ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಖಮೇನಿ ಅಂತ್ಯಕ್ರಿಯೆಯ ನಡುವೆಯೇ ಹೊರ್ಮುಜ್‌ನಲ್ಲಿ ಹಡಗುಗಳ ಮೇಲೆ ದಾಳಿ

ಇರಾನ್‌ನ ಪರಮೋಚ್ಚ ನಾಯಕ ದಿವಂಗತ ಅಯತೊಲ್ಲಾ ಅಲಿ ಖಮೇನಿ ಅವರ ಅಂತ್ಯಕ್ರಿಯೆ ವಿಧಿವಿಧಾನಗಳು ಶನಿವಾರ ಆರಂಭವಾಗಿದ್ದು, ಇದಕ್ಕಾಗಿ ವಾರಗಳ ಕಾಲ ಯುದ್ಧ ಮುಕ್ತಾಯ ಒಪ್ಪಂದ ಮಾತುಕತೆಗೆ ರಜೆ ನೀಡಲಾಗಿದೆ. ಈ ನಡುವೆಯೇ ಇದೀಗ ಹೊರ್ಮುಜ್ ನಲ್ಲಿ ಎರಡು ಹಡಗುಗಳ ಮೇಲೆ ಇರಾನಿನ ಕ್ಷಿಪಣಿಗಳು ದಾಳಿ ನಡೆಸಿವೆ.

ಸಂಗ್ರಹ ಚಿತ್ರ

ವಾಷಿಂಗ್ಟನ್: ಇರಾನಿನ (Iran) ಮಾಜಿ ಸರ್ವೋಚ್ಚ ನಾಯಕ ಅಯತೊಲ್ಲಾ ಸಯ್ಯದ್ ಅಲಿ ಹುಸೇನಿ ಖಮೇನಿ (Ayatollah Sayyed Ali Husseini Khamenei) ಅವರ ಅಂತ್ಯಕ್ರಿಯೆಗಾಗಿ ವಾರಗಳ ಕಾಲ ಯುದ್ಧ ಮುಕ್ತಾಯ ಒಪ್ಪಂದ ಮಾತುಕತೆಗೆ ರಜೆ ನೀಡಲಾಗಿದ್ದು, ಈ ನಡುವೆಯೇ ಹೊರ್ಮುಜ್ ನಲ್ಲಿ ಎರಡು ಹಡಗುಗಳ ಮೇಲೆ ಇರಾನಿನ ಕ್ಷಿಪಣಿಗಳು ದಾಳಿ (Iranian missiles strike) ನಡೆಸಿವೆ. ಇದರಲ್ಲಿ ಒಂದು ಹಡಗಿನಲ್ಲಿ ಬೆಂಕಿ ಹಾಗೆ ಉಳಿದುಕೊಂಡಿದೆ. ಯಾವುದೇ ಸಾವು ನೋವುಗಳಾಗಿರುವ ವರದಿ ಬಂದಿಲ್ಲ ಎನ್ನಲಾಗಿದೆ.

ಹೊರ್ಮುಜ್ ಜಲ ಮಾರ್ಗದಲ್ಲಿ ಮತ್ತೆ ಇರಾನ್ ಕ್ಷಿಪಣಿಗಳು ಎರಡು ಹಡಗುಗಳ ಮೇಲೆ ದಾಳಿ ನಡೆಸಿವೆ. ಜಲ ಮಾರ್ಗದಲ್ಲಿ ಸರಕು ಸಾಗಣೆ ಹಡಗುಗಳಿಗೆ ತಡೆಯೊಡ್ಡಲು ಈ ದಾಳಿಯನ್ನು ನಡೆಸಲಾಗಿದೆ. ಹೊರ್ಮುಜ್ ಜಲ ಮಾರ್ಗದಲ್ಲಿ ಸರಕು ಸಾಗಣೆ ಕುರಿತು ಇರಾನ್ ಮತ್ತು ಯುಎಸ್ ತಿಳುವಳಿಕೆ ಒಪ್ಪಂದ ಮಾತುಕತೆಗಳು ನಡೆಯುತ್ತಿರುವ ಮಧ್ಯೆಯೇ ಈ ದಾಳಿ ನಡೆದಿದೆ.

ಉದ್ಘಾಟನೆಯಾಗಿ ಕೇವಲ 9 ವಾರಗಳಲ್ಲಿ ಕುಸಿದ 7 ಸಾವಿರ ಕೋಟಿ ವೆಚ್ಚದಲ್ಲಿ ನಿರ್ಮಿಸಿದ್ದ ಸುರಂಗ!

ಇರಾನ್‌ನ ಕ್ರಾಂತಿಕಾರಿ ಗಾರ್ಡ್‌ಗಳು ಎರಡು ವಾಣಿಜ್ಯ ಹಡಗುಗಳ ಮೇಲೆ ಕ್ಷಿಪಣಿ ದಾಳಿ ನಡೆಸಿದೆ. ಇದರಿಂದ ಎರಡು ಹಡಗುಗಳಿಗೆ ಹಾನಿಯಾಗಿದ್ದು, ಯಾವುದೇ ಸಾವುನೋವುಗಳಾಗಿರುವ ಕುರಿತು ವರದಿ ಬಂದಿಲ್ಲ ಎಂದು ಅಮೆರಿಕದ ಅಧಿಕಾರಿಯೊಬ್ಬರು ಮಾಧ್ಯಮವೊಂದಕ್ಕೆ ತಿಳಿಸಿದ್ದಾರೆ.

ಇರಾನ್ ಗಾರ್ಡ್ ಗಳು ಹಡಗುಗಳ ಮೇಲೆ ದಾಳಿ ನಡೆಸಿದ ಬಳಿಕ ವಾರಗಳ ಹಿಂದೆ ಅಮೆರಿಕದೊಂದಿಗೆ ಸಹಿ ಹಾಕಿದ ತಿಳುವಳಿಕೆ ಒಪ್ಪಂದದ ಬಗ್ಗೆ ಅಮೆರಿಕ ಕಳವಳ ವ್ಯಕ್ತಪಡಿಸಿದೆ. ಈ ಒಪ್ಪಂದದಡಿಯಲ್ಲಿ ಇರಾನ್ ಹೊರ್ಮುಜ್ ಜಲಸಂಧಿಯಲ್ಲಿ ದಾಳಿಗಳನ್ನು ನಿಲ್ಲಿಸಲು ಒಪ್ಪಿಕೊಂಡಿತ್ತು.

ಇತ್ತೀಚೆಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ನಾವು ಒಳ್ಳೆಯವರು. ಹೀಗಾಗಿ ಅಯತೊಲ್ಲಾ ಸಯ್ಯದ್ ಅಲಿ ಹುಸೇನಿ ಖಮೇನಿ ಅವರ ಅಂತ್ಯಕ್ರಿಯೆಗಾಗಿ ನಾವು ಒಂದು ವಾರದ ರಜೆಯನ್ನು ನೀಡಿದ್ದೇವೆ. ಈ ಸಂದರ್ಭದಲ್ಲಿ ಯುದ್ಧ ಒಪ್ಪಂದ ಮಾತುಕತೆಗಳು ನಡೆಯುವುದಿಲ್ಲ ಎಂದು ಹೇಳಿದ್ದರು.

ಇದರ ಬಳಿಕ ಮಂಗಳವಾರ ಮುಂಜಾನೆ ಒಮಾನ್ ಕರಾವಳಿಯಲ್ಲಿ ಪ್ರಯಾಣಿಸುತ್ತಿದ್ದ ಟ್ಯಾಂಕರ್ ವೊಂದಕ್ಕೆ ಇರಾನ್ ಕ್ಷಿಪಣಿ ಡಿಕ್ಕಿ ಹೊಡೆದಿದೆ. ಈ ಕುರಿತು ಬ್ರಿಟಿಷ್ ಮಿಲಿಟರಿ ವರದಿ ಮಾಡಿದ್ದೂ, ಯುನೈಟೆಡ್ ಕಿಂಗ್‌ಡಮ್ ಮ್ಯಾರಿಟೈಮ್ ಟ್ರೇಡ್ ಆಪರೇಷನ್ಸ್ ಸೆಂಟರ್ (ಯುಕೆಎಂಟಿಒ) ಒಮಾನ್‌ನ ಲಿಮಾ ಬಳಿ ಜಲಸಂಧಿಯಲ್ಲಿ ಟ್ಯಾಂಕರ್ ವೊಂದಕ್ಕೆ ಕ್ಷಿಪಣಿ ಡಿಕ್ಕಿ ಹೊಡೆದಿದೆ. ಇದು ಒಮಾನ್ ಕೊಲ್ಲಿಯ ಕಡೆಗೆ ಹೊರ್ಮುಜ್ ಜಲಸಂಧಿಯಿಂದ ದಕ್ಷಿಣಕ್ಕೆ ಪ್ರಯಾಣಿಸುತ್ತಿದ್ದಾಗ ನಡೆದಿದೆ ಎಂದು ತಿಳಿಸಿದೆ.

IBPS PO–2026: ಬ್ಯಾಂಕ್ ಅಧಿಕಾರಿಯಾಗುವ ಕನಸಿಗೆ ಇಲ್ಲಿದೆ ಸುವರ್ಣಾವಕಾಶ; ಪರೀಕ್ಷಾ ಮಾದರಿಯಲ್ಲಾದ ಮಹತ್ವದ ಬದಲಾವಣೆ ಗಮನಿಸಿ

ಇರಾನ್‌ನ ಸರ್ಕಾರಿ ದೂರದರ್ಶನವು ಈ ಕುರಿತು ವರದಿ ಪ್ರಸಾರ ಮಾಡಿದ್ದು, ಕತಾರ್‌ನಿಂದ ಬಂದ ಟ್ಯಾಂಕರ್ ಮೇಲೆ ಮಂಗಳವಾರ ಹೊರ್ಮುಜ್ ಜಲಸಂಧಿಯಲ್ಲಿ ದಾಳಿ ನಡೆಸಲಾಗಿದೆ. ಈ ಹಡಗು ಪದೇ ಪದೇ ಎಚ್ಚರಿಕೆ ಸಂದೇಶಗಳನ್ನು ನಿರ್ಲಕ್ಷಿಸಿತ್ತು ಎಂದು ತಿಳಿಸಿದೆ.

ವಿದ್ಯಾ ಇರ್ವತ್ತೂರು

View all posts by this author