ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಹೊರ್ಮುಜ್ ಜಲಸಂಧಿ ಬಂದ್‌; ಪಾಕಿಸ್ತಾನದಲ್ಲಿ ಇಂಧನ ಕೊರತೆ, ಶಾಲೆಗಳು 2 ವಾರ ಬಂದ್, ಸರ್ಕಾರಿ ಕಚೇರಿಗಳಿಗೆ 4 ದಿನ ಕೆಲಸ

ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧದ ಪರಿಣಾಮ ಪಾಕಿಸ್ತಾನ ಇಂಧನ ಕೊರತೆಯನ್ನು ಎದುರಿಸುತ್ತಿದೆ. ಇದರ ಪರಿಣಾಮವಾಗಿ, ಪಾಕಿಸ್ತಾನ ಪ್ರಧಾನಮಂತ್ರಿ ಶೆಹಬಾಜ್ ಶರೀಷ್ ಅವರು ತುರ್ತು ಕ್ರಮವಾಗಿ ಶಾಲೆಗಳಿಗೆ 2 ವಾರ ರಜೆ ಘೋಷಣೆ ಮಾಡಿದ್ದು, ಸರ್ಕಾರಿ ಕಚೇರಿಗಳು ವಾರದಲ್ಲಿ ನಾಲ್ಕು ದಿನಗಳ ಕಾಲ ಕಾರ್ಯ ನಿರ್ವಹಿಸುವಂತೆ ಸೂಚನೆ ಹೊರಡಿಸಲಾಗಿದೆ.

ಸಂಗ್ರಹ ಚಿತ್ರ

ಇಸ್ಲಾಮಾಬಾದ್‌: ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧದ ಪರಿಣಾಮ ಪಾಕಿಸ್ತಾನ ಇಂಧನ ಕೊರತೆಯನ್ನು ಎದುರಿಸುತ್ತಿದೆ. ಇದರ ಪರಿಣಾಮವಾಗಿ, ಪಾಕಿಸ್ತಾನ ಪ್ರಧಾನಮಂತ್ರಿ ಶೆಹಬಾಜ್ ಶರೀಷ್ ಅವರು (Pakistan) ತುರ್ತು ಕ್ರಮವಾಗಿ ಶಾಲೆಗಳಿಗೆ 2 ವಾರ ರಜೆ ಘೋಷಣೆ ಮಾಡಿದ್ದು, ಸರ್ಕಾರಿ ಕಚೇರಿಗಳು ವಾರದಲ್ಲಿ ನಾಲ್ಕು ದಿನಗಳ ಕಾಲ (Israel Iran War) ಕಾರ್ಯ ನಿರ್ವಹಿಸುವಂತೆ ಸೂಚನೆ ಹೊರಡಿಸಲಾಗಿದೆ. ಪೆಟ್ರೋಲ್, ಡೀಸೆಲ್ ಮತ್ತು ಎಲೆಕ್ಟ್ರಿಕ್ ಬಳಕೆ ಮೇಲೆ ನಿಯಂತ್ರಣ ಕ್ರಮಗಳನ್ನು ಕೂಡ ಕೈಗೊಂಡಿದ್ದು, ಸಾರ್ವಜನಿಕರನ್ನು ಅನಾವಶ್ಯಕ ಬಳಕೆಯನ್ನು ತಡೆಯುವಂತೆ ಮನವಿ ಮಾಡಿದೆ.

ಇಂಧನ ಭೀತಿಯಿಂದ ಪಾಕಿಸ್ತಾನದಲ್ಲಿ ಕಳೆದ ದಿನಗಳಲ್ಲಿ ಬೆಲೆ ಏರಿಕೆ, ವಾಹನಗಳು ಮತ್ತು ಉದ್ಯಮಗಳಿಗೆ ತೊಂದರೆ ಉಂಟಾಗಿದೆ. ಹೀಗಾಗಿ ಶಾಲೆಗಳನ್ನು ಬಂದ್ ಮಾಡುವುದು ಮತ್ತು ಕಚೇರಿಗಳ ಕೆಲಸಗಳನ್ನು ಕಡಿಮೆ ಮಾಡುವುದು ತಾತ್ಕಾಲಿಕ ಪರಿಹಾರವೆಂದು ಸರ್ಕಾರ ತಿಳಿಸಿದೆ. ಮಾರ್ಚ್ 16 ರಿಂದ ದೇಶಾದ್ಯಂತದ ಎಲ್ಲಾ ಶಾಲೆಗಳು ಎರಡು ವಾರಗಳ ಕಾಲ ಮುಚ್ಚಲ್ಪಡುತ್ತವೆ ಎಂದು ಷರೀಫ್ ಘೋಷಿಸಿದ್ದಾರೆ. ಆದರೆ ವಿಶ್ವವಿದ್ಯಾಲಯಗಳು ಮತ್ತು ಇತರ ಉನ್ನತ ಶಿಕ್ಷಣ ಸಂಸ್ಥೆಗಳು ತಕ್ಷಣ ಆನ್‌ಲೈನ್ ತರಗತಿಗಳಿಗೆ ಬದಲಾಗುತ್ತವೆ ಎಂದು ತಿಳಿಸಲಾಗಿದೆ.

"ಮುಂದಿನ 2 ತಿಂಗಳಲ್ಲಿ ಸರ್ಕಾರಿ ಇಲಾಖೆಗಳು ಇಂಧನ ಭತ್ಯೆಯಲ್ಲಿ ಶೇ. 50 ರಷ್ಟು ಕಡಿತಗೊಳಿಸಲಿವೆ" ಎಂದು ಷರೀಫ್ ಹೇಳಿದರು. ಇಂಧನ ಬಳಕೆಯನ್ನು ಮತ್ತಷ್ಟು ಕಡಿಮೆ ಮಾಡಲು, ಸರ್ಕಾರವು ತನ್ನ ಅರ್ಧದಷ್ಟು ಉದ್ಯೋಗಿಗಳಿಗೆ ಮನೆಯಿಂದ ಕೆಲಸ ಮಾಡುವ ಅವಕಾಶ ನೀಡಲಾಗಿದೆ ಎಂದು ಅವರು ತಿಳಿಸಿದ್ದಾರೆ. ಈ ಯೋಜನೆಯಡಿಯಲ್ಲಿ, 50% ಸರ್ಕಾರಿ ಸಿಬ್ಬಂದಿ ಮನೆಯಿಂದಲೇ ಕೆಲಸ ಮಾಡುತ್ತಾರೆ, ಆದರೆ ಸಾರ್ವಜನಿಕ ಕಚೇರಿಗಳು ವಾರದಲ್ಲಿ ನಾಲ್ಕು ದಿನ ಕಾರ್ಯನಿರ್ವಹಿಸುತ್ತವೆ.

ಜಾಗತಿಕ ತೈಲ ಸರಬರಾಜಿಗೆ ಪ್ರಮುಖವಾದ ಹೊರ್ಮುಜ್ ಜಲಸಂಧಿ ಪ್ರದೇಶದಲ್ಲಿ ಉದ್ವಿಗ್ನತೆ ಹೆಚ್ಚಿರುವುದು, ಈ ನಿರ್ಧಾರಕ್ಕೆ ಕಾರಣವಾಗಿದೆ. ಪಾಕಿಸ್ತಾನದ ನಾಗರಿಕರು, ಶೈಕ್ಷಣಿಕ ಸಂಸ್ಥೆಗಳು ಮತ್ತು ಉದ್ಯಮಗಳು ಈಗಾಗಲೇ ಇಂಧನ ಬಳಕೆಯನ್ನು ಕಡಿಮೆ ಮಾಡುವ ಪ್ರಯತ್ನಗಳನ್ನು ಆರಂಭಿಸಿದ್ದಾರೆ ಎಂದು ಹೇಳಲಾಗಿದೆ.

ಓಮಾನ್‌ ಮತ್ತು ಇರಾನ್ ನಡುವೆ ಇರುವ ಹೊರ್ಮುಜ್ ಜಲಸಂಧಿ ಜಾಗತಿಕ ವ್ಯಾಪಾರ ಸಂಪರ್ಕಕ್ಕೆ ಮಹತ್ವವಾಗಿದೆ. ವಿಶ್ವದ ನಾನಾ ಭಾಗಗಳಿಗೆ ವ್ಯಾಪಾರಿ ಹಡಗುಗಳು ಈ ಜಲಮಾರ್ಗವನ್ನು ಬಳಸಿಕೊಂಡು ಸಾಗುತ್ತದೆ. ಆದರೆ ಹೊರ್ಮುಜ್ ಜಲಸಂಧಿಯನ್ನು ನಿಯಂತ್ರಣಕ್ಕೆ ಪಡೆದುಕೊಳ್ಳಲು ಅಮೆರಿಕಾ- ಇಸ್ರೇಲ್ ಪ್ರಯತ್ನ ನಡೆಸುತ್ತಿದೆ.

Iran-Israel War: ಇಸ್ರೇಲ್‌-ಇರಾನ್‌ ಯುದ್ಧ; ಗಲ್ಫ್‌ ರಾಷ್ಟ್ರಗಳಿಗೆ ಬೆಂಗಳೂರು, ಮಂಗಳೂರಿನಿಂದ ವಿಮಾನಗಳ ಹಾರಾಟ ರದ್ದು

ಆದರೆ ಈ ಜಲಸಂಧಿ ಮೇಲೆ ಸಂಪೂರ್ಣ ನಿಯಂತ್ರಣ ಸಾಧಿಸಲಾಗಿದೆ ಎಂದು ಇರಾನ್ ಹೇಳಿಕೊಂಡಿದೆ. ವಿಶ್ವದ ವಿವಿಧ ರಾಷ್ಟ್ರಗಳಿಗೆ ಕಚ್ಚಾ ತೈಲ ಮತ್ತು ನೈಸರ್ಗಿಕ ಅನಿಲ ಸಾಗಿಸಲು ಈ ಜಲಸಂಧಿ ನಿರ್ಣಾಯಕ ಜಲ ಮಾರ್ಗವಾಗಿದೆ.

Vishakha Bhat Heggar

View all posts by this author