ಇಸ್ಲಾಮಾಬಾದ್: ಸಿಂಧ್ ನದಿಯಿಂದ ನೀರನ್ನು ಬೇರೆಡೆಗೆ ತಿರುಗಿಸುವ ಸರ್ಕಾರದ ಯೋಜನೆಯನ್ನು ವಿರೋಧಿಸಿ ಪಾಕಿಸ್ತಾನದ ಸಿಂಧ್ ಪ್ರಾಂತ್ಯದಲ್ಲಿ ಭಾರೀ ಪ್ರತಿಭಟನೆ ನಡೆಯುತ್ತಿದೆ. ಈ ವೇಳೆ ಆಘಾತಕಾರಿ ಘಟನೆಯೊಂದು ನಡೆದಿದೆ. ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದೆ. ಕೋಪಗೊಂಡ ಪ್ರತಿಭಟನಾಕಾರರು ಸಿಂಧ್ ಗೃಹ ಸಚಿವ ಜಿಯಾ-ಉಲ್-ಹಸನ್ ಲಂಜಾರ್ ಅವರ ಮನೆಗೆ ಬೆಂಕಿ ಹಚ್ಚಿದ್ದಾರೆ. ಪ್ರತಿಭಟನಾಕಾರರು ತಮ್ಮ ಕೈಯಲ್ಲಿ ಎಕೆ-47 ಮತ್ತು ಇತರ ಬಂದೂಕುಗಳೊಂದಿಗೆ ತೆರೆದ ಸ್ಥಳದಲ್ಲಿ ತಿರುಗಾಡುತ್ತಿರುವುದನ್ನು ತೋರಿಸುವ ಅನೇಕ ದೃಶ್ಯಗಳು ಸಾಮಾಜಿಕ ಮಾಧ್ಯಮಗಳಲ್ಲಿ ಕಾಣಿಸಿಕೊಂಡಿವೆ.
ಸಿಂದೂ ನದಿಯ ನೀರನ್ನು ತಿರುಗಿಸಲು ಸರ್ಕಾರ ಕಾಲುವೆ ನಿರ್ಮಿಸಲು ಯೋಜಿಸುತ್ತಿದೆ, ಮುಖ್ಯವಾಗಿ ಪಂಜಾಬ್‌ಗೆ ನೀರು ಸರಬರಾಜು ಹೆಚ್ಚಿಸಲು. ಆದರೆ ಸಿಂಧ್‌ನ ಸ್ಥಳೀಯರು ಈ ಯೋಜನೆಯು ತಮ್ಮ ಕೃಷಿಭೂಮಿ ಮತ್ತು ನೀರಿನ ಮೂಲಗಳಿಗೆ ಅಪಾಯವನ್ನುಂಟುಮಾಡುತ್ತದೆ ಎಂದು ಹೇಳುತ್ತದ್ದಾರೆ.
ಸರ್ಕಾರ ನದಿ ನೀರನ್ನು ಬೇರೆಡೆಗೆ ತಿರುಗಿಸಲು ನೋಡಿದಾಗ ಪ್ರತಿಭಟನೆ ಭುಗಿಲೆದ್ದಿದೆ. ಸ್ಥಳೀಯರು ರಾಷ್ಟ್ರೀಯ ಹೆದ್ದಾರಿಯನ್ನು ತಡೆಯಲು ಪ್ರಯತ್ನಿಸಿದ್ದಾರೆ. ಆಗ ಪೊಲೀಸರು ಬಲಪ್ರಯೋಗ ಮಾಡಿ ಪ್ರತಿದಾಳಿ ನಡೆಸಿದರು, ಇದು ಘರ್ಷಣೆಗೆ ಕಾರಣವಾಯಿತು. ಹಿಂಸಾಚಾರದಲ್ಲಿ ಕನಿಷ್ಠ ಇಬ್ಬರು ಸಾವನ್ನಪ್ಪಿದರು ಮತ್ತು ಪೊಲೀಸ್ ಅಧಿಕಾರಿಗಳು ಸೇರಿದಂತೆ ಹಲವಾರು ಜನರು ಗಾಯಗೊಂಡರು. ಪ್ರತಿಭಟನಾಕಾರರು ಮೊರೊದಲ್ಲಿರುವ ಗೃಹ ಸಚಿವರ ಮನೆಯ ಮೇಲೆ ದಾಳಿ ಮಾಡಿ ಬೆಂಕಿ ಹಚ್ಚಿದ್ದಾರೆ.
ಪೊಲೀಸ್ ಕ್ರಮಕ್ಕೆ ಆದೇಶಿಸಿದ್ದಕ್ಕಾಗಿ ಸ್ಥಳೀಯರು ಸಚಿವರನ್ನೇ ದೂಷಿಸಿದರು ಮತ್ತು ನೀರಿನ ಕೊರತೆಯಿಂದಾಗಿ ಸಿಂಧ್‌ನ ನಾಶಕ್ಕೆ ಕಾರಣವಾಗುವ ನೀತಿಗಳನ್ನು ಬೆಂಬಲಿಸುತ್ತಿದ್ದಾರೆ ಎಂದು ಆರೋಪಿಸಿದರು. ಪ್ರತಿಭಟನಾಕಾರರು ಆಸ್ಪತ್ರೆಯಲ್ಲಿಯೂ ಗಾಯಗೊಂಡ ಪೊಲೀಸ್ ಅಧಿಕಾರಿಗಳ ಮೇಲೆ ದಾಳಿ ಮಾಡಿದರು. ಬೀದಿಗಳು ಅಸ್ತವ್ಯಸ್ತಗೊಂಡವು ಮತ್ತು ಪ್ರತಿಭಟನಾಕಾರರು ಯೂರಿಯಾ ಗೊಬ್ಬರ ಸಾಗಿಸುತ್ತಿದ್ದ ಟ್ರಕ್‌ಗಳನ್ನು ಲೂಟಿ ಮಾಡಿ ನಂತರ ಅವುಗಳಿಗೆ ಬೆಂಕಿ ಹಚ್ಚಿದ್ದಾರೆ.
ಈ ಸುದ್ದಿಯನ್ನೂ ಓದಿ: Indus Waters Treaty: ಸಿಂಧೂ ಜಲ ಒಪ್ಪಂದ ಮರುಜಾರಿಗೆ ಪಾಕ್ ಪ್ರಯತ್ನ
ಸಿಂಧ್ ನದಿಯಿಂದ ನೀರನ್ನು ಬೇರೆಡೆಗೆ ತಿರುಗಿಸುವ ಸರ್ಕಾರದ ಯೋಜನೆಯನ್ನು ವಿರೋಧಿಸಿ ಪಾಕಿಸ್ತಾನದ ಸಿಂಧ್ ಪ್ರಾಂತ್ಯದಲ್ಲಿ ಭಾರೀ ಪ್ರತಿಭಟನೆ ನಡೆಯುತ್ತಿದೆ. ಈ ವೇಳೆ ಆಘಾತಕಾರಿ ಘಟನೆಯೊಂದು ನಡೆದಿದೆ. ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದೆ. ಕೋಪಗೊಂಡ ಪ್ರತಿಭಟನಾಕಾರರು ಸಿಂಧ್ ಗೃಹ ಸಚಿವ ಜಿಯಾ-ಉಲ್-ಹಸನ್ ಲಂಜಾರ್ ಅವರ ಮನೆಗೆ ಬೆಂಕಿ ಹಚ್ಚಿದ್ದಾರೆ. ಪ್ರತಿಭಟನಾಕಾರರು ತಮ್ಮ ಕೈಯಲ್ಲಿ ಎಕೆ-47 ಮತ್ತು ಇತರ ಬಂದೂಕುಗಳೊಂದಿಗೆ ತೆರೆದ ಸ್ಥಳದಲ್ಲಿ ತಿರುಗಾಡುತ್ತಿರುವುದನ್ನು ತೋರಿಸುವ ಅನೇಕ ದೃಶ್ಯಗಳು ಸಾಮಾಜಿಕ ಮಾಧ್ಯಮಗಳಲ್ಲಿ ಕಾಣಿಸಿಕೊಂಡಿವೆ.