ಐಪಿಎಲ್​ ಸುನಿತಾ ವಿಲಿಯಮ್ಸ್​ ವಿದೇಶ ಫ್ಯಾಷನ್​ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

FPV virus: ರಾಜ್ಯಕ್ಕೆ ಕಾಲಿಟ್ಟ ಮತ್ತೊಂದು ಮಾರಕ ವೈರಸ್‌, ಬೆಕ್ಕು ಸಾಕುವವರೇ ಹುಷಾರ್!

ರಾಯಚೂರಿನಲ್ಲಿ ಮೊದಲಾಗಿ ಕಂಡುಬಂದಿರುವ ಈ ವೈರಸ್‌ ಹಕ್ಕಿಜ್ವರದಂತೆಯೇ ರಾಜ್ಯದ ಇತರ ಕಡೆಗಳಿಗೆ ಹಬ್ಬುವ ಸೂಚನೆ ತೋರಿಸಿದೆ. ಹೀಗಾಗಿ ಮನೆಗಳಲ್ಲಿ ಬೆಕ್ಕು ಸಾಕುತ್ತಿರುವವರು ಸಾಕಷ್ಟು ಎಚ್ಚರಿಕೆ ವಹಿಸುವಂತೆ ಸೂಚನೆ ನೀಡಲಾಗಿದೆ. ಸೋಂಕಿನಿಂದಾಗಿ ರಾಯಚೂರು ಜಿಲ್ಲೆಯಲ್ಲಿ ಬೆಕ್ಕುಗಳು ಸಾವನ್ನಪ್ಪುತ್ತಿವೆ.

ರಾಜ್ಯಕ್ಕೆ ಕಾಲಿಟ್ಟ ಮತ್ತೊಂದು ಮಾರಕ ವೈರಸ್‌, ಬೆಕ್ಕು ಸಾಕುವವರೇ ಹುಷಾರ್!

ಸಾಂದರ್ಭಿಕ ಚಿತ್ರ

ಹರೀಶ್‌ ಕೇರ ಹರೀಶ್‌ ಕೇರ Mar 25, 2025 1:28 PM

ರಾಯಚೂರು: ಹಕ್ಕಿ ಜ್ವರದ (Bird Flu) ಆತಂಕದಿಂದ ಚೇತರಿಸಿಕೊಳ್ಳುತ್ತಿರುವ ರಾಜ್ಯಕ್ಕೆ ಮತ್ತೊಂದು ವೈರಸ್‌ ಇದೀಗ ಶಾಕ್‌ ನೀಡಲು ಬಂದಿದೆ. ರಾಯಚೂರಿನಲ್ಲಿ (raichuru news) ಬೆಕ್ಕುಗಳಿಗೆ ಮಾರಣಾಂತಿಕ ಫೆಲೈನ್ ಪ್ಯಾನ್​ಲ್ಯೂಕೊಪೇನಿಯಾ ವೈರಸ್ (Feline Panleukopenia Virus- FPV virus) ದೃಢಪಟ್ಟಿದ್ದು, 100ಕ್ಕೂ ಬೆಕ್ಕುಗಳು ಹೊಸ ವೈರಸ್‌ಗೆ ಬಲಿಯಾಗಿವೆ. ಇದರಿಂದ ಸಾರ್ವಜನಿಕರಲ್ಲಿ ಆತಂಕ ಸೃಷ್ಟಿಯಾಗಿದೆ. ಬೆಕ್ಕುಗಳನ್ನು ಕಾಡುವ ಅಥವಾ ಪೆಟ್​ಗಳಿಗೆ ವಕ್ಕರಿಸಿರುವ ಈ ವೈರಸ್‌ನಿಂದ ಪ್ರಾಣಿಪ್ರಿಯರು ಕಂಗಾಲಾಗಿದ್ದಾರೆ.

ರಾಯಚೂರಿನಲ್ಲಿ ಮೊದಲಾಗಿ ಕಂಡುಬಂದಿರುವ ಈ ವೈರಸ್‌ ಹಕ್ಕಿಜ್ವರದಂತೆಯೇ ರಾಜ್ಯದ ಇತರ ಕಡೆಗಳಿಗೆ ಹಬ್ಬುವ ಸೂಚನೆ ತೋರಿಸಿದೆ. ಹೀಗಾಗಿ ಮನೆಗಳಲ್ಲಿ ಬೆಕ್ಕು ಸಾಕುತ್ತಿರುವವರು ಸಾಕಷ್ಟು ಎಚ್ಚರಿಕೆ ವಹಿಸುವಂತೆ ಸೂಚನೆ ನೀಡಲಾಗಿದೆ. ಸೋಂಕಿನಿಂದಾಗಿ ರಾಯಚೂರು ಜಿಲ್ಲೆಯಲ್ಲಿ ಬೆಕ್ಕುಗಳು ಸಾವನ್ನಪ್ಪುತ್ತಿವೆ. ರಾಯಚೂರಿನಲ್ಲಿ ಕಳೆದ ಒಂದು ತಿಂಗಳಲ್ಲಿ 100ಕ್ಕೂ ಹೆಚ್ಚು ಬೆಕ್ಕುಗಳಲ್ಲಿ ಈ ವೈರಾಣು ಪತ್ತೆಯಾಗಿದೆ. ವೈರಸ್ ಸೋಂಕು ತಗುಲಿದಲ್ಲಿ ಬೆಕ್ಕುಗಳು ಬದುಕುಳಿಯುವ ಸಾಧ್ಯತೆ ತೀರಾ ಕಡಿಮೆ ಎನ್ನಲಾಗಿದೆ. ಸೋಂಕು ತಗುಲಿದೆ 100 ಬೆಕ್ಕುಗಳಲ್ಲಿ 99 ಸಾವನ್ನಪ್ಪುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

ಇದು ಕೇವಲ ಬೆಕ್ಕುಗಳಲ್ಲಿ ಮಾತ್ರ ಕಂಡುಬರುವ ಸಾಂಕ್ರಾಮಿಕ ರೋಗ ಎಂದು ರಾಯಚೂರಿನ ಪಶುವೈದ್ಯರು ಹೇಳುತ್ತಾರೆ. ಎಫ್​ಪಿವಿ ಬೆಕ್ಕುಗಳಿಗೆ ಮಾರಣಾಂತಿಕ ಸೋಂಕು ಅಗಿರುವುದರಿಂದ ಬೆಕ್ಕು ಸಾಕಿರುವವರು ಹತ್ತಿರದ ಪಶುವೈದ್ಯಕೀಯ ಅಸ್ಪತ್ರೆಗೆ ಅದನ್ನು ಕರೆದೊಯ್ದು ಚೆಕಪ್ ಮಾಡಿಸುವುದು ಒಳಿತು. ನಾಯಿ ಹಾಗೂ ಬೆಕ್ಕುಗಳನ್ನು ಜೊತೆಯಾಗಿ ಸಾಕುತ್ತಿರುವವರು ಕೂಡ ಎಚ್ಚರವಾಗಿರಬೇಕು.

ಬಿಡದಿ ರೈಲ್ವೆ ನಿಲ್ದಾಣಕ್ಕೆ ಬಾಂಬ್‌ ಬೆದರಿಕೆ

ರಾಮನಗರ : ರಾಮನಗರ ಜಿಲ್ಲೆಯ ಬಿಡದಿ ರೈಲ್ವೆ ನಿಲ್ದಾಣಕ್ಕೆ ಬಾಂಬ್ ಬೆದರಿಕೆ (Bomb Threat) ಕರೆ ಬಂದಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪಾಕ್ ಪರ ಗೋಡೆ ಬರಹ ಬರೆದಿದ್ದ ಹಿನ್ನೆಲೆಯಲ್ಲಿ ರೈಲು ನಿಲ್ದಾಣವನ್ನು (Railway Station) ಬಾಂಬ್‌ನಿಂದ ಸ್ಫೋಟಿಸುವುದಾಗಿ ದುಷ್ಕರ್ಮಿಗಳು ದೂರವಾಣಿ ಕರೆ ಮಾಡಿ ಬೆದರಿಕೆ ಹಾಕಿದ್ದಾರೆ. ಈ ಹಿನ್ನೆಲೆಯಲ್ಲಿ ಬಾಂಬ್ ನಿಷ್ಕ್ರಿಯದಳ, ಶ್ವಾನ ದಳ ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿವೆ. ಮೇಲ್ನೋಟಕ್ಕೆ ಇದೊಂದು ಹುಸಿ ಬಾಂಬ್‌ (Bomb Hoax) ಬೆದರಿಕೆ ಎಂಬಂತೆ ಕಂಡು ಬಂದಿದ್ದರೂ, ಪೊಲೀಸರು ಸಮಗ್ರ ಪರಿಶೀಲನೆ ನಡೆಸಲು ಮುಂದಾಗಿದ್ದಾರೆ.

ಬಾಂಬ್ ಬೆದರಿಕೆ ಕರೆ ಬಂದಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ರೈಲ್ವೆ ಅಧಿಕಾರಿಗಳು ಹಾಗೂ ರಾಮನಗರ ಪೊಲೀಸರು ಮೆಟಲ್‌ ಡಿಟೆಕ್ಟರ್ ಮೂಲಕ ಬಿಡದಿ ರೈಲ್ವೆ ನಿಲ್ದಾಣದಲ್ಲಿ ಪರಿಶೀಲನೆ ನಡೆಸಿದ್ದಾರೆ. ಈ ಹಿನ್ನೆಲೆಯಲ್ಲಿ ಮೈಸೂರು ಹಾಗೂ ಬೆಂಗಳೂರು ನಡುವಿನ ಎಲ್ಲ ರೈಲು ನಿಲ್ದಾಣಗಳಲ್ಲೂ ಹೆಚ್ಚಿನ ಎಚ್ಚರಿಕೆ ವಹಿಸಲಾಗಿದೆ. ಎಲ್ಲ ಪ್ರಯಾಣಿಕರ ಹೆಚ್ಚಿನ ತಪಾಸಣೆ ಹಾಗೂ ನಿಗಾ ವಹಿಸಲು ರೈಲ್ವೆ ಅಧಿಕಾರಿಗಳು ಸೂಚನೆ ನೀಡಿದ್ದಾರೆ. ನಿಲ್ದಾಣಗಳ ಆಸುಪಾಸಿನಲ್ಲೂ ಪೊಲೀಸ್‌ ಗಸ್ತು ಹಾಕಲು ಸೂಚನೆ ನೀಡಲಾಗಿದೆ.

ಇದನ್ನೂ ಓದಿ: HMPV Virus: ಲಗ್ಗೆ ಇಟ್ಟಾಯ್ತು ಮತ್ತೊಂದು ಚೀನಾ ವೈರಸ್! ಈ ಹೊಸ ಕಾಯಿಲೆಯ ರೋಗ ಲಕ್ಷಣಗಳೇನು?