Viral News: ಶ್ರೀಮಂತ ವಯಸ್ಸಾದ ಪುರುಷರೇ ಇವ್ಳ ಟಾರ್ಗೆಟ್... ಡೇಟಿಂಗೇ ಬ್ಯುಸಿನೆಸ್!
A woman reveals sugar dating: 25 ವರ್ಷದ ಯುವತಿಯೊಬ್ಬಳಿಗೆ ಸಾಂಪ್ರದಾಯಿಕ ಡೇಟಿಂಗ್ ಹಿಡಿಸಲಿಲ್ಲ. ಹೀಗಾಗಿ ಆಕೆ ಆರಿಸಿಕೊಂಡಿದ್ದು ಶುಗರ್ ಡೇಟಿಂಗ್ ಅನ್ನು. ಅಂದರೆ, ಶ್ರೀಮಂತರು, ವಯಸ್ಸಾದ ಪುರುಷರೊಂದಿಗೆ ಡೇಟಿಂಗ್ ಮಾಡುತ್ತಾಳೆ. ಈಕೆ ತನ್ನ ಡೇಟಿಂಗ್ ಕಥೆಯನ್ನು ಹಂಚಿಕೊಂಡಿದ್ದಾಳೆ.

-

ಲಂಡನ್: ಇತ್ತೀಚೆಗೆ ಆನ್‌ಲೈನ್ ಡೇಟಿಂಗ್ (Online Dating) ಹೆಚ್ಚು ಸಾಮಾನ್ಯವಾಗಿದೆ. ಹಲವರಿಗೆ ಇದು ನಿರಾಶಾದಾಯಕ ಅನುಭವವಾಗಬಹುದು. ಇಲ್ಲೊಂದು ಕಥೆಯಲ್ಲಿ ಲಂಡನ್‌ನ (London) 25 ವರ್ಷದ ಸಾರಾ ಹಾಲ್‌ನಂತಹ ಕೆಲವರಿಗೆ, ಸಾಂಪ್ರದಾಯಿಕ ಡೇಟಿಂಗ್ ಇಷ್ಟವಾಗಲಿಲ್ಲ. ಹೀಗಾಗಿ ಅವಳು ಶುಗರ್ ಡೇಟಿಂಗ್‍ನತ್ತ ವಾಲಿದಳು. ವಯಸ್ಸಾದ ಪುರುಷರೊಂದಿಗೆ, ಹೆಚ್ಚಾಗಿ ಮಿಲಿಯನೇರ್‌ಗಳೊಂದಿಗೆ ಡೇಟಿಂಗ್ ಮಾಡುತ್ತಾಳೆ. ಆದರೆ ಪ್ರತಿಯಾಗಿ ಪ್ರಣಯ ಅಥವಾ ದೈಹಿಕ ಸಂಬಂಧವನ್ನು ಬೆಳೆಸುವುದಿಲ್ಲ ಎಂದು ಕರಾರುವಕ್ಕಾಗಿ ತಿಳಿಸಿದ್ದಾಳೆ.
ಈ ಪುರುಷರು ಒಡನಾಟ ಮತ್ತು ಅರ್ಥಪೂರ್ಣ ಸಂಭಾಷಣೆಗಾಗಿ ಮಾತ್ರ ತನ್ನ ಮೇಲೆ ಹಣವನ್ನು ಖರ್ಚು ಮಾಡುತ್ತಾರೆ ಎಂದು ಅವಳು ಹೇಳಿಕೊಂಡಿದ್ದಾಳೆ. ಒಂದು ಕಾಲದಲ್ಲಿ ಉತ್ತಮ ಸಂಬಳ ಪಡೆಯುತ್ತಿದ್ದ ಉದ್ಯೋಗಿಯಾಗಿದ್ದ ಸಾರಾ, ಡೇಟಿಂಗ್ ಆಪ್‌ಗಳಲ್ಲಿ ನಿರಂತರವಾಗಿ ಸ್ವೈಪ್ ಮಾಡುವುದು, ಹಾಯ್ ಎಂಬಂತಹ ಪ್ರೇರೇಪಿತವಲ್ಲದ ಸಂದೇಶಗಳನ್ನು ಸ್ವೀಕರಿಸುವುದು ಹಾಗೂ ಅವರನ್ನು ಭೇಟಿಯಾಗಲು ಹೋದಾಗ ಫೋಟೋದಲ್ಲಿರುವಂತೆ ಕಾಣದೇ ಇರುವುದರಿಂದ ಅಂತಹವರನ್ನು ಭೇಟಿ ಮಾಡಿ ಬೇಸತ್ತಿದ್ದಳು.
ಇನ್ನೂ ಕೆಲವೊಮ್ಮೆ ಆಕೆಯ ಸ್ವತಃ ಹಣವನ್ನು ಖರ್ಚು ಮಾಡುತ್ತಿದ್ದಳು. ಹೀಗಾಗಿ ಉತ್ತಮ ಪರ್ಯಾಯವನ್ನು ಹುಡುಕುತ್ತಿದ್ದ ಸಾರಾ, seeking.com ಅನ್ನು ಕಂಡುಕೊಂಡಳು. ಇದು ಸಕ್ಕರೆ ಡೇಟಿಂಗ್‌ಗೆ ಮೀಸಲಾದ ವೇದಿಕೆಯಾಗಿದೆ. ಇದು ಸಾಮಾನ್ಯವಾಗಿ ಕಿರಿಯ ಜನರು ವಯಸ್ಸಾದ, ಶ್ರೀಮಂತ ವ್ಯಕ್ತಿಗಳೊಂದಿಗೆ ಡೇಟಿಂಗ್ ಮಾಡುವುದನ್ನು ಒಳಗೊಂಡಿರುತ್ತದೆ.
ಇದನ್ನೂ ಓದಿ: Viral News: ಗರ್ಭಿಣಿಯರಿಗೆ ಈ ರೆಸ್ಟೋರೆಂಟ್ ನೀಡುತ್ತಂತೆ ಪಾರ್ಟಿ! ಅಷ್ಟೇ ಅಲ್ಲ ಹಣವೂ ಕೊಡ್ತಾರಂತೆ!
ಸಾರಾ ತನ್ನ ಮಿತಿಗಳ ಬಗ್ಗೆ ದೃಢವಾಗಿದ್ದಾಳೆ. ಅವಳು ತನ್ನ ಪ್ರೊಫೈಲ್‌ನಲ್ಲಿ ಸ್ಪಷ್ಟವಾಗಿ ಹೀಗೆ ಬರೆದಿದ್ದಾಳೆ: ಯಾವುದೇ ದೈಹಿಕ ಸಂಬಂಧಗಳಿಲ್ಲ, ಪ್ರಣಯ ಸಂಬಂಧಗಳಿಲ್ಲ; ಕೇವಲ ಒಡನಾಟ, ಸಂಭಾಷಣೆ ಮತ್ತು ಪರಸ್ಪರ ಗೌರವ ಅಷ್ಟೇ ಎಂದು ತಿಳಿಸಿದ್ದಾಳೆ. ಆಶ್ಚರ್ಯ ಎಂದರೆ, ಅನೇಕ ಮಂದಿ ಪುರುಷರು ಅವಳ ಒಪ್ಪಂದದಿಂದ ಸಂತೋಷವಾಗಿದ್ದಾರೆ (Viral News).
ಇನ್ನು ತನ್ನ ಡೇಟಿಂಗ್‍ನಲ್ಲಿ ಸಾರಾ, 61 ವರ್ಷದ ಮಾಜಿ ಪೈಲಟ್‌ನನ್ನು ಭೇಟಿಯಾಗಿದ್ದನ್ನು ನೆನಪಿಸಿಕೊಂಡಳು. ಅವರ ಪತ್ನಿ ನಿಧನರಾಗಿದ್ದರು. ಯಾರಾದರೂ ಮಾತನಾಡಬೇಕೆಂದು ಅವರು ಬಯಸಿದ್ದರು. ಹೀಗಾಗಿ ಸಾರಾಗೆ ಉತ್ತಮ ಊಟವನ್ನು ಸತ್ಕರಿಸುತ್ತಾ ತಮ್ಮ ಜೀವನದ ಕಥೆಗಳನ್ನು ಹಂಚಿಕೊಳ್ಳುತ್ತಿದ್ದರು. ಅವರು ತಮ್ಮ ತೆರಿಗೆ ಬಿಲ್ ಅನ್ನು ಪ್ರಸ್ತಾಪಿಸಿದಾಗ, ಅವರು ಸಹಾಯ ಮಾಡಲು ಪೇಪಾಲ್ ಮೂಲಕ ಹಣವನ್ನು ಸಹ ವರ್ಗಾಯಿಸಿದರು.
ಮತ್ತೊಂದು ಅನುಭವವೆಂದರೆ 29 ವರ್ಷದ ನಾಚಿಕೆ ಸ್ವಭಾವದ ವ್ಯಕ್ತಿಯೊಬ್ಬರು ತಮ್ಮ ಡೇಟಿಂಗ್ ಕೌಶಲ್ಯವನ್ನು ಸುಧಾರಿಸಲು ಬಯಸಿದ್ದರಂತೆ. ಕೆಲವು ಭೇಟಿಗಳ ನಂತರ, ಅವರು ಸುಮಾರು ಪೌಂಡ್ 600 ಮೌಲ್ಯದ ಉಡುಗೊರೆಯನ್ನು ನೀಡಿ ಅವಳಿಗೆ ಧನ್ಯವಾದ ಅರ್ಪಿಸಿದರು.
ಅಂದಹಾಗೆ, ತನ್ನನ್ನು ತಾನು ರಕ್ಷಿಸಿಕೊಳ್ಳಲು ಸಾರಾ ಕಟ್ಟುನಿಟ್ಟಿನ ನಿಯಮಗಳನ್ನು ಪಾಲಿಸುತ್ತಾಳೆ: ಸಾರ್ವಜನಿಕ ಸ್ಥಳಗಳಲ್ಲಿ ಮಾತ್ರ ಭೇಟಿಯಾಗುವುದು, ವಿವಾಹಿತ ಪುರುಷರನ್ನು ಭೇಟಿಯಾಗಲ್ಲ ಮತ್ತು ತನ್ನ ತಂದೆಗಿಂತ ಹಿರಿಯರೊಂದಿಗೆ ಎಂದಿಗೂ ಡೇಟಿಂಗ್ ಮಾಡುವುದಿಲ್ಲ. ಹಾಗೆಯೇ ಯಾರಿಂದಲಾದಲೂ ಏನಾದರೂ ಚಿಕ್ಕಪುಟ್ಟ ಕಿರಿಕಿರಿ ಎಂದೆನಿಸಿದರೂ, ಅವಳು ತಕ್ಷಣ ಅಲ್ಲಿಂದ ಹೊರಟು ಹೋಗುತ್ತಾಳೆ.
ಅವಳ ಕೆಲವು ಸ್ನೇಹಿತರು ಸಾರಾಳ ಜೀವನಶೈಲಿಯನ್ನು ಟೀಕಿಸುತ್ತಾರಂತೆ. ಅದು ಅಪಾಯಕಾರಿ ಎಂದು ಹೇಳಿದ್ದಾರಂತೆ. ಸಾರಾ ಅದನ್ನು ಸಬಲೀಕರಣವೆಂದು ನೋಡುತ್ತಾರೆ. ಇದು ಅವಳ ಡೇಟಿಂಗ್ ಜೀವನ ಮತ್ತು ಅವಳ ಹಣಕಾಸಿನ ಮೇಲೆ ಹಿಡಿತ ಸಾಧಿಸಲು ಸಹಾಯ ಮಾಡಿದೆ. ಇದು ಶಾಶ್ವತ ಜೀವನಶೈಲಿಯಲ್ಲ ಎಂಬುದು ಅವಳಿಗೆ ತಿಳಿದಿದೆ. ಆದರೆ, ಸಾಂಪ್ರದಾಯಿಕ ಡೇಟಿಂಗ್‌ನಲ್ಲಿ ಅವಳಿಗೆ ಸಿಗದ ಸ್ವಾತಂತ್ರ್ಯವನ್ನು ಇದು ನೀಡುತ್ತದೆಯಂತೆ.
ಇದನ್ನೂ ಓದಿ: Viral Video: ಯುವತಿಗೆ ಕಿಸ್ ಕೊಟ್ಟ ಶ್ವಾನ... ವಿಡಿಯೊ ನೋಡಿ ನೆಟ್ಟಿಗರು ಫುಲ್ ಖುಷ್!