ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಭಾರತದೊಂದಿಗಿನ ಯುದ್ಧದ ಬಳಿಕ ನಮ್ಮ ವಿಮಾನಕ್ಕೆ ಬೇಡಿಕೆ ಹೆಚ್ಚಿವೆ; IMF ಸಾಲದ ಅವಶ್ಯಕತೆ ಇನ್ನಿಲ್ಲವೆಂದ ಪಾಕ್‌ ರಕ್ಷಣಾ ಸಚಿವ

ಭಾರತದೊಂದಿಗೆ ಮೇ ತಿಂಗಳಲ್ಲಿ ನಾಲ್ಕು ದಿನಗಳ ಮಿಲಿಟರಿ ಬಿಕ್ಕಟ್ಟಿನ ನಂತರ ವಿಮಾನಗಳ ಆರ್ಡರ್‌ಗಳಲ್ಲಿ ಏರಿಕೆ ಕಂಡುಬಂದಿದೆ ಎಂದು ಪಾಕಿಸ್ತಾನ ರಕ್ಷಣಾ ಸಚಿವ ಖವಾಜಾ ಆಸಿಫ್ ಹೇಳಿದ್ದಾರೆ. ಆರು ತಿಂಗಳ ನಂತರ ಅದಕ್ಕೆ ಅಂತಾರಾಷ್ಟ್ರೀಯ ಹಣಕಾಸು ನಿಧಿಯಿಂದ (ಐಎಂಎಫ್) ಬೇಲ್‌ಔಟ್‌ಗಳ ಅಗತ್ಯವಿಲ್ಲ ಎಂದು ಖವಾಜಾ ಆಸಿಫ್ ಹೇಳಿದ್ದಾರೆ.

ಸಂಗ್ರಹ ಚಿತ್ರ

ಇಸ್ಲಾಮಾಬಾದ್‌: ಭಾರತದೊಂದಿಗೆ ಮೇ ತಿಂಗಳಲ್ಲಿ ನಾಲ್ಕು ದಿನಗಳ ಮಿಲಿಟರಿ ಬಿಕ್ಕಟ್ಟಿನ ನಂತರ ವಿಮಾನಗಳ ಆರ್ಡರ್‌ಗಳಲ್ಲಿ ಏರಿಕೆ ಕಂಡುಬಂದಿದೆ (Pakistan) ಎಂದು ಪಾಕಿಸ್ತಾನ ರಕ್ಷಣಾ ಸಚಿವ ಖವಾಜಾ ಆಸಿಫ್ ಹೇಳಿದ್ದಾರೆ. ಆರು ತಿಂಗಳ ನಂತರ ಅದಕ್ಕೆ ಅಂತಾರಾಷ್ಟ್ರೀಯ ಹಣಕಾಸು ನಿಧಿಯಿಂದ (ಐಎಂಎಫ್) ಬೇಲ್‌ಔಟ್‌ಗಳ ಅಗತ್ಯವಿಲ್ಲ ಎಂದು ಖವಾಜಾ ಆಸಿಫ್ ಹೇಳಿದ್ದಾರೆ. ಐಎಂಎಫ್ ಷರತ್ತಿನ ಕಾರಣದಿಂದಾಗಿ ಪಾಕಿಸ್ತಾನವು ತನ್ನ ಧ್ವಜ ವಾಹಕವಾದ ಪಾಕಿಸ್ತಾನ್ ಇಂಟರ್ನ್ಯಾಷನಲ್ ಏರ್ಲೈನ್ಸ್ (ಪಿಐಎ) ಅನ್ನು ಮಾರಾಟ ಮಾಡಲು ಒತ್ತಾಯಿಸಲ್ಪಟ್ಟ ತಿಂಗಳುಗಳ ನಂತರ ಈ ಹೇಳಿಕೆಗಳು ಬಂದಿವೆ.

ನಮ್ಮ ವಿಮಾನಗಳನ್ನು ಪರೀಕ್ಷಿಸಲಾಗಿದೆ, ಮತ್ತು ನಾವು ಹಲವಾರು ಆದೇಶಗಳನ್ನು ಸ್ವೀಕರಿಸುತ್ತಿದ್ದೇವೆ, ಆರು ತಿಂಗಳಲ್ಲಿ ಪಾಕಿಸ್ತಾನಕ್ಕೆ ಅಂತಾರಾಷ್ಟ್ರೀಯ ಹಣಕಾಸು ನಿಧಿಯ ಅಗತ್ಯವಿರುವುದಿಲ್ಲ ಎಂದು ಅವರು ಅಭಿಪ್ರಾಯ ಪಟ್ಟರು. ಕರಾಚಿ ಮೂಲದ ಜಿಯೋ ಟಿವಿಗೆ(GeoTv) ನೀಡಿದ ಸಂದರ್ಶನದಲ್ಲಿ, ಮೇ 2025 ರಲ್ಲಿ ಭಾರತದೊಂದಿಗಿನ ನಾಲ್ಕು ದಿನಗಳ ಮಿನಿ ಯುದ್ಧದ ನಂತರ ಪಾಕಿಸ್ತಾನಕ್ಕೆ ರಕ್ಷಣಾ ಆದೇಶಗಳು ಹೆಚ್ಚಾಗಿವೆ. ಹಾಗಾಗಿ ಮುಂದಿನ 6 ತಿಂಗಳಿನಲ್ಲಿ ಅಂತರಾಷ್ಟ್ರೀಯ ಹಣಕಾಸು ನಿಧಿಯ ಸಾಲಗಳಿಂದ ಮುಕ್ತಿ ಪಡೆಯಲಿದ್ದು, ಮುಂದೆ ಅದರ ಅವಶ್ಯಕತೆ ಇರುವುದಿಲ್ಲ ಎಂದು ತಿಳಿಸಿದ್ದಾರೆ.

ಜಾಗತಿಕ ಮಟ್ಟದಲ್ಲಿ ಪಾಕಿಸ್ತಾನದ ಮಿಲಿಟರಿ ಉಪಕರಣಗಳಿಗೆ ಬೇಡಿಕೆ ಹೆಚ್ಚಾಗಿದೆ. ನಮ್ಮ ವಿಮಾನಗಳು ಪರೀಕ್ಷಿಸಲ್ಪಟ್ಟಿವೆ, ಮತ್ತು ನಮಗೆ ಬರುತ್ತಿರುವ ವ್ಯಾಪಾರದ ಆದೇಶಗಳು ಸಾಕಷ್ಟಿವೆ. ಇದರಿಂದಾಗಿ ಪಾಕಿಸ್ತಾನಕ್ಕೆ ಮುಂದಿನ 6 ತಿಂಗಳ ನಂತರ ನಮಗೆ IMFನ ಅಗತ್ಯವಿರುವುದಿಲ್ಲ" ಎಂದು ತಿಳಿಸಿದ್ದಾರೆ. ಕಳೆದ ಮೇ ತಿಂಗಳ ಬಳಿಕ ಅಂತರರಾಷ್ಟ್ರೀಯ ಹಣಕಾಸು ನಿಧಿ (IMF) ಪಾಕಿಸ್ತಾನಕ್ಕೆ 1 ಬಿಲಿಯನ್ ಡಾಲರ್‌ ಸಾಲ ನೀಡಿತ್ತು.

ಬಾಂಗ್ಲಾದೇಶ ತಂಡಕ್ಕೆ ಟಿ20 ವಿಶ್ವಕಪ್‌ ಪಂದ್ಯಕ್ಕೆ ಆತಿಥ್ಯ ವಹಿಸಲು ಪಾಕಿಸ್ತಾನ ಸಿದ್ಧ! ವರದಿ

ಪಾಕಿಸ್ತಾನಕ್ಕೆ ಸಾಲ ನೀಡದಂತೆ ಭಾರತ ತೀವ್ರ ವಿರೋಧ ವ್ಯಕ್ತಪಡಿಸಿತ್ತು. ಭಾರತದ ವಿರೋಧದ ನಡುವೆಯೂ ಐಎಂಎಫ್​, 1 ಬಿಲಿಯನ್ ಡಾಲರ್‌ ಹಣ ನೀಡಲು ಅನುಮೋದಿಸಿದೆ. ಸಾಲ ಸಿಕ್ಕ ಬೆನ್ನಲ್ಲೇ ಮಾಹಿತಿ ಪ್ರಕಟಿಸಿರುವ ಪಾಕಿಸ್ತಾನ ಸರ್ಕಾರ, ಪಾಕಿಸ್ತಾನದ ಆರ್ಥಿಕ ಸ್ಥಿತಿ ಸುಧಾರಿಸಿದೆ ಮತ್ತು ದೇಶವು ಅಭಿವೃದ್ಧಿಯತ್ತ ಸಾಗುತ್ತಿದೆ ಎಂದು ಎಂದು ತಿಳಿಸಿತ್ತು.