Nikki Haley: ಭಾರತದೊಂದಿಗಿನ ಸಂಬಂಧವನ್ನು ಸುಧಾರಿಸದೇ ಇದ್ದರೆ ಅಪಾಯ- ಟ್ರಂಪ್ ಸರ್ಕಾರಕ್ಕೆ ನಿಕ್ಕಿ ಹ್ಯಾಲೆ ಎಚ್ಚರಿಕೆ
ರಷ್ಯಾದ ತೈಲ ವ್ಯಾಪಾರದ ಮೇಲೆ ನಿರ್ಬಂಧ ವಿಧಿಸಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಡಳಿತವು ಭಾರತದ ಮೇಲೆ ದಂಡನಾತ್ಮಕ ಸುಂಕಗಳನ್ನು ವಿಧಿಸುತ್ತಿದೆ. ಬೆಳೆಯುತ್ತಿರುವ ಚೀನಾದ ಜಾಗತಿಕ ಮಹತ್ವಾಕಾಂಕ್ಷೆಗಳನ್ನು ನಿಯಂತ್ರಿಸಲು ಅಮೆರಿಕ ಬಯಸುವುದಾದರೆ ಭಾರತ ಮತ್ತು ಯುಎಸ್ ನಡುವಿನ ಸಂಬಂಧಗಳನ್ನು ಸುಧಾರಿಸಿಕೊಳ್ಳುವುದು ಬಹಳ ಮುಖ್ಯ ಎಂದು ವಿಶ್ವಸಂಸ್ಥೆಯ ಮಾಜಿ ಅಮೆರಿಕದ ರಾಯಭಾರಿ (United Nations former US Ambassador) ನಿಕ್ಕಿ ಹ್ಯಾಲಿ (Nikki Haley) ಹೇಳಿದ್ದಾರೆ.


ವಾಷಿಂಗ್ಟನ್: ಚೀನಾದಂತೆ (China) ಭಾರತ (India) ಎದುರಾಳಿಯಲ್ಲ. ಭಾರತ ಅಮೂಲ್ಯವಾದ ಮುಕ್ತ ಮತ್ತು ಪ್ರಜಾಪ್ರಭುತ್ವ ಪಾಲುದಾರಂತೆ ಪರಿಗಣಿಸಬೇಕು. ರಷ್ಯಾದ ತೈಲ ವ್ಯಾಪಾರದ (Russian oil trade) ಮೇಲೆ ನಿರ್ಬಂಧ ವಿಧಿಸಲು ಭಾರತದ ಮೇಲೆ ದಂಡನಾತ್ಮಕ ಕ್ರಮ ಕೈಗೊಳ್ಳುತ್ತಿರುವುದು ಸರಿಯಲ್ಲ. ಭಾರತ ಮತ್ತು ಅಮೆರಿಕ (US-India relations) ಸಂಬಂಧಗಳು ಮುರಿಯುವ ಹಂತದಲ್ಲಿದೆ. ಹೀಗಾಗಿ ಯುಎಸ್ ಮತ್ತು ಭಾರತ ಸಂಬಂಧಗಳನ್ನು ಮತ್ತೆ ಹಳಿಗೆ ತನ್ನಿ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ವಿಶ್ವಸಂಸ್ಥೆಯ ಮಾಜಿ ಅಮೆರಿಕದ ರಾಯಭಾರಿ ನಿಕ್ಕಿ ಹ್ಯಾಲಿ (Nikki Haley) ಹೇಳಿದ್ದಾರೆ.
ಟ್ರಂಪ್ ಅವರ ಮೊದಲ ಆಡಳಿತದಲ್ಲಿ ವಿಶ್ವಸಂಸ್ಥೆಯ 29 ನೇ ಅಮೆರಿಕದ ರಾಯಭಾರಿಯಾಗಿದ್ದ ನಿಕ್ಕಿ ಹ್ಯಾಲೆ ಮಾಧ್ಯಮವೊಂದರ ಜೊತೆಗೆ ಮಾತನಾಡಿ, ರಷ್ಯಾದ ತೈಲ ವ್ಯಾಪಾರದ ಮೇಲೆ ನಿರ್ಬಂಧ ವಿಧಿಸಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಡಳಿತವು ಭಾರತದ ಮೇಲೆ ದಂಡನಾತ್ಮಕ ಸುಂಕಗಳನ್ನು ವಿಧಿಸುತ್ತಿದೆ. ಇದರಿಂದ ವಾಷಿಂಗ್ಟನ್ ಮತ್ತು ನವದೆಹಲಿ ನಡುವಿನ ಸಂಬಂಧಗಳು ಮುರಿಯುವ ಹಂತದಲ್ಲಿದೆ. ಬೆಳೆಯುತ್ತಿರುವ ಚೀನಾದ ಜಾಗತಿಕ ಮಹತ್ವಾಕಾಂಕ್ಷೆಗಳನ್ನು ನಿಯಂತ್ರಿಸಲು ಅಮೆರಿಕ ಆಶಿಸುವುದಾದರೆ ಸಂಬಂಧಗಳನ್ನು ಮತ್ತೆ ಹಳಿಗೆ ತರುವುದು ಬಹಳ ಮುಖ್ಯ ಎಂದು ಹೇಳಿದ್ದಾರೆ.
ಚೀನಾದಂತೆ ಭಾರತ ಎದುರಾಳಿಯಲ್ಲ. ಕಳೆದ ಕೆಲವು ವಾರಗಳಲ್ಲಿ ಭಾರತ ಮತ್ತು ಅಮೆರಿಕ ಸಂಬಂಧಗಳಲ್ಲಿ ಹಲವು ಘಟನೆಗಳು ನಡೆದಿವೆ. ಟ್ರಂಪ್ ಆಡಳಿತವು ಭಾರತದ ಮೇಲೆ ವಿಧಿಸಿರುವ ಶೇ. 25ರಷ್ಟು ಸುಂಕದ ಜೊತೆಗೆ ರಷ್ಯಾದ ತೈಲ ಖರೀದಿಗೆ ಶೇ. 25 ರಷ್ಟು ಸುಂಕ ವಿಧಿಸಿತು. ಇದರ ಬಳಿಕ ಭಾರತ ಮತ್ತು ಪಾಕಿಸ್ತಾನ ಕದನ ವಿರಾಮ ಮಾತುಕತೆಗಳಲ್ಲಿ ಅಮೆರಿಕದ ಪಾತ್ರವನ್ನು ಒಪ್ಪಿಕೊಳ್ಳಲು ನವದೆಹಲಿ ನಿರಾಕರಿಸಿದೆ. ಇದು ಹೆಚ್ಚುತ್ತಿರುವ ಉದ್ವಿಗ್ನತೆಯನ್ನು ಪ್ರತಿಬಿಂಬಿಸಿದೆ ಎಂದು ಅವರು ತಿಳಿಸಿದ್ದಾರೆ.
ವಿದೇಶಾಂಗ ನೀತಿಯ ಗುರಿಗಳನ್ನು ಸಾಧಿಸಲು ಟ್ರಂಪ್ ಆಡಳಿತವು ಚೀನಾವನ್ನು ಸೋಲಿಸುವುದು ಮತ್ತು ಬಲದ ಮೂಲಕ ಶಾಂತಿಯನ್ನು ಸಾಧಿಸುವುದು ಮುಖ್ಯ. ಇದಕ್ಕಾಗಿ ಯುಎಸ್ ಮತ್ತು ಭಾರತದ ನಡುವಿನ ಸಂಬಂಧಗಳನ್ನು ಮತ್ತೆ ಹಳಿಗೆ ತರುವುದು ಹೆಚ್ಚು ನಿರ್ಣಾಯಕವಾಗಿವೆ ಎಂದು ಅವರು ಹೇಳಿದ್ದಾರೆ.
ಭಾರತವನ್ನು ಅಮೂಲ್ಯವಾದ ಮುಕ್ತ ಮತ್ತು ಪ್ರಜಾಪ್ರಭುತ್ವ ಪಾಲುದಾರನಂತೆ ಪರಿಗಣಿಸಬೇಕು. ಅದು ಮಾಸ್ಕೋದ ಅತಿದೊಡ್ಡ ಗ್ರಾಹಕರಲ್ಲಿ ಒಂದಾಗಿದ್ದರೂ ಕೂಡ ಅದು ಚೀನಾದಂತೆ ರಷ್ಯಾದ ತೈಲ ಖರೀದಿಗೆ ನಿರ್ಬಂಧಗಳನ್ನು ತಪ್ಪಿಸಿಲ್ಲ ಎಂದು ಹೇಳಿದರು. ಏಷ್ಯಾದಲ್ಲಿ ಚೀನಾಕ್ಕೆ ಪ್ರಬಲ ಸ್ಪರ್ಧೆಯನ್ನು ಒಡ್ಡಬಲ್ಲ ಏಕೈಕ ದೇಶದೊಂದಿಗೆ ಸಂಬಂಧವನ್ನು ಕಡಿತಗೊಳಿಸುವುದು ಅಪಾಯಕಾರಿ ಎಂದು ಅವರು ಎಚ್ಚರಿಸಿದ್ದಾರೆ.
ಜವಳಿ, ಅಗ್ಗದ ಫೋನ್, ಸೌರ ಫಲಕಗಳಂತಹ ತ್ವರಿತವಾಗಿ ಉತ್ಪಾದಿಸಲಾಗದ ಉತ್ಪನ್ನಗಳನ್ನು ಚೀನಾದಂತಹ ಪ್ರಮಾಣದಲ್ಲಿ ಉತ್ಪಾದಿಸುವ ಸಾಮರ್ಥ್ಯದಲ್ಲಿ ಭಾರತ ಈಗ ಏಕಾಂಗಿಯಾಗಿದೆ. ಇಸ್ರೇಲ್ ಸೇರಿದಂತೆ ವಾಷಿಂಗ್ಟನ್‌ನ ಮಿತ್ರರಾಷ್ಟ್ರಗಳೊಂದಿಗೆ ನವದೆಹಲಿಯ ವಿಸ್ತರಿಸುತ್ತಿರುವ ಮಿಲಿಟರಿ ಸಂಬಂಧಗಳು ಭಾರತವನ್ನು ಅಮೆರಿಕದ ರಕ್ಷಣಾ ಉಪಕರಣಗಳಿಗೆ ನಿರ್ಣಾಯಕ ಮಾರುಕಟ್ಟೆಯನ್ನಾಗಿ ಮಾಡುವುದಲ್ಲದೆ ಮುಕ್ತ ಪ್ರಪಂಚದ ಭದ್ರತೆಗೆ ಆಸ್ತಿಯನ್ನಾಗಿಯೂ ಮಾಡುತ್ತದೆ ಎಂದು ಅವರು ಹೇಳಿದ್ದಾರೆ.
ಇನ್ನು ಮಧ್ಯಪ್ರಾಚ್ಯದಲ್ಲಿ ಭಾರತದ ಬೆಳೆಯುತ್ತಿರುವ ಪ್ರಭಾವ ಮತ್ತು ಭದ್ರತಾ ಒಳಗೊಳ್ಳುವಿಕೆಯ ಬಗ್ಗೆಯೂ ಮಾತನಾಡಿರುವ ಅವರು, ಪ್ರಮುಖ ಸಂಘರ್ಷದ ಸಂದರ್ಭದಲ್ಲಿ ಬೀಜಿಂಗ್‌ನ ಆಯ್ಕೆಗಳನ್ನು ಭಾರತ ಮಾತ್ರ ಸಂಕೀರ್ಣಗೊಳಿಸಲು ಸಾಧ್ಯ ಎಂದು ಹೇಳಿದರು. ಭಾರತವು ವಿಶ್ವದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ರಾಷ್ಟ್ರವಾಗಿದೆ. ಇಲ್ಲಿ ಚೀನಾದ ಬಳಿಕ ಅತ್ಯಂತ ಮಹತ್ವದ ಭೌಗೋಳಿಕ, ರಾಜಕೀಯ ಅಂಶಗಳಿವೆ. ಜಾಗತಿಕವಾಗಿ ಚೀನಾದ ಗುರಿಗೆ ಇದು ದೊಡ್ಡ ತಡೆಯಾಗಿದೆ ಎಂದು ಅವರು ತಿಳಿಸಿದ್ದಾರೆ.
ಇದನ್ನೂ ಓದಿ: CM Siddaramaiah: ಮೈಸೂರು ದಸರಾದಲ್ಲಿ ಏರ್ ಶೋಗೆ ರಕ್ಷಣಾ ಇಲಾಖೆ ಅಸ್ತು, ಧನ್ಯವಾದ ಸಲ್ಲಿಸಿದ ಸಿಎಂ
ಕಮ್ಯುನಿಸ್ಟ್ ನಿಯಂತ್ರಿತ ಚೀನಾಕ್ಕಿಂತ ಭಿನ್ನವಾಗಿ ಪ್ರಜಾಪ್ರಭುತ್ವ ಭಾರತದ ಉದಯವು ಮುಕ್ತ ಜಗತ್ತಿಗೆ ಬೆದರಿಕೆ ಹಾಕುವುದಿಲ್ಲ ಎಂದು ಅವರು ತಿಳಿಸಿದ್ದಾರೆ.