ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ನೇಪಾಳದಲ್ಲಿ ಭೀಕರ ಹೆಲಿಕಾಪ್ಟರ್ ಮುಖಾಮುಖಿ ಡಿಕ್ಕಿ: ಓರ್ವ ಪ್ರವಾಸಿಗ ಸಾವು, ಮತ್ತೊಬ್ಬರಿಗೆ ಗಾಯ

ನೇಪಾಳದ ಮೌಂಟ್ ಎವರೆಸ್ಟ್ ಬೇಸ್ ಕ್ಯಾಂಪ್ ಬಳಿಯ ಸೋಲುಖುಂಬು ಜಿಲ್ಲೆಯ ಫೆರಿಚೆ ಹೆಲಿಪ್ಯಾಡ್‌ನಲ್ಲಿ ಇಂದು ಮುಂಜಾನೆ ಎರಡು ಹೆಲಿಕಾಪ್ಟರ್‌ಗಳು ಪರಸ್ಪರ ಡಿಕ್ಕಿ ಹೊಡೆದ ಪರಿಣಾಮ ಓರ್ವ ವಿದೇಶಿ ಪ್ರವಾಸಿಗ ಸಾವನ್ನಪ್ಪಿದ್ದು, ಮತ್ತೊಬ್ಬರು ಗಾಯಗೊಂಡಿರುವ ಭೀಕರ ದುರ್ಘಟನೆ ಸಂಭವಿಸಿದೆ.

ನೇಪಾಳದಲ್ಲಿ ಭೀಕರ ಹೆಲಿಕಾಪ್ಟರ್ ಮುಖಾಮುಖಿ ಡಿಕ್ಕಿ

ಕಠ್ಮಂಡು: ನೇಪಾಳದ ಮೌಂಟ್ ಎವರೆಸ್ಟ್ ಬೇಸ್ ಕ್ಯಾಂಪ್ ಬಳಿಯ ಸೋಲುಖುಂಬು ಜಿಲ್ಲೆಯ ಫೆರಿಚೆ ಹೆಲಿಪ್ಯಾಡ್‌ನಲ್ಲಿ ಇಂದು ಮುಂಜಾನೆ ಎರಡು ಹೆಲಿಕಾಪ್ಟರ್‌ಗಳು ಪರಸ್ಪರ ಡಿಕ್ಕಿ (Helicopter Crash) ಹೊಡೆದ ಪರಿಣಾಮ ಓರ್ವ ವಿದೇಶಿ ಪ್ರವಾಸಿಗ ಸಾವನ್ನಪ್ಪಿದ್ದು, ಮತ್ತೊಬ್ಬರು ಗಾಯಗೊಂಡಿರುವ ಭೀಕರ ದುರ್ಘಟನೆ ಸಂಭವಿಸಿದೆ. ಮಂಗಳವಾರ ಬೆಳಿಗ್ಗೆ ಸುಮಾರು 8:15ರ ಸುಮಾರಿಗೆ ಈ ಘಟನೆ ಸಂಭವಿಸಿದೆ. ಅಪಘಾತದ ಕುರಿತು ನಾಗರಿಕ ವಿಮಾನಯಾನ ಪ್ರಾಧಿಕಾರ ಮಾಹಿತಿ ನೀಡಿದೆ.

ಸ್ಥಳೀಯ ಮಾಧ್ಯಮಗಳ ವರದಿ ಪ್ರಕಾರ, 'ಫಿಶ್ ಟೇಲ್ ಏರ್' (Fishtail Air) ಮತ್ತು 'ಏರ್ ಡೈನಾಸ್ಟಿ' (Air Dynasty) ಸಂಸ್ಥೆಗಳಿಗೆ ಸೇರಿದ ಎರಡು ಹೆಲಿಕಾಪ್ಟರ್‌ಗಳು ಏಕಕಾಲದಲ್ಲಿ ಹೆಲಿಪ್ಯಾಡ್‌ನಲ್ಲಿ ಇಳಿಯಲು ಪ್ರಯತ್ನಿಸುತ್ತಿದ್ದವು. ಈ ಪ್ರಕ್ರಿಯೆಯಲ್ಲಿದ್ದಾಗ ಎರಡು ಹೆಲಿಕಾಪ್ಟರ್‌ಗಳ ಮುಖ್ಯ ರೆಕ್ಕೆಗಳು ಅತ್ಯಂತ ವೇಗವಾಗಿ ಪರಸ್ಪರ ಬಡಿದುಕೊಂಡಿವೆ. ರೆಕ್ಕೆಗಳು ಜಖಂಗೊಳ್ಳುತ್ತಿದ್ದಂತೆ ನಿಯಂತ್ರಣ ತಪ್ಪಿದ ಹೆಲಿಕಾಪ್ಟರ್‌ಗಳು ಹೆಲಿಪ್ಯಾಡ್‌ನಲ್ಲೇ ಪತನಗೊಂಡಿವೆ. ಈ ಇಡೀ ರೋಮಾಂಚಕ ಹಾಗೂ ಭೀಕರ ದೃಶ್ಯವು ಸ್ಥಳೀಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ವಿಡಿಯೋ ನೋಡಿ



ಅಪಘಾತದ ತೀವ್ರತೆಗೆ ಫಿಶ್ ಟೇಲ್ ಏರ್ ಹೆಲಿಕಾಪ್ಟರ್‌ನಲ್ಲಿದ್ದ ಓರ್ವ ವಿದೇಶಿ ಪ್ರವಾಸಿಗ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ. ಮೃತರ ರಾಷ್ಟ್ರೀಯತೆ ಮತ್ತು ಗುರುತನ್ನು ಪತ್ತೆಹಚ್ಚುವ ಕಾರ್ಯ ಪ್ರಸ್ತುತ ಜಾರಿಯಲ್ಲಿದೆ ಎಂದು ಸೋಲುಖುಂಬು ಜಿಲ್ಲಾ ಪೊಲೀಸ್ ಕಚೇರಿಯ ಡಿಎಸ್‌ಪಿ ನಬೀನ್‌ರಾಜ್ ಬುಢಾತೋಕಿ ತಿಳಿಸಿದ್ದಾರೆ. ಮೃತದೇಹವನ್ನು ಹೆಲಿಕಾಪ್ಟರ್ ಮೂಲಕ ಲುಕ್ಲಾ ಪ್ರದೇಶಕ್ಕೆ ಸಾಗಿಸಲಾಗಿದೆ.

ಅರ್ನಾಬ್ ಚಂಡಮಾರುತ: ಆಂಧ್ರಪ್ರದೇಶದ ಮೂರು ವಿಮಾನ ನಿಲ್ದಾಣಗಳಲ್ಲಿ ವಿಮಾನಗಳ ಹಾರಾಟ ಸ್ಥಗಿತ

ಘಟನೆ ಸಂಭವಿಸುತ್ತಿದ್ದಂತೆ ಅಲರ್ಟ್ ಆದ ರಕ್ಷಣಾ ಸಿಬ್ಬಂದಿ, ಸಿಮ್ರಿಕ್ ಏರ್ ಹೆಲಿಕಾಪ್ಟರ್ ನೆರವಿನೊಂದಿಗೆ ತಕ್ಷಣವೇ ಕಾರ್ಯಾಚರಣೆ ಆರಂಭಿಸಿದ್ದಾರೆ. ಅಪಘಾತದಲ್ಲಿ ಗಾಯಗೊಂಡಿರುವ ಮತ್ತೊಬ್ಬ ವ್ಯಕ್ತಿಯನ್ನು ಹೆಚ್ಚಿನ ಚಿಕಿತ್ಸೆಗಾಗಿ ತಕ್ಷಣವೇ ಪ್ರತ್ಯೇಕ ಹೆಲಿಕಾಪ್ಟರ್ ಮೂಲಕ ಆಸ್ಪತ್ರೆಗೆ ಏರ್‌ಲಿಫ್ಟ್ ಮಾಡಲಾಗಿದೆ. ನೇಪಾಳ ನಾಗರಿಕ ವಿಮಾನಯಾನ ಪ್ರಾಧಿಕಾರದ ಮಾಹಿತಿ ಅಧಿಕಾರಿಯಾದ ಜ್ಞಾನೇಂದ್ರ ಭುಲ್ ಅವರು, ಘಟನೆಗೆ ಸಂಬಂಧಿಸಿದಂತೆ ಪ್ರಾಥಮಿಕ ವರದಿಗಳನ್ನು ಪಡೆದುಕೊಂಡಿದ್ದು, ತಾಂತ್ರಿಕ ದೋಷ ಅಥವಾ ಪೈಲಟ್‌ಗಳ ಸಂವಹನ ಕೊರತೆಯೇ ಈ ದುರಂತಕ್ಕೆ ಕಾರಣವೇ ಎಂಬ ಬಗ್ಗೆ ತನಿಖೆಗೆ ಆದೇಶಿಸಲಾಗಿದೆ ಎಂದು ತಿಳಿಸಿದ್ದಾರೆ.

Vishakha Bhat Heggar

View all posts by this author