ಜೋರ್ಡಾನ್, ಮಾ. 6: ಮಧ್ಯಪ್ರಾಚ್ಯದಲ್ಲಿ (Middle East) ಹೆಚ್ಚುತ್ತಿರುವ ಸಂಘರ್ಷದ ಪರಿಣಾಮವಾಗಿ ಜೋರ್ಡಾನ್ (Jordan) ಮೊದಲಾದ ದೇಶಗಳು ದಾಳಿಗೆ ಒಳಗಾಗುತ್ತಿವೆ. ಇದರಿಂದ ವಿವಿಧ ದೇಶಗಳ ನಾಗರಿಕರು ಹಾಗೂ ಕಾರ್ಮಿಕರು ಯುದ್ಧದ ಭೀತಿಯಲ್ಲಿ ಒದ್ದಾಡುತ್ತಿದ್ದಾರೆ. ಭಾರತದ ಪ್ರಜೆಗಳು ಕೂಡ ಇದಕ್ಕೆ ಹೊರತಾಗಿಲ್ಲ. ಜೋರ್ಡಾನ್‌ನ ಅಮ್ಮನ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ, ಒಂದು ವಾರದ ಯುದ್ಧದ ನಂತರ ವಾತಾವರಣವು ಮತ್ತಷ್ಟು ಉದ್ವಿಗ್ನವಾಗಿದೆ. ಸಂಘರ್ಷ ಕಡಿಮೆಯಾಗುವ ಯಾವುದೇ ಲಕ್ಷಣ ಕಾಣುತ್ತಿಲ್ಲವಾದ್ದರಿಂದ ಉದ್ಯೋಗಿಗಳು ಮತ್ತು ಕಾರ್ಮಿಕರು ಸೇರಿದಂತೆ ಎಲ್ಲ ವರ್ಗದ ಜನರು ಆತಂಕಕ್ಕೊಳಗಾಗಿದ್ದಾರೆ. ಅಪಾಯಗಳ ಹೊರತಾಗಿಯೂ, ಅನೇಕ ಭಾರತೀಯರು ಇನ್ನೂ ಈ ಪ್ರದೇಶಕ್ಕೆ ಆಗಮಿಸುತ್ತಿದ್ದಾರೆ.
22 ವರ್ಷದ ಓಂಕಾರ್ ಭೋಸಲೆ ಎಂಬ ಮುಂಬೈ ಮೂಲದ ಯುವಕ ಉದ್ಯೋಗಕ್ಕಾಗಿ ಲೆಬನಾನ್‍ಗೆ ತೆರಳಿದ್ದವರಲ್ಲಿ ಒಬ್ಬ. ವಿಮಾನ ನಿಲ್ದಾಣದಲ್ಲಿ ಮತ್ತೊಬ್ಬ ಭಾರತೀಯರನ್ನು ಭೇಟಿಯಾದಾಗ, ವಿದೇಶಿ ನೆಲದಲ್ಲಿ ತನ್ನ ದೇಶದ ವ್ಯಕ್ತಿಯನ್ನು ಕಂಡು ಸಂತೋಷ ವ್ಯಕ್ತಪಡಿಸಿದ್ದಾನೆ. ನನಗೆ ತುಂಬಾ ಸಂತೋಷವಾಯಿತು. ನನ್ನ ಜತೆಗೆ ಒಬ್ಬ ಭಾರತೀಯ ಇದ್ದಾನೆ ಎಂದು ಅಂತಾ ಭೋಸಲೆ ಹೇಳಿದ್ದಾನೆ.
ಶ್ರೀಲಂಕಾ ಬಳಿ ಅಮೆರಿಕ ದಾಳಿ ನಡೆಸಿದ ಇರಾನಿನ ಯುದ್ಧ ನೌಕೆಯ ಸಹಾಯಕ್ಕೆ ತೆರಳಿದ ಭಾರತದ ಹಡಗು
ಯುದ್ಧ ನಡೆಯುತ್ತಿರುವ ಸಮಯದಲ್ಲೂ ಏಕೆ ಪ್ರಯಾಣ ಮಾಡಲು ನಿರ್ಧರಿಸಿದಿರಿ ಎಂಬ ಪ್ರಶ್ನೆಗೆ, ನಾನು ವಾಸ್ತವವಾಗಿ ಹಡಗಿನಲ್ಲಿ ಉದ್ಯೋಗ ಮಾಡುತ್ತೇನೆ. ಅದಕ್ಕಾಗಿ ಅಲ್ಲಿ ಸೇರಿದ್ದೇನೆ. ಅದಕ್ಕಾಗಿಯೇ ಮುಂಬೈಯಿಂದ ಇಲ್ಲಿ ಬಂದಿದ್ದೇನೆ ಎಂದು ಹೇಳಿದ್ದಾನೆ. ಮಧ್ಯಪ್ರಾಚ್ಯದಲ್ಲಿ ಪರಿಸ್ಥಿತಿ ಅಪಾಯಕಾರಿಯಾಗಿದೆ. ಹಲವು ದೇಶಗಳು ತಮ್ಮ ನಾಗರಿಕರಿಗೆ ಪ್ರಯಾಣದ ಅಪಾಯಗಳ ಬಗ್ಗೆ ಎಚ್ಚರಿಕೆ ನೀಡುತ್ತಿವೆ. ಆದರೆ ಓಂಕಾರ್ ಭೋಸಲೆ ಅವರಂತಹ ಯುವ ಕಾರ್ಮಿಕರಿಗೆ, ಹಲವು ಸಂದರ್ಭಗಳಲ್ಲಿ ಆರ್ಥಿಕ ಅಗತ್ಯಗಳು ಸುರಕ್ಷತಾ ಆತಂಕಗಳನ್ನು ಮೀರಿ ನಿಲ್ಲುತ್ತವೆ.
ಭಾರತ-ಅಮೆರಿಕ ವ್ಯಾಪಾರ ಒಪ್ಪಂದ ಅಂತಿಮ ಹಂತಕ್ಕೆ: ಅಮೆರಿಕದ ಉಪ ವಿದೇಶಾಂಗ ಕಾರ್ಯದರ್ಶಿ ಕ್ರಿಸ್ಟೋಫರ್ ಲ್ಯಾಂಡೌ
ಉದ್ಯೋಗಕ್ಕಾಗಿ ಪ್ರತಿಕೂಲ ಪರಿಸ್ಥಿತಿಯನ್ನು ಎದುರಿಸಲು ಸಿದ್ಧರಿರುವ ಭಾರತದ ಯುವಕರ ಸಾಮಾಜಿಕ ಪರಿಸ್ಥಿತಿಯನ್ನು ಅವರು ಪ್ರತಿನಿಧಿಸುತ್ತಾರೆ. ಓಂಕಾರ್ ಲೆಬನಾನ್ ಅನ್ನು ಹಿಂದೆಂದೂ ನೋಡಿಲ್ಲ ಎಂದು ಒಪ್ಪಿಕೊಂಡರು. ಕುಟುಂಬಕ್ಕೆ ಆಧಾರವಾಗುವ ಉದ್ದೇಶದಿಂದ ಅಲ್ಲಿಗೆ ತೆರಳಿದ್ದಾಗಿ ಹೇಳಿದ್ದಾರೆ. ಆತಂಕದ ನಡುವೆಯೂ ಓಂಕಾರ್‌ನಲ್ಲಿ ದೃಢನಿಶ್ಚಯವಿದೆ. ಇದು ವಿದೇಶಕ್ಕೆ ಹೋಗುವ ಎಲ್ಲ ಭಾರತೀಯರ ಮನಸ್ಥಿತಿಯನ್ನು ಪ್ರತಿಬಿಂಬಿಸಿದೆ. ಈ ಮಧ್ಯೆ ಮಧ್ಯಪ್ರಾಚ್ಯ ಬಿಕ್ಕಟ್ಟು ತೀವ್ರಗೊಳ್ಳುತ್ತಿದ್ದಂತೆ, ಭಾರತೀಯ ಅಧಿಕಾರಿಗಳು ಕೊಲ್ಲಿ ಮತ್ತು ಸಂಘರ್ಷ ವಲಯಗಳಲ್ಲಿನ ವಲಸಿಗರ ಸುರಕ್ಷತೆಯ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ.