ಇಸ್ಲಾಮಾಬಾದ್: ಪಾಕಿಸ್ತಾನದಲ್ಲಿ ಹಠಾತ್ ಮೇಘಸ್ಪೋಟ ಉಂಟಾಗಿದೆ. (Cloudburst) ಪರಿಣಾಮ 200 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ವಾಯುವ್ಯದಲ್ಲಿರುವ ಬುನೇರ್ ಜಿಲ್ಲೆಯಲ್ಲಿ ಅತಿ ಹೆಚ್ಚು ಸಾವುನೋವುಗಳು ಸಂಭವಿಸಿದ್ದು, 157 ಜನರು ಸಾವನ್ನಪ್ಪಿದ್ದಾರೆ, ಶುಕ್ರವಾರದ ಪ್ರವಾಹದಿಂದ ಮನೆಗಳು ಮತ್ತು ಗ್ರಾಮಗಳು ಕೊಚ್ಚಿಹೋಗಿವೆ. ನೂರಾರು ಜನರು ನಾಪತ್ತೆಯಾಗಿದ್ದಾರೆ. ಬುನೇರ್‌ನಲ್ಲಿ ಹೆಚ್ಚಿನ ಸಾವುನೋವುಗಳ ಸಂಖ್ಯೆ ಇರುವುದರಿಂದ ತುರ್ತು ಪರಿಸ್ಥಿತಿಯನ್ನು ಘೋಷಿಸಲಾಗಿದೆ, ಆದರೆ ರಕ್ಷಣಾ ಕಾರ್ಯಕರ್ತರು ದೋಣಿಗಳು ಮತ್ತು ಹೆಲಿಕಾಪ್ಟರ್‌ಗಳನ್ನು ಬಳಸಿಕೊಂಡು ಸಿಲುಕಿಕೊಂಡಿರುವ ಕುಟುಂಬಗಳನ್ನು ತಲುಪಲು ಪ್ರಯತ್ನಿಸುತ್ತಿವೆ.
ಇದುವರೆಗೆ 100 ಕ್ಕೂ ಅಧಿಕ ಶವಗಳನ್ನು ಸಾಗಿಸಲಾಗಿದೆ. ನೆರೆಯ ಮನ್ಸೆಹ್ರಾ ಜಿಲ್ಲೆಯಲ್ಲಿ, ಸಿರಾನ್ ಕಣಿವೆಯಲ್ಲಿ ಹಠಾತ್ ಪ್ರವಾಹ ಮತ್ತು ಭೂಕುಸಿತಗಳಿಂದ ಸಿಲುಕಿಕೊಂಡಿದ್ದ ಸುಮಾರು 2,000 ಪ್ರವಾಸಿಗರನ್ನು ರಕ್ಷಿಸಲು ತುರ್ತು ತಂಡಗಳು ಗುರುವಾರ ರಾತ್ರಿಯಿಡೀ ಕಾರ್ಯಾಚರಣೆ ನಡೆಸಿವೆ.
Deadly floods in Pakistan:
— Sajjad Tarakzai (@SajjadTarakzai) August 15, 2025
Torrential rains and flash floods in KP, AJK & Gilgit-Baltistan kill 200+ people. Entire villages swept away in Buner; . Govt relief helicopter crashes, killing 5 crew. Cloudbursts & landslides add to toll as melting glaciers raise severe flood risk. pic.twitter.com/q6mrVvL7ab
ನೆರವು ಹೆಲಿಕಾಪ್ಟರ್ ಪತನ
ಖೈಬರ್ ಪಖ್ತುಂಖ್ವಾ ಪ್ರಾಂತ್ಯದಲ್ಲಿ ಶುಕ್ರವಾರ ಭಾರೀ ಮಳೆಯ ನಡುವೆ ಪರಿಹಾರ ಕಾರ್ಯಾಚರಣೆಯಲ್ಲಿ ತೊಡಗಿದ್ದ Mi-17 ಹೆಲಿಕಾಪ್ಟರ್ ಪತನಗೊಂಡು ಐವರು ಸಿಬ್ಬಂದಿ ಸಾವನ್ನಪ್ಪಿದ್ದಾರೆ. ಮಳೆ ಪೀಡಿತ ಪ್ರದೇಶಗಳಿಗೆ ಸಹಾಯ ಮಾಡಲು ಹೆಲಿಕಾಪ್ಟರ್ ತುರ್ತು ಕಾರ್ಯಾಚರಣೆಯಲ್ಲಿತ್ತು. ಅಪಘಾತಕ್ಕೆ ಕೆಟ್ಟ ಹವಾಮಾನ ಕಾರಣ ಎಂದು ವರದಿಯಾಗಿದ್ದು, ಅಧಿಕಾರಿಗಳು ತನಿಖೆ ಮುಂದುವರಿಸಿದ್ದಾರೆ. ಕೆಟ್ಟ ಹವಾಮಾನದಿಂದಾಗಿ ಮೊಹಮಂಡ್ ಜಿಲ್ಲೆಯ ಪಾಂಡಿಯಾಲಿ ಪ್ರದೇಶದಲ್ಲಿ ಅಪಘಾತ ಸಂಭವಿಸಿದೆ ಎಂದು ಮುಖ್ಯಮಂತ್ರಿ ಅಲಿ ಅಮೀನ್ ಗಂಡಾಪುರ್ ತಿಳಿಸಿದ್ದಾರೆ.
ಬಜೌರ್‌ನ ಮಳೆ ಪೀಡಿತ ಪ್ರದೇಶಗಳಿಗೆ ಪರಿಹಾರ ಸಾಮಗ್ರಿಗಳನ್ನು ಸಾಗಿಸುತ್ತಿದ್ದ ಪ್ರಾಂತೀಯ ಸರ್ಕಾರದ MI-17 ಹೆಲಿಕಾಪ್ಟರ್ ಕೆಟ್ಟ ಹವಾಮಾನದಿಂದಾಗಿ ಮೊಹ್ಮಂಡ್ ಜಿಲ್ಲೆಯ ಪಾಂಡಿಯಾಲಿ ಪ್ರದೇಶದಲ್ಲಿ ಪತನಗೊಂಡಿದೆ” ಎಂದು ಗಂಡಾಪುರ ಹೇಳಿಕೆಯಲ್ಲಿ ತಿಳಿಸಿದೆ. “ಇಬ್ಬರು ಪೈಲಟ್‌ಗಳು ಸೇರಿದಂತೆ ಐದು ಸಿಬ್ಬಂದಿ ಸಾವನ್ನಪ್ಪಿದ್ದಾರೆ. ಖೈಬರ್ ಪಖ್ತುಂಖ್ವಾದ ಬಟ್ಟಗ್ರಾಮ್, ಬಜೌರ್ ಮತ್ತು ಮನ್ಸೆಹ್ರಾ ಜಿಲ್ಲೆಗಳಲ್ಲಿ ಮಾತ್ರ, ಈ ವಿಪತ್ತುಗಳು ಕನಿಷ್ಠ 146 ಜನರನ್ನು ಬಲಿ ತೆಗೆದುಕೊಂಡಿವೆ, 123 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಮತ್ತು ಅನೇಕರು ಕಾಣೆಯಾಗಿದ್ದಾರೆ. ಸದ್ಯ ಕಾರ್ಯಾಚರಣೆ ಮುಂದುವರಿದಿದೆ.