ಎಸ್​ ಎಲ್​ ಭೈರಪ್ಪ ನಿಧನ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Acid Attack: ಒಬ್ಬನನ್ನು ದಾಳವಾಗಿರಿಸಿ ಮತ್ತೊಬ್ಬನಿಗೆ ಖೆಡ್ಡಾ; ಅಡ್ಡ ಬಂದವಳ ಮುಖಕ್ಕೆ ಆ್ಯಸಿಡ್‌ ಹಾಕಿದ್ಲು ಈ ನವರಂಗಿ

ಶಿಕ್ಷಕಿಯೊಬ್ಬರ ಮೇಲೆ ಆ್ಯಸಿಡ್‌ ಎರಚಿದ ಆರೋಪದ ವ್ಯಕ್ತಿಯನ್ನು (Crime News) ಪೊಲೀಸರು ಬಂಧಿಸಿದ್ದಾರೆ. ಪ್ರಕರಣಕ್ಕೆ ಸಾಥ್‌ ನೀಡಿದ್ದ ಒಬ್ಬ ಮಹಿಳೆಯನ್ನು ಸಹ ಬಂಧಿಸಲಾಗಿದ್ದು, ಆಕೆಯನ್ನು ಜಹಾನ್ವಿ ಅಲಿಯಾಸ್ ಅರ್ಚನಾ ಎಂದು ಗುರುತಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಒಬ್ಬನನ್ನು ದಾಳವಾಗಿರಿಸಿ ಮತ್ತೊಬ್ಬನಿಗೆ ಖೆಡ್ಡಾ!

-

Vishakha Bhat Vishakha Bhat Sep 27, 2025 11:03 AM

ಲಖನೌ: ಶಿಕ್ಷಕಿಯೊಬ್ಬರ ಮೇಲೆ ಆಸಿಡ್ ಎರಚಿದ ಆರೋಪದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ಪ್ರಕರಣಕ್ಕೆ ಸಾಥ್‌ ನೀಡಿದ್ದ ಒಬ್ಬ ಮಹಿಳೆಯನ್ನು ಸಹ ಬಂಧಿಸಲಾಗಿದ್ದು, ಆಕೆಯನ್ನು ಜಹಾನ್ವಿ ಅಲಿಯಾಸ್ ಅರ್ಚನಾ ಎಂದು ಗುರುತಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿಯನ್ನು ಅಮ್ರೋಹಾ ಜಿಲ್ಲೆಯ ಟಿಗ್ರಿ ಗ್ರಾಮದ ನಿವಾಸಿ ನಿಶು ತಿವಾರಿ (30) ಎಂದು ಗುರುತಿಸಲಾಗಿದೆ. ಸೆಪ್ಟೆಂಬರ್ 23 ರಂದು, ನಖಾಸಾ ಪೊಲೀಸ್ ಠಾಣೆ ಪ್ರದೇಶದಲ್ಲಿ, 22 ವರ್ಷದ ಶಿಕ್ಷಕಿಯೊಬ್ಬರು ಶಾಲೆಯಿಂದ ಮನೆಗೆ ಹಿಂತಿರುಗುತ್ತಿದ್ದಾಗ, ದೇಹ್ಪಾ ಗ್ರಾಮದ ಬಳಿ ಸ್ಕೂಟರ್‌ನಲ್ಲಿ ಬಂದ ಆರೋಪಿ ಆಕೆಯ ಮುಖದ ಮೇಲೆ ಆಸಿಡ್ ಎರಚಿದ್ದಾನೆ.

ಘಟನೆಯ ನಂತರ, ಶಿಕ್ಷಕಿಯನ್ನು ಚಿಕಿತ್ಸೆಗಾಗಿ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಯಿತು. ಆರೋಪಿಯನ್ನು ಬಂಧಿಸಲು ಪೊಲೀಸರು ತ್ವರಿತವಾಗಿ ಕಾರ್ಯನಿರ್ವಹಿಸಿದರು. ಬಂಧಿಸಲು ತೆರಳಿದ್ದಾಗ ಆತ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದಾನೆ. ಪೊಲೀಸರು ಆತನ ಕಾಲಿಗೆ ಗುಂಡು ಹಾರಿಸಿ ಬಂಧಿಸಿದ್ದಾರೆ. ಗ್ರಾಮದ ಬಳಿ ನಖಾಸಾ ಪೊಲೀಸರು ನಿಶುನನ್ನು ತಡೆದಾಗ, ಅವನು ಅಧಿಕಾರಿಗಳ ಮೇಲೆ ಗುಂಡು ಹಾರಿಸಿದನು, ಇದರಿಂದಾಗಿ ಪೊಲೀಸರು ಆತ್ಮರಕ್ಷಣೆಗಾಗಿ ಪ್ರತಿಯಾಗಿ ಗುಂಡು ಹಾರಿಸಿದರು, ಅವನ ಎರಡೂ ಕಾಲುಗಳಿಗೆ ಗಾಯವಾಯಿತು ಜಿಲ್ಲಾ ವರಿಷ್ಠಾಧಿಕಾರಿ ತಿಳಿಸಿದ್ದಾರೆ.

ನಿಶುನನ್ನು ಬಂಧಿಸಿ ನಂತರ ಜಿಲ್ಲಾ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಪೊಲೀಸರು ಆತನ ಬಳಿಯಿಂದ ಒಂದು ಪಿಸ್ತೂಲ್, ಎರಡು ಕಾರ್ಟ್ರಿಡ್ಜ್‌ಗಳು ಮತ್ತು ಸ್ಕೂಟರ್ ಅನ್ನು ವಶಪಡಿಸಿಕೊಂಡಿದ್ದಾರೆ ಎಂದು ಅವರು ಹೇಳಿದರು. ವಿಚಾರಣೆಯಲ್ಲಿ ನಿಶು, ಸಾಮಾಜಿಕ ಮಾಧ್ಯಮದ ಮೂಲಕ ಪರಿಚಯವಾದ ಮಹಿಳೆಯೊಬ್ಬರು ತನ್ನನ್ನು ಸಂಬಂಧಕ್ಕೆ ಆಮಿಷವೊಡ್ಡಿದ್ದಾರೆಂದು ಹೇಳಿಕೊಂಡಿದ್ದಾನೆ. "ಡಾ. ಅರ್ಚನಾ" ಎಂದು ತನ್ನನ್ನು ಪರಿಚಯಿಸಿಕೊಂಡ ಆ ಮಹಿಳೆ, ತನ್ನ ಸಹೋದರಿ ಜಾಹ್ನವಿ ಸೈನಿಕನೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾಳೆಂದು ನಿಶುಗೆ ತಿಳಿಸಿದಳು, ಆದರೆ ಅವನಿಗೆ ಈಗಾಗಲೇ ಒಬ್ಬನ ಜೊತೆ ಮದುವೆ ನಿಶ್ಚಯವಾಗಿತ್ತು. ಹೀಗಾಗಿ ಆತ ಈ ಸಂಬಂಧವನ್ನು ರದ್ದುಗೊಳಿಸಿದ ಎಂದು ಆಕೆ ಹೇಳಿದ್ದಾರೆ.

ಈ ಸುದ್ದಿಯನ್ನೂ ಓದಿ: Manipur Violence: ಅಸ್ಸಾಂ ರೈಫಲ್ಸ್‌ನ ಸೇನಾ ವಾಹನದ ಮೇಲೆ ದಾಳಿ; ಇಬ್ಬರು ಸೈನಿಕರು ಹುತಾತ್ಮ

ಸೈನಿಕನ ನಿಶ್ಚಿತಾರ್ಥ ಮಾಡಿಕೊಂಡಿದ್ದ ಶಿಕ್ಷಕಿಯ ವಿರುದ್ಧ ಸೇಡು ತೀರಿಸಿಕೊಳ್ಳಲು ಅವಳು ನಿಶುಳನ್ನು ಪ್ರಚೋದಿಸಿದಳು ಎಂದು ಆರೋಪಿಸಲಾಗಿದೆ. ಈ ಹಿಂದೆ ರಸಾಯನಶಾಸ್ತ್ರಜ್ಞನಾಗಿ ಕೆಲಸ ಮಾಡುತ್ತಿದ್ದ ನಿಶು ಆಸಿಡ್ ಖರೀದಿಸಿ ದಾಳಿ ನಡೆಸಿದ್ದಾನೆ. ಹೆಚ್ಚಿನ ತನಿಖೆಯಲ್ಲಿ ಜಾಹ್ನವಿ ಮತ್ತು ಡಾ. ಅರ್ಚನಾ ಒಂದೇ ವ್ಯಕ್ತಿಯಾಗಿದ್ದು, ನಿಶುನನ್ನು ಆಮಿಷಕ್ಕೊಡ್ಡಿ ಈ ಕೃತ್ಯ ನಡೆಸಲಾಗಿದೆ ಎಂದು ತಿಳಿದು ಬಂದಿದೆ. ಆ ಮಹಿಳೆಗೆ ಮದುವೆಯಾಗಿ ಮೂವರು ಮಕ್ಕಳಿದ್ದಾರೆ ಎಂದು ಹೇಳಲಾಗಿದ್ದು, ಆಕೆ ಈ ಹಿಂದೆ ತನ್ನ ಪತಿಗೆ ನಿದ್ರೆ ಮಾತ್ರೆಗಳನ್ನು ನೀಡಿ ನಿಶು ಜೊತೆ ಪರಾರಿಯಾಗಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.