ಕತಾರ್: ಬಿಲ್ಲವಾಸ್ ಕತಾರ್ (billawas Qatar) ವತಿಯಿಂದ ವಿದ್ಯಾರ್ಥಿಗಳಲ್ಲಿ ತಮ್ಮ ಸಾಮರ್ಥ್ಯದ ಮೇಲೆ ಭರವಸೆ, ಪ್ರೋತ್ಸಾಹ ಮತ್ತು ನಂಬಿಕೆಯನ್ನು ಹೆಚ್ಚಿಸುವ ಸಲುವಾಗಿ 100 ಅರ್ಹ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಣೆ (Scholarship) ಕಾರ್ಯಕ್ರಮ ಇತ್ತೀಚೆಗೆ ಕುದ್ರೋಳಿಯ ಶ್ರೀ ವಿಶ್ವನಾಥ ಕಲ್ಯಾಣ ಮಂಟಪದಲ್ಲಿ (Kudroli Sri Vishwanath Kalyana Mantapa) ನಡೆಯಿತು. ಕುದ್ರೋಳಿಯ ಶ್ರೀ ಗೋಕರ್ಣನಾಥ ಕ್ಷೇತ್ರ ಮತ್ತು ಶ್ರೀ ಗುರು ಚಾರಿಟೇಬಲ್ ಟ್ರಸ್ಟ್ ಸಹಯೋಗದೊಂದಿಗೆ ನಡೆದ ಕಾರ್ಯಕ್ರಮದಲ್ಲಿ ಬಿಲ್ಲವಾಸ್ ಕತಾರ್‌ನ ಅಧ್ಯಕ್ಷೆ ಅಪರ್ಣ ಶರತ್ ಅಧ್ಯಕ್ಷತೆ ವಹಿಸಿದ್ದರು.
ಶಿಕ್ಷಣವನ್ನು ಬೆಂಬಲಿಸಲು ಮತ್ತು ಮುಂದಿನ ಪೀಳಿಗೆಯನ್ನು ಸಬಲೀಕರಣಗೊಳಿಸುವ ಮಹತ್ವದ ಹೆಜ್ಜೆಯಾಗಿ ಬಿಲ್ಲವಾಸ್ ಕತಾರ್ ವತಿಯಿಂದ ಮೇ 3ರಂದು ನಡೆದ ಕಾರ್ಯಕ್ರಮದಲ್ಲಿ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ಅಧ್ಯಕ್ಷರಾದ ಜಯರಾಜ್ ಎಚ್. ಸೋಮಸುಂದರಂ, ಶಾಸಕರಾದ ಉಮಾನಾಥ್ ಕೋಟ್ಯಾನ್, ಶ್ರೀ ಗೋಕರ್ಣನಾಥ ಕ್ಷೇತ್ರದ ಕೋಶಾಧಿಕಾರಿ ಪದ್ಮರಾಜ್ ಆರ್. ಪೂಜಾರಿ, ಮಂಗಳೂರಿನ ಮಾನಸಿಕ ಆರೋಗ್ಯ ತಜ್ಞರಾದ ಡಾ. ರಮೀಳಾ ಶೇಖರ್, ಬಿಲ್ಲವಾಸ್ ಕತಾರ್ ಸ್ಥಾಪಕ ಅಧ್ಯಕ್ಷರಾದ ದಿವಾಕರ ಪೂಜಾರಿ, ಮಂಗಳೂರು ಶ್ರೀ ಗುರು ಚಾರಿಟಬಲ್ ಟ್ರಸ್ಟ್ ಅಧ್ಯಕ್ಷರಾದ ಸೀತಾರಾಮ್ ಹೆಚ್. ಪಾಲ್ಗೊಂಡಿದ್ದರು.
ದೇಶದಾದ್ಯಂತ ಹೀಟ್‌ವೇವ್ ಅಲರ್ಟ್: ನಗರಗಳಲ್ಲಿ ಬಿಸಿಲಿನ ಕಾಟ, ಜನಜೀವನ ಅಸ್ತವ್ಯಸ್ತ
ಕಾರ್ಯಕ್ರಮದಲ್ಲಿ ಅತ್ಯುತ್ತಮ ರಾಷ್ಟ್ರೀಯ ಸಾಧನೆಗಳಿಗಾಗಿ ಕೆಡೆಟ್ ಲಿಶಾ. ಡಿ.ಸುವರ್ಣ ಅವರನ್ನು ಸಮ್ಮಾನಿಸಲಾಯಿತು. ಇವರು ಗಣರಾಜ್ಯೋತ್ಸವ ಶಿಬಿರವನ್ನು ಪೂರ್ಣಗೊಳಿಸಿದ ದೇಶದ ಅಗ್ರ ಐದು ಕೆಡೆಟ್‌ಗಳಲ್ಲಿ ಒಬ್ಬರಾಗಿದ್ದು, ಕರ್ನಾಟಕ-ಗೋವಾ ನಿರ್ದೇಶನಾಲಯದಿಂದ 'ಅತ್ಯುತ್ತಮ ಕೆಡೆಟ್ ನೌಕಾಪಡೆ (ಸೀನಿಯರ್ ವಿಂಗ್)' ಎಂಬ ಬಿರುದನ್ನು ಗಳಿಸಿದ್ದರು.
ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿಗೆ ‘ಮೆಲೊಡಿʼ ಚಾಕೊಲೇಟ್ ಉಡುಗೊರೆ ನೀಡಿದ ಮೋದಿ; ವಿಡಿಯೊ ವೈರಲ್
ಕೆಡೆಟ್ ಲಿಶಾ. ಡಿ.ಸುವರ್ಣ ಅವರು ಸೇನಾ ಮುಖ್ಯಸ್ಥ ಜನರಲ್ ಉಪೇಂದ್ರ ದ್ವಿವೇದಿ ಅವರಿಂದ ಪ್ರತಿಷ್ಠಿತ ಅಖಿಲ ಭಾರತ 'ಅತ್ಯುತ್ತಮ ಧ್ವಜ ಪ್ರದೇಶ ಬ್ರೀಫರ್' ಪ್ರಶಸ್ತಿಯನ್ನು ಕೂಡ ಸ್ವೀಕರಿಸಿದ್ದಾರೆ. ಸಮಾರಂಭದಲ್ಲಿ ಒಟ್ಟು 100 ಅರ್ಹ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನಗಳನ್ನು ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಗಣ್ಯರು ವಿದ್ಯಾರ್ಥಿಗಳು ಒದಗಿಸಲಾದ ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳಲು, ತಮ್ಮ ಗುರಿಗಳ ಮೇಲೆ ಗಮನಹರಿಸಲು ಮತ್ತು ಶ್ರೇಷ್ಠತೆಗಾಗಿ ಶ್ರಮಿಸಲು ಪ್ರೋತ್ಸಾಹಿಸಿದರು. ಸಾಮೂಹಿಕ ಕೊಡುಗೆಗಳು, ಶಾಶ್ವತ ಬದಲಾವಣೆಯನ್ನು ಉಂಟುಮಾಡಬಹುದು ಎಂದು ಹೇಳಿ ಶೈಕ್ಷಣಿಕ ಸಹಾಯಧನ ಬೆಂಬಲಿಸುವುದನ್ನು ಮುಂದುವರಿಸಲು ಕರೆ ನೀಡಿದರು.