ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Missile Strikes: ಉಕ್ರೇನ್‌ನಲ್ಲಿರುವ ಭಾರತೀಯ ಔಷಧ ಕಂಪನಿ ಮೇಲೆ ರಷ್ಯಾ ಕ್ಷಿಪಣಿ ದಾಳಿ

ಉಕ್ರೇನ್ ನಲ್ಲಿರುವ ಭಾರತೀಯ ಔಷಧ ಕಂಪನಿ ಕುಸುಮ್ ನ ಗೋದಾಮಿನ ಮೇಲೆ ರಷ್ಯಾ ಕ್ಷಿಪಣಿ ದಾಳಿ ನಡೆಸಿದೆ. ರಷ್ಯಾ "ಉದ್ದೇಶಪೂರ್ವಕವಾಗಿ" ಉಕ್ರೇನ್‌ನಲ್ಲಿರುವ ಭಾರತೀಯ ವ್ಯವಹಾರಗಳನ್ನು ಗುರಿಯಾಗಿಸಿಕೊಂಡು ದಾಳಿ ಮಾಡಿದೆ ಎಂದು ಉಕ್ರೇನ್‌ ರಾಯಭಾರ ಕಚೇರಿ ಆರೋಪಿಸಿದೆ.

ಕೈವ್‌: ಉಕ್ರೇನ್ ನಲ್ಲಿರುವ ಭಾರತೀಯ ಔಷಧ ಕಂಪನಿ ಕುಸುಮ್ ನ ಗೋದಾಮಿನ ಮೇಲೆ ರಷ್ಯಾ ಕ್ಷಿಪಣಿ ದಾಳಿ ನಡೆಸಿದೆ. ರಷ್ಯಾ "ಉದ್ದೇಶಪೂರ್ವಕವಾಗಿ" ಉಕ್ರೇನ್‌ನಲ್ಲಿರುವ ಭಾರತೀಯ ವ್ಯವಹಾರಗಳನ್ನು ಗುರಿಯಾಗಿಸಿಕೊಂಡಿದೆ ಎಂದು ಉಕ್ರೇನ್‌ ರಾಯಭಾರ ಕಚೇರಿ ಆರೋಪಿಸಿದೆ. ಮಕ್ಕಳು ಮತ್ತು ವೃದ್ಧರಿಗೆ ಮೀಸಲಾದ ಔಷಧಿಗಳನ್ನು ನಾಶಪಡಿಸುತ್ತದೆ” ಎಂದು ಅದು ತನ್ನ ಹೇಳಿಕೆಯಲ್ಲಿ ತಿಳಿಸಿದೆ. ಭಾರತೀಯ ಉದ್ಯಮಿ ರಾಜೀವ್ ಗುಪ್ತಾ ಒಡೆತನದ ಕುಸುಮ್ ಕಂಪನಿಯ ಮೇಲೆ ದಾಲಿ ನಡೆದಿದೆ. ಇದು ಉಕ್ರೇನ್‌ನ ದೊಡ್ಡ ಔಷಧ ಕಂಪನಿಗಳಲ್ಲೊಂದು.

ಇಂದು, ರಷ್ಯಾದ ಕ್ಷಿಪಣಿಯು ಉಕ್ರೇನ್‌ನಲ್ಲಿರುವ ಭಾರತೀಯ ಔಷಧ ಕಂಪನಿ ಕುಸುಮ್‌ನ ಗೋದಾಮಿನ ಮೇಲೆ ದಾಳಿ ಮಾಡಿದೆ. ಭಾರತದ ಜೊತೆ 'ವಿಶೇಷ ಸ್ನೇಹ' ಎಂದು ಹೇಳಿಕೊಳ್ಳುತ್ತಾ, ಮಾಸ್ಕೋ ಉದ್ದೇಶಪೂರ್ವಕವಾಗಿ ಭಾರತೀಯ ವ್ಯವಹಾರಗಳನ್ನು ಗುರಿಯಾಗಿಸಿಕೊಂಡಿದೆ - ಮಕ್ಕಳು ಮತ್ತು ವೃದ್ಧರಿಗೆ ಮೀಸಲಾದ ಔಷಧಿಗಳನ್ನು ನಾಶಪಡಿಸುತ್ತಿದೆ" ಎಂದು ಉಕ್ರೇನ್‌ನ ರಾಯಭಾರಿ ಕಚೇರಿ ಆರೋಪಿಸಿದೆ. ಕಂಪನಿಯ ಉತ್ಪನ್ನಗಳು ಉಕ್ರೇನ್ ನಾದ್ಯಂತ ನಿರ್ಣಾಯಕವಾಗಿವೆ ಏಕೆಂದರೆ ಅವು ಮೂಲಭೂತ ಔಷಧಿಗಳ ಲಭ್ಯತೆಯನ್ನು ಖಚಿತಪಡಿಸುತ್ತವೆ ಎಂದು ಮೂಲಗಳು ತಿಳಿಸಿವೆ. ಗೋದಾಮಿನ ಮೇಲೆ ಕ್ಷಿಪಣಿಯಲ್ಲ, ಡ್ರೋನ್ ನೇರವಾಗಿ ದಾಳಿ ನಡೆಸಿದೆ ಎಂದು ಮಾಲೀಕ ತಿಳಿಸಿದ್ದಾರೆ.



ಇಂದು ಬೆಳಿಗ್ಗೆ ರಷ್ಯಾದ ಡ್ರೋನ್‌ಗಳು ಕೈವ್‌ನಲ್ಲಿರುವ ಪ್ರಮುಖ ಔಷಧ ಗೋದಾಮನ್ನು ಸಂಪೂರ್ಣವಾಗಿ ನಾಶಪಡಿಸಿದವು, ವೃದ್ಧರು ಮತ್ತು ಮಕ್ಕಳಿಗೆ ಅಗತ್ಯವಿರುವ ಔಷಧಿಗಳ ದಾಸ್ತಾನುಗಳನ್ನು ಸುಟ್ಟುಹಾಕಿದವು. ಉಕ್ರೇನಿಯನ್ ನಾಗರಿಕರ ವಿರುದ್ಧ ರಷ್ಯಾದ ಭಯೋತ್ಪಾದನಾ ಅಭಿಯಾನ ಮುಂದುವರೆದಿದೆ" ಎಂದು ರಾಯಭಾರಿ ಮಾರ್ಟಿನ್ X ನಲ್ಲಿ ಪೋಸ್ಟ್‌ನಲ್ಲಿ ಹೇಳಿದ್ದಾರೆ.

ಈ ಸುದ್ದಿಯನ್ನೂ ಓದಿ: Drone Attack On Russia : ಮಾಸ್ಕೋ ಮೇಲೆ ಉಕ್ರೇನ್‌ನಿಂದ ಬರೋಬ್ಬರಿ 337 ಡ್ರೋನ್‌ಗಳ ದಾಳಿ; ಓರ್ವ ಸಾವು, ಮೂವರಿಗೆ ಗಾಯ

ಭಾರತವು ಉಕ್ರೇನ್ ಮತ್ತು ರಷ್ಯಾ ನಡುವಿನ ಹಿಂಸಾಚಾರವನ್ನು ಕೊನೆಗೊಳಿಸಲು ಮತ್ತು ಶಾಂತಿಯನ್ನು ಕೊನೆಗೊಳಿಸಲು ಕರೆ ನೀಡಿದ್ದರೂ, ಬಹಿರಂವಾಗಿ ಯಾವುದೇ ಪಕ್ಷದ ಪರ ವಹಿಸಿರಲಿಲ್ಲ. ಫೆಬ್ರವರಿ 2022 ರಲ್ಲಿ ಉಕ್ರೇನ್ ಆಕ್ರಮಣದ ನಂತರ ಭಾರತವು ರಷ್ಯಾದಿಂದ ಹೆಚ್ಚಿನ ಪ್ರಮಾಣದ ತೈಲವನ್ನು ಖರೀದಿಸುತ್ತಿದೆ. ಫೆಬ್ರವರಿಯಲ್ಲಿ ಭಾರತ ರಷ್ಯಾದಿಂದ ದಿನಕ್ಕೆ 1.48 ಮಿಲಿಯನ್ ಬ್ಯಾರೆಲ್ (bpd) ಕಚ್ಚಾ ತೈಲವನ್ನು ಆಮದು ಮಾಡಿಕೊಂಡಿದ್ದು, ಹಿಂದಿನ ತಿಂಗಳು ಇದು 1.67 ಮಿಲಿಯನ್ ಬ್ಯಾರೆಲ್ ಆಗಿತ್ತು.