ಇಸ್ಲಾಮಾಬಾದ್: ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ಪಾಕಿಸ್ತಾನ ಸರ್ಕಾರದ ವಿರುದ್ಧ ಕಳೆದ ಕೆಲ ದಿನಗಳಿಂದ ಹಿಂಸಾತ್ಮಕ ಪ್ರತಿಭಟನೆಗಳು ನಡೆಯುತ್ತಿದ್ದು, ಹಿಂಸಾಚಾರದಲ್ಲಿ ಇದುವರೆಗೂ 10 ನಾಗರಿಕರು ಸಾವನ್ನಪ್ಪಿದ್ದಾರೆ (PoK Protest). ಬಾಗ್ ಜಿಲ್ಲೆಯ ಧೀರ್ಕೋಟ್‌ನಲ್ಲಿ ನಾಲ್ವರು ಜನರು ಸಾವನ್ನಪ್ಪಿದ್ದರೆ, ಮುಜಫರಾಬಾದ್‌ನಲ್ಲಿ ಇಬ್ಬರು ಮತ್ತು ಮಿರ್ಪುರದಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ ಎಂದು ಮೂಲಗಳು ಖಚಿತಪಡಿಸಿವೆ.
ಈ ಮಧ್ಯೆ ಮತ್ತೊಂದು ಆಘಾತಕಾರಿ ಬೆಳವಣಿಗೆ ನಡೆದಿದ್ದು, ಇಸ್ಲಾಮಾಬಾದ್‌ನಲ್ಲಿರುವ ನ್ಯಾಷನಲ್ ಪ್ರೆಸ್ ಕ್ಲಬ್ (NPC) ಮೇಲೆ ಪೊಲೀಸ್ ಸಿಬ್ಬಂದಿ ದಾಳಿ ನಡೆಸಿದ್ದು, ಅಲ್ಲಿಯೇ ಇದ್ದ ಹಲವಾರು ಮಾಧ್ಯಮ ಸಿಬ್ಬಂದಿ ಮೇಲೆಯೂ ಅಮಾನವೀಯವಾಗಿ ಹಲ್ಲೆ ಮಾಡಿದ್ದಾರೆ.
ಸದ್ಯ ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಅಲ್ಲಿನ ಪೊಲೀಸ್ ಸಿಬ್ಬಂದಿಗಳು ಪತ್ರಕರ್ತರ ಮೇಲೆ ಮನಸೋಇಚ್ಛೆ ಹಲ್ಲೆ ಮಾಡುತ್ತಿರುವ ದೃಶ್ಯ ಸೆರೆಯಾಗಿದೆ. ಅಲ್ಲಿನ ಸ್ಥಳೀಯ ಮಾಧ್ಯಮ ವರದಿಗಳ ಪ್ರಕಾರ ಅವಾಮಿ ಕ್ರಿಯಾ ಸಮಿತಿ (ಎಎಸಿ)ಯ ಪರವಾಗಿ ಸುದ್ದಿ ಬಿತ್ತರಿಸಿದ್ದರು ಎಂಬ ಕಾರಣಕ್ಕೆ ಈ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದ್ದು, ಅಜಾದ್ ಜಮ್ಮು ಮತ್ತು ಕಾಶ್ಮೀರ ಜಾಯಿಂಟ್ ಆವಾಮಿ ಆಕ್ಷನ್ ಕಮಿಟಿ (JAAC) ನಡೆಸಿದ ಪ್ರತಿಭಟನೆಗಳನ್ನು ಪ್ರಕಟಿಸಿದ ಮಾಡಿದ ಕಾಶ್ಮೀರಿ ಪತ್ರಕರ್ತರನ್ನು ಬಂಧಿಸುವ ಹುನ್ನಾರ ಈ ಘರ್ಷಣೆಯ ಹಿಂದಿದೆ ಎಂದು ತಿಳಿದು ಬಂದಿದೆ.
ಇನ್ನು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದ ವಿಡಿಯೊದಲ್ಲಿ ಪ್ರತಿಭಟನಾಕಾರರನ್ನು ಹಿಡಿದು ಎಳೆದಾಡಿರುವ ದೃಶ್ಯ ಸೆರೆಯಾಗಿದ್ದು, ತಮ್ಮ ಕಾರ್ಯದಲ್ಲಿ ನಿರತರಾಗಿದ್ದ ಪತ್ರಕರ್ತರ ಮೇಲೆಯೂ ಹಲವರು ಪೊಲೀಸ್ ಸಿಬ್ಬಂದಿ ಹಲ್ಲೆ ಮಾಡಿರುವುದನ್ನು ಕಾಣಬಹುದಾಗಿದೆ.
ಮತ್ತೊಂದು ವಿಡಿಯೊದಲ್ಲಿ ಪತ್ರಕರ್ತನ ಕಲರ್ ಪಟ್ಟಿ ಹಿಡಿದು ಪೊಲೀಸ್ ಹಲ್ಲೆ ನಡೆಸಿದ್ದು, ಒಂದು ಕೈಯಲ್ಲಿ ಕ್ಯಾಮರಾ ಹಿಡಿದು, ತನ್ನ ಮೇಲೆ ಆಗುತ್ತಿರುವ ದೌರ್ಜನ್ಯವನ್ನು ತಡೆಯಲು ಪತ್ರಕರ್ತ ಹರಸಾಹಸ ಪಡುತ್ತಿರುವುದನ್ನು ನೋಡಬಹುದು.
ಇನ್ನು ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ಮತ್ತೇ ಹಿಂಸಾಚಾರ ಭುಗಿಲೆದಿದ್ದು, ಪುಹಲ್ವಾಮ ದಾಳಿ ಬಳಿಕ ಪಾಕ್ ಚಿತ್ರಣ ಸಂಪೂರ್ಣ ಬದಲಾಗಿದೆ. ಮತ್ತೊಮ್ಮೆ ಪಾಕ್ ನ ಆಡಳಿತದ ದುರ್ಬಲತೆ ಸಾಬೀತಾಗಿದ್ದು, ಹಲವು ವರ್ಷಗಳಿಂದ ದೊರಕದ ರಾಜಕೀಯ ಮತ್ತು ಆರ್ಥಿಕ ಹಕ್ಕುಗಳನ್ನು ಒತ್ತಾಯಿಸಿ ಅವಾಮಿ ಕ್ರಿಯಾ ಸಮಿತಿ (ಎಎಸಿ) ಪಿಒಕೆಯಾದ್ಯಂತ ಬೃಹತ್ "ಶಟರ್-ಡೌನ್ ಮತ್ತು ವೀಲ್-ಜಾಮ್" ಮುಷ್ಕರಕ್ಕೆ ಕರೆ ನೀಡಿದೆ.
ಈ ಸುದ್ದಿಯನ್ನು ಓದಿ: Bomb Treat: ತಿರುಪತಿಗೆ ಬಾಂಬ್ ಬೆದರಿಕೆ: ಐಎಸ್‌ಐ, ಎಲ್‌ಟಿಟಿಇ ಉಗ್ರಗಾಮಿಗಳ ಸಂಚಿನ ಶಂಕೆ
ಅಲ್ಲದೆ ಹತ್ತಾರು ವರ್ಷಗಳಿಂದ ಪಿಒಕೆ ಕುರಿತಾಗಿ ಇರುವ ನಿರ್ಲಕ್ಷ್ಯ, ಭ್ರಷ್ಟಾಚಾರ ಮತ್ತು ಇಸ್ಲಾಮಾಬಾದ್ ಪ್ರದೇಶದ ಸಂಪನ್ಮೂಲಗಳ ಶೋಷಣೆಯ ಬಗ್ಗೆ ಹೆಚ್ಚುತ್ತಿರುವ ಅಸಹನೆ ಪ್ರತಿಭಟನೆಯ ಸ್ವರೂಪವನ್ನು ಪಡೆದುಕೊಂಡಿದ್ದು, ಸಾವಿರಾರು ಜನರು ಬೀದಿಗಿಳಿದ್ದಾರೆ.
ಪ್ರತಿಭಟನೆಗಳಿಗೆ ನಾಗರಿಕ ಸಮಾಜ ಸಂಸ್ಥೆಗಳು, ವಕೀಲರು ಮತ್ತು ಸ್ಥಳೀಯ ವ್ಯವಹಾರಗಳಿಂದ ವ್ಯಾಪಕ ಬೆಂಬಲ ವ್ಯಕ್ತವಾಗಿದ್ದು, ಮಾರುಕಟ್ಟೆಗಳು, ಸಾರಿಗೆ ಸೇವೆಗಳು ಮತ್ತು ದೈನಂದಿನ ಜೀವನವು ಬಹುತೇಕ ಸ್ಥಗಿತಗೊಳ್ಳುವ ನಿರೀಕ್ಷೆಯಿದೆ.
ಪಾಕಿಸ್ತಾನವು ಪಿಒಕೆಯನ್ನು ವ್ಯವಸ್ಥಿತವಾಗಿ ಬಳಸಿಕೊಳ್ಳುವುದನ್ನು ಗುರಿಯಾಗಿಸಿಕೊಂಡು ಎಎಸಿ 38 ಅಂಶಗಳ ಬೇಡಿಕೆಗಳ ಪಟ್ಟಿಯನ್ನು ಹೊಂದಿದ್ದು, ಪಾಕಿಸ್ತಾನದಲ್ಲಿ ನೆಲೆಸಿರುವ ಕಾಶ್ಮೀರಿ ನಿರಾಶ್ರಿತರಿಗೆ ಮೀಸಲಾಗಿರುವ 12 ವಿಧಾನಸಭಾ ಸ್ಥಾನಗಳನ್ನು ರದ್ದುಗೊಳಿಸುವುದು, ಸ್ಥಳೀಯ ಪ್ರಾತಿನಿಧ್ಯವನ್ನು ವಿರೂಪಗೊಳಿಸುತ್ತದೆ ಮತ್ತು ಇಸ್ಲಾಮಾಬಾದ್‌ಗೆ ಅನಗತ್ಯ ನಿಯಂತ್ರಣವನ್ನು ನೀಡುತ್ತದೆ ಎಂದು ಎಎಸಿ ವಾದಿಸುತ್ತದೆ.