ಇಸ್ಲಾಮಾಬಾದ್: ಭ್ರಷ್ಟಾಚಾರ ಸೇರಿದಂತೆ ಹಲವು ಆರೋಪಗಳ ಹಿನ್ನೆಲೆ ಜೈಲಿನಲ್ಲಿ ಮುದ್ದೆ (Pakistan) ಮುರಿಯುತ್ತಿರುವ ಪಾಕಿಸ್ತಾನ ಪ್ರಧಾನಿ ಮಾಜಿ ಇಮ್ರಾನ್ ಖಾನ್ (Imran Khan) ಆರೋಗ್ಯದಲ್ಲಿ ಇತ್ತೀಚಿಗೆ ಏರುಪೇರು ಕಾಣಿಸಿಕೊಂಡಿದೆ. ಇದರ ನಡುವೆ ಆತನ ಬೆಂಬಲಿಗರು ಮಂಗಳವಾರ ಒಳಗಿಂದೊಳಗೆ ಇಸ್ಲಾಮಾಬಾದ್ ಮತ್ತು ರಾವಲ್ಪಂಡಿ ನಗರಗಳಲ್ಲಿ ಪ್ರತಿಭಟನೆ ನಡೆಸಲು ತಯಾರಿ ನಡೆಸುತ್ತಿದ್ದಾರೆ. ಸದ್ಯ ಜೈಲಿನಲ್ಲಿರುವ ಇಮ್ರಾನ್ ಖಾನ್ ಕಳೆದ ಒಂದು ತಿಂಗಳಿಂದ ಯಾರೊಂದಿಗೂ ಸಂಪರ್ಕ ಹೊಂದಿಲ್ಲ ಎನ್ನಲಾಗುತ್ತಿದೆ. ಪಾಕಿಸ್ತಾನ್ ತೆಹ್ರೀಕ್-ಇ-ಇನ್ಸಾಫ್ ಪಕ್ಷ ಆಯೋಜಿಸಿದ್ದ ಪೂರ್ವನಿಗದಿತ ಯೋಜನೆಗಳಿಗೆ ಪೋಲಿಸರು ಪರಿಸ್ಥಿತಿಯನ್ನು ನಿಯಂತ್ರಿಸಲು ಎರಡೂ ನಗರಗಳಲ್ಲಿ ಸೆಕ್ಷನ್ 144 ವಿಧಿಸಿದ್ದಾರೆ. ಇನ್ನು ಖಾನ್ ಬಂಧಿಸಲಾಗಿರುವ ರಾವಲ್ಪಂಡಿಯ ಅಡಿಯಾಲಾ ಜೈಲಿನ ಹೊರಗೆ ಮತ್ತು ಇಸ್ಲಾಮಾಬಾದ್ ಹೈಕೋರ್ಟ್ ಹೊರಗಡೆ ಪ್ರತಿಭಟನೆಗಳು ನಡೆಯಲಿವೆ.
ಸತತ ಮೂರು ವಾರಗಳಿಂದಲೂ ಖಾನ್ ಇಬ್ಬರು ಪುತ್ರರು, ಪತ್ನಿ ಸೇರಿದಂತೆ ಕುಟುಂಬ ಸದಸ್ಯರು ಪಾಕ್ ಪ್ರಧಾನಿಯನ್ನು ಭೆಟಿಯಾಗಲು ಪ್ರಯತ್ನಿಸುತ್ತಿದ್ದಾರೆ. ಆದರೆ, ಭೇಟಿ ಸಾಧ್ಯವಾಗಿಲ್ಲ. ಇದರಿಂದಾಗಿ ಇಮ್ರಾನ್ ಖಾನ್ ಸಾವಿನ ಸುದ್ದಿಗೆ ಮತ್ತಷ್ಟು ಪುಷ್ಠಿ ದೊರಕಂತಾಗಿದೆ.
ಭ್ರಷ್ಟಾಚಾರದ ಆರೋಪದ ಮೇಲೆ 14 ವರ್ಷ ಜೈಲು ಶಿಕ್ಷೆಗೆ ಗುರಿಯಾಗಿರುವ ಪಾಕ್ ಮಾಜಿ ಪ್ರಧಾನಿಯನ್ನು ರಾಜಕೀಯದಿಂದ ದೂರವಿಡಲು ಇದು ಕಟ್ಟು ಕಥೆ ಎಂದು ಹಲವರು ಈ ಆರೋಪಗಳನ್ನು ತಳ್ಳಿ ಹಾಕುತ್ತಿದ್ದಾರೆ. ಈ ಕುರಿತು ಇಸ್ಲಾಮಾಬಾದ್ ಜಿಲ್ಲಾಡಳಿತ ಸುತ್ತೋಲೆ ಹೊರಡಿಸಿದ್ದು, "ಪೂರ್ವ ನಿಯೋಜಿತ ಪ್ರತಿಭಟನೆಗಳ ಮಾಹಿತಿ ಬಂದ ಕೂಡಲೇ, ಇಸ್ಲಾಮಾಬಾದ್‌ನಲ್ಲಿ ಅಧಿಕಾರಿಗಳು ಎರಡು ತಿಂಗಳುಗಳ ಕಾಲ ನಿಷೇಧ ವಿಧಿಸಿದ್ದಾರೆ. ಇನ್ನು ರಾವಲ್ಪಂಡಿ ಜಿಲ್ಲಾಡಳಿತ ಸೋಮವಾರದಿಂದ ಮೂರು ದಿನಗಳ ಕಾಲ ನಿರ್ಬಂಧ ಹೇರಿದೆ. ಇಸ್ಲಾಮಾಬಾದ್‌ನಲ್ಲಿನ ಆದೇಶ ಕೆಂಪುವಲಯ ಸೇರಿದಂತೆ ಇಸ್ಲಾಮಾಬಾದ್ ಜಿಲ್ಲೆಯ ಕಂದಾಯ ಮಿತಿಯೊಳಗೆ ಯಾವುದೇ ಸಾರ್ವಜನಿಕ ಸ್ಥಳಗಳಲ್ಲಿ ಐದು ಅಥವಾ ಹೆಚ್ಚಿನ ವ್ಯಕ್ತಿಗಳು ಸೇರಿ ಸಭೆಗಳು, ರ್ಯಾಲಿ ಮತ್ತು ಮೆರವಣಿಗೆಗಳನ್ನು ನಡೆಸುವಂತಿಲ್ಲ. ಸಾರ್ವಜನಿಕ ಶಾಂತಿ, ನೆಮ್ಮದಿ ಮತ್ತು ಕಾನೂನು ಸುವ್ಯವಸ್ಥೆ ನಿಯಂತ್ರಿಸುವ ಮತ್ತು ಕಾನೂನುಬಾಹಿರ ಚಟುವಟಿಕೆಗಳನ್ನು ನಿಯಂತ್ರಿಸಲು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಜನವರಿ,18 2026ರ ತನಕ ನಿಷೇಧ ಹೇರಲಾಗಿದೆ" ಎಂದು ಮಾಹಿತಿ ಹಂಚಿಕೊಂಡಿದೆ.
ಜೈಲಿನೊಳಗೆ ಹತ್ಯೆಗೀಡಾದ್ರಾ ಪಾಕ್ ಮಾಜಿ ಪ್ರಧಾನಿ ಇಮ್ರಾನ್ ಖಾನ್? ವದಂತಿಯ ನಿಜವೇ?
ಇತ್ತ ರಾವಲ್ಪಂಡಿ ಜಿಲ್ಲಾಡಳಿತ ಅಧಿಸೂಚನೆ ಹೊರಡಿಸಿದ್ದು, "ರಾವಲ್ಪಂಡಿಯಲ್ಲಿ ಕೆಲ ಸೂಕ್ಷ್ಮ ಪ್ರದೇಶಗಳು, ಪ್ರಮುಖ ರಸ್ತೆಗಳಲ್ಲಿ ಸೆಕ್ಷನ್ 144 ವಿಧಿಸಲಾಗಿದೆ. ಅಧಿಸೂಚನೆ ಪ್ರಕಾರ, ಕೆಲವು ಗುಂಪುಗಳು ಕಾನೂನು ಮತ್ತು ಸುವ್ಯವಸ್ಥೆಯನ್ನು ಹಾಳು ಮಾಡಬಹುದಾದ ಬಹಿರಂಗ ಸಭೆಗಳು, ಪ್ರತಿಭಟನೆಗಳು ಮಾಡಲು ಮುಂದಾಗಿವೆ ಎಂದು ಗುಪ್ತಚರ ಮಾಹಿತಿ ಬಂದಿದೆ. ಈ ತಂಡ ಕೆಲ ಸಾರ್ವಜನಿಕ ಸ್ಥಳಗಳನ್ನು ಗುರಿಯಾಗಿಸಿಕೊಂಡು ಪ್ರಮುಖ ಸ್ಥಳಗಳನ್ನು ಗುರಿಯಾಗಿಸಿಕೊಂಡು ಹಿಂಸಾತ್ಮಕ ಕೃತ್ಯಗಳನ್ನು ನಡೆಸಲು ಪ್ರಯತ್ನಿಸಬಹುದು. ಇದು ಶಾಂತಿ ಮತ್ತು ಸುರಕ್ಷತೆ ಕದಡುವ ಕೆಲಸ ಮಾಡಬಹುದು. ಇಸ್ಲಾಮಾಬಾದ್ ಹೈಕೋರ್ಟ್ ತನ್ನ ಆದೇಶವನ್ನು ಜಾರಿಗೊಳಿಸಲು ವಿಫಲವಾದ ಕಾರಣ ಮತ್ತು ಅಡಿಯಾ ಜೈಲು ಆಡಳಿತವು ನ್ಯಾಯಾಲಯದ ನಿರ್ದೇಶನಗಳನ್ನು ಜಾರಿಗೆ ತರಲು ಇಷ್ಟವಿಲ್ಲದ ಕಾರಣ ಪ್ರತಿಭಟನೆಗಳನ್ನು ಯೋಜಿಸಲಾಗಿದೆ" ಎಂದು ಪತ್ರಿಕಾ ಪ್ರಕಟಣೆ ಹೊರಡಿಸಿದೆ.