ದೋಹಾ, ಜೂ. 22: ಕತಾರ್‌ನ ರಾಸ್ ಲಫಾನ್ ಕೈಗಾರಿಕಾ ನಗರದಲ್ಲಿರುವ (Ras Laffan Industrial City) ಬರ್ಜಾನ್ ದ್ರವೀಕೃತ ನೈಸರ್ಗಿಕ ಅನಿಲ (Barzan Liquefied Natural Gas-LNG) ಘಟಕದಲ್ಲಿ ಭಾನುವಾರ ಸಂಜೆ ಸಂಭವಿಸಿದ ಭೀಕರ ಸ್ಫೋಟದಲ್ಲಿ ಭಾರತೀಯರು ಹಾಗೂ ಪಾಕಿಸ್ತಾನ ಮೂಲದ ಕಾರ್ಮಿಕರು ಸೇರಿ 13 ಮಂದಿ ಮೃತಪಟ್ಟಿದ್ದು, 66 ಮಂದಿ ಗಾಯಗೊಂಡಿದ್ದಾರೆ. ಕತಾರ್ ಇಂಧನ ಸಚಿವ ಹಾಗೂ ಕತಾರ್ ಎನರ್ಜಿ ಮುಖ್ಯಸ್ಥ ಸಾದ್ ಅಲ್-ಕಾಬಿ ಸುದ್ದಿಗೋಷ್ಠಿಯಲ್ಲಿ ಈ ಮಾಹಿತಿಯನ್ನು ದೃಢಪಡಿಸಿದ್ದು, ಗಾಯಾಳುಗಳಿಗೆ ಚಿಕಿತ್ಸೆ ನೀಡಲಾಗುತ್ತಿದ್ದು, ಯಾರಿಗೂ ಜೀವಾಪಾಯ ಇಲ್ಲ ಎಂದು ತಿಳಿಸಿದ್ದಾರೆ. ಮೃತರ ಕುಟುಂಬಗಳಿಗೆ ಅವರು ಸಂತಾಪ ಸೂಚಿಸಿದ್ದಾರೆ.
ಅಧಿಕಾರಿಗಳ ಪ್ರಕಾರ, ಘಟಕದಲ್ಲಿ ತಾಂತ್ರಿಕ ದೋಷದಿಂದ ಈ ಅವಘಡ ಸಂಭವಿಸಿದ್ದು, ಇದು ಯಾವುದೇ ವಿಧ್ವಂಸಕ ಕೃತ್ಯ ಅಥವಾ ಉದ್ದೇಶಪೂರ್ವಕ ದಾಳಿಯಲ್ಲ ಎಂದು ಸ್ಪಷ್ಟಪಡಿಸಲಾಗಿದೆ. ಘಟನೆಯ ಕುರಿತು ಉನ್ನತ ಮಟ್ಟದ ತನಿಖೆಗೆ ಆದೇಶಿಸಲಾಗಿದೆ
ಕತಾರ್ ಇಂಧನ ಸಚಿವ ಹಾಗೂ ಕತಾರ್ ಎನರ್ಜಿ ಮುಖ್ಯಸ್ಥ ಸಾದ್ ಅಲ್-ಕಾಬಿ ಸುದ್ದಿಗೋಷ್ಠಿಯಲ್ಲಿ ಈ ಮಾಹಿತಿಯನ್ನು ದೃಢಪಡಿಸಿದ್ದು, ಗಾಯಾಳುಗಳಿಗೆ ಚಿಕಿತ್ಸೆ ನೀಡಲಾಗುತ್ತಿದ್ದು, ಯಾರಿಗೂ ಜೀವಾಪಾಯ ಇಲ್ಲ ಎಂದು ತಿಳಿಸಿದ್ದಾರೆ. ಮೃತರ ಕುಟುಂಬಗಳಿಗೆ ಅವರು ಸಂತಾಪ ಸೂಚಿಸಿದ್ದಾರೆ.
ಕತಾರ್ ಸ್ಫೋಟದ ಮಾಹಿತಿ:
ಸ್ಫೋಟದ ತೀವ್ರತೆ ರಾಸ್ ಲಫಾನ್‌ನಿಂದ ಸುಮಾರು 70 ಕಿಲೋ ಮೀಟರ್ ದೂರದಲ್ಲಿರುವ ದೋಹಾ ನಗರದಲ್ಲಿಯೂ ಅನುಭವವಾಗಿದ್ದು, ಹಲವು ಕಟ್ಟಡಗಳ ಕಿಟಕಿಗಳು ನಡುಗಿದ ಪರಿಣಾಮ ಸ್ಥಳೀಯರಲ್ಲಿ ಆತಂಕ ಮೂಡಿಸಿತು.
ಇರಾನ್ ದಾಳಿ ನಡೆಸಿದ್ದ ಕತಾರ್‌ನ ನೈಸರ್ಗಿಕ ಅನಿಲ ಕೇಂದ್ರದಲ್ಲಿ ಸ್ಫೋಟ
ದೋಹಾದಲ್ಲಿರುವ ಭಾರತೀಯ ರಾಯಭಾರ ಕಚೇರಿ ಘಟನೆಯಲ್ಲಿ ಮೃತಪಟ್ಟವರ ಕುಟುಂಬಗಳಿಗೆ ಸಂತಾಪ ಸೂಚಿಸಿದ್ದು, ಗಾಯಗೊಂಡಿರುವ ಭಾರತೀಯರ ಬಗ್ಗೆ ಕತಾರ್ ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿರುವುದಾಗಿ ತಿಳಿಸಿದೆ.
ಗಮನಾರ್ಹವಾಗಿ, 2025ರ ಡಿಸೆಂಬರ್‌ನಿಂದ ತುರ್ತು ನಿರ್ವಹಣಾ ಕಾಮಗಾರಿಗಾಗಿ ಸ್ಥಗಿತಗೊಂಡಿದ್ದ ಈ ಘಟಕವನ್ನು ಕೇವಲ ಎರಡು ದಿನಗಳ ಹಿಂದಷ್ಟೇ ಮರುಪ್ರಾರಂಭಿಸಲಾಗಿತ್ತು. ಈ ವರ್ಷದ ಆರಂಭದಲ್ಲಿ ಇರಾನ್ ಕ್ಷಿಪಣಿ ದಾಳಿಯಿಂದ ರಾಸ್ ಲಫಾನ್ ಅನಿಲ ಸಂಸ್ಕರಣಾ ಘಟಕಗಳಿಗೆ ಹಾನಿಯಾಗಿದ್ದು, ಉತ್ಪಾದನೆ ಮೇಲೆ ಪರಿಣಾಮ ಬೀರಿತ್ತು. ಆದಾಗ್ಯೂ, ಇತ್ತೀಚಿನ ಸ್ಫೋಟದಿಂದ ಕತಾರ್‌ನ ಎಲ್‌ಎನ್‌ಜಿ ರಫ್ತು ಕಾರ್ಯಾಚರಣೆಗೆ ಯಾವುದೇ ಅಡ್ಡಿಯಾಗಿಲ್ಲ ಎಂದು ಕತಾರ್ ಸರ್ಕಾರ ಸ್ಪಷ್ಟಪಡಿಸಿದೆ.