ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Modi US Visit : ಅಮೆರಿಕದಲ್ಲಿ ಮೋದಿ; ಡಿಎನ್‌ಐ ಮುಖ್ಯಸ್ಥೆ ತುಳಸಿ ಗಬ್ಬಾರ್ಡ್ ಜೊತೆ ಮಾತುಕತೆ

ಪ್ರಧಾನಿ ನರೇಂದ್ರ ಮೋದಿ ಅಮೆರಿಕಕ್ಕೆ ಪ್ರಯಾಣ ಬೆಳೆಸಿದ್ದಾರೆ. ಜಾಯಿಂಟ್ ಆಂಡ್ರ್ಯೂಸ್ ಬೇಸ್‌ಗೆ ಬಂದಿಳಿದ ಅವರಿಗೆ ಅನಿವಾಸಿ ಭಾರತೀಯರು ಆತ್ಮೀಯ ಸ್ವಾಗತವನ್ನು ಕೋರಿದರು.ಅಮೆರಿಕಕ್ಕೆ ಬಂದಿಳಿದ ಬಳಿಕ ಮೋದಿ ಬ್ಲೇರ್ ಹೌಸ್‌ಗೆ ಭೇಟಿ ನೀಡಿದ್ದರು. ಇದೇ ವೇಳೆ ಭಾರತೀಯ ಸಮುದಾಯದವರು ಮೋದಿ ಅವರನ್ನು ಸ್ವಾಗತಿಸಿದ್ದಾರೆ. ಪ್ರಧಾನಿ ಡಿಎನ್‌ಐ ಮುಖ್ಯಸ್ಥೆ ತುಳಸಿ ಗಬ್ಬಾರ್ಡ್ ಅವರನ್ನು ಭೇಟಿ ಮಾಡಿದ್ದಾರೆ.

Modi US Visit

ವಾಷಿಂಗ್ಟನ್‌: ಫ್ರಾನ್ಸ್‌ನಲ್ಲಿ ನಡೆದ AI ಸಮ್ಮೇಳನ ಮುಗಿಸಿ ಪ್ರಧಾನಿ ನರೇಂದ್ರ ಮೋದಿ (Narendra Modi) ಅಮೆರಿಕಕ್ಕೆ (Modi US Visit) ಪ್ರಯಾಣ ಬೆಳೆಸಿದ್ದಾರೆ. ಜಾಯಿಂಟ್ ಆಂಡ್ರ್ಯೂಸ್ ಬೇಸ್‌ಗೆ ಬಂದಿಳಿದ ಅವರಿಗೆ ಅನಿವಾಸಿ ಭಾರತೀಯರು ಆತ್ಮೀಯ ಸ್ವಾಗತವನ್ನು ಕೋರಿದರು.ಅಮೆರಿಕಕ್ಕೆ ಬಂದಿಳಿದ ಬಳಿಕ ಮೋದಿ ಬ್ಲೇರ್ ಹೌಸ್‌ಗೆ ಭೇಟಿ ನೀಡಿದ್ದರು. ಇದೇ ವೇಳೆ ಭಾರತೀಯ ಸಮುದಾಯದವರು ಮೋದಿ ಅವರನ್ನು ಸ್ವಾಗತಿಸಿದ್ದಾರೆ. ಭಾರತ್ ಮಾತಾ ಕಿ ಜೈ, ಮೋದಿ ಮೋದಿ ಎಂದು ಘೋಷಣೆ ಕೂಗಿದ್ದಾರೆ. ಭಾರತದ ಪ್ರಧಾನಿಯವರ ಅಮೆರಿಕ ಭೇಟಿಯನ್ನು ಗುರುತಿಸಲು ಬ್ಲೇರ್ ಹೌಸ್‌ನಲ್ಲಿ ಭಾರತದ ತ್ರಿವರ್ಣ ಧ್ವಜಗಳನ್ನು ಹಾಕಲಾಗಿದೆ.



ಅಮೆರಿಕಕ್ಕೆ ತೆರಳಿರುವ ಪ್ರಧಾನಿ ಎರಡು ದಿನ ಅಲ್ಲಿಯೇ ಇರಲಿದ್ದಾರೆ. ಅಮೆರಿಕದ ರಾಷ್ಟ್ರೀಯ ಗುಪ್ತಚರ ವಿಭಾಗದ ನಿರ್ದೇಶಕಿ (ಡಿಎನ್‌ಐ) ತುಳಸಿ ಗಬ್ಬಾರ್ಡ್ ಅವರನ್ನು ಭೇಟಿ ಮಾಡಿದ್ದು, ಈ ವೇಳೆ ಭಾರತ–ಅಮೆರಿಕ ನಡುವಿನ ಬಾಂಧವ್ಯದ ಬಗ್ಗೆ ಚರ್ಚೆ ನಡೆಸಿದ್ದಾರೆ. ಮೋದಿ ಅಮೆರಿಕ ಅಧ್ಯಕ್ಷರ ಅತಿಥಿ ಗೃಹ ಬ್ಲೇರ್‌ ಹೌಸ್‌ನಲ್ಲಿ ತಂಗಿದ್ದಾರೆ. ಅಮೆರಿಕ ಭೇಟಿ ಹಾಗೂ ತುಳಸಿ ಗಬ್ಬಾರ್ಡ್ ಅವರ ಭೇಟಿಯಾದ ಕ್ಷಣದ ಬಗ್ಗೆ ಟ್ವೀಟ್‌ ಮಾಡಿರುವ ಪ್ರಧಾನಿ ಅಮೆರಿಕದ ರಾಷ್ಟ್ರೀಯ ಗುಪ್ತಚರ ವಿಭಾಗದ ನಿರ್ದೇಶಕಿ ತುಲಸಿ ಗಬ್ಬಾರ್ಡ್ ಅವರನ್ನು ವಾಷಿಂಗ್ಟನ್ ಡಿಸಿಯಲ್ಲಿ ಭೇಟಿಯಾಗಿದ್ದು, ಅವರಿಗೆ ಅಭಿನಂದನೆ ಸಲ್ಲಿಸಿದ್ದೇನೆ. ಭಾರತ-ಅಮೆರಿಕ ನಡುವಿನ ಬಾಂಧವ್ಯದ ಬಗ್ಗೆ ಚರ್ಚೆ ನಡೆಸಿದ್ದೇವೆ’ ಎಂದು ಹೇಳಿದ್ದಾರೆ.



ಈ ಸುದ್ದಿಯನ್ನೂ ಓದಿ: Narendra Modi: ಫೆ.13ರಂದು ಡೊನಾಲ್ಡ್ ಟ್ರಂಪ್‌ ಭೇಟಿಯಾಗಲಿರುವ ನರೇಂದ್ರ ಮೋದಿ!

ಮೋದಿ ಇಂದು ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರನ್ನು ಭೇಟಿ ಮಾಡಲಿದ್ದಾರೆ. ಟ್ರಂಪ್‌ ಎರಡನೇ ಬಾರಿಗೆ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ನಂತರ ಇದು ಮೋದಿ ಅವರ ಮೊದಲ ಭೇಟಿಯಾಗಿದೆ. ಈ ಭೇಟಿಯು ಎರಡೂ ದೇಶಕ್ಕೂ ಮಹತ್ವದಾಗಿದ್ದು, ಪ್ರಾದೇಶಿಕ ಮತ್ತು ಅಂತರರಾಷ್ಟ್ರೀಯ ಪರಿಸ್ಥಿತಿಯ ಕುರಿತು ಚರ್ಚೆಗಳ ಜೊತೆಗೆ ಹಲವಾರು ದ್ವಿಪಕ್ಷೀಯ ವಿಷಯಗಳು ಚರ್ಚೆಯಾಗುವ ನಿರೀಕ್ಷೆಯಿದೆ. ವ್ಯಾಪಾರ, ಹೂಡಿಕೆ, ಇಂಧನ, ರಕ್ಷಣೆ, ತಂತ್ರಜ್ಞಾನ ಮತ್ತು ವಲಸೆ ಮುಂತಾದ ಕ್ಷೇತ್ರಗಳಲ್ಲಿ ಭಾರತ- ಅಮೆರಿಕದ ಸಹಕಾರ ಹೆಚ್ಚಿಸುವ ಬಗ್ಗೆ ಉಭಯ ನಾಯಕರು ಚರ್ಚಿಸಬಹುದು ಎಂದು ಹೇಳಲಾಗಿದೆ.