ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ʼʼಲಕ್ಷಾಂತರ ಭಾರತೀಯ ನಾವಿಕರ ಸುರಕ್ಷತೆಯೇ ನಮ್ಮ ಆದ್ಯತೆʼʼ: ಡೊನಾಲ್ಡ್‌ ಟ್ರಂಪ್‌ಗೆ ಖಡಕ್‌ ಸಂದೇಶ ರವಾನಿಸಿದ ಪ್ರಧಾನಿ ನರೇಂದ್ರ ಮೋದಿ

Narendra Modi: ಅಮರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಜತೆ ನಡೆದ ದ್ವಿಪಕ್ಷೀಯ ಮಾತುಕತೆ ವೇಳೆ ಪ್ರಧಾನಿ ನರೇಂದ್ರ ಮೋದಿ, ಇತ್ತೀಚೆಗೆ ಒಮಾನ್‌ ಕೊಲ್ಲಿಯಲ್ಲಿ ಅಮೆರಿಕ ನೌಕಾಪಡೆಯ ಶಕ್ತಿಶಾಲಿ ಡ್ರೋನ್‌ ದಾಳಿಯಿಂದ ವಾಣಿಜ್ಯ ನೌಕೆಯಲ್ಲಿದ್ದ ಮೂವರು ಭಾರತೀಯ ನಾವಿಕರು ದರ್ಮರಣಕ್ಕೀಡಾದ ಘಟನೆಗೆ ಕಳವಳ ವ್ಯಕ್ತಪಡಿಸಿದರು. ಜತೆಗೆ ʼಲಕ್ಷಾಂತರ ಭಾರತೀಯ ನಾವಿಕರ ಸುರಕ್ಷತೆಯೇ ನಮ್ಮ ಆದ್ಯತೆʼʼ ಎಂದು ತಿಳಿಸಿದರು.

ನರೇಂದ್ರ ಮೋದಿ ಮತ್ತು ಡೊನಾಲ್ಡ್‌ ಟ್ರಂಪ್‌ ಮಾತುಕತೆ

ಪ್ಯಾರಿಸ್‌, ಜೂ. 17: ಫ್ರಾನ್ಸ್‌ನಲ್ಲಿ ಅಮರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ (Donald Trump) ಜತೆ ನಡೆದ ದ್ವಿಪಕ್ಷೀಯ ಮಾತುಕತೆ ವೇಳೆ ಪ್ರಧಾನಿ ನರೇಂದ್ರ ಮೋದಿ (Narendra Modi), ಇತ್ತೀಚೆಗೆ ಒಮಾನ್‌ ಕೊಲ್ಲಿಯಲ್ಲಿ ಅಮೆರಿಕ ನೌಕಾಪಡೆಯ ಶಕ್ತಿಶಾಲಿ ಡ್ರೋನ್‌ ದಾಳಿಯಿಂದ ವಾಣಿಜ್ಯ ನೌಕೆಯಲ್ಲಿದ್ದ ಮೂವರು ಭಾರತೀಯ ನಾವಿಕರು ದರ್ಮರಣಕ್ಕೀಡಾದ ಘಟನೆಗೆ ಕಳವಳ ವ್ಯಕ್ತಪಡಿಸಿದರು. ಲಕ್ಷಾಂತರ ಭಾರತೀಯ ನಾವಿಕರ ಸುರಕ್ಷತೆ ಮತ್ತು ಭದ್ರತೆ ಭಾರತದ ಆದ್ಯತೆ ಎಂದೂ ಮೋದಿ ಒತ್ತಿ ಹೇಳಿದರು. ಈ ಸಮಸ್ಯೆಯನ್ನು ಪರಿಹರಿಸಲು ವಾಷಿಂಗ್ಟನ್ ಮತ್ತು ನವದೆಹಲಿ ಒಟ್ಟಿಗೆ ಕೆಲಸ ಮಾಡಲಿದೆ ಎಂದು ಇದೇ ವೇಳೆ ಟ್ರಂಪ್‌ ಭರವಸೆ ನೀಡಿದರು.

"ಯಾವಾಗಲೂ ನೌಕಾಯಾನ ಸ್ವಾತಂತ್ರ್ಯವನ್ನು ಖಚಿತಪಡಿಸಿಕೊಳ್ಳಬೇಕು. ಲಕ್ಷಾಂತರ ಭಾರತೀಯ ನಾವಿಕರು ವಿಶ್ವದ ವಿವಿಧ ಸಮುದ್ರಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಅವರ ಭದ್ರತೆಯು ಅಷ್ಟೇ ಮುಖ್ಯ" ಎಂದು ಪ್ರಧಾನಿ ಮೋದಿ ತಿಳಿಸಿದರು.

ಮೋದಿ-ಟ್ರಂಪ್‌ ಮಾತುಕತೆ:



ಇರಾನ್‌ನ ಹೊರ್ಮುಜ್ ಜಲಸಂಧಿ ಮತ್ತು ಇರಾನ್‌ನ ಬಂದರಿನ ಮೇಲೆ ಅಮೆರಿಕ ದಿಗ್ಬಂಧನ ಹೇರಿದ್ದರಿಂದ ಇತ್ತೀಚಿನ ವಾರಗಳಲ್ಲಿ ಒಮಾನ್‌ ಕೊಲ್ಲಿಯಲ್ಲಿ ಭಾರತೀಯ ಸಿಬ್ಬಂದಿಯನ್ನು ಹೊತ್ತೊಯ್ಯುವ ಹಲವು ಹಡಗುಗಳು ದಾಳಿಗೆ ಒಳಗಾಗಿವೆ. ಅಂತಹ ಒಂದು ದಾಳಿಯಲ್ಲಿ, ಮೂವರು ಭಾರತೀಯ ನಾವಿಕರು ಮೃತಪಟ್ಟಿದ್ದರು. ಇದಕ್ಕೆ ಸಂಬಂಧಿಸಿ ಪ್ರಧಾನಿ ಮಾತೇ ಆಡಿಲ್ಲ ಎಂದು ವಿಪಕ್ಷಗಳು ಆರೋಪಿಸುತ್ತಿರುವ ಮಧ್ಯೆ ಮೋದಿ ಭಾರತದ ಕಠಿಣ ಸಂದೇಶ ರವಾನಿಸಿದರು.

ಗಲ್ಫ್‌ನಲ್ಲಿದ್ದಾರೆ 18,000 ಭಾರತೀಯ ನಾವಿಕರು; ಉದ್ವಿಗ್ನತೆಯ ನಡುವೆಯೂ ಹೊರ್ಮುಜ್ ಜಲಸಂಧಿ ದಾಟಿದ 15 ಹಡಗುಗಳು

ಇರಾನ್‌ನೊಂದಿಗಿನ ಶಾಂತಿ ಒಪ್ಪಂದವು ನಾವಿಕರ ಸುರಕ್ಷತೆ, ಭದ್ರತೆ ಮತ್ತು ಸಮುದ್ರ ಸಂಚಾರದ ಸ್ವಾತಂತ್ರ್ಯವನ್ನು ಖಚಿತಪಡಿಸಿಕೊಳ್ಳಲಿದೆ ಎಂಬ ಭರವಸೆ ವ್ಯಕ್ತಪಡಿಸಿದರು. "ಇರಾನ್‌ನೊಂದಿಗಿನ ಒಪ್ಪಂದದಲ್ಲಿ ನಾವಿಕರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲಾಗುತ್ತದೆ ಮತ್ತು ಆದ್ಯತೆ ನೀಡಲಾಗುತ್ತದೆ ಎಂಬ ನನಗೆ ವಿಶ್ವಾಸವಿದೆ" ಎಂದು ಮೋದಿ ಹೇಳಿದರು. ಮೋದಿ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಟ್ರಂಪ್, ವಿಚಾರದಲ್ಲಿ ಅಮೆರಿಕವು ಭಾರತದೊಂದಿಗೆ ಸೇರಿ ಕೆಲಸ ಮಾಡಲಿದೆ ಎಂದರು.

ಮೋದಿ ಅಭಿನಂದನೆ

ಇರಾನ್‌ ಜತೆ ಅಮೆರಿಕ ಮಾಡಿಕೊಂಡಿರುವ ಶಾಂತಿ ಒಪ್ಪಂದಕ್ಕೆ ಡೊನಾಲ್ಡ್ ಟ್ರಂಪ್ ಅವರನ್ನು ನರೇಂದ್ರ ಮೋದಿ ಅಭಿನಂದಿಸಿದರು. "ಪಶ್ಚಿಮ ಏಷ್ಯಾದಲ್ಲಿನ ಶಾಂತಿ ಪ್ರಯತ್ನಗಳನ್ನು ಮುನ್ನಡೆಸುವ ನಿಮ್ಮ ನಾಯಕತ್ವವನ್ನು ಶ್ಲಾಘಿಸುತ್ತೇನೆ" ಎಂದು ಹೇಳಿದರು. ಭಾರತ ಮತ್ತು ಅಮೆರಿಕ ನಡುವಿನ ಬಲವಾದ ಸಂಬಂಧಗಳನ್ನು ಪುನರುಚ್ಚರಿಸುತ್ತ ಟ್ರಂಪ್, "ನಾನು ಅಧ್ಯಕ್ಷನಾಗಿರುವವರೆಗೂ ಭಾರತಕ್ಕೆ ಉತ್ತಮ ಸ್ನೇಹಿತನಾಗಿರುತ್ತೇನೆ. ಅಮೆರಿಕದ ಪ್ರತಿಯೊಬ್ಬರೂ ಭಾರತವನ್ನು ಪ್ರೀತಿಸುತ್ತಾರೆ ಮತ್ತು ಮೋದಿ ಅವರ ಬಗ್ಗೆ ಅವರಿಗೆ ಅಪಾರ ಗೌರವವಿದೆʼʼ ಎಂದರು.

ಓಮನ್‌ ಕರಾವಳಿಯಲ್ಲಿದ್ದ ಹಡಗಿನ ಮೇಲೆ ಅಮೆರಿಕದಿಂದ ಭೀಕರ ದಾಳಿ: ಇಬ್ಬರು ಭಾರತೀಯ ನಾವಿಕರು ಸಾವು

ಜಗತ್ತೇ ಕುತೂಹಲದಿಂದ ನಿರೀಕ್ಷಿಸುತ್ತಿದ್ದ ಭೇಟಿ

ಜಿ7 ಶೃಂಗಸಭೆಯ ಸಂದರ್ಭದಲ್ಲಿ ಪ್ರಧಾನಿ ಮೋದಿ ಮತ್ತು ಟ್ರಂಪ್ ಭೇಟಿಯಾಗಿದ್ದು, ಇದನ್ನು ಜಗತ್ತೇ ಕುತೂಹಲದಿಂದ ಗಮನಿದೆ. ಭಾರತ-ಅಮೆರಿಕ ನಡುವಿನ ತೆರಿಗೆ ಸಮರ, ಬಗೆಹರಿಯದ ವ್ಯಾಪಾರ ಮಾತುಕತೆಗಳು ಮತ್ತು ತೈಲ ಖರೀದಿಗಳ ಹಿನ್ನೆಲೆಯಲ್ಲಿನ ಭೌಗೋಳಿಕ ರಾಜಕೀಯ ಘರ್ಷಣೆಗಳ ನಂತರ ಹದಗೆಟ್ಟ ಸಂಬಂಧದ ಪುನಃಸ್ಥಾಪನೆ ಮುಂತಾದ ಪ್ರಮುಖ ವಿಚಾರಗಳ ಬಗ್ಗೆ ಉಭಯ ನಾಯಕರು ಮಾತುಕತೆ ನಡೆಸಿದರು.

ಟ್ರಂಪ್‌ ಹೊರತಾಗಿ ಮೋದಿ ಯುಎಇ ಅಧ್ಯಕ್ಷ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್, ಕೆನಡಾ ಪ್ರಧಾನಿ ಮಾರ್ಕ್ ಕಾರ್ನಿ ಮತ್ತು ಇಂಗ್ಲೆಂಡ್‌ ಪ್ರಧಾನಿ ಕೀರ್ ಸ್ಟಾರ್ಮರ್ ಅವರೊಂದಿಗೆ ದ್ವಿಪಕ್ಷೀಯ ಸಭೆಗಳನ್ನು ನಡೆಸಿದರು.

ವಿದೇಶದ ಇನ್ನಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್‌ ಮಾಡಿ.

ʼಪ್ರವಾಸಿ ಪ್ರಪಂಚʼ ವೆಬ್‌ಸೈಟ್‌ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್‌ ಮಾಡಿ.

Ramesh Ballamoole

View all posts by this author