು ಕಡೆ ಸ್ಫೋಟ ಸಂಭವಿಸಿದೆ. ಮಿಲಿಟರಿ ನೆಲೆಯ ಬಳಿ ದಾಳಿ ಸಂಭವಿಸಿದೆ ಎಂದು ತಿಳಿದು ಬಂದಿದೆ. ರಾಜಧಾನಿಯಲ್ಲಿ ಕನಿಷ್ಠ 7 ಸ್ಫೋಟಗಳ ಶಬ್ದಗಳು ಕೇಳಿಬಂದಿದ್ದು, ವಿಮಾನಗಳು ಕೆಳಮಟ್ಟದಲ್ಲಿ ಹಾರುತ್ತಿರುವುದು ಕಂಡುಬಂದಿದೆ. ಸದ್ಯ ದಾಳಿಗಳ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

ರಾಜಧಾನಿಯ ಹಲವಾರು ಭಾಗಗಳಲ್ಲಿ ಗುಂಡಿನ ಸದ್ದು ಕೇಳಿಬಂದಿದೆ ಎಂದು ನಿವಾಸಿಗಳು ಹೇಳಿದ್ದಾರೆ. ಈ ದಾಳಿಯನ್ನು ಅಮೆರಿಕ ಖಚಿತಪಡಿಸಿದ್ದು, ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಅವರು ವೆನೆಜುವೆಲಾದೊಳಗಿನ ಮಿಲಿಟರಿ ಸೌಲಭ್ಯಗಳು ಸೇರಿದಂತೆ ಸ್ಥಳಗಳ ಮೇಲೆ ದಾಳಿ ಮಾಡಲು ಆದೇಶಿಸಿದ್ದಾರೆ ಎಂದು ಅಮೆರಿಕದ ಅಧಿಕಾರಿಗಳು ಮಾಧ್ಯಮಗಳಿಗೆ ತಿಳಿಸಿದ್ದಾರೆ. ಕನಿಷ್ಠ 7 ದೊಡ್ಡ ಸ್ಫೋಟಗಳು ಸಂಭವಿಸಿದ್ದು ರಾಜಧಾನಿಯಲ್ಲಿ ಈಗ ವಿದ್ಯುತ್‌ ಕಡಿತಗೊಂಡಿದೆ. ಹಲವು ಯುದ್ಧ ವಿಮಾನಗಳನ್ನು ಬಳಸಿ ಅಮೆರಿಕ ಈ ದಾಳಿ ನಡೆಸಿದೆ.

ದಾಳಿ ವಿಡಿಯೋ



ವೆನೆಜುವೆಲಾದ ರಕ್ಷಣಾ ಸಚಿವ ವ್ಲಾಡಿಮಿರ್ ಪ್ಯಾಡ್ರಿನೊ ಲೋಪೆಜ್ ಅವರ ಮನೆಯನ್ನು ಗುರಿಯಾಗಿಸಿಕೊಂಡು ವೈಮಾನಿಕ ದಾಳಿ ನಡೆದಿದೆ. ರಾಜಧಾನಿ ಕ್ಯಾರಕಾಸ್‌ನ ಉತ್ತರದಲ್ಲಿರುವ ಲಾ ಗುಯಿರಾ ಬಂದರು ಮೇಲೆಯೂ ಬಾಂಬ್ ದಾಳಿ ನಡೆದಿದೆ. ದಕ್ಷಿಣ ಭಾಗದಲ್ಲಿ ಪ್ರಮುಖ ಮಿಲಿಟರಿ ನೆಲೆಯ ಬಳಿಯೂ ದಟ್ಟವಾದ ಹೊಗೆ ಕಾಣಿಸಿಕೊಂಡಿದ್ದು ಭಾರೀ ಪ್ರಮಾಣದ ಹಾನಿಯಾಗಿರುವ ಸಂಭವ ಇದೆ ಎಂದು ಹೇಳಲಾಗಿದೆ.

ದಾಳಿ ಕಾರಣವೇನು?

ಮಾದಕವಸ್ತು ಭಯೋತ್ಪಾದನೆ ಮತ್ತು ಮಾದಕವಸ್ತು ಕಳ್ಳಸಾಗಣೆಗೆ ವೆನೆಜುವೆಲಾ ಸಹಕಾರ ನೀಡುತ್ತಿದೆ ಎಂದು ಅಮೆರಿಕ ಆರೋಪಿಸುತ್ತಲೇ ಬಂದಿತ್ತು. ಅಧ್ಯಕ್ಷ ನಿಕೋಲಸ್ ಮಡುರೊ ಅವರನ್ನು ಅಧಿಕಾರದಿಂದ ಹೊರಗಿಡುವ ಪ್ರಯತ್ನಗಳ ಭಾಗವಾಗಿ, ನಿರ್ಬಂಧಗಳನ್ನು ಹೆಚ್ಚಿಸುವುದು, ಈ ಪ್ರದೇಶದಲ್ಲಿ ಮಿಲಿಟರಿ ಕಾರ್ಯಚರಣೆ ಹೆಚ್ಚಿಸುವ ಜೊತೆಗೆ ಕೆರಿಬಿಯನ್ ಮತ್ತು ಪೆಸಿಫಿಕ್‌ನಲ್ಲಿ ಮಾದಕವಸ್ತು ಕಳ್ಳಸಾಗಣೆ ಆರೋಪ ಹೊತ್ತಿರುವ ಎರಡು ಡಜನ್‌ಗೂ ಹೆಚ್ಚು ಹಡಗುಗಳನ್ನು ಗುರಿಯಾಗಿಸಿಕೊಂಡು ವೆನೆಜುವೆಲಾದಲ್ಲಿ ಕಾರ್ಯಾಚರಣೆಗಳನ್ನು ನಡೆಸುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇತ್ತೀಚೆಗೆ ಹಲವು ಬಾರಿ ಎಚ್ಚರಿಕೆ ನೀಡಿದ್ದರು. ಇದೀಗ ಅಮೆರಿಕ ಸೇನೆ ದಾಳಿ ನಡೆಸಿದೆ.