ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಡ್ರೋನ್-ಕ್ಷಿಪಣಿ ದಾಳಿಯಲ್ಲಿ ಅಮೆರಿಕದ ಹಲವು ಸೈನಿಕರು ಹತ: ಇರಾನ್ ಹೇಳಿಕೆ

American soldiers killed: ಪರ್ಷಿಯನ್ ಕೊಲ್ಲಿ ಸಮುದ್ರದಲ್ಲಿ ಅಮೆರಿಕ ಮಿಲಿಟರಿ ನಿರ್ವಹಿಸುತ್ತಿದ್ದ ಆರು ಯುದ್ಧ ಹಡಗುಗಳ ಮೇಲೆ ದಾಳಿ ನಡೆಸಲಾಗಿದೆ. ಇದರಲ್ಲಿ ಹೆಚ್ಚಿನ ಸಂಖ್ಯೆಯ ಅಮೆರಿಕನ್ ಸೈನಿಕರು ಸಾವಿಗೀಡಾಗಿದ್ದಾರೆ ಎಂದು ಇಸ್ಲಾಮಿಕ್ ರೆವಲ್ಯೂಷನ್ ಗಾರ್ಡ್ಸ್ ಕಾರ್ಪ್ಸ್ ಹೇಳಿದೆ. ಆಪರೇಷನ್ ಟ್ರೂ ಪ್ರಾಮಿಸ್ 4ರ ಕಾರ್ಯಾಚರಣೆಯಲ್ಲಿ ಆರು ಅಮೆರಿಕ ಲ್ಯಾಂಡಿಂಗ್ ಕ್ರಾಫ್ಟ್ ಯುಟಿಲಿಟಿ ಧ್ವಂಸಗೊಂಡಿದೆ ಎಂದು ತಿಳಿಸಿದೆ.

ಸಾಂದರ್ಭಿಕ ಚಿತ್ರ

ಟೆಹರಾನ್, ಮಾ. 28: ಇಸ್ಲಾಮಿಕ್ ರೆವಲ್ಯೂಷನ್ ಗಾರ್ಡ್ಸ್ ಕಾರ್ಪ್ಸ್ (IRGC) ಪರ್ಷಿಯನ್ ಕೊಲ್ಲಿ ಸಮುದ್ರದಲ್ಲಿ ಅಮೆರಿಕ ಮಿಲಿಟರಿ ನಿರ್ವಹಿಸುತ್ತಿದ್ದ ಆರು ಯುದ್ಧತಂತ್ರದ ಹಡಗುಗಳ ಮೇಲೆ ದಾಳಿ ನಡೆಸಿದೆ. ಇದರಲ್ಲಿ ಹೆಚ್ಚಿನ ಸಂಖ್ಯೆಯ ಅಮೆರಿಕನ್ ಸೈನಿಕರು ಸಾವಿಗೀಡಾಗಿದ್ದಾರೆ (American soldiers killed) ಎಂದು ಇರಾನ್‌ ಹೇಳಿದೆ. ಆದರೆ ಅಮೆರಿಕ (United States America) ಈ ಹೇಳಿಕೆಯ ಬಗ್ಗೆ ಯಾವುದೇ ಸ್ಪಷ್ಟೀಕರಣ ನೀಡಿಲ್ಲ.

ಆಪರೇಷನ್ ಟ್ರೂ ಪ್ರಾಮಿಸ್ 4ರ ಕಾರ್ಯಾಚರಣೆಯಲ್ಲಿ ಆರು ಯುಎಸ್ ಲ್ಯಾಂಡಿಂಗ್ ಕ್ರಾಫ್ಟ್ ಯುಟಿಲಿಟಿ (ಎಲ್‌ಸಿಯು) ಧ್ವಂಸಗೊಂಡಿದೆ ಎಂದು ಹೇಳಿಕೆಯಲ್ಲಿ ತಿಳಿಸಿದೆ. 84ನೇ ಹಂತದ ಮುಂದುವರಿದ ಭಾಗವಾಗಿ, ಐಆರ್‌ಜಿಸಿ ನೌಕಾಪಡೆಯ ಘಟಕಗಳು ಕುವೈತ್‌ನ ಅಲ್-ಶೋಯೂಖ್ ಬಂದರು ಮತ್ತು ದುಬೈ ಕರಾವಳಿ ಹಾಗೂ ಬಂದರು ಪ್ರದೇಶಗಳಲ್ಲಿ ನಿಯೋಜಿಸಲಾದ ಅಮೆರಿಕ ಮತ್ತು ಇಸ್ರೇಲ್ ಮಿಲಿಟರಿ ನೆಲೆಗಳ ವಿರುದ್ಧ ದಾಳಿ ನಡೆಸಿದ್ದು, ಅಮೆರಿಕ ಸೈನಿಕರು ಮತ್ತು ಶಸ್ತ್ರಾಸ್ತ್ರಗಳನ್ನು ಗುರಿಯಾಗಿಸಿಕೊಂಡು ಕಾರ್ಯಾಚರಣೆ ನಡೆಸಲಾಗಿದೆ ಎಂದು ತಿಳಿಸಿದೆ.

ಈ ಕಾರ್ಯಾಚರಣೆಯನ್ನು ಖಾದರ್ 380 ಕ್ರೂಸ್ ಕ್ಷಿಪಣಿಗಳಂತಹ ಸ್ವದೇಶಿ ನಿರ್ಮಿತ ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಬಳಸಿ ನಡೆಸಲಾಗಿದೆ ಎಂದು ಹೇಳಿಕೆಯಲ್ಲಿ ಉಲ್ಲೇಖಿಸಲಾಗಿದೆ. ದಾಳಿಯ ನಂತರ ಮೂರು ಯುದ್ಧ ಹಡಗುಗಳು ಮುಳುಗಿದವು. ಉಳಿದವುಗಳು ಬೆಂಕಿ ಹೊತ್ತುಕೊಂಡು ಉರಿದಿವೆ ಎಂದು ಐಆರ್‌ಜಿಸಿ ತಿಳಿಸಿದೆ.

ಪೋಸ್ಟ್ ಇಲ್ಲಿದೆ:



ಹೈದರಾಬಾದ್‌ನಲ್ಲಿರುವ ಇರಾನ್ ಕಾನ್ಸುಲೇಟ್‌ನ ಅಧಿಕೃತ ಎಕ್ಸ್ ಹ್ಯಾಂಡಲ್ ಕೂಡ ಡ್ರೋನ್ ಮತ್ತು ಕ್ಷಿಪಣಿ ದಾಳಿಗಳಿಂದ ಅಮೆರಿಕ ಭಯೋತ್ಪಾದಕ ಸೈನಿಕರ ಹತ್ಯೆ ಎಂದು ಪೋಸ್ಟ್ ಹಂಚಿಕೊಂಡಿದೆ.

ಈ ಮಧ್ಯೆ, ಕಳೆದ ವಾರ ಸೌದಿ ವಾಯುನೆಲೆಯ ಮೇಲೆ ಇರಾನ್ ನಡೆಸಿದ ದಾಳಿಯಲ್ಲಿ 12ಕ್ಕೂ ಹೆಚ್ಚು ಅಮೆರಿಕನ್ ಸೈನಿಕರು ಗಾಯಗೊಂಡಿದ್ದಾರೆ ಎಂದು ಅಸೋಸಿಯೇಟೆಡ್ ಪ್ರೆಸ್ ವರದಿ ಮಾಡಿದೆ. ಸೌದಿ ಅರೇಬಿಯಾದ ಪ್ರಿನ್ಸ್ ಸುಲ್ತಾನ್ ವಾಯುನೆಲೆಯ ಮೇಲೆ ಇರಾನ್ ಆರು ಬ್ಯಾಲಿಸ್ಟಿಕ್ ಕ್ಷಿಪಣಿ ಮತ್ತು 29 ಡ್ರೋನ್‌ಗಳನ್ನು ಹಾರಿಸಿದೆ.

ಸೌದಿ ಅರೇಬಿಯಾದ ಅಮೆರಿಕನ್ ನೆಲೆ ಮೇಲೆ ಇರಾನ್ ದಾಳಿ; 12 ಸೈನಿಕರಿಗೆ ಗಾಯ, ಯುದ್ಧ ವಿಮಾನಗಳಿಗೆ ಹಾನಿ

ಈ ದಾಳಿಯಲ್ಲಿ ಕನಿಷ್ಠ 15 ಸೈನಿಕರು ಗಾಯಗೊಂಡರು. ಇದರಲ್ಲಿ ಐದು ಸೈನಿಕರ ಸ್ಥಿತಿ ಗಂಭೀರವಾಗಿದೆ ಎಂದು ಮೂಲಗಳು ತಿಳಿಸಿವೆ. ಅಮೆರಿಕದ ಅಧಿಕಾರಿಗಳು ಆರಂಭದಲ್ಲಿ ಕನಿಷ್ಠ 10 ಸೈನಿಕರು ಗಾಯಗೊಂಡಿದ್ದು, ಇದರಲ್ಲಿ ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ತಿಳಿಸಿದ್ದರು.

ಇರಾನ್ ಮೇಲೆ ಅಮೆರಿಕ-ಇಸ್ರೇಲಿ ದಾಳಿಯಿಂದ ಭುಗಿಲೆದ್ದ ಮಧ್ಯಪ್ರಾಚ್ಯ ಯುದ್ಧವು ಮಾರ್ಚ್ 28ರಂದು ಒಂದು ತಿಂಗಳು ಪೂರೈಸಿತು. ಯುದ್ಧ ಕಡಿಮೆಯಾಗುವ ಯಾವುದೇ ಲಕ್ಷಣಗಳಿಲ್ಲ. ಆದರೆ ಈ ವಾರದ ಆರಂಭದಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಟೆಹರಾನ್‌ನ ಇಂಧನ ಮೂಲಸೌಕರ್ಯದ ಮೇಲೆ ದಾಳಿಗೆ ಐದು ದಿನಗಳ ಕದನ ವಿರಾಮ ಘೋಷಿಸಿದರು.

ಇರಾನ್ ಬೆಂಬಲಿತ ಯೆಮೆನ್‌ನ ಹೌತಿ ಬಂಡುಕೋರರು ಇಸ್ರೇಲ್ ಮೇಲಿನ ಕ್ಷಿಪಣಿ ದಾಳಿಯ ಹೊಣೆಯನ್ನು ಹೊತ್ತುಕೊಂಡು ಅಧಿಕೃತವಾಗಿ ಯುದ್ಧಕ್ಕೆ ಪ್ರವೇಶಿಸಿದರು. ಕಳೆದ ತಿಂಗಳು ಸಂಘರ್ಷ ಆರಂಭವಾದ ನಂತರ ಇಸ್ರೇಲ್, ಯೆಮೆನ್‌ನಿಂದ ಗುಂಡಿನ ದಾಳಿಯನ್ನು ಎದುರಿಸುತ್ತಿರುವುದು ಇದೇ ಮೊದಲು. ಇಸ್ರೇಲ್-ಹಮಾಸ್ ಯುದ್ಧದ ಸಮಯದಲ್ಲಿ ಹಡಗುಗಳ ಮೇಲೆ ಹೌತಿ ದಾಳಿ ನಡೆಸಿದ್ದರಿಂದ ಕೆಂಪು ಸಮುದ್ರದಲ್ಲಿ ಹಡಗು ಸಾಗಣೆಗೆ ಅಡ್ಡಿಯಾಯಿತು.