Singapore Mosque: ಮಸೀದಿಗೆ ಬಂತು ಹಂದಿಮಾಂಸ ಪಾರ್ಸೆಲ್! ಏನಿದು ವಿವಾದ?
Singapore Mosque Incident: ಇತ್ತೀಚೆಗೆ ಆಘಾತಕಾರಿ ಘಟನೆಗಳು, ಬೆಳವಣಿಗೆಗಳು ಜಾಸ್ತಿ ಆಗುತ್ತಿದ್ದು, ಕೊರಿಯರ್ ಮೂಲಕ, ಪಾರ್ಸೆಲ್ ಮೂಲಕ ಅಪಾಯಕಾರಿ ವಸ್ತುಗಳನ್ನು ಕಳುಹಿಸುವ ಪ್ರವೃತ್ತಿ ಹೆಚ್ಚಾಗಿದ್ದು, ಸಿಂಗಾಪುರದ ಅಲ್-ಇಸ್ತಿಕಾಮಾ ಮಸೀದಿಗೆ “ಹಂದಿಮಾಂಸದಂತೆ” ಕಾಣುವ ಮಾಂಸದ ಪಾರ್ಸೆಲ್ ಕಳುಹಿಸಲಾಗಿದೆ. ಇದರ ಸಂಪೂರ್ಣ ಮಾಹಿತಿ ಇಲ್ಲಿದೆ

ಅಲ್-ಇಸ್ತಿಕಾಮಾ ಮಸೀದಿ -

ಸಿಂಗಾಪುರ: ಸಿಂಗಾಪುರದ (Singapore) ಅಲ್-ಇಸ್ತಿಕಾಮಾ ಮಸೀದಿಗೆ “ಹಂದಿಮಾಂಸದಂತೆ” (Pork) ಕಾಣುವ ಮಾಂಸದ ಪಾರ್ಸೆಲ್ ಕಳುಹಿಸಲಾಗಿದೆ ಎಂದು ಗೃಹ ಸಚಿವ ಕೆ. ಷಣ್ಮುಗಂ ತಿಳಿಸಿದ್ದಾರೆ. ಇಂತಹ ಕೃತ್ಯವು ಬಹು-ಜನಾಂಗೀಯ ಸಮುದಾಯದಲ್ಲಿ “ಬೆಂಕಿಯೊಂದಿಗೆ ಆಟವಾಡುವಂತಿದೆ” ಎಂದು ಎಚ್ಚರಿಕೆ ನೀಡಿದ್ದಾರೆ. ಇದೇ ರೀತಿಯ ಇತರ ಘಟನೆಗಳೂ ಇತ್ತೀಚೆಗೆ ನಡೆದಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದು ವರದಿಗಳು ಹೇಳಿವೆ.
ಸೆಪ್ಟೆಂಬರ್ 24ರ ಸಂಜೆ ಸೆರಾಂಗೂನ್‌ನ ಅಲ್-ಇಸ್ತಿಕಾಮಾ ಮಸೀದಿಗೆ ಅನುಮಾನಾಸ್ಪದ ಪಾರ್ಸೆಲ್ ಬಂದಿತ್ತು. ಇದರಲ್ಲಿ “ಹಂದಿಮಾಂಸವೆಂದು ತೋರುವ” ಮಾಂಸ ಕಂಡುಬಂದಿದೆ. “ಇದು ಹಂದಿಮಾಂಸವಾದರೆ, ಮಸೀದಿಗೆ ಕಳುಹಿಸುವುದು ಗಂಭೀರವಾದ ಪರಿಣಾಮ ಬೀರುತ್ತದೆ” ಎಂದು ಷಣ್ಮುಗಂ ಹೇಳಿದ್ದಾರೆ. ಪಾರ್ಸೆಲ್‌ನ ಮಾಂಸದ ಸ್ವರೂಪವನ್ನು ಖಚಿತಪಡಿಸಲು ಪರೀಕ್ಷೆ ನಡೆಯುತ್ತಿದೆ. ಆದರೆ, ಧಾರ್ಮಿಕ ಸ್ಥಳಕ್ಕೆ ಇಂತಹ ಕೃತ್ಯವು “ಪ್ರಚೋದನಾತ್ಮಕ” ಎಂದು ಅವರು ಖಂಡಿಸಿದ್ದಾರೆ. ಸಿಂಗಾಪುರ್ ಪೊಲೀಸರು ಇತರ ಮಸೀದಿಗಳಿಗೂ ಇಂತಹ ಪಾರ್ಸೆಲ್‌ಗಳು ಬಂದಿರುವ ಘಟನೆಗಳನ್ನು ತನಿಖೆ ಮಾಡುತ್ತಿದ್ದಾರೆ.
ಪೊಲೀಸರು ಮಸೀದಿಯನ್ನು ತಕ್ಷಣ ಖಾಲಿ ಮಾಡಿಸಿ, ಸಿಂಗಾಪುರ್ ಸಿವಿಲ್ ಡಿಫೆನ್ಸ್ ಫೋರ್ಸ್ ಜೊತೆಗೆ ಕಾರ್ಯಾಚರಣೆ ನಡೆಸಿತು. ತಜ್ಞರು ಪರೀಕ್ಷೆ ನಡೆಸಿ, ಯಾವುದೇ ಹಾನಿಕಾರಕ ವಸ್ತುಗಳಿಲ್ಲ ಎಂದು ಖಚಿತಪಡಿಸಿದರು. ಈ ಸಂಬಂಧ ಪೊಲೀಸರು ಮಸೀದಿಗಳಿಗೆ ಭೇಟಿಯನ್ನು ಹೆಚ್ಚಿಸಿದ್ದಾರೆ.
ಈ ಸುದ್ದಿಯನ್ನು ಓದಿ: Crime News: ಅಮೆರಿಕದಲ್ಲಿ ಮಕ್ಕಳಿಗೆ ಕಿರುಕುಳ ನೀಡಿದ್ದ ಕಿಡಿಗೇಡಿಯನ್ನು ಕೊಂದ ಭಾರತೀಯ
“ಧಾರ್ಮಿಕ ಸ್ಥಳಗಳನ್ನು ಗುರಿಯಾಗಿಸುವುದು ಸಂಪೂರ್ಣ ಅಗೌರವ” ಎಂದು ಷಣ್ಮುಗಂ ಹೇಳಿದ್ದಾರೆ. 2024ರ ಏಪ್ರಿಲ್ ವೇಳೆ 30 ವರ್ಷದ ವ್ಯಕ್ತಿಯೊಬ್ಬ ಹಂದಿಮಾಂಸದ ಕ್ಯಾನ್‌ಗಳನ್ನು ಬೆಡಾಕ್‌ನ ಅಲ್-ಅನ್ಸಾರ್ ಮಸೀದಿಯ ಬಳಿ ಇರಿಸಿದ್ದಕ್ಕೆ 12 ವಾರ ಜೈಲು ಶಿಕ್ಷೆ ಪಡೆದಿದ್ದ ಎಂದ ಷಣ್ಮುಗಂ, “ಇಂತಹ ಘಟನೆಗಳು ಸಮುದಾಯಗಳ ನಡುವೆ ಭಿನ್ನಾಭಿಪ್ರಾಯವನ್ನುಂಟುಮಾಡಬಹುದು” ಎಂದು ಎಚ್ಚರಿಸಿದ್ದಾರೆ.
ಅಲ್-ಇಸ್ತಿಕಾಮಾ ಮಸೀದಿಯ ನಾಯಕರು ಸಧ್ಯ ಶಾಂತಿಗೆ ಕರೆ ನೀಡಿದ್ದಾರೆ. ಗುರುವಾರ ಬೆಳಗ್ಗೆ ಪ್ರಾರ್ಥನೆಗಳು ಸಾಮಾನ್ಯವಾಗಿ ನಡೆದವು. ಇತರ ಧರ್ಮಗಳ ನಾಯಕರು ಮತ್ತು ಸದಸ್ಯರು ಈ ಘಟನೆಯನ್ನು ಖಂಡಿಸಿ, ಒಗ್ಗಟ್ಟಿನಿಂದ ಬೆಂಬಲ ವ್ಯಕ್ತಪಡಿಸಿದ್ದಾರೆ. “ಇದು ಸಿಂಗಾಪುರದ ಒಡನಾಟದ ಸಂಕೇತ” ಎಂದು ಷಣ್ಮುಗಂ ಶ್ಲಾಘಿಸಿದ್ದಾರೆ. ಧಾರ್ಮಿಕ ಸ್ಥಳಗಳನ್ನು ಕೋಟೆಗಳಾಗಿಸಲಾಗದು, ಆದರೆ ಸುರಕ್ಷತೆಗೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದರು.