ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Norovirus: ಐಷಾರಾಮಿ ಹಡಗಿನಲ್ಲಿದ್ದ ನೂರಾರು ಜನರ ಪ್ರಾಣಕ್ಕೆ ಸಂಚಕಾರ- ಅಷ್ಟಕ್ಕೂ ಆಗಿದ್ದೇನು?

Norovirus: ಕುನಾರ್ಡ್ ಲೈನ್ಸ್‌ ಕ್ವೀನ್ ಮೇರಿ 2 ಎಂದು ಕರೆಯಲ್ಪಡುವ ಐಶಾರಾಮಿ ಹಡಗಿನಲ್ಲಿ ಅಪಾಯಕಾರಿ ವೈರಸ್‌(Norovirus) ಏಕಾಏಕಿ ಹಬ್ಬಿ ಆತಂಕ ಸೃಷ್ಟಿಸಿದೆ.224 ಪ್ರಯಾಣಿಕರು ಮತ್ತು 17 ಸಿಬ್ಬಂದಿ ವೈರಸ್‌ನಿಂದಾಗಿ ಅಸ್ವಸ್ಥಗೊಂಡಿದ್ದಾರೆ. ಈ ಹಡಗಿನಲ್ಲಿ ಒಟ್ಟು 2,538 ಪ್ರಯಾಣಿಕರು ಮತ್ತು 1,232 ಸಿಬ್ಬಂದಿ ಪ್ರಯಾಣಿಸುತ್ತಿದ್ದರು.

ಪ್ರಾಣಭೀತಿಯಲ್ಲಿ ಐಷಾರಾಮಿ ಹಡಗಿನಲ್ಲಿರೋ ನೂರಾರು ಜನ

Profile Rakshita Karkera Apr 2, 2025 1:02 PM

ವಾಷಿಂಗ್ಟನ್‌: ಕುನಾರ್ಡ್ ಲೈನ್ಸ್‌ ಕ್ವೀನ್ ಮೇರಿ 2 ಎಂದು ಕರೆಯಲ್ಪಡುವ ಐಶಾರಾಮಿ ಹಡಗಿನಲ್ಲಿ ಅಪಾಯಕಾರಿ ವೈರಸ್‌(Norovirus) ಏಕಾಏಕಿ ಹಬ್ಬಿ ಆತಂಕ ಸೃಷ್ಟಿಸಿದೆ. ಆ ಹಡಗಿನಲ್ಲಿ ಪ್ರಯಾಣಿಸುತ್ತಿದ್ದ ಸುಮಾರು 200ಕ್ಕೂ ಹೆಚ್ಚು ಪ್ರಯಾಣಿಕರು ಮತ್ತು ಸಿಬ್ಬಂದಿಗಳು ತೀವ್ರವಾಗಿ ಅನ್ವಸ್ಥಗೊಂಡು ಅಸ್ಪತ್ರೆಗೆ ದಾಖಲಾಗಿದ್ದು, ಅದರಲ್ಲೂ ಕೆಲವರ ಸ್ಥಿತಿ ಗಂಭೀರವಾಗಿದೆ. ಅಮೆರಿಕದ ಸೆಂಟರ್ ಫಾರ್ ಡಿಸೀಸ್ ಕಂಟ್ರೋಲ್ ಅಂಡ್ ಪ್ರಿವೆನ್ಷನ್ ಪ್ರಕಾರ, ಪ್ರಯಾಣಿಕರು ಮತ್ತು ಸಿಬ್ಬಂದಿ ನೊರೊವೈರಸ್ ಹರಡುವಿಕೆಯಿಂದ ಅಸ್ವಸ್ಥರಾಗಿದ್ದು, ಹೆಚ್ಚಿನವರಲ್ಲಿ ಅತಿಸಾರ ಮತ್ತು ವಾಂತಿ ಸೇರಿ ಇತರೆ ಕೆಲವು ರೋಗಲಕ್ಷಣಗಳು ಕಂಡುಬಂದಿವೆ. ಈ ಕ್ರೂಸ್ ಹಡಗು ಇಂಗ್ಲೆಂಡ್‌ನಿಂದ ಪೂರ್ವ ಕೆರಿಬಿಯನ್‌ಗೆ ಹೋಗುತ್ತಿತ್ತು ಎಂದು ದಿ ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿದೆ.

224 ಪ್ರಯಾಣಿಕರು ಮತ್ತು 17 ಸಿಬ್ಬಂದಿ ವೈರಸ್‌ನಿಂದಾಗಿ ಅಸ್ವಸ್ಥಗೊಂಡಿದ್ದಾರೆ. ಈ ಹಡಗಿನಲ್ಲಿ ಒಟ್ಟು 2,538 ಪ್ರಯಾಣಿಕರು ಮತ್ತು 1,232 ಸಿಬ್ಬಂದಿ ಪ್ರಯಾಣಿಸುತ್ತಿದ್ದರು. ಕ್ರೂಸ್ ಮ್ಯಾಪರ್ ಎಂಬ ಟ್ರ್ಯಾಕಿಂಗ್ ಸೈಟ್ ಪ್ರಕಾರ, ಮಾರ್ಚ್ 18 ರಂದು ನ್ಯೂಯಾರ್ಕ್‌ನಲ್ಲಿ ಕ್ರೂಸ್ ನಿಂತಾಗ ಈ ಸೋಂಕು ಹರಡಿದೆ.

ವೈರಸ್‌ ಹರಡುವಿಕೆ ಪತ್ತೆಯಾದ ತಕ್ಷಣವೇ ಅದನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸಿಗಿದ್ದು, ಅಸ್ವಸ್ಥಗೊಂಡವರನ್ನು ತೀವ್ರ ನಿಗಾ ಘಟಕದಲ್ಲಿ ಇರಿಸಲಾಗಿದೆ. “ಸಿಬ್ಬಂದಿ ತ್ವರಿತವಾಗಿ ಪ್ರತಿಕ್ರಿಯಿಸಿದ್ದು, ಹಾಗೂ ನಾವು ಹೆಚ್ಚುವರಿ ಕ್ರಮಗಳನ್ನು ಕೈಗೊಂಡಿದ್ದರಿಂದ ದೊಡ್ಡ ಅನಾಹುತ ತಪ್ಪಿದೆ. ಈಗಾಗಲೇ ಹಲವರು ಅಪಾಯದಿಂದ ಪಾರಾಗಿದ್ದಾರೆ ಮತ್ತು ಕೆಲವರು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ” ಎಂದು ಹಡಗಿನ ಮಾಲೀಕ ಸಂಸ್ಥೆ ಕುನಾರ್ಡ್‌ ಮಂಗಳವಾರ ಹೇಳಿದೆ.

ಕ್ರೂಸ್ ಎಲ್ಲೆಲ್ಲಿ ಸಂಚರಿಸಿತ್ತು?

ಕ್ರೂಸ್ ಮ್ಯಾಪರ್ ಪ್ರಕಾರ, ಈಗ ವಾಯುವ್ಯ ಅಟ್ಲಾಂಟಿಕ್ ಸಾಗರದಲ್ಲಿ ಸಾಗುತ್ತಿರುವ ಕ್ವೀನ್ ಮೇರಿ 2, ಸೌತಾಂಪ್ಟನ್‌ಗೆ ಹೋಗುವ ಮಾರ್ಗದಲ್ಲಿದೆ. ಇದು ಮಾರ್ಚ್ 8ರಂದು ಸೌತಾಂಪ್ಟನ್‌ನಿಂದ ಹೊರಟು ಪೂರ್ವ ಕೆರಿಬಿಯನ್‌ಗೆ 29 ದಿನಗಳ ರೌಂಡ್-ಟ್ರಿಪ್ ಕೈಗೊಂಡಿದ್ದು, ಈ ಪ್ರಯಾಣ ಏಪ್ರಿಲ್ 6 ರಂದು ಮುಕ್ತಾಯಗೊಳ್ಳಲಿದೆ. ಪ್ರಯಾಣ ಅಂತ್ಯಗೊಳ್ಳಲು ಕೆಲವೇ ದಿನಗಳು ಬಾಕಿ ಇರುವಾಗ ವೈರಸ್‌ ಹಬ್ಬಿದ ಆತಂಕಕಾರಿ ಘಟನೆ ನಡೆದಿದೆ.

ಮಾರ್ಚ್ 15 ರಂದು ಕ್ರೂಸ್ ನ್ಯೂಯಾರ್ಕ್‌ನಲ್ಲಿ ಮೊದಲ ಬಾರಿ ನಿಂತಿದ್ದು, ಈ ವೇಳೆ ವೈರಸ್‌ ಹಬ್ಬಿರುವುದು ಪತ್ತೆಯಾಗಿದೆ. ಈ ಕ್ರೂಸ್ ಸೇಂಟ್ ಲೂಸಿಯಾ ದ್ವೀಪ, ಬಾರ್ಬಡೋಸ್ ಮತ್ತು ಡೊಮಿನಿಕಾ ಸೇರಿದಂತೆ ಇತರ ಸ್ಥಳಗಳಲ್ಲಿಯೂ ‌ಲಂಗರು ಹಾಕಿತ್ತು ಎಂದು ಕ್ರೂಸ್ ಮ್ಯಾಪರ್ ಮಾಹಿತಿ ನೀಡಿದೆ.

ಈ ಸುದ್ದಿಯನ್ನೂ ಓದಿ: FPV virus: ರಾಜ್ಯಕ್ಕೆ ಕಾಲಿಟ್ಟ ಮತ್ತೊಂದು ಮಾರಕ ವೈರಸ್‌, ಬೆಕ್ಕು ಸಾಕುವವರೇ ಹುಷಾರ್!

ನೊರೊವೈರಸ್ ಎಂದರೇನು?

ನೊರೊವೈರಸ್ ವಾಂತಿ ಮತ್ತು ಅತಿಸಾರವನ್ನು ಉಂಟುಮಾಡುವ ಜಠರಗರುಳಿನ ಕಾಯಿಲೆಯಾಗಿದ್ದು, ವೇಗವಾಗಿ ಹರಡುತ್ತದೆ. ಸಿಡಿಸಿ ಪ್ರಕಾರ, ಇದು ತೀವ್ರವಾದ ಜಠರದ ಉರಿತಕ್ಕೆ ಕಾರಣವಾಗುತ್ತದೆ. ಅಬಾಲವೃದ್ಧರವರೆಗೂ ಈ ಸೋಂಕು ಬಾಧಿಸುತ್ತದೆ. ಇದು ನೇರ ಸಂಪರ್ಕದ ಮೂಲಕ, ಕಲುಷಿತ ಆಹಾರ ಅಥವಾ ಪಾನೀಯ ಸೇವಿಸಿದರೆ, ಸೋಂಕಿಗೆ ಒಳಗಾದ ಸ್ಥಳಗಳನ್ನು ಸ್ಪರ್ಶಿಸಿದರೆ ಒಬ್ಬರಿಂದ ಇನ್ನೊಬ್ಬರಿಗೆ ಹರಡುತ್ತದೆ. ವೈರಸ್‌ನಿಂದ ಅಸ್ವಸ್ಥರಾದವರ ಆರೋಗ್ಯ ಎರಡು ಮೂರು ದಿನಗಳಲ್ಲಿ ಸುಧಾರಿಸಿದರೂ, ವೈರಸ್‌ ಅವರ ದೇಹದಲ್ಲಿಯೇ ಇರುತ್ತದೆ. ಹೀಗಾಗಿ ಮುಂದಿನ ಎರಡು ವಾರಗಳ ಕಾಲ ಅವರೊಂದಿಗೆ ನೇರ ಸಂಪರ್ಕ ಹೊಂದಿದವರಿಗೆ ಈ ಸೋಂಕು ಹರಡುವ ಸಾಧ್ಯತೆಗಳು ಹೆಚ್ಚು.

ನೊರೊವೈರಸ್ ತಡೆಗಟ್ಟಲು, ಆಗಾಗ್ಗೆ ಕೈ ತೊಳೆಯಬೇಕು, ಹಣ್ಣುಗಳು ಮತ್ತು ತರಕಾರಿಗಳನ್ನು ತೊಳೆಯಬೇಕು ಮತ್ತು ಚೆನ್ನಾಗಿ ಬೇಯಿಸಿದ ಆಹಾರ ಸೇವಿಸಬೇಕು. ಕಲುಷಿತಗೊಂಡ ಸ್ಥಳಗಳನ್ನು ಸ್ವಚ್ಛಗೊಳಿಸಬೇಕು, ಬಿಸಿ ನೀರಿನಲ್ಲಿ ಬಟ್ಟೆ ತೊಳೆಯಬೇಕು ಮತ್ತು ಆರೋಗ್ಯ ಸುಧಾರಿಸಿದ ಬಳಿಕವೂ ಎರಡು ದಿನಗಳವರೆಗೆ ಮನೆಯೊಳಗೇ ಇರಬೇಕು.